/newsfirstlive-kannada/media/media_files/2025/08/11/tumakuru-murder-victim-2025-08-11-13-17-37.jpg)
ಕೊಲೆಯಾದ ಮಹಿಳೆ ಲಕ್ಷ್ಮಿದೇವಮ್ಮ
ತುಮಕೂರು ಜಿಲ್ಲೆಯಲ್ಲಿ ಮಹಿಳೆಯನ್ನು ಭೀಕರವಾಗಿ ಕೊ*ಲೆ ಮಾಡಿದ ನಂತರ ಶವವನ್ನು ತುಂಡು ತುಂಡಾಗಿ ಕತ್ತರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮೃತ ಮಹಿಳೆಯನ್ನು ಲಕ್ಷ್ಮೀ ದೇವಮ್ಮ ಎಂದು ಗುರುತಿಸಲಾಗಿದೆ. ಮೃತ ಮಹಿಳೆಯ ಅಳಿಯ ಡಾ.ರಾಮಚಂದ್ರ ಸೇರಿದಂತೆ ನಾಲ್ವರನ್ನು ಕೊರಟಗೆರೆ ಪೊಲೀಸರು ವಶಕ್ಕೆ ಪಡೆದುಕೊಂಡು ವಿಚಾರಣೆಗೆ ಒಳಪಡಿಸಿದ್ದಾರೆ. ಮೃತ ಲಕ್ಷ್ಮೀ ದೇವಮ್ಮ, ತನ್ನ ಮಗಳನ್ನು ವೇಶ್ಯಾವಾಟಿಕೆಗೆ ಬಳಸಿಕೊಳ್ಳಲು ಹೊಂಚು ಹಾಕಿದ್ದಳಂತೆ. ಇದರಿಂದ ಬೇಸತ್ತ ಅಳಿಯ ಡಾ.ರಾಮಚಂದ್ರ ಸ್ನೇಹಿತರ ಸಹಾಯ ಪಡೆದುಕೊಂಡು ಲಕ್ಷ್ಮೀ ದೇವಮ್ಮ ಅವರನ್ನು ಫಾರ್ಮ್‌ಹೌಸ್‌ನಲ್ಲಿ ಕೊ*ಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಕೊ*ಲೆ ನಂತರ ಮೃತದೇಹವನ್ನು ತುಂಡುಗಳನ್ನಾಗಿ ಮಾಡಿ ಎಸೆದಿದ್ದಾನೆ.
ಕೊಲೆಯಾದ ಲಕ್ಷ್ಮಿದೇವಮ್ಮ ತುಮಕೂರು ತಾಲ್ಲೂಕಿನ ಬೆಳ್ಳಾವಿಯವರು. ಇವರ ಅಳಿಯ ಡಾಕ್ಟರ್ ರಾಮಚಂದ್ರ ಡೆಂಟಿಸ್ಟ್ ಆಗಿದ್ದರು. ಡೆಂಟಿಸ್ಟ್ ರಾಮಚಂದ್ರ, ಹುಳುಕು ಹಲ್ಲು ತೆಗೆಯುವ ಕೈಗಳಲ್ಲೇ ಅತ್ತೆಯನ್ನೇ ಪೀಸ್ ಪೀಸ್ ಮಾಡಿ ಕೊಲೆ ಮಾಡಿದ್ದಾನೆ. ಬಳಿಕ ಶವಗಳನ್ನು ಕೊರಟಗೆರೆ ತಾಲ್ಲೂಕಿನ ನಾಲ್ಕು ಭಾಗಗಳಲ್ಲಿ ಎಸೆದಿದ್ದಾನೆ. ಬಳಿಕ ಇನ್ನೂಳಿದ ಇಬ್ಬರು ಆರೋಪಿಗಳು ಹೊರನಾಡು ಯಾತ್ರೆ ಹೋಗಿ ದೇವರ ದರ್ಶನ ಪಡೆದಿದ್ದಾರೆ.
ಕುಟುಂಬಸ್ಥರು ನಮ್ಮದಲ್ಲ ಎಂದಿದ್ರು!
ಶವದ ಭಾಗಗಳನ್ನ ನೋಡಿದ್ದ ಲಕ್ಷ್ಮಿ ದೇವಮ್ಮನ ಸಂಬಂಧಿಕರು ಇದು ಲಕ್ಷ್ಕಿ ದೇವಮ್ಮ ಅಲ್ಲ ಎಂದಿದ್ರು.. ಇದೇ ಕಾರಣಕ್ಕೆ ಯಾರು ಮಾತಾಡಿರಲ್ಲಿಲ್ಲ. ಆದ್ರೀಗ ಪೊಲೀಸರ ತನಿಖೆಯಲ್ಲಿ ಅಸಲಿ ಸತ್ಯ ಗೊತ್ತಾಗಿದೆ.
ಶವವನ್ನು ತುಂಡು ತುಂಡಾಗಿ ಕತ್ತರಿಸಿರುವ ಆರೋಪಿಗಳು
ತುಮಕೂರು ಜಿಲ್ಲೆಯ ಕೊರಟಗೆರೆ ತಾಲೂಕಿನ ಹೊಳವನಹಳ್ಳಿ ಹೋಬಳಿಯ ಚಿಂಪುಗಾನಹಳ್ಳಿ ಬಳಿ ಗುರುವಾರ (ಆಗಸ್ಟ್ 7, 2025) 8 ಕಡೆ ಮಹಿಳೆಯ ಕೈಗಳು ಸೇರಿದಂತೆ ದೇಹದ ಭಾಗಗಳು ಸಿಕ್ಕಿದ್ದವು. ಶುಕ್ರವಾರ (ಆಗಸ್ಟ್ 8) ಮತ್ತೆ ಸಿದ್ದರಬೆಟ್ಟ ಮತ್ತು ಮಲ್ಲೇಕಾವು ಸುತ್ತಮುತ್ತ 10 ಕಡೆಯ ವಿವಿಧ ಸ್ಥಳಗಳಲ್ಲಿ ಕಪ್ಪು ಕವರಿನ ಪಾಕೇಟ್‌ನಲ್ಲಿ ಮಹಿಳೆಯ ಕಾಲು, ದೇಹ ಸೇರಿದಂತೆ ತಲೆ ಸಿಕ್ಕಿತ್ತು. ಕೊರಟಗೆರೆಯ ಸಿದ್ದರಬೆಟ್ಟದ ಸಮೀಪ, ಮರೇನಾಯಕನಹಳ್ಳಿ, ಮಲ್ಲೇಕಾವು, ಚಿಕ್ಕಾವಳಿ ಕೆರೆ, ಲಿಂಗಾಪುರ, ಜೋನಿಗರಹಳ್ಳಿ ಸೇರಿದಂತೆ 10 ಕಡೆಗಳಲ್ಲಿ ಮಹಿಳೆಯ ಶವದ ತುಂಡುಗಳು ಸಿಕ್ಕಿದ್ದವು.ಮಹಿಳೆಯ ಶವದ ದೇಹದ ತುಂಡಿನ ಜೊತೆ ಸಿಕ್ಕಿರುವ ಪಾಕೇಟ್‌ನಲ್ಲಿ ಕಬ್ಬಿಣದ ಮೇಟಲ್ ಪೀಸ್‌ಗಳು ಪತ್ತೆಯಾಗಿವೆ. ಕೊರಟಗೆರೆ ಕ್ಷೇತ್ರದ ನಾಲ್ಕು ದಿಕ್ಕಿನ ರಸ್ತೆ ಬದಿಗಳಲ್ಲಿ ಶವದ ತುಂಡುಗಳನ್ನು ಹಾಕಿರುವ ಹಿಂದೆ ಆರಂಭದಲ್ಲಿ ವಾಮಚಾರದ ಶಂಕೆಯು ವ್ಯಕ್ತವಾಗಿತ್ತು. ಆದ್ರೆ ಇದೀಗ ಈ ಪ್ರಕರಣ ಮತ್ತೊಂದು ಆಯಾಮವನ್ನು ಪಡೆದುಕೊಂಡಿದೆ.
ಕೊಲೆ ಆರೋಪಿ ಅಳಿಯ ಡೆಂಟಿಸ್ಟ್ ಡಾ. ರಾಮಚಂದ್ರ ಪೋಟೋ.
ಈ ಲಕ್ಷ್ಮಿದೇವಮ್ಮ ತುಮಕೂರು ತಾಲ್ಲೂಕಿನ ಬೆಳ್ಳಾವಿ ಗ್ರಾಮದವರು. ಇಬ್ಬರು ಹೆಣ್ಣು ಮಕ್ಕಳಿದ್ದು, ಮದುವೆ ಮಾಡಿದ್ದಾರೆ. ರಾಮಚಂದ್ರ ಒಬ್ಬ ಹೆಣ್ಣು ಮಗಳನ್ನು ಮದುವೆಯಾಗಿ ತುಮಕೂರು ನಗರದ ಕುವೆಂಪು ನಗರದಲ್ಲಿ ವಾಸ ಇದ್ದ. ಆದರೇ, ತನ್ನ ಹೆಂಡತಿಯನ್ನು ಅತ್ತೆ ಲಕ್ಷ್ಮಿದೇವಮ್ಮ ಆಗ್ಗಾಗ್ಗೆ ಬೆಳ್ಳಾವಿ ಮನೆಗೆ ಕರೆದುಕೊಂಡು ಹೋಗುತ್ತಿದ್ದಳು. ಅತ್ತೆ ಲಕ್ಷ್ಮಿದೇವಮ್ಮ ಸರಿ ಇಲ್ಲ ಎಂಬುದು ಅಳಿಯ ರಾಮಚಂದ್ರನಿಗೆ ಮದುವೆ ಬಳಿಕ ಗೊತ್ತಾಯಿತು ಅಂತೆ. ತನ್ನ ಹೆಂಡತಿಯನ್ನು ಅತ್ತೆಯೇ ವೇಶ್ಯಾವಾಟಿಕೆ ಮಾಡಲು ಬಳಸಿಕೊಳ್ಳುತ್ತಾಳೆ ಎಂದು ರಾಮಚಂದ್ರನಿಗೆ ಅನ್ನಿಸಿತ್ತಂತೆ. ಹೀಗಾಗಿ ಅತ್ತೆ ಲಕ್ಷ್ಮಿದೇವಮ್ಮನನ್ನೇ ಕೊಲೆ ಮಾಡಲು ಆರು ತಿಂಗಳ ಹಿಂದೆಯೇ ನಿರ್ಧರಿಸಿದ್ದಾನೆ. ಕೊಲೆ ಮಾಡಲು ಒಂದು ಕಾರ್ ಕೂಡ ಖರೀದಿ ಮಾಡಿದ್ದ.
ಕೊಲೆಗೆ ಪ್ಲ್ಯಾನ್ ಮಾಡಿದ್ದು ಹೇಗೆ?
ಆಗಸ್ಟ್ 3 ರಂದು ತುಮಕೂರಿನ ಅಳಿಯ ರಾಮಚಂದ್ರ ಮನೆಗೆ ಲಕ್ಷ್ಮಿ ದೇವಮ್ಮ ಬಂದಿದ್ದಾಳೆ. ಬಳಿಕ ತುಮಕೂರು ನಗರದ ಕುವೆಂಪು ನಗರದ ಮನೆಯಿಂದ ಬೆಳ್ಳಾವಿಗೆ ಡ್ರಾಪ್ ಮಾಡುವುದಾಗಿ ಅಳಿಯ ರಾಮಚಂದ್ರನೇ ಕರೆದುಕೊಂಡು ಹೋಗಿದ್ದಾನೆ. ಮನೆಯಿಂದ ಹೊರಟ ಬಳಿಕ ಸ್ಪಲ್ಪ ದೂರದಲ್ಲೇ ಕಾರ್ ನಲ್ಲೇ ವೇಲ್ ನಿಂದ ಕುತ್ತಿಗೆ ಬಿಗಿದು ಲಕ್ಷ್ಮಿದೇವನನ್ನು ಕೊಲೆ ಮಾಡಿದ್ದಾನೆ. ಬಳಿಕ ಕೊರಟಗೆರೆ ತಾಲ್ಲೂಕಿನ ಕೋಳಾಲ ಬಳಿ ತೋಟಕ್ಕೆ ಶವ ತೆಗೆದುಕೊಂಡು ಹೋಗಿ ಸ್ನೇಹಿತ ಸತೀಶ್ ಎಂಬಾತನ ಜೊತೆ ಸೇರಿ ಚರ್ಚೆ ಮಾಡಿದ್ದಾನೆ. ಶವವನ್ನು ಎಲ್ಲಿಯಾದರೂ ಎಸೆದರೇ, ಬೇಗ ಪತ್ತೆಯಾಗುತ್ತೆ. ಕೆರೆಗೆ ಎಸೆದ್ರೂ ಶವ ಪೊಲೀಸರಿಗೆ ಸಿಗುತ್ತೆ. ಹೀಗಾಗಿ ದೇಹದ ಭಾಗಗಳನ್ನು ಪೀಸ್ ಪೀಸ್ ಮಾಡಿದ್ದಾರೆ. ಕೆರೆಗೆ ಬಿಸಾಕಿದರೇ, ಶವ ತೇಲುತ್ತೆ ಎಂದು ಪ್ಲಾಸ್ಟಿಕ್ ಕವರ್‌ಗೆ ಮೆಟಲ್ ತುಂಡುಗಳನ್ನು ಹಾಕಿ ಶವದ ತುಂಡುಗಳನ್ನು ಬಿಸಾಕಲು ಪ್ಲ್ಯಾನ್ ಮಾಡಿದ್ದಾರೆ. ಆಗಸ್ಟ್ 6 ರಂದು ಮಧ್ಯಾಹ್ನದಿಂದ ರಾತ್ರಿ ತನಕ ಕಾರಿನಲ್ಲಿ ಹೋಗಿ ಕೊರಟಗೆರೆ ತಾಲ್ಲೂಕಿನಾದ್ಯಂತ ಶವದ ತುಂಡುಗಳನ್ನು ಪ್ಲಾಸ್ಟಿಕ್ ಕವರ್ ನಲ್ಲಿ ಬಿಸಾಕಿದ್ದಾರೆ. ಆಗಸ್ಟ್ 7ನೇ ತಾರೀಖು ರಾತ್ರಿ ಸಿದ್ದರಬೆಟ್ಟದ ಹತ್ತಿರ ತಲೆ ಭಾಗ ಪತ್ತೆಯಾಗಿತ್ತು. ಆಗ ಪೊಲೀಸರಿಗೆ ಕೊಲೆಯಾಗಿರೋದು ಲಕ್ಷ್ಮಿದೇವಮ್ಮ ಅಂತ ಖಚಿತವಾಯಿತು. ಬಳಿಕ ಕೊಲೆ ಕೇಸ್ ತನಿಖೆ ಆರಂಭಿಸಿದ್ದರು. ಆಗ ಪೋನ್ ಟವರ್ ಲೋಕೇಷನ್ ಆಧಾರದ ಮೇಲೆ ತನಿಖೆ ನಡೆಸಿದ್ದರು. ಲಕ್ಷ್ಮಿ ದೇವಮ್ಮ ಮಗಳ ಮನೆಗೆ ಹೋದವಳು ವಾಪಸ್ ಬಂದಿರಲಿಲ್ಲ. ಅಳಿಯ ರಾಮಚಂದ್ರನೇ ಬೆಳ್ಳಾವಿಗೆ ಕರೆದುಕೊಂಡು ಹೋಗುವುದಾಗಿ ಹೊರಟಿದ್ದವನು ಬೆಳ್ಳಾವಿಗೆ ಹೋಗಿರಲಿಲ್ಲ. ಹೀಗಾಗಿ ಡಾಕ್ಟರ್ ರಾಮಚಂದ್ರನನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ನಡೆಸಿದಾಗ, ತಾನೇ ಕೊಲೆ ಮಾಡಿದ್ದಾಗಿ ಪೊಲೀಸರ ಮುಂದೆ ಸತ್ಯ ಬಾಯಿ ಬಿಟ್ಟಿದ್ದಾನೆ. ಕೊಳಾಲ ಬಳಿಯ ತೋಟದ ಸತೀಶ್ ಹಾಗೂ ಆತನ ಸೋದರ ಕಿರಣ್ ಸೇರಿದಂತೆ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಇತ್ತ ಬೆಳ್ಳಾವಿ ಪೊಲೀಸ್ ಠಾಣೆಯಲ್ಲಿ ಲಕ್ಷ್ಮಿದೇವಮ್ಮ ಗಂಡ ನಾಪತ್ತೆ ದೂರು ದಾಖಲಿಸಿದ್ದ. ಇದರ ಆಧಾರದ ಮೇಲೆ ಲಕ್ಷ್ಮಿದೇವಮ್ಮನ ಗಂಡನನ್ನು ಕರೆದುಕೊಂಡು ಹೋಗಿ ತಲೆಯ ಭಾಗವನ್ನು ಪೊಲೀಸರು ಗಂಡನಿಗೆ ತೋರಿಸಿದ್ದಾರೆ. ಆದರೇ, ಗಂಡ ಇದು ಲಕ್ಷ್ಮಿದೇವಮ್ಮನ ತಲೆ ಅಲ್ಲ ಎಂದಿದ್ದ. ಆದರೇ, ಪೊಲೀಸರಿಗೆ ಕೊಲೆಯಾಗಿರೋದು ಲಕ್ಷ್ಮಿದೇವಮ್ಮ ಅಂತ ಪೋಟೋ ಹಾಗೂ ಕೊಲೆಯಾದ ತಲೆ ಭಾಗ ನೋಡಿದ್ದಾಗ, ಖಚಿತವಾಗಿತ್ತು. ಹೀಗಾಗಿ ಲಕ್ಷ್ಮಿದೇವಮ್ಮ ಕೊನೆಯದಾಗಿ ಕಾಣಿಸಿಕೊಂಡಿದ್ದು ಅಳಿಯ ರಾಮಚಂದ್ರನ ಮನೆಯಲ್ಲೇ. ಹೀಗಾಗಿ ರಾಮಚಂದ್ರನನ್ನೇ ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದ್ದಾಗ, ಕೊಲೆ ಹಿಂದಿನ ಕೈಗಳು, ಕೊಲೆ ರಹಸ್ಯ ಎಲ್ಲವೂ ಬಯಲಾಗಿದೆ. ತಾನೇ ಕೊಲೆ ಮಾಡಿದ್ದಾಗಿ ರಾಮಚಂದ್ರ ಒಪ್ಪಿಕೊಂಡಿದ್ದಾನೆ. ಕೊಲೆ ಹೇಗೆ ಮಾಡಿದೆ, ಯಾರಾರು ಭಾಗಿ ಎಂದೆಲ್ಲಾ ಪೊಲೀಸರ ಎದುರು ಬಾಯಿ ಬಿಟ್ಟಿದ್ದಾನೆ.
ದೇಹದ ಭಾಗಗಳು ಎಫ್‌ಎಸ್‌ಎಲ್ ಗೆ ರವಾನೆ!
ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯ ಚಿಂಪುಗಾನಹಳ್ಳಿ ಹಾಗೂ ಲಿಂಗಾಪುರ ಸೇರಿದಂತೆ ಹಲವು ಕಡೆ ಮಹಿಳೆಯ ಕೈಗಳು, ದೇಹದ ಕೆಲವು ಭಾಗಗಳು ಸಿಕ್ಕಿದ್ದು, ಕೈಗಳ ಮೇಲೆ ಎರಡು ಟ್ಯಾಟೂಗಳು ಕಂಡು ಬಂದಿದ್ದು, ಹೆಚ್ಚಿನ ತನಿಖೆಗಾಗಿ ದೇಹದ ಭಾಗಗಳನ್ನು ಎಫ್‌ಎಸ್‌ಎಲ್ ಗೆ ರವಾನೆ ಮಾಡಲಾಗುವುದು. ಈಗಾಗಲೇ ವಿಶೇಷ ತನಿಖಾ ತಂಡ ರಚಿಸಲಾಗಿದ್ದು, ಆದಷ್ಟು ಬೇಗ ಆರೋಪಿಗಳ ಹೆಡೆಮುರಿ ಕಟ್ಟಲಾಗುವುದು ಎಂದು ತುಮಕೂರು ಎಸ್‌ಪಿ ಅಶೋಕ್ ವೆಂಕಟ್ ಹೇಳಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.