ಆತುರದ ನಿರ್ಧಾರ ಬೇಡ, ಇಂದು ಪ್ರೇಮಿಗಳಿಗೆ ಶುಭದಿನ; ಇಲ್ಲಿದೆ ಇಂದಿನ ಭವಿಷ್ಯ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು.

author-image
Veenashree Gangani
RASHI_BHAVISHA
Advertisment
  • ಮನೆಯವರ, ಸಂಬಂಧಿಕರ ಜೊತೆ ವ್ಯವಹಾರ ಬೇಡ
  • ಜನರಲ್ಲಿ, ಬಂಧುಗಳಲ್ಲಿ ಬೇಸರ ಉಂಟಾಗಬಹುದು
  • ವಿದ್ಯಾರ್ಥಿಗಳಿಗೆ ಓದಿನ ವಿಚಾರದಲ್ಲಿ ಗೊಂದಲವಿದೆ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಶ್ರಾವಣ ಮಾಸ, ಶುಕ್ಲಪಕ್ಷ, ಅಷ್ಟಮಿ ತಿಥಿ, ಸ್ವಾತಿ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.

ಮೇಷ ರಾಶಿ

RASHI_BHAVISHA_MESHA

  • ಮಕ್ಕಳಿಗೆ ಉತ್ತಮವಾದ ತಿಳುವಳಿಕೆ ನೀಡಿ 
  • ಇಂದು ಕೋಪ ಮಾಡಿಕೊಳ್ಳಬೇಡಿ
  • ಮನೆಯವರ, ಸಂಬಂಧಿಕರ ಜೊತೆ ವ್ಯವಹಾರ ಬೇಡ
  • ಗಂಡ-ಹೆಂಡತಿಯ ನಡುವೆ ವಿರಸ ಮೂಡಬಹುದು
  • ಇಂದು ತುಂಬಾ ಧನಾತ್ಮಕವಾದ ದಿನ
  • ಈ ದಿನ ಆರೋಗ್ಯದ ಬಗ್ಗೆ ಚಿಂತೆ ಬೇಡ
  • ಉದ್ಯಮಿಗಳಿಗೆ ತುಂಬಾ ಅನುಕೂಲವಿದೆ
  • ನರಸಿಂಹ ಸ್ವಾಮಿಯನ್ನು ಪ್ರಾರ್ಥಿಸಿ

ವೃಷಭ

RASHI_BHAVISHA_VRSHABA

  • ಯಾವುದೋ ಅಹಂಭಾವ ಎಲ್ಲದರಿಂದ ದೂರವಿರುವಂತೆ ಮಾಡಬಹುದು
  • ಜನರಲ್ಲಿ, ಬಂಧುಗಳಲ್ಲಿ ಬೇಸರ ಉಂಟಾಗಬಹುದು
  • ನಿಮ್ಮ ಕೈಯಲ್ಲಿ ಹಣ ಇರುವುದರಿಂದ ಒಳಿತಾಗಲಿದೆ
  • ಕಾನೂನು ರೀತಿಯ ಕೆಲಸಕ್ಕೆ ಜಯವಿದೆ
  • ಅನುಪಯುಕ್ತ ವಿಷಯದಲ್ಲಿ ನಿಮ್ಮ ಸಮಯ ವ್ಯರ್ಥವಾಗಬಹುದು
  • ಇಂದು ಆತುರದ ನಿರ್ಧಾರ ಬೇಡ
  • ಸಂತೋಷ ಮತ್ತು ನೆಮ್ಮದಿಯನ್ನು ಹುಡುಕುವ ದಿನ
  • ತಾಪಸ ಮನ್ಯುವನ್ನು ಪ್ರಾರ್ಥಿಸಿ

ಮಿಥುನ

RASHI_BHAVISHA_MITHUNA

  • ವಿದ್ಯಾವಂತರೊಂದಿಗೆ ವಾದ ಮಾಡಿ ತಪ್ಪಿಗೆ ಸಿಲುಕಬೇಡಿ
  • ಸ್ವಂತ ಬುದ್ದಿ ಕೆಲಸಕ್ಕೆ ಬರಲಿದೆ
  • ಇಂದು ಶಾಂತಿಯುತವಾಗಿ ದಿನ ಕಳೆಯಿರಿ
  • ಬೇರೆಯವರಿಗೆ ಮಾತು ಕೊಟ್ಟಿದ್ದರೆ ಅದನ್ನು ಉಳಿಸಿಕೊಳ್ಳಿ 
  • ನಿಮ್ಮ ತಪ್ಪುಗಳ ಅರಿವಾಗಲಿದೆ ಅದನ್ನ ಸರಿಪಡಿಸಿಕೊಳ್ಳಿ
  • ನಿಮ್ಮ ಪ್ರೀತಿ ಪಾತ್ರರು, ಸಂಬಂಧಿಕರು ನಿಮ್ಮನ್ನು ಹೊಗಳುವುದಿಲ್ಲ 
  • ಈಶ್ವರನನ್ನು ಬಿಲ್ಪಪತ್ರೆಯಿಂದ ಅರ್ಚಿಸಿ

ಕಟಕ

RASHI_BHAVISHA_KATAKA

  • ವಿದ್ಯಾರ್ಥಿಗಳಿಗೆ ಓದಿನ ವಿಚಾರದಲ್ಲಿ ಗೊಂದಲವಿದೆ
  • ಇಂದು ಪ್ರೇಮಿಗಳಿಗೆ ಶುಭದಿನ
  • ಹಣದ ಚಿಂತೆಯಿಂದ ಹೊರಬರುತ್ತೀರಿ
  • ಪ್ರಯತ್ನ ಪೂರ್ವಕವಾಗಿ ಸಮಾಧಾನ ಇರಲಿದೆ
  • ಈ ದಿನ ಬುದ್ದಿವಂತಿಕೆಯು ಕೆಲಸ ಮಾಡುವುದಿಲ್ಲ
  • ವೃತ್ತಿ ಮತ್ತು ಉದ್ಯೋಗದಲ್ಲಿ ಆದಾಯ ಹೆಚ್ಚು
  • ಕರ್ಕಾಟಕ ರಾಶಿಯ ಪ್ರೇಮಿಗಳಿಗೆ ಭಯ ದೂರವಾಗಲಿದೆ
  • ಪಾರಿಜಾತ ಸರಸ್ವತಿಯನ್ನು ಮಲ್ಲಿಗೆ ಹೂಗಳಿಂದ ಅರ್ಚಿಸಿ

ಸಿಂಹ 

RASHI_BHAVISHA_SIMHA

  • ನಿಮ್ಮ ತ್ಯಾಗ ಬುದ್ದಿ ಮನೆಯವರಿಗೆ ಸಂತೋಷ ತರಬಹುದು
  • ವೃತ್ತಿಯ ಬಗ್ಗೆ ಎಚ್ಚರಿಕೆವಹಿಸಿ
  • ದಾಂಪತ್ಯದಲ್ಲಿ ಹೊಸ ಚೈತನ್ಯ ಕಾಣಬಹುದು
  • ಧರ್ಮಕಾರ್ಯದಲ್ಲಿ ಭಾಗಿಯಾಗಲು ಅವಕಾಶಗಳಿವೆ
  • ದೈನಂದಿನ ಕೆಲಸಗಳಲ್ಲಿ  ಸಮಸ್ಯೆ ಕಾಣಬಹುದು
  • ನಿಮ್ಮ ಆರೋಗ್ಯವನ್ನು ಹಾಳು ಮಾಡಿಕೊಳ್ಳಬೇಡಿ
  • ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿ

ಕನ್ಯಾ

RASHI_BHAVISHA_KANYA

  • ತ್ವರಿತ ತೀರ್ಮಾನದಿಂದ ಆರ್ಥಿಕ ನಷ್ಟ ಉಂಟಾಗಬಹುದು
  • ಪರಿಶ್ರಮದ ಫಲ ನಿಮ್ಮನ್ನು ಕಾಪಾಡುವ ತೃಪ್ತಿ ತರಬಹುದು
  • ಕಲೆ-ಸಾಹಿತ್ಯ ವಿಚಾರಧಾರಿಗಳಿಗೆ ಸಮಸ್ಯೆ ಉಂಟಾಗಬಹುದು
  • ಸಾಲ ಪ್ರಕ್ರಿಯ ಈ ದಿನ ಬೇಡ
  • ಇಂದು ಬರಹಗಾರರಿಗೆ ಶುಭವಿದೆ
  • ಅನಗತ್ಯ ಕೆಲಸಕ್ಕಾಗಿ ಸಮಯ ವ್ಯರ್ಥ ಆಗಲಿದೆ
  • ಕುಲದೇವತಾ ಆರಾಧನೆ ಮಾಡಿ

ತುಲಾ

RASHI_BHAVISHA_TULA

  • ರಾಜಕೀಯಕ್ಕೆ ಸಂಬಂಧಿಸಿದ ವ್ಯಕ್ತಿಗಳು ಪ್ರಭಾವ ತೋರಬಹುದು
  • ದಂಪತಿಗಳಲ್ಲಿ ಪರಸ್ಪರ ಶೀತಲ ಸಮರ ಆಗಬಹುದು
  • ಸ್ವಂತ ಕಾರ್ಯಕ್ಕಾಗಿ ವಿಪರೀತ ಖರ್ಚು ಮಾಡುತ್ತೀರಿ
  • ಕುಟುಂಬದವರ ತಿಳುವಳಿಕೆ ಕಹಿ ಎನಿಸಬಹುದು
  • ನಿಮ್ಮ ಸ್ವಾರ್ಥಕ್ಕಾಗಿ ಬೇರೆಯವರಿಗೆ ಹಿಂಸೆ  ಬೇಸರ ಆಗಬಹುದು
  • ನಿಮ್ಮ ಭಾವನೆಗಳು ತಪ್ಪಿನೆಡೆಗೆ ಕರೆದೊಯ್ಯಬಹುದು
  • ಧ್ಯಾನಮಾಡಿ

ವೃಶ್ಚಿಕ

RASHI_BHAVISHA_VRUSHCHIKA

  • ಅತ್ಯುನ್ನತ ಚಿಂತನೆ ಬೇರೆಯವರಿಗೆ ಅರ್ಥವಾಗುವುದಿಲ್ಲ  ಬೇಸರ ಆಗಬಹುದು
  • ವೈವಾಹಿಕ ವಿಚಾರದಲ್ಲಿ ಕಲಹ ಉಂಟಾಗಬಹುದು
  • ಮಕ್ಕಳು ಪೋಷಕರಿಗೆ ದುಃಖದಾಯಕರು
  • ನಕಾರಾತ್ಮಕ ಅಭಿಪ್ರಾಯ ಹೇಳುವವರನ್ನು ಅವಲಂಬಿಸಬೇಡಿ
  • ಇಂದು ವ್ಯವಸ್ಥಿತವಾದ ದಿನ
  • ಕಠಿಣ ಪರಿಶ್ರಮವಿದ್ದರೂ ಸಾರ್ಥಕತೆ ಇಲ್ಲ
  • ಹಿರಿಯರ ಮಾರ್ಗದರ್ಶನ, ಆಶೀರ್ವಾದ ಪಡೆಯಿರಿ

ಧನುಸ್ಸು

RASHI_BHAVISHA_DHANASU

  • ಹಿರಿಯರಿಂದ ಒಳ್ಳೆಯ ಸುದ್ದಿ  ಸಿಗುವುದರಿಂದ ಸಂತೋಷವಿದೆ
  • ಅಪೂರ್ಣವಾದ ಕಾರ್ಯಗಳು ಇಂದು ಪೂರ್ಣವಾಗಲಿದೆ
  • ಇಂದು ನಿಮಗೆ ಉತ್ತಮವಾದ ದಿನ
  • ಮನೆಯ ಕೆಲಸದಲ್ಲಿ ಹೆಚ್ಚು ಒತ್ತಡ ಇರಬಹುದು
  • ಸಮಾಜದಲ್ಲಿ ಹೇಗಿರಬೇಕೆಂಬ ಗೊಂದಲ ಕಾಡಲಿದೆ
  • ಪ್ರಾಮಾಣಿಕತೆಗೆ ಬೆಲೆಯಿಲ್ಲದ ದಿನ ಎನಿಸಬಹುದು
  • ಇಷ್ಟದೇವತಾ ಆರಾಧನೆ ಮಾಡಿ

ಮಕರ

RASHI_BHAVISHA_MAKARA

  • ವಿದ್ಯುತ್ ಉಪಕರಣಗಳಿಂದ ತೊಂದರೆಯಾಗಬಹುದು
  • ಸಣ್ಣ ಸಣ್ಣ ವಿಚಾರಗಳು ವಿವಾದವಾಗಬಹುದು ಎಚ್ಚರಿಕೆವಹಿಸಿ
  • ನಿಮ್ಮ ಸಾಧನೆ ನಿಮಗೆ ಮುಖ್ಯ ಆದರೆ ಬೇರೆಯವರಿಗೆ ಒತ್ತಡ ಹಾಕಬೇಡಿ 
  • ನಿಮ್ಮ ವ್ಯವಹಾರದ ಬಗ್ಗೆ ಚಿಂತಿಸಿ
  • ಖರ್ಚಿನ ಬಗ್ಗೆ ಮುಂದಾಲೋಚನೆ ಬೇಕು
  • ಹಲವು  ತಪ್ಪುಗಳಿಗೆ ನಿಮ್ಮ ವರ್ತನೆ ಕಾರಣವಾಗಬಹುದು
  • ವಿಷ್ಣುವನ್ನು ತುಳಸಿಯಿಂದ ಅರ್ಚಿಸಿ

ಕುಂಭ

RASHI_BHAVISHA_KUMBHA

  • ನಿಮ್ಮ ಜೀವನ ಶೈಲಿಯನ್ನು ಪರಾಮರ್ಶಿಸಿಕೊಳ್ಳಿ
  • ಹೊಸ ಸಂಶೋಧನೆ, ಪ್ರಯತ್ನಕ್ಕೆ ಅವಕಾಶ ಸಿಗಲಿದೆ
  • ನಿಮಗಿರುವ ಅನುಕೂಲವನ್ನು ಸದುಪಯೋಗ ಪಡಿಸಿಕೊಳ್ಳಿ
  • ಹಣದ ಆಲೋಚನೆ ಬರುವುದರಿಂದ ಮುಂದೆ ಅನುಕೂಲವಿದೆ 
  • ಮಹಿಳೆಯರಿಗೆ ಇಂದು ಒತ್ತಡದ ದಿನ
  • ನಿಮ್ಮ ಮತ್ತು ಮನೆಯವರ ಆರೋಗ್ಯ ಗಮನಿಸಿ
  • ಮಹಾಲಕ್ಷ್ಮೀಯನ್ನು ಪ್ರಾರ್ಥಿಸಿ

ಮೀನ

RASHI_BHAVISHA_MEENA

  • ಹಿರಿಯರೊಂದಿಗೆ ಚರ್ಚೆ ಬೇಡ ಶುಭವಿದೆ
  • ಭೂ ವ್ಯವಹಾರದಲ್ಲಿ ಎಚ್ಚರಿಕೆವಹಿಸಿ
  • ಮನೆ,ಮಡದಿ,ಮಕ್ಕಳ ಬಗ್ಗೆ ಪ್ರಾಮಾಣಿಕತೆ ತೋರಬೇಕು
  • ಮನೆಕಟ್ಟುವ ವಿಚಾರ ಪ್ರಸ್ತಾಪ ಮಾಡುತ್ತೀರಿ
  • ಮಹಿಳೆಯರು ವಸ್ತ್ರ ಖರೀದಿ ಮಾಡುವುದರಿಂದ ಸಂತೋಷ ಸಿಗಲಿದೆ
  • ಆತ್ಮವಿಶ್ವಾಸದಿಂದ ಮಾಡಿದ ಕೆಲಸಕ್ಕೆ ಜಯವಿದೆ
  • ಇಂದು ಮನೆಯವರೆಲ್ಲಾ ಪ್ರವಾಸಕ್ಕೆ ಹೋಗುತ್ತೀರಿ
  • ದುರ್ಗಾಮಾತೆಯನ್ನು ಆರಾಧಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya
Advertisment