/newsfirstlive-kannada/media/media_files/2025/10/16/priyank_kharge_rss-2025-10-16-16-25-53.jpg)
ಚಿತ್ತಾಪುರದಲ್ಲಿ ಆರ್‌ಎಸ್ಎಸ್ ಪಥಸಂಚಲನ ವಿವಾದ
ಕಲ್ಬುರ್ಗಿಯ ಚಿತ್ತಾಪುರದಲ್ಲಿ ಆರ್‌ಎಸ್ಎಸ್ ಪಥ ಸಂಚಲನ ವಿವಾದದ ಬಗ್ಗೆ ಇಂದು ಹೈಕೋರ್ಟ್ ಏಕಸದಸ್ಯ ಪೀಠದಲ್ಲಿ ವಿಚಾರಣೆ ಮುಂದುವರಿಯಿತು.
ಈ ವೇಳೆ ಮೊನ್ನೆ ದಿನ ಬೆಂಗಳೂರಿನ ಅಡ್ವೋಕೇಟ್ ಜನರಲ್ ಕಚೇರಿಯಲ್ಲಿ ನಡೆದ ಶಾಂತಿ ಸಭೆಯ ವಿವರಗಳನ್ನು ಅಡ್ವೋಕೇಟ್ ಜನರಲ್ , ಹೈಕೋರ್ಟ್ ಗಮನಕ್ಕೆ ತಂದರು.
ಈ ವೇಳೆ ವಾದಿಸಿದ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ಜಿಲ್ಲಾಡಳಿತಕ್ಕೆ ಸಾಕಷ್ಟು ಅರ್ಜಿಗಳು ಅನುಮತಿಗಾಗಿ ಬಂದಿವೆ. ಎಲ್ಲರಿಗೂ ಬೇರೆ ಬೇರೆ ದಿನಾಂಕದಂದು ಮಾಡಲು ಪರವಾನಿಗೆ ಕೊಡುತ್ತೇವೆ. ಅದಕ್ಕೆ ನಮಗೆ ಒಂದು ವಾರ ಸಮಯ ಬೇಕು ಎಂದು ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಹೈಕೋರ್ಟ್ ಗೆ ತಿಳಿಸಿದ್ದಾರೆ.
ಇನ್ನೂ ಎಜಿ ನೇತೃತ್ವದ ಮೀಟಿಂಗ್ ಬಗ್ಗೆ ಆರ್‌ಎಸ್ಎಸ್ ಪರ ವಕೀಲ ಅರುಣ್ ಶ್ಯಾಮ್ ಕೂಡ ಹೈಕೋರ್ಟ್ ಗಮನಕ್ಕೆ ತಂದರು.
ಹನ್ನೊಂದು ಅರ್ಜಿಗಳು ಬಂದಿವೆ. ಯಾರೆಲ್ಲ ಅರ್ಜಿ ಹಾಕಿದ್ದಾರೆ ಅವರಿಗೆ ಪ್ರತ್ಯೇಕ ದಿನಾಂಕ ನಿಗದಿ ಮಾಡ್ತೇವೆ. ಒಂದು ವಾರದಲ್ಲಿ ಎಲ್ಲರಿಗೂ ಪ್ರತ್ಯೇಕ ದಿನಾಂಕ ನಿಗದಿ ಮಾಡ್ತೇವೆ ಎಂದು ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ ಹೈಕೋರ್ಟ್ ಗೆ ತಿಳಿಸಿದ್ದಾರೆ.
ಆರ್‌ಎಸ್ಎಸ್ ಪರ ವಕೀಲ ಅರುಣ್ ಶ್ಯಾಮ್ ನವೆಂಬರ್ 13 ಅಥವಾ 16 ರಂದು ಪಥ ಸಂಚಲನಕ್ಕೆ ಅವಕಾಶ ಮಾಡಿಕೊಡುವಂತೆ ಮನವಿ ಮಾಡಿಕೊಂಡರು. ಚೌಟರಿ ಬುಕ್ ಮಾಡೋದಕ್ಕೆ ಅನುಕೂಲ ಆಗುತ್ತೆ ಎಂದು ವಕೀಲ ಅರುಣ್ ಶಾಮ್ ಹೈಕೋರ್ಟ್ ನಲ್ಲಿ ವಾದಿಸಿದ್ದರು
/filters:format(webp)/newsfirstlive-kannada/media/post_attachments/wp-content/uploads/2023/06/HIGHCOURT.jpg)
ನವೆಂಬರ್ 13 ರಂದು ದಿನಾಂಕ ನಿಗದಿ ಬಗ್ಗೆ ವರದಿ ನೀಡುವಂತೆ ನ್ಯಾಯಾಧೀಶರಾದ ಕಮಲ್ ಸೂಚನೆ ನೀಡಿದ್ದಾರೆ. ಒಂದು ವೇಳೆ ಸರ್ಕಾರ ದಿನಾಂಕ ನಿಗದಿ ಮಾಡದೇ ಹೋದ್ರೆ ಕೋರ್ಟ್ ನಿಂದ ಅನುಮತಿ ಕೊಡಲಾಗುವುದು ಎಂದು ಹೈಕೋರ್ಟ್ ಹೇಳಿದೆ. ವಿಚಾರಣೆಯನ್ನು ಮತ್ತೆ ನವೆಂಬರ್ 13 ಕ್ಕೆ ನ್ಯಾ. ಎಂಜಿಎಸ್ ಕಮಲ್ ಮುಂದೂಡಿದ್ದಾರೆ.
/filters:format(webp)/newsfirstlive-kannada/media/media_files/2025/10/14/rss-2025-10-14-07-11-51.jpg)
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us