ಕುಟುಂಬದಲ್ಲಿ ಅಶಾಂತಿ, ಅನಗತ್ಯ ವಿಚಾರಗಳಿಂದ ಗೊಂದಲ, ನಿರಾಸೆ; ಇಲ್ಲಿದೆ ಇಂದಿನ ಭವಿಷ್ಯ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು.

author-image
Veenashree Gangani
RASHI_BHAVISHA
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಶ್ರಾವಣ ಮಾಸ, ಶುಕ್ಲಪಕ್ಷ, ಅಷ್ಟಮಿ ತಿಥಿ, ಸ್ವಾತಿ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ 3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

RASHI_BHAVISHA_MESHA

  • ದಿನಚರಿಯಲ್ಲಿ ಬದಲಾವಣೆ, ಕಾಯುವಿಕೆಯಿಂದ ಬೇಸರ
  • ಮಕ್ಕಳು, ಮೊಮ್ಮಕ್ಕಳಿಂದ ಉತ್ತಮ ಸಾಧನೆ ಸಮಾಧಾನ
  • ಲಾಭಗಳಿಸುವ ಹಂಬಲದಲ್ಲಿ ನೈತಿಕತೆ ದೂರಮಾಡಬಾರದು
  • ಯಶಸ್ಸಿನ ಆಸೆಯಿಂದ ದುರಾಸೆ ಬೇಡ
  • ಕೋಪ ಕಡಿಮೆಯಿರಲಿ ನಿಮ್ಮ ಕೆಲಸಗಳಾಗುತ್ತವೆ
  • ವ್ಯಾವಹಾರಿಕವಾಗಿ ಬೇರೆಯವರ ಸಹಾಯ ದೊರೆಯುತ್ತದೆ
  • ಶ್ರೀರಾಮ ಪರಿವಾರ ದೇವತೆಗಳನ್ನು ಪ್ರಾರ್ಥನೆ ಮಾಡಿ

ವೃಷಭ

RASHI_BHAVISHA_VRSHABA

  • ಮಕ್ಕಳ ಭವಿಷ್ಯದ ಚಿಂತೆ ಕಾಡಲಿದೆ
  • ಆರೋಗ್ಯ ಸಮಸ್ಯೆ ಹೆಚ್ಚಾಗಬಹುದು
  • ಬೇರೆಯವರ ಬಗ್ಗೆ ಅನುಮಾನ ಬೇಡ
  • ಧಾರ್ಮಿಕ ಕಾರ್ಯಗಳ ಯೋಚನೆ ಮಾಡುತ್ತೀರಿ ಆದರೆ ಕಾರ್ಯರೂಪಕ್ಕೆ ಬರುವುದಿಲ್ಲ
  • ಬಂಧುಗಳಲ್ಲಿ ಅಲ್ಪ ಪ್ರೀತಿ ಬೇಸರ ಆಗಬಹುದು
  • ಇಂದು ತಪ್ಪು ನಿರ್ಧಾರಗಳು ಬೇಡ
  • ಅಮೃತ ಮೃತ್ಯುಂಜನನ್ನು ಪ್ರಾರ್ಥನೆ ಮಾಡಿ

ಮಿಥುನ

RASHI_BHAVISHA_MITHUNA

  • ಬೇರೆಯವರಿಗೆ ಸಹಾಯ ಮಾಡಿದ್ರೆ ಅವರಿಂದ ಏನನ್ನು ನಿರೀಕ್ಷಿಸಬೇಡಿ
  • ಪಿತ್ರಾರ್ಜಿತ ಆಸ್ತಿಯ ವಿಚಾರದಲ್ಲಿ ದೊಡ್ಡ ಗಲಾಟೆಯಾಗಬಹುದು
  • ಈ ದಿನ ವೃತ್ತಿಯಲ್ಲಿ ತೊಂದರೆಯಾಗಬಹುದು
  • ಸ್ವನಿರ್ಧಾರ ಒಳಿತು ಕುತಂತ್ರ ಬೇಡ
  • ನಿಮ್ಮದಲ್ಲದ ವಿಚಾರ ನಿಮಗೆ ತೊಂದರೆ ಮಾಡುತ್ತದೆ
  • ಕುಟುಂಬ ರಾಜಕಾರಣ , ಕಲಹ, ಮನಸ್ತಾಪಗಳಿರುತ್ತವೆ
  • ಮಹಾಕಾಳಿಯನ್ನು ಪ್ರಾರ್ಥನೆ ಮಾಡಿ

ಕಟಕ

RASHI_BHAVISHA_KATAKA

  • ಹೊಸ ಕೆಲಸಕ್ಕೆ ಸರಿಯಾದ ಸಮಯವಲ್ಲ
  • ಬೇರೆಯವರನ್ನು ವ್ಯಂಗ್ಯ ಮಾಡದಿರಿ ಅವಮಾನ ಆಗಬಹುದು
  • ಯೋಜನೆಗಳನ್ನು ಬದಲಾಯಿಸಿ ಅನುಕೂಲವಿದೆ
  • ತಂದೆಯವರ ಬೇಸರಕ್ಕೆ ಕಾರಣವಾಗದಿರಿ
  • ಪೋಷಕರ ಸಲಹೆಗೆ ಮಾನ್ಯತೆ ನೀಡಿ
  • ಆರ್ಥಿಕವಾಗಿ ಇರುವ ಸಮಸ್ಯೆಗಳಿಗೆ ಪರಿಹಾರವಿಲ್ಲ
  • ಶನೈಶ್ಚರ ದೇವಾಲಯಕ್ಕೆ ಹೋಗಿ ದರ್ಶನ ಮಾಡಿ

ಸಿಂಹ 

RASHI_BHAVISHA_SIMHA

  • ಕುಟುಂಬದಲ್ಲಿ ಅಶಾಂತಿ ತಲೆದೋರಬಹುದು
  • ಅನಗತ್ಯ ವಿಚಾರಗಳಿಂದ ಗೊಂದಲ, ನಿರಾಸೆ
  • ಬೇರೆಯವರ ಸಂಪರ್ಕದಿಂದ ಮನೆಯಲ್ಲಿ ಬೇಸರ ಆಗಬಹುದು
  • ಹಣಕಾಸಿನ ಲಾಭದ ಆಸೆಯಿಂದ ಮೋಸಹೋಗಬಹುದು
  • ರಾಜಕೀಯ ವಿಷಯದಿಂದ ದೂರವಿದ್ದರೆ ಒಳಿತು
  • ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಅವಕಾಶವಿದೆ
  • ದತ್ತಾತ್ರೇಯರ ಆರಾಧನೆ ಮಾಡಿ

ಕನ್ಯಾ

RASHI_BHAVISHA_KANYA

  • ಹಣಕ್ಕೆ ಕೊರತೆಯಿಲ್ಲ, ಕೀರ್ತಿಯೂ ಇದೆ
  • ಸಾಧುಗಳ ಅಥವಾ  ಧಾರ್ಮಿಕ ಮುಖಂಡರ ಭೇಟಿಯಾಗಬಹುದು
  • ವಿದ್ಯಾರ್ಥಿಗಳಿಗೆ ಅನುಕೂಲವಿದೆ  ಅಲಸ್ಯಬೇಡ
  • ನಿಮ್ಮ ವರ್ತನೆ ಎಂದಿನಂತೆಯಿರಲಿ ರಾಜಿಬೇಡ 
  • ಶತ್ರುಗಳಿಂದ, ವಿರೋಧಿಗಳಿಂದ ಕೆಲಸ ಹಾಳಾಗಬಹುದು
  • ವ್ಯಾಪಾರ, ವೃತ್ತಿಯಲ್ಲಿ ಅನಿರೀಕ್ಷಿತ  ಲಾಭ
  • ನಾಗದೇವನಿಗೆ ಅಡಿಕೆ, ಹೂ ಅರ್ಪಿಸಿ

ತುಲಾ

RASHI_BHAVISHA_TULA

  • ಕುಟುಂಬ ನಿರ್ವಹಣೆಯ ಬಗ್ಗೆ ಚರ್ಚೆ, ಕಲಹ 
  • ನಿಮ್ಮ ಲೋಪ ದೋಷಗಳ ಅನಾವರಣ
  • ಮಕ್ಕಳಿಂದ ಅವಮಾನ ಆಗಬಹುದು
  • ಬೇರೆಯವರನ್ನು ಅವಲಂಬಿಸಿ ಕಾರ್ಯಪ್ರವೃತ್ತರಾಗಬಾರದು
  • ಗೌರವಕ್ಕೆ ತಕ್ಕ ಕೆಲಸಮಾಡಿ ಶುಭವಿದೆ
  • ನಿಮ್ಮ ಕೆಲಸದಲ್ಲಿ ಪ್ರಮುಖ ಸ್ಥಾನವಿರುತ್ತದೆ
  • ಗಣಪತಿಗೆ ಚಂದನ ಲೇಪನ ಮಾಡಿಸಿ

ವೃಶ್ಚಿಕ

RASHI_BHAVISHA_VRUSHCHIKA

  • ಸಾಲದ ವಿಚಾರಕ್ಕೆ ಸಿಕ್ಕಿಕೊಳ್ಳಬಹುದು
  • ಮನೆಯವರ ಯೋಗಕ್ಷೇಮವನ್ನು ಗಮನಿಸಿ
  • ಹಳೆಯ ಚಿಂತೆ ಮರೆತರೆ ಅನುಕೂಲವಿದೆ
  • ಆರೋಗ್ಯವನ್ನು ಚೆನ್ನಾಗಿ ಕಾಪಾಡಿಕೊಳ್ಳಿ
  • ಬೇರೆಯವರಿಗೆ ಸಹಾಯದ ಹಸ್ತ ಬೇಡ ತೊಂದರೆ ಇದೆ
  • ಹಳೆಯ ನೆನಪುಗಳಿಂದ ಕಣ್ಣೀರು, ಕಹಿ ಅನುಭವ
  • ನದೀ ತೀರದ ದೇವಾಲಯಕ್ಕೆ ಸೇವೆ ಮಾಡಿಸಿ

ಧನುಸ್ಸು

RASHI_BHAVISHA_DHANASU

  • ಸ್ನೇಹಿತರ ಮಧ್ಯೆ ಅಧಿಕಾರ ಬೇಡ ಸ್ವಾಭಾವಿಕರಾಗಿರಿ
  • ಅಜೀರ್ಣ ಸಮಸ್ಯೆ ಕಾಡಬಹುದು
  • ನೌಕರಿಗೆ ಸಂಬಂಧಿಸಿದಂತೆ ವಿದೇಶ ವಾರ್ತೆ ಸಿಗುವುದರಿಂದ ಸಂತೋಷ ಸಿಗಲಿದೆ
  • ಪೂರ್ಣಮಾಡಬೇಕಾದ ಕೆಲಸಗಳು ಹಾಗೆ ಉಳಿಯಬಹುದು
  • ಅನಗತ್ಯ ಮಾತುಬೇಡ  ಹಗುರ ಅಗುತ್ತೀರಿ
  • ಸ್ನೇಹಿತರು ಸಹಾಯ ಮಾಡಬಹುದು ನಿರೀಕ್ಷಿಸಬೇಡಿ
  • ಈಶ್ವರನಿಗೆ ರುದ್ರಾಭಿಷೇಕ ಮಾಡಿಸಿ

ಮಕರ

RASHI_BHAVISHA_MAKARA

  • ವ್ಯವಹಾರದ ಚತುರತೆ ನಿಮ್ಮ ಲಾಭಕ್ಕೆ ಕಾರಣ
  • ವೃತ್ತಿ ಜೀವನದಲ್ಲಿ ಉತ್ತಮ ಅವಕಾಶವಿದೆ
  • ನಿಮ್ಮ ಅದೃಷ್ಟ ನಿಮ್ಮ ಕೈ ಹಿಡಿಯುವ ದಿನ
  • ಸಹೋದ್ಯೋಗಿಗಳೊಂದಿಗೆ ಸಂತೋಷದ ಸಮಯವಿದೆ
  • ನಿಮ್ಮ ಶಿಸ್ತು, ಕಾರ್ಯವೈಖರಿಯನ್ನು ಹಾಗೇ ಉಳಿಸಿಕೊಳ್ಳಿ
  • ಕುಟುಂಬದಲ್ಲಿ ಶಾಂತಿ ವಾತಾವರಣ
  • ಸುಬ್ರಹ್ಮಣ್ಯನಿಗೆ ಪ್ರಾರ್ಥನೆ ಮಾಡಿ

ಕುಂಭ

RASHI_BHAVISHA_KUMBHA

  • ಪ್ರೇಮಿಗಳಿಗೆ ದೊಡ್ಡ ಸಮಸ್ಯೆ ಕಾಡಬಹುದು
  • ಅಹಂಭಾವ, ಅತೀವ ಸಂತೋಷ ಬೇಡ ನಿರಾಸೆಯಾಗಬಹುದು
  • ಮನೆಗೆ ಹೊಸ ಅತಿಥಿಯ ಆಗಮನ ಸೂಚನೆ 
  • ಪ್ರಮುಖ ಕೆಲಸಗಳಿಗೆ ಅಡಚಣೆಯಾಗಬಹುದು
  • ಷೇರು ಹೊಡಿಕೆಗಳನ್ನು ಪ್ರಾರಂಭಿಸಬಹುದು
  • ಮನೆ ಖರ್ಚನ್ನು ನಿಯಂತ್ರಿಸಿ
  • ಮೈಲಾರಲಿಂಗೇಶ್ವರನನ್ನು ಪ್ರಾರ್ಥನೆ ಮಾಡಿ

ಮೀನ

RASHI_BHAVISHA_MEENA

  • ವಿದ್ಯಾರ್ಥಿಗಳಿಗೆ ಸರ್ವಾಂಗೀಣ ಅಭಿವೃದ್ಧಿಯಿದೆ
  • ಸ್ಥಗಿತಗೊಂಡಿರುವ ಕಾರ್ಯ ಮುಂದುವರಿಸಬಹುದು
  • ಮಾನಸಿಕ ಗೊಂದಲಗಳು ದೂರವಾಗುತ್ತದೆ
  • ತಂತ್ರಜ್ಞಾನದ ವಿಚಾರಕ್ಕೆ ಹಣ ಖರ್ಚು ಆಗಬಹುದು
  • ಮನೆ ಬದಲಾವಣೆಯ ಯೋಚನೆ ಬೇಡ
  • ಹೊಸ ಕೆಲಸ ಆರಂಭಿಸಲು ಸೂಕ್ತಕಾಲ
  • ಕುಲದೇವತಾ ಪ್ರಾರ್ಥನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya
Advertisment