/newsfirstlive-kannada/media/media_files/2025/11/22/birappa-poojary-and-shantha-bhai-2025-11-22-17-56-54.jpg)
ಕೊಲೆಯಾದ ಬೀರಪ್ಪ ಪೂಜಾರಿ, ಪತ್ನಿ ಶಾಂತಾಭಾಯಿ
ಆತ ಕೃಷಿ ಚಟುವಟಿಕೆ ಮಾಡುತ್ತ ಪತ್ನಿ, ಮಕ್ಕಳೊಂದಿಗೆ ಸುಖ ಸಂಸಾರ ನಡೆಸುತ್ತಿದ್ದ. ಆದ್ರೆ ಆತನ ಕುಡಿತ ಚಟ ಗಂಡ ಹೆಂಡತಿ ಮಧ್ಯೆ ಜಗಳಕ್ಕೆ ನಾಂದಿ ಹಾಡಿತ್ತು. ಗಂಡ ಕುಡಿತದ ಚಟಕ್ಕೆ ಬಿದ್ರೆ ಹೆಂಡತಿ ಮತ್ತೋರ್ವನ ಜೊತೆ ಲವ್ವಿ ಡವ್ವಿ ಶುರುವಿಟ್ಟುಕೊಂಡು ಕುಚಿಕು ಕುಚಿಕು ಚಕ್ಕಂದ ಶುರು ಮಾಡಿದ್ದಳು. ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನನ್ನ ಹೆಂಡತಿ ಪ್ರೀಯಕರನ ಜೊತೆಗೂಡಿ ಸುಪಾರಿ ಕೊಟ್ಟು ಹತ್ಯೆ ಮಾಡಿಸಿದ್ದಳು. ಹತ್ಯೆ ಮಾಡಿದ್ದರ ಬಗ್ಗೆ ಸಣ್ಣ ಸುಳಿವು ಸಿಗದಂತೆ ಗಂಡನಿಗೆ ಚಟ್ಟ ಕಟ್ಟಿದ್ದಳು. ಆದ್ರೆ ಬರೋಬ್ಬರಿ 9 ವರ್ಷದ ಬಳಿಕ ಸುಪಾರಿ ಮರ್ಡರ್ ಗೆ ಆಡಿಯೋ ಸಾಕ್ಷಿ ಸುಳಿವು ಕೊಟ್ಟು ಹಂತಕರನ್ನು ಕಂಬಿ ಹಿಂದೆ ತಳ್ಳಿದೆ. ಕಲಬುರಗಿ ಪೊಲೀಸರು 9 ವರ್ಷದ ಬಳಿಕ ಮರ್ಡರ್ ರಹಸ್ಯ ಭೇದಿಸಿದ್ದೇ ರೋಚಕ. 9 ಇಯರ್ ಇಂಟ್ರೇಸ್ಟಿಂಗ್ ಮರ್ಡರ್ ಮಿಸ್ಟರಿ ಇಲ್ಲಿದೆ.
9 ವರ್ಷದ ಬಳಿಕ ಸುಪಾರಿ ಹಣ ವಿಚಾರಕ್ಕೆ ಫೋನ್ ಸಂಭಾಷಣೆ.
ವಿಡಿಯೋ ವೈರಲ್‌ನಿಂದ ಕೊಲೆ ರಹಸ್ಯ ಬೇಧಿಸಿದ ಖಾಕಿ.
2017 ರಲ್ಲಿ ಕಲಬುರಗಿ ತಾಲೂಕಿನ ಕಡಣ್ಣಿ ಗ್ರಾಮದಲ್ಲಿ ಬೀರಪ್ಪ ಪೂಜಾರಿ ಎಂಬಾತನ ಕೊಲೆ ಪ್ರಕರಣವನ್ನ ಬರೋಬ್ಬರಿ 9 ವರ್ಷಗಳ ಬಳಿಕ ಕಲಬುರಗಿ ಪೊಲೀಸರು ಬೇಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಅಂದಹಾಗೆ ಈ ಫೋಟೊದಲ್ಲಿ ಕಾಣ್ತಿರುವ ಈತನ ಹೆಸರು ಬೀರಪ್ಪ ಪೂಜಾರಿ.
/filters:format(webp)/newsfirstlive-kannada/media/media_files/2025/11/22/birappa-poojary-and-shantha-bhai-2025-11-22-17-56-54.jpg)
ಬೀರಪ್ಪ ಪೂಜಾರಿ ಮತ್ತು ಶಾಂತಾಭಾಯಿ
ಈಕೆಯ ಹೆಸರು ಶಾಂತಾಬಾಯಿ. ಬೀರಪ್ಪ, ಶಾಂತಾಬಾಯಿ ದಂಪತಿಗಳು. ಗಂಡ-ಹೆಂಡತಿಗೆ ಮೂವರು ಮಕ್ಕಳು.
ಬೀರಪ್ಪ ಪೂಜಾರಿ ಕೃಷಿ ಚಟುವಟಿಕೆ ಮಾಡಿಕೊಂಡು ಸುಖ ಜೀವನ ನಡೆಸುತ್ತಿದ್ದ. ಆದ್ರೆ ಬರಬರುತ್ತ ಬೀರಪ್ಪ ಪೂಜಾರಿ ಕುಡಿತದ ಚಟಕ್ಕೆ ಅಂಟಿಕೊಂಡಿದ್ದ. ಕುಡಿತದ ಚಟದಿಂದ ಗಂಡ- ಹೆಂಡತಿ ಮಧ್ಯೆ ಜಗಳ ನಡೆಯುತ್ತಿತ್ತು. ಇದರ ನಡುವೆ ಹೆಂಡತಿ ಶಾಂತಾಬಾಯಿ ಅದೇ ಊರಿನ ಜೆಸಿಬಿ ಸಿದ್ದು ಎನ್ನುವಾತನ ಜೊತೆ ಲವ್ವಿಡವಿ ಶುರುವಿಟ್ಟುಕೊಂಡು ಚಕ್ಕಂದ ಶುರುವಿಟ್ಟುಕೊಂಡಿದ್ದಳು. ಹೆಂಡತಿಯ ಅನೈತಿಕ ಸಂಬಂಧ ಗಂಡ ಬೀರಪ್ಪ ಪೂಜಾರಿಗೆ ಗೊತ್ತಾಗಿತ್ತು. ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡ ಬೀರಪ್ಪ ಪೂಜಾರಿಗೆ ಒಂದು ಗತಿ ಕಾಣಿಸಬೇಕು ಅಂತ ಡಿಸೈಡ್ ಮಾಡಿ ಪ್ರಿಯಕರ ಜೆಸಿಬಿ ಸಿದ್ದು ಜೊತೆಗೂಡಿ, ಜೆಸಿಬಿ ಸಿದ್ದು ಸ್ನೇಹಿತರಿಗೆ ಒಂದೂವರೇ ಲಕ್ಷಕ್ಕೆ ಕೊಲೆ ಮಾಡಲು ಸುಪಾರಿ ನೀಡಿದ್ದರು. ಅದರಂತೆ ಗಂಡ ಬೀರಪ್ಪನನ್ನ ಕೊಲೆ ಮಾಡಲು ಪ್ರಿಯಕರ ಸಿದ್ದು, ಮಹೇಶ್, ಸೂರ್ಯಕಾಂತ್, ಶಂಕರ್‌ಗೆ ಸುಪಾರಿ ಕೊಡಲಾಗಿತ್ತು. ಅದರಂತೆ ಬೀರಪ್ಪ ಪೂಜಾರಿಗೆ ಮಾತ್ರೆ ಕೊಟ್ಟು ಕೊಲ್ಲಲು ವಿಫಲ ಯತ್ನ ನಡೆದಿದೆ. ಬೀರಪ್ಪ ಪೂಜಾರಿ ಮನೆ ಪಕ್ಕದಲ್ಲಿರುವ ಖಾಲಿ ಜಮೀನಿನಲ್ಲಿ ಬೀರಪ್ಪನನ್ನ ಕತ್ತು ಹಿಸುಕಿ ಕೊಲೆ ಮಾಡಲಾಗಿತ್ತು.
ಗಂಡ ಬೀರಪ್ಪನ ಸಾವಿನ ಸುದ್ದಿ ಪತ್ನಿಯೇ ಸಂಬಂಧಿಕರಿಗೆ ಮುಟ್ಟಿಸಿದ್ದಾಳೆ. ಅಚಾನಾಕ್ಕಾಗಿ ಗಂಡ ತೀರಿಹೋಗಿದ್ದಾನೆ ಅಂತ ಗ್ರಾಮದಲ್ಲಿ ಸೀನ್ ಕ್ರೀಯೆಟ್ ಮಾಡಿ ಗೋಳಾಟ ನಡೆಸಿದ್ದಾಳೆ. ಅದರಂತೆ ಅಂದು ಸಂಬಂಧಿಕರ ಸಮ್ಮುಖದಲ್ಲಿ ಗಂಡ ಬೀರಪ್ಪನ ಅಂತ್ಯಕ್ರಿಯೆ ನೆರವೇರಿಸಿದ್ದಾಳೆ. ಇದಾದ ಬಳಿಕ ಬರೋಬ್ಬರಿ 9 ವರ್ಷ ಬಳಿಕ ಅಂದ್ರೆ ಇದೇ ವರ್ಷ ನವೆಂಬರ್ 10 ರಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದು ವೈರಲ್ ಆಗಿದೆ. 2017 ರಲ್ಲಿ ಬೀರಪ್ಪನ ಕೊಲೆಗೆ ಕೊಡಲಾಗಿದ್ದ ಬಾಕಿ ಸುಪಾರಿ ಹಣ ಬಗ್ಗೆ ಆರೋಪಿ ಮಹೇಶ್ ಫೋನ್‌ನಲ್ಲಿ ಶಾಂತಾಬಾಯಿ ಜೊತೆ ಮಾತಾಡ್ತಿದ್ದ ವಿಡಿಯೋವನ್ನ ಸ್ಥಳೀಯರು ರೆಕಾರ್ಡ್ ಮಾಡಿ ಬೀರಪ್ಪನ ಸಹೋದರ ಭೀಮಾಶಂಕರ್ ಗೆ ನೀಡಿದ್ದಾರೆ. ತಡ ಮಾಡದೇ ಭೀಮಾಶಂಕರ್ ನೇರವಾಗಿ ಫರಹತಾಬಾದ್ ಪೊಲೀಸ್ ಠಾಣೆಗೆ ಬಂದು ಸಹೋದರನ ಸಾವು ಸಹಜ ಸಾವಲ್ಲ, ಬದಲಿಗೆ ಇದೊಂದು ವ್ಯವಸ್ಥಿತ ಕೊಲೆ ಅಂತ ಅತ್ತಿಗೆ ಶಾಂತಾಬಾಯಿ ವಿರುದ್ಧ ದೂರು ನೀಡಿದ್ದಾನೆ. ದೂರು ದಾಖಲಿಸಿಕೊಂಡು ತನಿಖೆಗೆ ಇಳಿದ ಪೊಲೀಸರು, ಮೊದಲಿಗೆ ಕೊಲೆಯಾದ ಬೀರಪ್ಪನ ಪತ್ನಿ ಶಾಂತಾಬಾಯಿ ಯನ್ನ ವಶಕ್ಕೆ ಪಡೆದು ತಮ್ಮದೇ ಧಾಟಿಯಲ್ಲಿ ವಿಚಾರಣೆ ನಡೆಸಿದ್ದಾರೆ. ವಿಚಾರಣೆ ವೇಳೆ ತನ್ನ ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನ ಕೊಲೆ ರಹಸ್ಯ ಬಾಯ್ಬಿಟ್ಟಿದ್ದಾಳೆ. ಈ ವೇಳೆ ಬೀರಪ್ಪನ ಪತ್ನಿ ಶಾಂತಾಬಾಯಿ, ಪ್ರಿಯಕರ ಜೆಸಿಬಿ ಸಿದ್ದು, ಶಂಕರ್, ಮಹೇಶ್, ಸೂರ್ಯಕಾಂತ್ ಸೇರಿ ಐವರನ್ನ ಫರಹತಾಬಾದ್ ಠಾಣೆ ಪೊಲೀಸರು ಬಂಧಿಸಿದ್ದಾರೆ.
9 ವರ್ಷಗಳ ಹಿಂದಿನ ಬೀರಪ್ಪನ ಸುಪಾರಿ ಕೊಲೆ ಕಹಾನಿ ಬೇಧಿಸಿರುವ ಫರಹತಾಬಾದ್ ಠಾಣೆ ಪೊಲೀಸರು ಪತ್ನಿ, ಪ್ರಿಯಕರ ಸೇರಿದಂತೆ ಐವರನ್ನ ಬಂಧಿಸಿ ಶ್ರೀಕೃಷ್ಣನ ಜನ್ಮಸ್ಥಾನಕ್ಕೆ ಕಳಿಸಿ, ಮತ್ತಷ್ಟು ತನಿಖೆ ಮುಂದುವರೆಸಿದ್ದಾರೆ. ಇತ್ತ ಬೀರಪ್ಪನ ಅಸಹಜ ಸಾವಿನ ಪ್ರಕರಣವನ್ನ ಬೇಧಿಸಿ ಆತನ ಸಾವಿಗೆ ನ್ಯಾಯ ಒದಗಿಸಿದ ಕಲಬುರಗಿ ಪೊಲೀಸರ ಕಾರ್ಯಾಚರಣೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಬಜರಂಗಿ, ನ್ಯೂಸ್ ಫಸ್ಟ್ ಕಲಬುರಗಿ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us