/newsfirstlive-kannada/media/media_files/2025/11/16/chittapura-rss-3-2025-11-16-17-31-13.jpg)
/newsfirstlive-kannada/media/media_files/2025/11/16/chittapura-rss-6-2025-11-16-17-31-37.jpg)
‘ಸಂಘ’ ಪರಿವಾರದ ಪಥಸಂಚಲನ
ಚಿತ್ತಾಪುರದಲ್ಲಿ ಶುರುವಾಗಿದ್ದ ಸಂಘರ್ಷ ಕೊನೆಗೂ ಶಾಂತಿಯುತವಾಗಿ ಅಂತಿಮ ಘಟ್ಟ ತಲುಪಿದೆ. ಖರ್ಗೆ ಕೋಟೆಯಲ್ಲಿ ಆರ್ಎಸ್ಎಸ್ ಪಥಸಂಚಲನ ನಡೆಸಿ ಶಕ್ತಿಪ್ರದರ್ಶನ ಮಾಡಿದೆ. ಕಾನೂನು ಸಮರವನ್ನ ಗೆದ್ದ ಸಂಘ ಷರತ್ತುಬದ್ಧ ಅನುಮತಿ ಮೇಲೆ ಪಥಸಂಚಲನ ಮಾಡಿದೆ. ಹೈಕೋರ್ಟ್ ಸೂಚನೆ ಮೇರೆಗೆ ದಲಿತ ಸಂಘಟನೆಗಳು ಸೈಲೆಂಟ್ ಆಗಿದ್ದು, ತಮ್ಮ ಜಾಥಾವನ್ನ ಮುಂದೂಡಿಕೆ ಮಾಡಿವೆ.
/newsfirstlive-kannada/media/media_files/2025/11/16/chittapura-rss-4-2025-11-16-17-32-07.jpg)
ರಾಷ್ಟ್ರ ಭಕ್ತಿಯ ಝೇಂಕಾರ
ಪ್ರತಿ ಬೀದಿ ಬೀದಿಗಳಲ್ಲೂ ಕೇಸರಿ ಕಲರವ.. ಬಿಳಿ ಅಂಗಿ.. ಖಾಕಿ ಪ್ಯಾಂಟು ಧರಿಸಿ ಗಣವೇಷಧಾರಿಗಳ ಸಾಗರ.. ಎಲ್ಲೆಲ್ಲೂ ಆರ್ಎಸ್ಎಸ್ ಪರ ಜೈಕಾರ.. ರಾಷ್ಟ್ರ ಭಕ್ತಿಯ ಝೇಂಕಾರ.. ಇದು ಚಿತ್ತಾಪುರದಲ್ಲಿ ನಡೆದ ವಿಶ್ವದ ಅತಿದೊಡ್ಡ ಸ್ವಯಂ ಸೇವಕ ಸಂಘದ ಶಕ್ತಿಪ್ರದರ್ಶನ..
/newsfirstlive-kannada/media/media_files/2025/11/16/chittapura-rss-2-2025-11-16-17-32-26.jpg)
ಖರ್ಗೆ ಕೋಟೆಯಲ್ಲಿ RSS ಮಂತ್ರಘೋಷ
ಆರ್ಎಸ್ಎಸ್ ತೊಟ್ಟಿದ್ದ ಪಣ ಇವತ್ತು ಕೈಗೂಡಿದೆ. ನಿರಂತರ ಕಾನೂನು ಹೋರಾಟದ ಮಧ್ಯೆ ಇವತ್ತು ಸಂಘದ ಹಠ ಈಡೇರಿದೆ. ಆರ್ಎಸ್ಎಸ್ಗೆ ಮೂಗು ದಾರ ಹಾಕಲು ಮುಂದಾಗಿದ್ದ ಪ್ರಿಯಾಂಕ್ ಖರ್ಗೆ ಕೋಟೆಯಲ್ಲಿ ಆರ್ಎಸ್ಎಸ್ ಮಂತ್ರಘೋಷ ಮೊಳಗಿದೆ. ರಾಷ್ಟ್ರೀಯ ಸ್ವಯಂ ಸೇವಕ ಸಂಘ ಪಥಸಂಚಲನ ಮಾಡಿ ಕೊನೆಗೂ ಶಕ್ತಿಪ್ರದರ್ಶನ ಮಾಡಿದೆ.
/newsfirstlive-kannada/media/media_files/2025/11/16/chittapura-rss-1-2025-11-16-17-33-02.jpg)
1.5 KM ಪಥಸಂಚಲನ
ಕಲಬುರಗಿಯ ಚಿತ್ತಾಪುರದಲ್ಲಿ ಪಥಸಂಚಲ ಮಾಡಲು ಆರ್ಎಸ್ಎಸ್ಗೆ ಕಾನೂನು ತೊಡಕು ಎದುರಾಗಿತ್ತು. ಕೊನೆಗೂ ಹೈಕೋರ್ಟ್ ಕಟಕಟೆಯಲ್ಲಿ ನಿಂತು ಪಥಸಂಚಲನಕ್ಕೆ ಸಂಘಪರಿವಾರ ಇವತ್ತಿಗೆ ಅನುಮತಿ ಪಡೆದಿತ್ತು. ಅದರಂತೆ ಇವತ್ತು ಚಿತ್ತಾಪುರದ ಬಜಾಜ್ ಕಲ್ಯಾಣಮಂಟಪದಿಂದ ರಾಷ್ಟ್ರೀಯ ಸಯಂ ಸೇವಕ ಸಂಘದ ಪಥಸಂಚಲ ಶುರುವಾಗಿತ್ತು. ಚಿತ್ತಾಪುರ ಕಂದಾಯ ಗ್ರಾಮ ವ್ಯಾಪ್ತಿಯ 50 ಮಂದಿ ಬ್ಯಾಂಡ್ ಟೀಂ ಜೊತೆ 300 ಮಂದಿ ಗಣವೇಷಧಾರಿಗಳು ಒಂದೂವರೆ ಕಿಲೋ ಮೀಟರ್ ಪಥಸಂಚಲನ ನಡೆಸಿದ್ರು
/newsfirstlive-kannada/media/media_files/2025/11/16/chittapura-rss-2025-11-16-17-33-39.jpg)
ಪೊಲೀಸರ ಸರ್ಪಗಾವಲು
ಬಿಳಿ ಶರ್ಟ್, ಖಾಕಿ ಪ್ಯಾಂಟ್, ಕರಿಟೋಪಿ, ಕೈಯ್ಯಲ್ಲಿ ಲಾಠಿ ಹಿಡಿದಿದ್ದ ಗಣವೇಷಧಾರಿಗಳು ಚಿತ್ತಾಪುರದ ಬೀದಿಗಳಲ್ಲಿ ಸಾಲಾಗಿ ಹೆಜ್ಜೆ ಹಾಕಿದ್ರು. ಪಥ ಸಂಚಲನದ ಮಾರ್ಗದುದ್ದಕ್ಕೂ ಗಣವೇಷಧಾರಿಗಳ ಮೇಲೆ ಸ್ಥಳೀಯರು ಹೂಮಳೆ ಸುರಿಸಿದ್ರು. ಈ ಮೂಲಕ ಶಾಂತಿಯುತವಾಗಿ ಪಥಸಂಚಲನ ನಡೆಸಿ ಸಂಘಪರಿವಾರ ತಮ್ಮ ಬಹುದಿನದ ಹಠವನ್ನ ಈಡೇರಿಸಿಕೊಳ್ತು. ಇನ್ನು ಪಥಸಂಚಲನದ ವೇಳೆ ಸುಮಾರು ಒಂದೂವರೆ ಸಾವಿರ ಪೊಲೀಸರ ಸರ್ಪಗಾವಲನ್ನ ಹಾಕಲಾಗಿತ್ತು. ಸುಮಾರು 45 ನಿಮಿಷದ ಒಳಗಾಗಿ ಪಥ ಸಂಚಲನ ಸಮಾಪ್ತಿಯಾಯ್ತು.
/newsfirstlive-kannada/media/media_files/2025/11/16/chittapura-rss-8-2025-11-16-17-35-51.jpg)
ಬಜಾಜ್ ಕಲ್ಯಾಣ ಮಂಟಪದಲ್ಲಿ ಸಂಘದ ಬೈಠಕ್!
ಒಂದೂವರೆ ಕಿಲೋ ಮೀಟರ್ ದೂರ ಪಥಸಂಚಲ ನಡೆಸಿದ ಗಣವೇಷಧಾರಿಗಳು ಮತ್ತೆ ವಾಪಸ್ ಬಜಾಜ್ ಕಲ್ಯಾಣ ಮಂಟಪಕ್ಕೆ ವಾಪಸ್ ಆದ್ರು. ಬಳಿಕ ಕಲ್ಯಾಣಮಂಟಪದಲ್ಲಿ ಸಂಘಪರಿವಾರದ ಪ್ರಮುಖರು ಬೈಠಕ್ ನಡೆಸಿದ್ರು.
/newsfirstlive-kannada/media/media_files/2025/10/16/priyank_kharge_rss-2025-10-16-16-25-53.jpg)
ಸಂಘಪರಿವಾರ ಪಠಸಂಚಲನ ನಡೆಸುವ ದಿನವೇ ನಾವು ಜಾಥ ನಡೆಸ್ತೇವೆ ಅಂತ ದಲಿತ ಸಂಘಟನೆಗಳು ಹಠಕ್ಕೆ ಬಿದ್ದಿದವು. ಆದ್ರೆ, ಹೈಕೋರ್ಟ್ ಸೂಚನೆ ಮೇರೆಗೆ ಜೈ ಭೀಮ್ ಮತ್ತು ಇತರೆ ದಲಿತ ಸಂಘಟನೆಗಲು ಸೈಲೆಂಟ್ ಆಗಿವೆ. ನವೆಂಬರ್ 26 ರಂದು ಸಂವಿಧಾನ ಸಮರ್ಪಣಾ ದಿನದಂದು ಜಾಥಾ ಮಾಡಲು ನಿರ್ಧರಿಸಿವೆ. ಇತ್ತ ಸಂಘಪರಿವಾರದ ಪಥಸಂಚಲನ ನಾವು ನಿರ್ಧರಿಸಿದಂತೆ ಆಗಿದೆ ಅಂತ ಪ್ರಿಯಾಂಕ್ ಖರ್ಗೆ ಸಂಘರ್ಷ ಗೆದ್ದಂತೆ ಮಾತನಾಡಿದ್ದಾರೆ.
/newsfirstlive-kannada/media/media_files/2025/11/16/chittapura-rss-7-2025-11-16-17-37-10.jpg)
ಪೊಲೀಸರ ಬಿಗಿಭದ್ರತೆ.. ಕಟ್ಟೆಚ್ಚರದ ಕಣ್ಗಾವಲಿನಲ್ಲಿ ಆರ್ಎಸ್ಎಸ್ ಪಥಸಂಚಲನ ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ರಾಷ್ಟ್ರೀಯ ಸ್ವಂಯ ಸೇವಕ ಸಂಘದ ಬಹುದಿನದ ಹೋರಾಟ ಅಂತ್ಯವಾಗಿದೆ. ಪ್ರಿಯಾಂಕ್ ಖರ್ಗೆ ಮಾತನ್ನ ಕೇಳಿದ್ರೆ ಸಂಘರ್ಷ ಇನ್ನೂ ಮುಕ್ತಾಯಗೊಂಡಿಲ್ಲ ಅನ್ನೋ ಸುಳಿವು ಸಿಕ್ಕಿದೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us