ವ್ಯವಹಾರದಲ್ಲಿ ದೊಡ್ಡ ಹೊಡೆತ, ವಿದ್ಯಾರ್ಥಿಗಳಿಗೆ ಆತಂಕದ ದಿನ; ಇಲ್ಲಿದೆ ಇಂದಿನ ಭವಿಷ್ಯ

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು.

author-image
Veenashree Gangani
RASHI_BHAVISHA
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಶ್ರಾವಣ ಮಾಸ, ಶುಕ್ಲಪಕ್ಷ, ಅಷ್ಟಮಿ ತಿಥಿ, ಸ್ವಾತಿ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ 9.00 ರಿಂದ 10.30 ರವರೆಗೆ ಇರಲಿದೆ.

ಮೇಷ ರಾಶಿ

RASHI_BHAVISHA_MESHA

  • ಖಾಸಗಿ ಕ್ಷೇತ್ರದ ಉದ್ಯೋಗಿಗಳಿಗೆ ತುಂಬಾ ಅನುಕೂಲವಾಗಿರುತ್ತದೆ
  • ಹಣವಿದ್ದರೂ ಖರ್ಚು ಮಾಡದೆ ಕೆಲಸ ಸ್ಥಗಿತ ಆಗಬಹುದು
  • ಸರ್ಕಾರದಿಂದ ಹಣ ಸಹಾಯ ಆಗಲಿದೆ
  • ಕಟ್ಟಡ ನಿರ್ಮಾಣ ಅಥವಾ  ಭೂ ಸಂಬಂಧಿ ಖರೀದಿ ನಡೆಯಬಹುದು
  • ವಿದೇಶದಿಂದ  ಮಕ್ಕಳಿಗೆ  ಸಹಾಯ ಸಿಗಲಿದೆ
  • ಮಾಡುವ ಕೆಲಸಕ್ಕೆ ಗ್ರಹಗತಿಯಿಂದ ಅನೇಕ ಅಡ್ಡಿ ಆಗಲಿದೆ
  • ಕುಬೇರಲಕ್ಷ್ಮೀ ಪ್ರಾರ್ಥನೆ ಮಾಡಿ

ವೃಷಭ

RASHI_BHAVISHA_VRSHABA

  • ನೀವು ದುರ್ಬಲರಾಗಿರುವ ವಿಚಾರದಲ್ಲಿ ರಾಜಿಮಾಡಿಕೊಳ್ಳಿ
  • ತಾಂತ್ರಿಕ ಶಿಕ್ಷಣ ವರ್ಗದವರಿಗೆ ತೊಂದರೆಯಾಗಬಹುದು 
  • ಲಕ್ಷ್ಮೀ ಪ್ರಾಪ್ತಿಯಿದೆ, ಖರ್ಚಿನ ವಿಚಾರದಲ್ಲಿ ಅಪಮಾನ
  • ಕೋಪ, ಉತ್ಸಾಹಗಳೆರಡನ್ನೂ ಕಡಿಮೆ ಮಾಡಿಕೊಳ್ಳಬೇಕಾಗಿದೆ
  • ನಿಮಗೆ ಬರಬೇಕಾಗಿರುವ ಹಣಕ್ಕೆ ಅಡ್ಡಿಯಾಗಲಿದೆ
  • ಬೇರೆಯವರಿಂದ ಏನನ್ನೂ ನಿರೀಕ್ಷಿಸಬೇಡಿ
  • ಗಣಪತಿಗೆ ಹಾಲು, ಜೇನುತುಪ್ಪ ಅರ್ಪಿಸಿ

ಮಿಥುನ

RASHI_BHAVISHA_MITHUNA

  • ಸರಿಯಾದ ತಿಳುವಳಿಕೆ ಇಲ್ಲದೆ ಅಪಹಾಸ್ಯಕ್ಕೆ ಒಳಗಾಗುತ್ತೀರಿ
  • ಅತಿಯಾದ ಶಿಸ್ತನ್ನು ತೋರಿಸುತ್ತಾ ತೊಂದರೆಗೆ ಸಿಲುಕಬಹುದು
  • ತಾಯಿಯವರಿಗೆ ಮತ್ತು ಹೆಂಡತಿಗೆ ಸಮಸ್ಯೆಯಾಗಬಹುದು
  • ಮನೆ ಮತ್ತು ಸಾಮಾಜಿಕ ವ್ಯವಹಾರ ಉತ್ತಮವಾಗಿರುತ್ತದೆ
  • ವ್ಯವಹಾರದಲ್ಲಿ ದೊಡ್ಡ ಕಾರ್ಯಕ್ಕೆ ಈ ದಿನ ಚಾಲನೆ ಸಿಗಬಹುದು
  • ರಾಜಕೀಯ ವಿಚಾರಕ್ಕೆ ಉತ್ತಮ ದಿನ
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪಾರ್ಥಿಸಿ

ಕಟಕ

RASHI_BHAVISHA_KATAKA

  • ಪ್ರೇಮಿಗಳಿಗೆ ತುಂಬಾ ತೊಂದರೆಯಾಗಬಹುದು
  • ಮನೆಯಲ್ಲಿ ನಿಮ್ಮಿಂದ ನಿರೀಕ್ಷೆಗಳು ಹೆಚ್ಚಾಗಬಹುದು
  • ಇಂದು ಹೊಸ ಕೆಲಸದ ಪ್ರಾರಂಭ ಬೇಡ
  • ಇಂದು ನಿಮಗೆ ಹೆದರಿಕೆ ಆಗಬಹುದು
  • ನಿಮ್ಮ ಆಸೆಗಳನ್ನು ವ್ಯಕ್ತಪಡಿಸಬೇಡಿ ಈಡೇರುವುದಿಲ್ಲ
  • ಈ ದಿನ ವಾಹನ ಚಾಲನೆ, ಪ್ರಯಾಣ ಅಪಾಯಕಾರಿ
  • ವನದುರ್ಗಾ ದೇವಿಯನ್ನು ಪ್ರಾರ್ಥಿಸಿ

ಸಿಂಹ 

RASHI_BHAVISHA_SIMHA

  • ಕೆಟ್ಟ ಜನರ ಸಹವಾಸ ಹಾಗೂ ಅವರ ಜೊತೆ ವ್ಯವಹರಿಸುವುದನ್ನು ಬಿಡಿ
  • ಅತಿಯಾದ ಆತಂಕದಿಂದ ಸಮಸ್ಯೆಗಳು ಎದುರಾಗಬಹುದು
  • ಸಣ್ಣ ವಿಚಾರಗಳಿಗೆ ಪ್ರಾಮುಖ್ಯತೆ ನೀಡಬೇಡಿ
  • ಅನುಮಾನಾಸ್ಪದ ವರ್ತನೆಯಿಂದ ಅವಮಾನ 
  • ಹೃದ್ರೋಗಿಗಳಿಗೆ ತೊಂದರೆ ಎಚ್ಚರಿಕೆಯಿರಲಿ
  • ಕಮೀಶನ್​ ಏಜೆಂಟ್ಸ್​ಗಳಿಗೆ ಹಣ ನಷ್ಟ ಆಗಬಹುದು
  • ಕುಬೇರನನ್ನು ಪ್ರಾರ್ಥಿಸಿ

ಕನ್ಯಾ

RASHI_BHAVISHA_KANYA

  • ಯೋಚಿಸದೇ ಯಾವುದೇ ಕಾರ್ಯ ಮಾಡಬೇಡಿ
  • ಮನೆಯಲ್ಲಿ ಧಾರ್ಮಿಕ ಕಾರ್ಯಾಚರಣೆಗೆ ಚಿಂತನೆ ನಡೆಸುತ್ತೀರಿ
  • ಹೊಸ ಪರಿಚಯದವರಿಂದ  ಮೋಸ ಹೋಗುತ್ತೀರಿ
  • ದೊಡ್ಡ ಸಮಸ್ಯೆಗಳು ನಿಮಗೆ ಕಾಡುವುದಿಲ್ಲ
  • ಪೂರ್ವಿಕರ ವೃತ್ತಿಯಿಂದ ಹಣಗಳಿಸಬಹುದು  ತಾಳ್ಮೆ ಇರಲಿ
  • ನಿಮ್ಮ ವೃತ್ತಿಯಲ್ಲಿ ಕಷ್ಟದ ವಾತಾವರಣ  ಆದಾಯವಿರುತ್ತದೆ
  • ಶ್ರೀಕೃಷ್ಣನನ್ನು ಪ್ರಾರ್ಥಿಸಿ

ತುಲಾ

RASHI_BHAVISHA_TULA

  • ಗಂಡ ಹೆಂಡತಿ ಮಧ್ಯೆ ಪರಸ್ಪರ ಅನುಮಾನ 
  • ಮನಸ್ಸಿನಿಂದ ಯಾವುದೇ ಕೆಲಸ ಮಾಡಿ ಶುಭವಿದೆ
  • ಹಣದ ವಿಚಾರದಲ್ಲಿ ಗೊಂದಲ ಲೆಕ್ಕಾಚಾರ ಸರಿಯಾಗಿರುವುದಿಲ್ಲ
  • ಹಿರಿಯರ, ಸ್ನೇಹಿತರ ಸಲಹೆ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ
  • ಈ ದಿನ ನಿವೃತ್ತ  ನೌಕರರಿಗೆ ಶುಭವಿಲ್ಲ
  • ಹೊಸ ಜನರ ಸಂಪರ್ಕ ಮಾಡುತ್ತೀರಿ
  • ಶಿವಾರಾಧನೆ ಮಾಡಿ

ವೃಶ್ಚಿಕ

RASHI_BHAVISHA_VRUSHCHIKA

  • ಅನಾರೋಗ್ಯ ಪೀಡಿತರಿಗೆ ತೊಂದರೆಯಿದೆ
  • ಸ್ನೇಹಿತರು ಮಾಡಿದ ತಪ್ಪಿಗೆ ನೀವು ದಂಡ ತೆರಬೇಕಾಗಬಹುದು
  • ಈ ದಿನ ನಿಮ್ಮ ಸಮಸ್ಯೆಗಳನ್ನು ಬಗೆಹರಿಸಿಕೊಳ್ಳಿ
  • ಇಂದು ನೀವು ಸಮಯೋಚಿತವಾಗಿ ಮಾತಾನಾಡಬೇಕು
  • ವಿದ್ಯಾರ್ಥಿಗಳು ಕಷ್ಟಕ್ಕೆ ಸಿಲುಕಬೇಕಾಗಬಹುದು 
  • ಹಣಕಾಸಿನ ವಿಚಾರದಲ್ಲಿ ಎಚ್ಚರ ತಪ್ಪಿ ವ್ಯತ್ಯಾಸಗಳಾಗಬಹುದು 
  • ಚಂಡಿಕಾಪಾರಾಯಣ ಮಾಡಿಸಿ

ಧನುಸ್ಸು

RASHI_BHAVISHA_DHANASU

  • ಈ ದಿನ ಮನೆಯಲ್ಲಿ ಭಿನ್ನಾಭಿಪ್ರಾಯ ಇರಲಿದೆ
  • ಪ್ರಯಾಣದಲ್ಲಿ ಸಮಸ್ಯೆಯಿದೆ ಎಚ್ಚರಿಕೆ 
  • ಕಾರ್ಯಕ್ಷೇತ್ರದಲ್ಲಿ ನಿಮ್ಮ ಪರಿಶ್ರಮ ಗಣನೆಗೆ ಬರುವುದಿಲ್ಲ
  • ಕಷ್ಟಪಟ್ಟು ಕೆಲಸ ಮಾಡಿದರೂ ಒಳ್ಳೆಯ ಫಲಿತಾಂಶವಿಲ್ಲ 
  • ಇಂದು ಯಾರಿಗೂ ಸಾಲ ಕೊಡಬೇಡಿ, ಕೇಳಬೇಡಿ
  • ಹಣದ ವಿಚಾರಕ್ಕೆ ಕಲಹವಾಗಬಹುದು
  • ದುರ್ಗಾರಾಧನೆ ಮಾಡಿ

ಮಕರ

RASHI_BHAVISHA_MAKARA

  • ಸಮಾಜ ಸೇವೆ ಮಾಡಲು ಮನಸ್ಸು ಬರಬಹುದು 
  • ಮನೆಯವರ ಯೋಗಕ್ಷೇಮದಲ್ಲಿ ವೃತ್ಯಯ ಆಗಲಿದೆ
  • ಹಿರಿಯರ ಮಾರ್ಗದರ್ಶನ ಮಾತು ಫಲಿಸುವುದಿಲ್ಲ
  • ನವವಿವಾಹಿತರಲ್ಲಿ  ದಾಂಪತ್ಯದ ವಿಚಾರಕ್ಕೆ ಬಿರುಕು ಉಂಟಾಗಬಹುದು
  • ಸ್ಥಿರಾಸ್ತಿಗಳ ವಿಚಾರಕ್ಕೆ ಕಲಹ ಉಂಟಾಗಬಹುದು
  •  ಲಕ್ಷ್ಮಿನಾರಾಯಣ ಹೃದಯ ಸ್ತೋತ್ರ ಪಠಿಸಿ 

ಕುಂಭ

RASHI_BHAVISHA_KUMBHA

  • ಇಂದು ಮಧ್ಯಾಹ್ನದ ನಂತರ ಸಮಯ ಚೆನ್ನಾಗಿಲ್ಲ
  • ಅನಗತ್ಯ ವಿಷಯಗಳಲ್ಲಿ ಭಾಗಿಯಾಗುವುದರಿಂದ ಬೇಸರ ಆಗಲಿದೆ
  • ನಿಮ್ಮ ಮಹತ್ವಾಕಾಂಕ್ಷೆಗಳು ಈಡೇರಬಹುದು 
  • ವಿದ್ಯಾರ್ಥಿಗಳು ಸಂಬಂಧಪಡದ ಚಟುವಟಿಕೆಗಳಲ್ಲಿ ಭಾಗಿಯಾಗಿ ಶಿಕ್ಷೆ ಅನುಭವಿಸುತ್ತಾರೆ
  • ಬೇರೆಯವರಿಗೆ ಸಹಾಯ ಮಾಡಿ ಹೆಸರು ಮಾಡುತ್ತೀರಿ 
  • ಸರಸ್ವತೀ ದೇವಿಯ ಆರಾಧನೆ ಮಾಡಿ

ಮೀನ

RASHI_BHAVISHA_MEENA

  • ತಂದೆ-ತಾಯಿಯ ಜೊತೆಯಲ್ಲಿ ವಾದ-ವಿವಾದ ಮಾಡಬೇಡಿ
  • ಈ ದಿನ ಅನಗತ್ಯ ಪ್ರಯಾಣ ಮಾಡುತ್ತೀರಿ
  • ಅನಾರೋಗ್ಯ ಪೀಡಿತರಿಗೆ  ತೊಂದರೆಯಿದೆ ಎಚ್ಚರಿಕೆ  
  • ಇಂದು ತುಂಬಾ ಆಯಾಸದ ದಿನ
  • ವಿದ್ಯಾರ್ಥಿಗಳು ಬೇಸರದಿಂದ, ಬಲವಂತದಿಂದ ಓದಬಾರದು
  • ಶೀತ ಸಂಬಂಧವಾದ ಆರೋಗ್ಯ ಸಮಸ್ಯೆ ಕಾಡಬಹುದು
  • ಅಘೋರ ಮೃತ್ಯುಂಜಯನನ್ನು ಪ್ರಾರ್ಥಿಸಿ 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya
Advertisment