/newsfirstlive-kannada/media/media_files/2025/11/25/ias-officer-mahanthesh-biagi-death-2025-11-25-20-09-25.jpg)
ಕಾರ್ ಅಪಘಾತದಲ್ಲಿ ಐಎಎಸ್ ಅಧಿಕಾರಿ ಮಹಾಂತೇಶ್ ಬೀಳಗಿ ಸಾವು
IAS ಅಧಿಕಾರಿ ಮಹಾಂತೇಶ್ ಬೀಳಗಿ ಕಾರ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಕಲ್ಬುರ್ಗಿ ಜಿಲ್ಲೆಯ ಜೇವರ್ಗಿ ತಾಲ್ಲೂಕಿನ ಗೌನಹಳ್ಳಿ ಕ್ರಾಸ್ ಬಳಿ ನಡೆದ ಅಪಘಾತದಲ್ಲಿ ಮಹಾಂತೇಶ್ ಬೀಳಗಿ ಸಾವನ್ನಪ್ಪಿದ್ದಾರೆ. ಇನ್ನೋವಾ ಕಾರ್ ಸೆಲ್ಪ್ ಆಕ್ಸಿಡೆಂಟ್ ಆಗಿ ಕಾರ್ ನಲ್ಲಿದ್ದ ಮಹಾಂತೇಶ್ ಬೀಳಗಿ ಸೇರಿದಂತೆ ಮೂವರು ಸಾವನ್ನಪ್ಪಿದ್ದಾರೆ. ವಿಜಯಪುರದಿಂದ ಕಲ್ಬರ್ಗಿಗೆ ಆಗಮಿಸುತ್ತಿದ್ದಾಗ ಕಾರ್ ಅಪಘಾತಕ್ಕೀಡಾಗಿದೆ. ಸಂಬಂಧಿಕರೊಬ್ಬರ ಮದುವೆಗಾಗಿ ಕಲ್ಬುರ್ಗಿಗೆ ಮಹಾಂತೇಶ್ ಬೀಳಗಿ ತೆರಳುತ್ತಿದ್ದರು.
ಮಹಾಂತೇಶ್ ಬೀಳಗಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೇ ಗಂಭೀರ ಗಾಯಗಳಿಂದ ಮಹಾಂತೇಶ್ ಬೀಳಗಿ ಸಾವನ್ನಪ್ಪಿದ್ದಾರೆ. ಅಪಘಾತದಲ್ಲಿ ಕಾರ್ ನಲ್ಲಿದ್ದ ಶಂಕರ್ ಬೀಳಗಿ ಹಾಗೂ ಈರಣ್ಣ ಸಿರಸಂಗಿ ಕೂಡ ಸಾವನ್ನಪ್ಪಿದ್ದಾರೆ.
ಮಹಾಂತೇಶ್ ಬೀಳಗಿ ಅವರ ಪಾರ್ಥೀವ ಶರೀರವನ್ನು ಕಲ್ಬುರ್ಗಿಯ ಖಾಸಗಿ ಆಸ್ಪತ್ರೆಯಲ್ಲಿ ಇಡಲಾಗಿದೆ. ಆಸ್ಪತ್ರೆಗೆ ಕಲ್ಬುರ್ಗಿ ಪ್ರಾದೇಶಿಕ ಆಯುಕ್ತೆ ಜಹೀರಾ ನಸೀಮಾ ಬೇಗಂ ಭೇಟಿ ನೀಡಿದ್ದಾರೆ. ಕಲ್ಬುರ್ಗಿ ಪೊಲೀಸ್ ಕಮೀಷನರ್ ಡಾ.ಶರಣಪ್ಪ, ಕಲ್ಬುರ್ಗಿ ಎಸ್.ಪಿ. ಅಡೂರು ಶ್ರೀನಿವಾಸ್, ಕಲ್ಬುರ್ಗಿ ಜಿಲ್ಲಾಧಿಕಾರಿ ಫೌಜಿಯಾ ತರನಂ ಆಸ್ಪತ್ರೆಗೆ ಭೇಟಿ ನೀಡಿದ್ದಾರೆ.
ಸದ್ಯ ಕರ್ನಾಟಕ ಮಿನರಲ್ ಕಾರ್ಪೋರೇಷನ್ ಎಂ.ಡಿ.ಯಾಗಿ ಮಹಾಂತೇಶ್ ಬೀಳಗಿ ಕಾರ್ಯನಿರ್ವಹಿಸುತ್ತಿದ್ದರು. ಈ ಹಿಂದೆ ದಾವಣಗೆರೆ ಜಿಲ್ಲಾಧಿಕಾರಿ ಹಾಗೂ ಬೆಸ್ಕಾಂ ಎಂ.ಡಿ. ಆಗಿ ಕಾರ್ಯನಿರ್ವಹಿಸಿದ್ದರು.
ಕಾರ್‌ಗೆ ಎದುರಾಗಿ ಬೈಕ್ ಬಿದ್ದಿದ್ದರಿಂದ, ಬೈಕ್ ಗೆ ಕಾರ್ ಡಿಕ್ಕಿ ಹೊಡೆಯುವುದನ್ನು ತಪ್ಪಿಸಲು ಹೋಗಿ ಕಾರ್ ಅಪಘಾತಕ್ಕೀಡಾಗಿದೆ. ಕಾರ್ ಚಾಲಕನ ನಿಯಂತ್ರಣ ತಪ್ಪಿ , ರಸ್ತೆ ಪಕ್ಕದಲ್ಲೇ ಇದ್ದ ಚಿಕ್ಕ ಸೇತುವೆ ಮೇಲಿಂದ ಕಾರ್ ಪಲ್ಟಿಯಾಗಿ ಬಿದ್ದಿದೆ.
/filters:format(webp)/newsfirstlive-kannada/media/media_files/2025/11/25/ias-officer-mahanthesh-biagi-death02-2025-11-25-20-15-29.jpg)
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us