/newsfirstlive-kannada/media/media_files/2025/12/24/kalburagi-kidwai-hospital-a-c-stolen-2025-12-24-14-37-00.jpg)
ಅದು ಕಲ್ಯಾಣ ಕರ್ನಾಟಕ ಭಾಗದ ಬಡ ಕ್ಯಾನ್ಸರ್ ರೋಗಿಗಳಿಗೆ ಅನುಕೂಲ ಆಗಲಿ ಅಂತ ಸ್ಥಾಪನೆ ಮಾಡಿರುವ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ತೆ. ಆಸ್ಪತ್ರೆಯ ರೇಡಿಯೆಷನ್ ವಿಭಾಗದಲ್ಲಿನ ಏರ್ ಕಂಡಿಷನ್ ಗಳು ಕಳ್ಳತನವಾಗಿವೆ. ಆಸ್ಪತ್ರೆಯಲ್ಲಿನ ಎ.ಸಿಗಳನ್ನ ಅಲ್ಲಿರುವ ವೈದ್ಯರೇ ಕಳ್ಳತನ ಮಾಡಿ ತಮ್ಮ ಮನೆಯಲ್ಲಿ ಅಳವಡಿಸಿಕೊಂಡಿದ್ದಾರೆ ಅನ್ನೋ ಗಂಭೀರ ಆರೋಪ ಕೇಳಿ ಬಂದಿದೆ. ವೈದ್ಯಕೀಯ ಶಿಕ್ಷಣ ಸಚಿವ ಡಾ: ಶರಣಪ್ರಕಾಶ್ ಪಾಟೀಲ್ ತವರಲ್ಲೇ ನಡೆದ ಕಳ್ಳಾಟದ ಬಗ್ಗೆ ಕೇಸರಿ ಪಡೆ ತನಿಖೆಗೆ ಆಗ್ರಹಿಸಿದೆ.
ಕಲಬುರಗಿ ಕಿದ್ವಾಯಿ ಆಸ್ಪತ್ರೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಎಸಿ ಕಳ್ಳತನ....!
ಆಸ್ಪತ್ರೆಯ ವೈದ್ಯರ ವಿರುದ್ದವೇ ಕಳ್ಳತನ ಆರೋಪ!
ಕಲಬುರಗಿಯ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯಲ್ಲಿ ಕಳೆದ ನವೆಂಬರ್ ನಲ್ಲಿ ಆಸ್ಪತ್ರೆಯ ರೇಡಿಯೆಷನ್ ವಿಭಾಗದಲ್ಲಿನ ಎ.ಸಿ.ಗಳು ಕಳ್ಳತನವಾಗಿವೆ. ಕಳ್ಳತನವಾದ ಎ.ಸಿ.ಗಳನ್ನ ಕದ್ದಿರುವ ಗಂಭಿರ ಆರೋಪ ಆಸ್ಪತ್ರೆಯ ಮುಖ್ಯಸ್ಥರ ವಿರುದ್ದವೇ ಕೇಳಿ ಬಂದಿದೆ. ಯಾಕಂದ್ರೆ ಆಸ್ಪತ್ರೆಯಲ್ಲಿ ಲಕ್ಷಾಂತರ ರೂ. ಮೌಲ್ಯದ ಎಸಿಗಳನ್ನ ಅಂದ್ರೆ ಏರ್ ಕಂಡಿಷನ್ ಗಳನ್ನ ತಮ್ಮ ಸ್ವಂತ ಮನೆಗೆ ಸಾಗಿಸಿದ್ದಾರೆ ಅನ್ನೋ ಆರೋಪ ಕೇಳಿ ಬಂದಿದೆ. ಕಳೆದ ತಿಂಗಳು ಆಸ್ಪತ್ರೆಯಲ್ಲಿನ 24 ಎಸಿ ಯೂನಿಟ್ ಗಳನ್ನ ಬೇರೆಡೆಗೆ ಸಾಗಿಸಲಾಗಿತ್ತಂತೆ. ಈ ಬಗ್ಗೆ ಅಲ್ಲಿನ ಸಿಬ್ಬಂದಿಗೆ ಗೊತ್ತಾದರೂ ಬೇರೆಯದ್ದೆ ಕಥೆ ಹೇಳಿದ್ದರಂತೆ. ಯಾವಾಗ ಈ ವಿಚಾರ ದಿನೆೇ ದಿನೆೇ ಹೊರಗಡೆ ಲೀಕ್ ಆಯಿತೋ ಆಗ ಬೆಂಗಳೂರಿನ ಮುಖ್ಯ ಕಚೇರಿಯವರೆಗೂ ವಿಷಯ ತಲುಪಿದೆ. ಅಲ್ಲಿಂದ ತಕ್ಷಣವೇ ಎಸಿ ಕಳ್ಳತನವಾದ ಬಗ್ಗೆ ದೂರು ದಾಖಲಿಸೋಕೆ ಸೂಚನೆ ಬಂದಿತ್ತಂತೆ. ಅದರಂತೆ ಕಳೆದ ವಾರ ಅಂದ್ರೆ ಡಿಸೆಂಬರ್ 12 ರಂದು ಕಲಬುರಗಿಯ ಬ್ರಹ್ಮಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಆದ್ರೆ ಅಲ್ಲಿಯೂ ಆಸ್ಪತ್ರೆ ಪ್ರಭಾರಿ ವೈಧ್ಯಾಧಿಕಾರಿ ಡಾ: ಗುರುರಾಜ ದೇಶಪಾಂಡೆ ಕೇವಲ ಎರಡು ಹಳೆ ಎಸಿ ಗಳ ಬಿಡಿಭಾಗಗಳಷ್ಟೇ ಕಳ್ಳತನ ಆಗಿವೆ ಎಂದು ದೂರು ನೀಡಿದ್ದಾರೆ. ಅದೇ ವಿಷಯ ಸದ್ಯ ಬಿಜೆಪಿ ನಾಯಕರ ಕೆಂಗಣ್ಣಿಗೆ ಗುರಿಯಾಗಿದೆ. ಯಾವಾಗ ಎ.ಸಿ. ಕಳ್ಳತನದ ಬಗ್ಗೆ ಒತ್ತಡ ಹೆಚ್ಚಾಯಿತೋ ಆಗಲೇ ಆಸ್ಪತ್ರೆಯಿಂದ ತೆಗೆದುಕೊಂಡು ಹೋಗಿದ್ದ ಎಸಿಗಳನ್ನ ವಾಪಸ್ ತಂದಿಟ್ಟಿದ್ದಾರಂತೆ.
/filters:format(webp)/newsfirstlive-kannada/media/media_files/2025/12/24/kalburagi-kidwai-hospital-a-c-stolen-2-2025-12-24-14-41-38.jpg)
ಹೀಗಾಗಿ ಲಕ್ಷಾಂತರ ರೂ. ಬೆಲೆ ಬಾಳುವ ಎಸಿ ಯೂನಿಟ್ ಗಳನ್ನ ಆಸ್ಪತ್ರೆಯಿಂದ ತೆಗೆದುಕೊಂಡು ಹೋಗಿದ್ಯಾರು? ಇದಕ್ಕೆ ಆಸ್ಪತ್ರೆಯ ಮುಖ್ಯಸ್ಥರೇ ಸರ್ಪೋಟ್ ಮಾಡಿದ್ದಾರೆ ಎಂದು ಬಿಜೆಪಿಯ ಮಾಜಿ ಶಾಸಕ ರಾಜಕುಮಾರ್ ಪಾಟೀಲ್ ತೆಲ್ಕೂರ್ ಆರೋಪಿಸಿ, ಈ ಬಗ್ಗೆ ಸೂಕ್ತ ತನಿಖೆಗೆ ಆಗ್ರಹಿಸಿದ್ದಾರೆ.
/filters:format(webp)/newsfirstlive-kannada/media/media_files/2025/12/24/kalburagi-kidwai-hospital-a-c-stolen-3-2025-12-24-14-42-39.jpg)
ಎಸಿ ಗಳ ಕಳ್ಳತನ ವಿಚಾರದಲ್ಲಿ ದೊಡ್ಡ ಗೋಲ್ಮಾಲ್ ನಡೆದಿದೆ. ಆಸ್ಪತ್ರೆಯ ಸಿಸಿಟಿವಿಯಲ್ಲಿ ಕಳ್ಳರ ಸೆರೆ ಸಿಕ್ಕರೂ ಪೊಲೀಸರು ಆತನ ವಿಚಾರಣೆ ಮಾಡಿಲ್ಲ. ಎಲ್ಲರೂ ಶಾಮೀಲಾಗಿ ವ್ಯವಸ್ಥಿತವಾಗಿ ಪ್ರಕರಣವನ್ನ ಮುಚ್ಚಿಹಾಕೋಕೆ ಯತ್ನಿಸಿದ್ದಾರೆ ಎನ್ನುತ್ತಿದ್ದಾರೆ. ಇದಿಷ್ಟೆ ಅಲ್ಲದೇ ಆಸ್ಪತ್ರೆಯಲ್ಲಿ ಬಡವರಿಗೆ ಉಚಿತವಾಗಿ ಸಿಗುವ ಔಷಧಿಗಳನ್ನ ಕೂಡ ಕಳ್ಳತನ ಮಾಡಿಕೊಂಡು ತಮ್ಮ ಖಾಸಗಿ ಕ್ಲಿನಿಕ್ ಗೆ ತೆಗೆದುಕೊಂಡು ಹೋಗುತ್ತಿದ್ದಾರಂತೆ. ಪ್ರತಿ ತಿಂಗಳು ಬಡ ರೋಗಿಗಳಿಗೆ ಅಂತ ಲಕ್ಷಾಂತರ ರೂಪಾಯಿ ಸರ್ಕಾರ ಖರ್ಚು ಮಾಡುತ್ತಿದ್ದರೇ, ಇಲ್ಲಿನ ಆಸ್ಪತ್ರೆಯ ಮುಖ್ಯಸ್ಥರೇ ಕಳ್ಳತನಕ್ಕಿಳಿದ್ರಾ ಅನ್ನೋ ಅನುಮಾನ ಶುರುವಾಗಿದೆ. ಇನ್ನೂ ಈ ಬಗ್ಗೆ ಕ್ವಿದ್ವಾಯಿ ಪ್ರಭಾರಿ ವೈದ್ಯಾಧಿಕಾರಿಯನ್ನ ಕೇಳಿದ್ರೆ ಆಸ್ಪತ್ರೆಯ ಎಸಿ ಗಳು ಕೆಟ್ಟು ಹೋಗಿದ್ದವು ಅವುಗಳನ್ನ ರಿಮೋವ್ ಮಾಡಿ ಹೊಸ ಎಸಿಗಳನ್ನ ಹಾಕಿದ್ದೇವೆ. ಹಳೇ ಎಸಿಗಳನ್ನ ಬೈ ಬ್ಯಾಕ್ ಅಡಿ ಕೊಟ್ಟಿದ್ದೆವು. ಆದ್ರೆ ಟೆಂಡರ್ ನಲ್ಲಿ ಬೈ ಬ್ಯಾಕ್ ಇರದ ಕಾರಣ ವಾಪಸ್ ತರಿಸಿಕೊಂಡಿದ್ದೇವೆ ಎನ್ನುತ್ತಿದ್ದಾರೆ. ಆದ್ರೆ ಬೈ ಬ್ಯಾಕ್ ಗೆ ಟೆಂಡರ್ ಆಗದೇ ಅದೇಗೆ ಎಸಿಗಳನ್ನ ಆಸ್ಪತ್ರೆಯಿಂದ ಹೊರಗಡೆ ತೆಗೆದುಕೊಂಡು ಹೋದ್ರು? ಯಾರು ತೆಗೆದುಕೊಂಡು ಹೋದ್ರು ಎಂದು ಕೇಳಿದ್ರೆ ಅದಕ್ಕೆ ಸರಿಯಾದ ಉತ್ತರ ಇಲ್ಲದೆ ಸ್ಬಲ್ಪ ಯಡವಟ್ಟು ಆಗಿದೆ ಅಂತಿದ್ದಾರೆ ಕಿದ್ವಾಯಿ ಆಸ್ಪತ್ರೆಯ ಮುಖ್ಯಸ್ಥರು.
ಒಟ್ನಲ್ಲಿ ಕಲಬುರಗಿಯ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆಯ ಮುಖ್ಯಸ್ಥರ ವಿರುದ್ದವೇ ಎಸಿ ಕಳ್ಳತನ ಆರೋಪ ಕೇಳಿ ಬಂದಿದ್ದು, ಬಿಜೆಪಿ ತನಿಖೆಗೆ ಆಗ್ರಹಿಸಿದೆ. ಪ್ರಕರಣ ದಾಖಲಿಸಿಕೊಂಡಿರುವ ಬ್ರಹ್ಮಪುರ ಠಾಣೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅದೇನೆ ಇದ್ರು ಪೊಲೀಸರ ತನಿಖೆ ನಂತರ ಮಾತ್ರ ಎಸಿ ಕಳ್ಳತನ, ಗೋಲ್ಮಾಲ್ ಕೇಸ್ ನ ಅಸಲಿಯತ್ತು ತಿಳಿಯಲಿದೆ.
ಬಜರಂಗಿ, ನ್ಯೂಸ್ ಫಸ್ಟ್, ಕಲಬುರಗಿ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us