/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಶ್ರಾವಣ ಮಾಸ, ಶುಕ್ಲಪಕ್ಷ, ಅಷ್ಟಮಿ ತಿಥಿ, ಸ್ವಾತಿ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ 12.00 ರಿಂದ 1.30 ರವರೆಗೆ ಇರಲಿದೆ.
ಮೇಷ ರಾಶಿ
- ಅಕ್ಕಪಕ್ಕದವರ ಸಹಾಯ, ಸಹಕಾರ ದುರುಪಯೋಗ ಆಗಬಾರದು
- ಬೇರೆಯವರ ಹಣದಿಂದ ನೀವು ವ್ಯವಹಾರ ನಡೆಸಬಹುದು
- ನಿಮ್ಮ ಸಾಧನೆ ನಿಮ್ಮ ಅನುಭವ ಉತ್ಕೃಷ್ಟವಾದಂತಹದ್ದು
- ಆರ್ಥಿಕವಾಗಿ ತೊಂದರೆಯಿಲ್ಲ ಆದರೆ ಲೆಕ್ಕದ ವಿಚಾರದಲ್ಲಿ ಗೊಂದಲವಿರುತ್ತದೆ
- ಇಂದು ಆರೋಗ್ಯ ಚೆನ್ನಾಗಿದೆ ಹಾಗೇ ಕಾಪಾಡಿಕೊಳ್ಳಿ
- ಸುಲಭ ಎಂದು ಭಾವಿಸಿದ ಕೆಲಸಗಳಿಂದ ಸಮಸ್ಯೆ ಉಂಟಾಗಲಿದೆ
- ಕುಲದೇವತಾ ಆರಾಧನೆ ಮಾಡಿ
ವೃಷಭ
- ಜಮೀನಿನ ವಿಚಾರದಲ್ಲಿ ದೃಢವಾದ ನಿರ್ಧಾರವನ್ನು ಮಾಡಿ
- ಬಂಧುಗಳು, ಸ್ನೇಹಿತರ ಜೊತೆ ಉತ್ತಮ ಬಾಂಧವ್ಯ,ಮಾತುಕತೆಯನ್ನು ಮುಂದುವರೆಸಿಕೊಂಡು ಹೋಗಿ
- ಹಳೆಯ ನೆನಪುಗಳು ಕಾಡಲಿದೆ ಅದರಲ್ಲಿ ಕೆಲವೊಂದು ಸಮಾಧಾನ ನೀಡಬಹುದು
- ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿವಹಿಸಿ
- ಇಂದು ಪ್ರೇಮಿಗಳಿಗೆ ಶುಭದಿನ
- ಇಂದು ನಿಮ್ಮ ಖರ್ಚುಗಳನ್ನು ನಿಯಂತ್ರಿಸಿ
- ಈ ದಿನ ನಿಮಗೆ ಉತ್ತಮವಾಗಿದೆ
- ಆಂಜನೇಯ ಸ್ವಾಮಿಯನ್ನು ಆರಾಧನೆ ಮಾಡಿ
ಮಿಥುನ
- ರಿಯಲ್ ಎಸ್ಟೇಟ್ ಉದ್ಯಮಿಗಳ ಜೊತೆ ವಿವಾದಗಳು ಏರ್ಪಟಾಗುತ್ತದೆ
- ಗ್ರಹಗತಿಯಿಂದ ಎಲ್ಲವೂ ಶುಭವಾಗಲಿದೆ
- ಸಭ್ಯವಾಗಿ ವರ್ತಿಸಬೇಕು ಜೊತೆಗೆ ಮಾನಸಿಕ ಧ್ಯೆರ್ಯವಿರಬೇಕು
- ಧಾರ್ಮಿಕ ಮುಖಂಡರಿಗೆ ಭಯ ಅಥವಾ ಅವಮಾನ ಆಗುವ ಸಾಧ್ಯತೆ ಇದೆ
- ನಿಮ್ಮ ವೃತ್ತಿ, ಕೆಲಸಕ್ಕೆ ಆದ್ಯತೆ ಕೊಡಿ ಅನಗತ್ಯ ವಿಚಾರಗಳನ್ನು ದೂರ ಮಾಡಿ
- ರಕ್ತದೊತ್ತಡ ಇರುವವರಿಗೆ ಆರೋಗ್ಯದಲ್ಲಿ ಸಮಸ್ಯೆ ಹೆಚ್ಚಾಗಬಹುದು
- ಧರ್ಮವನ್ನು ಮೀರಿ ವರ್ತಿಸುವವರಿಗೆ ತೊಂದರೆಯಿದೆ
- ಧರ್ಮಗ್ರಂಥಾವಲೋಕನ ಮಾಡಿ
ಕಟಕ
- ಹಣಕಾಸಿನ ಸಮಸ್ಯೆ ಸ್ವಲ್ಪ ಕಾಡಬಹುದು
- ಕುಟುಂಬ ಸದಸ್ಯರ ಆಗಮನದಿಂದ ಸಂತೋಷವಿದ್ದು ನಂತರ ಜಗಳ ಆಗಬಹುದು
- ಧಾರ್ಮಿಕ ಕಾರ್ಯಕ್ರಮಗಳು ಹಣದ ಕೊರತೆಯಿಂದ ರದ್ದಾಗಬಹುದು
- ಧಾರಾಳವಾಗಿ ಖರ್ಚು ಮಾಡಿದ ನಿಮ್ಮ ಕೈ, ಇಂದು ಕಟ್ಟಿಹಾಕಿದಂತಾಗಿರುತ್ತದೆ
- ಸ್ವಯಂಕೃತ ಅಪರಾಧಗಳನ್ನು ಕಡಿಮೆ ಮಾಡಬೇಕು
- ಮಕ್ಕಳ ಪ್ರಗತಿಯಿಂದ ಸಮಾಧಾನವಾಗಲಿದೆ
- ನಿಮ್ಮ ಗುರುಗಳನ್ನು ಪ್ರಾರ್ಥಿಸಿ
ಸಿಂಹ
- ಯಾವುದೇ ವಿಚಾರವಿದ್ದರೂ ತಾರ್ಕಿಕವಾಗಿ ಚಿಂತನೆ ಮಾಡಬೇಡಿ ಹೊಂದಾಣಿಕೆ ಇರಲಿ
- ಜೀವನದ ಬಗ್ಗೆ ನಿರ್ಧಾರ ಮಾಡುತ್ತೀರಿ
- ಮಾನಸಿಕವಾಗಿ, ಸಾಮಾಜಿಕವಾಗಿ ಶಕ್ತಿ ಹೆಚ್ಚಾಗಲಿದೆ
- ಉತ್ತಮ ಆಹಾರ ಲಭ್ಯವಾಗಲಿದೆ
- ನ್ಯಾಯಾಲಯದ ವಿಚಾರದಲ್ಲಿ ಜಯ ಸಿಗಲಿದೆ
- ಹಳೆಯ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡುಕೊಳ್ಳುತ್ತೀರಿ
- ಹಿರಿಯರ ಆಶೀರ್ವಾದ ಪಡೆಯಿರಿ
ಕನ್ಯಾ
- ಸಾಯಂಕಾಲದ ಹೊತ್ತಿಗೆ ಹಿರಿಯರ ಆರೋಗ್ಯದಲ್ಲಿ ವ್ಯತ್ಯಾಸ ಆಗಲಿದೆ
- ಕುಟುಂಬದಲ್ಲಿ ಸಂತೋಷ, ನೆಮ್ಮದಿ ವಾತಾವರಣ ಇರುತ್ತದೆ
- ಇಂದು ಪ್ರೇಮಿಗಳಿಗೆ ಶುಭದಿನ
- ಎಲ್ಲಾ ಕೆಲಸಗಳು ಅಚ್ಚುಕಟ್ಟಾಗಿ ನಡೆಯಲಿದೆ
- ಕೆಲಸ ಕಾರ್ಯ ಒತ್ತಡದ ಮಧ್ಯೆಯು ಮನೆಯಲ್ಲಿ ಹಬ್ಬದ ವಾತಾವರಣವಿರಲಿದೆ
- ಹಿರಿಯರು ಹಿಂದೆ ಆಡಿದ ಮಾತನ್ನು ಇಂದು ಸತ್ಯವೆಂದು ತಿಳಿಯುವ ದಿನ
- ಮೃತ್ಯುಂಜಯ ಮಂತ್ರವನ್ನು ಪಠಿಸಿ
ತುಲಾ
- ಮಕ್ಕಳಿಗೆ ಚಂಚಲ ಮನಸ್ಸಿನಿಂದ ಓದಿಗೆ ಸಮಸ್ಯೆ ಉಂಟಾಗಲಿದೆ
- ನಿಮ್ಮ ಆರೋಗ್ಯದ ಬಗ್ಗೆ ಕಾಳಜಿವಹಿಸಿ
- ಚರ್ಮ ರೋಗಿಗಳಿಗೆ ಹೆಚ್ಚಿನ ತೊಂದರೆಯಾಗಬಹುದು
- ಹಲವು ಭಿನ್ನಾಭಿಪ್ರಾಯಗಳು,ನಿಮ್ಮ ಮಾತು ಸಾಂಸಾರಿಕ ಸಮಸ್ಯೆಗಳನ್ನ ಹೆಚ್ಚಿಸಬಹುದು
- ಪ್ರೇಮಿಗಳಿಗೆ ಮತ್ತು ಸಂಬಂಧಿಕರನ್ನೇ ವಿವಾಹವಾದವರಿಗೆ ತೊಂದರೆಯಿದೆ
- ಕೆಲಸದ ಸ್ಥಳದಲ್ಲಿ ಅನೇಕ ಸವಾಲುಗಳು ಎದುರಾಗಬಹುದು
- ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧಿಸಿ
ವೃಶ್ಚಿಕ
- ಆತ್ಮ ವಿಶ್ವಾಸದ ಕೊರತೆ ಕಾಡಲಿದೆ
- ಕೆಲಸದ ಗುಣಮಟ್ಟ ಕಡಿಮೆಯಾಗಿ ನಿಂದನೆಗೆ ಒಳಗಾಗುತ್ತೀರಿ
- ಮನಸ್ಸನ್ನ ಕೇಂದ್ರಿಕರಿಸಲಾಗದೆ ಒದ್ದಾಡಬಹುದು
- ಇಂದು ಮದುವೆ ವಿಚಾರ ಪ್ರಸ್ತಾಪ ಆಗಲಿದೆ
- ಬೇರೆಯವರಿಗೆ ವಿನಾಕಾರಣ ಸಲಹೆ ನೀಡಬೇಡಿ
- ನೌಕರಿಯಲ್ಲಿ ಹಿರಿಯರ ಸಲಹೆ ಪಡೆಯಿರಿ
- ಗಣಪತಿಗೆ 21 ಗರಿಕೆಯಿಂದ ಪೂಜಿಸಿ
ಧನುಸ್ಸು
- ಸಂದರ್ಭಗಳು ಕಾಲಕ್ರಮೇಣ ನಿಮ್ಮ ಪರವಾಗಿರಬಹುದು
- ದಾಂಪತ್ಯದಲ್ಲಿ ಸುಖ ಸಂತೋಷವಿರುತ್ತದೆ ಆದರೆ ಅನುಭವಿಸುವ ಯೋಗ ಕಡಿಮೆ
- ಹೊಸ ವ್ಯವಹಾರ, ಹಿಂದೆ ಮಾಡಿದ ವ್ಯವಹಾರ ಬೇಸರವನ್ನುಂಟು ಮಾಡುವ ಸಾಧ್ಯತೆ
- ಕೆಲಸ ಕಾರ್ಯಗಳಲ್ಲಿ ಹಲವಾರು ಜನರ ಸಹಾಯ ಪಡೆಯುತ್ತೀರಿ
- ನೀವು ಬೇರೆಯವರಿಗೆ ಸಹಾಯ ಮಾಡುವ ಅವಕಾಶವಿದೆ
- ದಾನ ಧರ್ಮದ ಆಲೋಚನೆ ಮಾಡಿ ಭವಿಷ್ಯದಲ್ಲಿ ಕಾಪಾಡುತ್ತದೆ
- ಕರ್ತವ್ಯಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಾಗುತ್ತದೆ
- ಇಂದು ಸ್ವಲ್ಪ ಉದಾರತೆಯ ದಿನ
- ಶ್ರೀ ರಾಮನನ್ನು ಪ್ರಾರ್ಥಿಸಿ
ಮಕರ
- ವೃತ್ತಿ ಜೀವನಕ್ಕೆ ಯಾವುದೇ ಕೊರತೆಯಿರುವುದಿಲ್ಲ
- ಇಂಜಿನಿಯರ್ ವಿದ್ಯಾರ್ಥಿಗಳಿಗೆ ಅನುಕೂಲಕರ ದಿನ
- ಕುಟುಂಬದ ಸಂತೋಷವನ್ನು ಹಾಗೆ ಕಾಪಾಡಿಕೊಳ್ಳಿ
- ನಿಮ್ಮ ವೃತ್ತಿಗೆ ಸಂಬಂಧಪಟ್ಟ ಹಾಗೆ ಕೆಲಸಗಳು ನಿಮ್ಮ ಕೈ ಸೇರಿ ಆದಾಯ ಸಿಗಲಿದೆ
- ವಿದ್ಯಾರ್ಥಿಗಳಿಗೆ ಬಹಳ ಶುಭದಿನ
- ಬುದ್ದಿವಂತರ ಸಹವಾಸದಿಂದ ನಿಮಗೆ ಅನುಕೂಲವಿದೆ
- ಪಾರ್ವತಿ ದೇವಿಯನ್ನು ಆರಾಧಿಸಿ
ಕುಂಭ
- ವಿಕಲ ಚೇತನರು ಅದರಲ್ಲೂ ಕಾಲಿನ ಸಮಸ್ಯೆ ಇರುವವರಿಗೆ ತೊಂದರೆ ಆಗಬಹುದು
- ಅನಪೇಕ್ಷಿತ ಪ್ರಯಾಣಕ್ಕೆ ಸಿದ್ದರಾಗಬೇಕಾಗುತ್ತದೆ
- ಕತ್ತರಿ ಅಥವಾ ಚಾಕು ಇತ್ಯಾದಿಗಳಿಂದ ಗಾಯವಾಗಬಹುದು ಎಚ್ಚರಿಕೆವಹಿಸಿ
- ಹೊಸ ಕೆಲಸ ಆರಂಭ ಮಾಡಲು ಈ ದಿನ ಶುಭಕರವಾಗಿಲ್ಲ
- ಮನೆ ಕಟ್ಟುವ ವಿಚಾರ ಮನಸ್ಸಿಗೆ ಬರಬಹುದು
- ಬಡ್ಡಿ ವ್ಯವಹಾರ ಮಾಡುವವರಿಗೆ ಸಮಸ್ಯೆಗಳು ಉಂಟಾಗಲಿದೆ
- ಸಂಪತ್ ಲಕ್ಷ್ಮೀಯನ್ನು ಪ್ರಾರ್ಥನೆ ಮಾಡಿ
ಮೀನ
- ಮನೆಗೆ ಬಂದ ಅತಿಥಿಗಳಿಗೆ ಅವಮಾನ ಆಗುವ ಸಾಧ್ಯತೆ ಇದೆ
- ವೈದ್ಯಕೀಯ ಕ್ಷೇತ್ರದವರಿಗೆ ಅನಾನುಕೂಲವಿರುತ್ತದೆ
- ಜನರು ನಿಮ್ಮ ಮೇಲೆ ಇಟ್ಟಿರುವ ನಂಬಿಕೆಯನ್ನು ಸುಳ್ಳು ಮಾಡಬೇಡಿ
- ಭೂ ಸಂಬಂಧಿಯಾದ ವಿಚಾರದಲ್ಲಿ ನಷ್ಟ ಆಗುವ ದಿನ
- ಕುಟುಂಬದ ಹಿತಾಸಕ್ತಿಗೆ ಬೇರೆಯವರು ನಿಮ್ಮನ್ನ ವಂಚನೆ ಮಾಡಬಹುದು
- ನಿಮ್ಮ ಕೆಲಸದಲ್ಲಿ ದೃಢ ನಿರ್ಧಾರವಿರಬೇಕು
- ಇಷ್ಟದೇವತಾ ಪ್ರಾರ್ಥನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ