/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಶ್ರಾವಣ ಮಾಸ, ಶುಕ್ಲಪಕ್ಷ, ಅಷ್ಟಮಿ ತಿಥಿ, ಸ್ವಾತಿ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.
ಮೇಷ ರಾಶಿ
- ವಿನಾಕಾರಣ ಮನೆಯಿಂದ ಹೊರಗೆ ಹೆಚ್ಚು ಸಮಯ ಕಳೆಯುತ್ತೀರಿ
- ಮನೆಯಲ್ಲಿ ಸಣ್ಣ ಪುಟ್ಟ ವಿಚಾರಗಳಿಗೆ ಜಗಳ ಆಗಬಹುದು
- ಕೈಗೆ ಪೆಟ್ಟು ಬೀಳುವ ಸಾಧ್ಯತೆಯಿದೆ ಎಚ್ಚರ ವಹಿಸಿ
- ಸ್ನೇಹಿತರು,ಬಂಧುಗಳು ಯಾರೂ ಕೂಡ ಸಹಾಯ ಮಾಡುವುದಿಲ್ಲ
- ಹಲವಾರು ಸಮಸ್ಯೆಗಳು ಉಂಟಾಗುವ ದಿನ
- ನಿಮ್ಮ ಸ್ವಭಾವ,ವರ್ತನೆ, ಕೋಪ ಎಲ್ಲವೂ ಬದಲಾದರೆ ಜನ ನಿಮ್ಮನ್ನು ತುಂಬಾ ಇಷ್ಟ ಪಡುತ್ತಾರೆ
- ಸಮಯ ಸಾಧಕರೆಂಬ ಹಣೆಪಟ್ಟಿಯನ್ನು ಕಟ್ಟುತ್ತಾರೆ
- ಕುಲದೇವತೆಯನ್ನು ಮತ್ತು ದುರ್ಗಾ ಪರಮೇಶ್ವರಿಯನ್ನು ಆರಾಧಿಸಿ
ವೃಷಭ
- ಕುಟುಂಬದಲ್ಲಿ ಆರೋಗ್ಯಕರವಾದ ಚರ್ಚೆ ನಡೆಯಲಿದೆ
- ಅಕ್ಕ ಅಥವಾ ತಂಗಿಯರಿಗೆ ಆಘಾತವಾಗಬಹುದು ಸಹಕರಿಸಿ
- ನಿಮ್ಮ ನಿರೀಕ್ಷೆಗಳೆಲ್ಲವು ಮಕ್ಕಳಿಂದ ಪೂರ್ಣವಾಗುತ್ತದೆ ಎಂಬ ನಂಬಿಕೆ ಮೂಡಲಿದೆ
- ಮಕ್ಕಳ ಅಭ್ಯುದಯದಿಂದ ಸಮಾಧಾನ,ತೃಪ್ತಿ ,ಸಂತೋಷವನ್ನು ಸಿಗಲಿದೆ
- ಹೊಸತನ್ನು ಮಾಡುವ ವಿಚಾರ ಮುನ್ನೆಲೆಗೆ ಬರಬಹುದು
- ದೊಡ್ಡ ದೊಡ್ಡ ಆಲೋಚನೆಗಳು ಮನಸ್ಸಲ್ಲಿ ಬರಲಿದೆ ಆರ್ಥಿಕವಾಗಿ ಚಿಂತನೆ ಮಾಡುತ್ತೀರಿ
- ಈಶ್ವರನನ್ನು ಪ್ರಾರ್ಥಿಸಿ
ಮಿಥುನ
- ಸ್ನೇಹಿತರ ಬೆಳವಣಿಗೆ ನಿಮ್ಮ ಮನಸ್ಸಿಗೆ ಸಮಾಧಾನ ಕೊಡಲಿದೆ
- ಕೌಟುಂಬಿಕ ಕಲಹಕ್ಕೆ ಅವಕಾಶವಿದೆ
- ವಿನಾಕಾರಣ ಪ್ರಯಾಣವನ್ನು ಮುಂದೂಡಬೇಕಾಗುತ್ತದೆ
- ಅನಗತ್ಯ ಖರ್ಚು ನಿಮ್ಮನ್ನು ಆವರಿಸುವ ದಿನ
- ಯಾರಿಗೋ ಮಾತು ಕೊಟ್ಟು ಆ ಮಾತಿಗೆ ತಪ್ಪುತ್ತೀರಿ
- ಮಕ್ಕಳ ಅಭ್ಯುದಯದಿಂದ ನಿಮಗೆ ಉತ್ತಮವಾದ ಫಲ ಸಿಗಲಿದೆ
- ಮಕ್ಕಳಿಗೆ ತೊಂದರೆಯಾಗಬಹುದು ಎಚ್ಚರಿಕೆವಹಿಸಿ
- ನಿಮ್ಮ ಮಾತಿನಿಂದ ಹಾಸ್ಯಾಸ್ಪದ ಆಗಬಾರದು
- ಮಹಾಕಾಳಿಯನ್ನು ಆರಾಧನೆ ಮಾಡಿ
ಕಟಕ
- ಯಾವುದೇ ವಿಚಾರವನ್ನು ಅರ್ಥಮಾಡಿಕೊಂಡು ಮಾತನಾಡದಿದ್ರೆ ಅವಮಾನವಾಗಲಿದೆ
- ಮನೆಯಲ್ಲಿ ಸಂಗ್ರಹಿಸಿಟ್ಟ ಪದಾರ್ಥಗಳಿಂದ ಬೈಗುಳಕ್ಕೆ ಒಳಗಾಗುತ್ತೀರಿ
- ನಿಮ್ಮ ಹತ್ತಿರದವರ ಜೊತೆ ದ್ವೇಷ ಸಾಧಿಸುತ್ತೀರಿ
- ಇಡೀ ಜೀವನವನ್ನ ಭಾವನಾತ್ಮಕ ವಿಷಯದಲ್ಲೇ ಕಳೆಯುತ್ತೀರಿ
- ನಿಮ್ಮಲ್ಲಿ ಕಲೆ ಇದೆ ಆದರೆ ಅದು ಪ್ರಯೋಜನಕ್ಕೆ ಬರುತ್ತಿಲ್ಲ
- ಯಾವುದೇ ವಿಚಾರವಿದ್ದರೂ ತೆರೆದ ಮನಸ್ಸಿನಿಂದ ಮಾತನಾಡಿದರೆ ಒಳ್ಳೆಯದು
- ನೀವು ಜಗಳ ಮಾಡುವುದರಿಂದ ನಿಮ್ಮ ಹತ್ತಿರದವರೆಲ್ಲ ದೂರವಾಗುವ ಸಾಧ್ಯತೆ
- ಕುಲದೇವತಾ ಆರಾಧನೆ ಮಾಡಿ
ಸಿಂಹ
- ವೈವಾಹಿಕ ಜೀವನ ಸಂತೋಷದಿಂದ ಕೂಡಿರುತ್ತದೆ ಅದನ್ನ ಹಾಗೇ ಉಳಿಸಿಕೊಳ್ಳಿ
- ಇಂದು ಸಂಯಮದಿಂದ, ತಾಳ್ಮೆಯಿಂದ ಇರಬೇಕು
- ಕುಟುಂಬದವರ ಮೇಲೆ, ಅಧಿಕಾರಿಯ ಮೇಲೆ ಧೋರಣೆ ತೋರಿಸಬಾರದು
- ಮಹಾತ್ಮರ ಜೀವನ ಚರಿತ್ರೆಯನ್ನ ಕೇಳಿ ಪರಿವರ್ತನೆ ಮಾಡಿಕೊಳ್ಳಲು ಅವಕಾಶವಿದೆ
- ಆರೋಗ್ಯದ ವಿಚಾರದಲ್ಲಿ ಗಮನ ಕೊಡಿ ತಾತ್ಸಾರ ಬೇಡ
ಕನ್ಯಾ
- ನಿಮ್ಮ ವ್ಯಕ್ತಿತ್ವದಿಂದ ಹೊಸಬರನ್ನು ಆಕರ್ಷಿಸುತ್ತೀರಿ
- ಭಯ, ದ್ವೇಷ, ಅಸೂಯೆ, ಕೋಪವನ್ನು ಅನಿವಾರ್ಯವಾಗಿ ದೂರಮಾಡಿಕೊಳ್ಳಬೇಕು
- ಆರ್ಥಿಕವಾಗಿ ತೊಂದರೆ ಇರುವುದಿಲ್ಲ
- ಪ್ರೇಮಿಗಳಿಗೆ ಬೇಸರದ ದಿನ ಹಾಗೆ ಸಣ್ಣ-ಪುಟ್ಟ ಸಮಸ್ಯೆಗಳು ಉಂಟಾಗುವ ಸಾಧ್ಯತೆ
- ಷೇರು ಮಾರುಕಟ್ಟೆಯ ವ್ಯವಹಾರದಿಂದ ನಷ್ಟವಿದೆ
- ನಿಮ್ಮನ್ನು ನೀವೇ ಉತ್ತೇಜಿಸಿಕೊಳ್ಳಬೇಕು
ತುಲಾ
- ವಿನಾಕಾರಣ ತಿರುಗಾಟದಿಂದ ಆಗಬೇಕಾದ ಕೆಲಸ ಕೈ ತಪ್ಪಬಹುದು
- ಚಿಕ್ಕಪ್ಪ ಅಥವಾ ದೊಡ್ಡಪ್ಪನಿಗೆ ಸ್ವಲ್ಪ ತೊಂದರೆಯಾಗುವ ಸೂಚನೆಯಿದೆ ಎಚ್ಚರ
- ಇಂದು ಯಾವುದೇ ರೀತಿಯ ಪ್ರಯಾಣ ಬೇಡ
- ಸಧ್ಯದ ಆರ್ಥಿಕ ಪರಿಸ್ಥಿತಿ ಸುಧಾರಿಸಬಹುದು
- ರಾಶಿಚಕ್ರದ ದೃಷ್ಟಿಯಿಂದ ನಿರುದ್ಯೋಗಿಗಳಿಗೆ ತಾತ್ಕಾಲಿಕ ಉದ್ಯೋಗ ಸಿಗುವ ಸಾಧ್ಯತೆ
- ಆಶ್ಚರ್ಯಕರವಾದ ಘಟನೆಗಳಿಂದ ನಿಮಗೆ ನಂಬಿಕೆ ಬರಬಹುದು
ವೃಶ್ಚಿಕ
- ಬಯಸಿದ್ದು ಈಡೇರದೆ ಮನಸ್ಸಿಗೆ ಬೇಸರ ಸಾಧ್ಯತೆ
- ಅನಗತ್ಯ ಕೆಲಸಗಳಿಂದ ಸಮಯ ವ್ಯರ್ಥವಾಗಬಹುದು
- ಸಾಯಂಕಾಲದ ವೇಳೆಗೆ ಪ್ರೀತಿ ಪಾತ್ರರಿಂದ ಅಥವಾ ಆತ್ಮೀಯರಿಂದ ಉತ್ತಮ ಸಲಹೆ ಸಿಗಬಹುದು
- ದಂತ ವೈದ್ಯರನ್ನು ಭೇಟಿಯಾಗುವ ಸಂದರ್ಭ ಬರಬಹುದು
- ಇಂದು ಎಲ್ಲಾ ವಿಚಾರಗಳಲ್ಲೂ ಬಿಕ್ಕಟಿನ ಪರಿಸ್ಥಿತಿ
- ಭವಿಷ್ಯದ ಬಗ್ಗೆ ಆಲೋಚಿಸುವ ವ್ಯಕ್ತಿಗಳನ್ನು ಭೇಟಿ ಮಾಡಿ
- ಕುಲದೇವತೆಯನ್ನ ಆರಾಧನೆ ಮಾಡಿ
ಧನುಸ್ಸು
- ಬಯಸಿದ್ದು ಸಿಗದೆ ಮನಸ್ಸಿಗೆ ಕಿರಿಕಿರಿ ಸಾಧ್ಯತೆ
- ಮರದ ವ್ಯಾಪಾರಿಗಳು ಅಥವಾ ಮರಗೆಲಸ ಮಾಡುವವರಿಗೆ ಶುಭದಿನ
- ಹಣ, ಸಂಬಳದ ವಿಚಾರವಾಗಿ ಗಲಾಟೆ ಆಗುವ ಸಾಧ್ಯತೆಯಿದೆ
- ತುಂಬಾ ಒತ್ತಡ ಇರುವ ದಿನ, ಆರೋಗ್ಯದ ಬಗ್ಗೆ ಕಾಳಜಿವಹಿಸಿ
- ಯಾವುದಾದ್ರೂ ಕೆಲಸ, ಉದ್ದೇಶಕ್ಕೆ ಹಣವನ್ನ ಮುಂಗಡ ಕೊಟ್ಟಿದ್ರೆ ನಷ್ಟ ಆಗಲಿದೆ
- ಅನಗತ್ಯ ವಸ್ತುಗಳಿಗೆ ಹಣ ಖರ್ಚಾಗಬಹುದು
- ಛಿನ್ನಮಸ್ತಾ ದೇವಿಯನ್ನು ಪ್ರಾರ್ಥನೆ ಮಾಡಿ
ಮಕರ
- ಹಳೆಯ ಕೆಲಸ ಕಾರ್ಯಗಳಲ್ಲಿ ಮಗ್ನರಾಗುವ ಸಾಧ್ಯತೆಗಳಿವೆ
- ನಿಮ್ಮ ಜೀವನದಲ್ಲಿ ಸುಖದ ಆಸೆ ಹೊತ್ತು ಸಂಭ್ರಮಿಸುವಿರಿ
- ಕೆಲಸದಲ್ಲಿ ನಿಮ್ಮ ಬದ್ಧತೆ ಹೆಚ್ಚಾದ್ರೆ ಲಾಭ ಸಾಧ್ಯತೆ
- ನಿಮ್ಮ ವರ್ತನೆಯಿಂದ ಕುಟುಂಬದಲ್ಲಿ ಅಶಾಂತಿ ಸಾಧ್ಯತೆ
- ಅನಿರೀಕ್ಷಿತವಾಗಿ ಗಣ್ಯ ವ್ಯಕ್ತಿ ನಿಮ್ಮ ಮನೆಗೆ ಭೇಟಿ ನೀಡಬಹುದು
- ಗರ್ಭಣಿ ಸ್ತ್ರೀಯರು ಬಹಳ ಎಚ್ಚರಿಕೆಯಿಂದ ಇರಬೇಕಾದ ದಿನ
- ಸುಬ್ರಹ್ಮಣ್ಯ ಸ್ವಾಮಿಯನ್ನು ಆರಾಧನೆ ಮಾಡಿ
ಕುಂಭ
- ಸಂಘ-ಸಂಸ್ಥೆಗಳಲ್ಲಿ ಕೆಲಸ ಮಾಡುವವರಿಗೆ ಸಂಪೂರ್ಣ ಸಹಕಾರ ಸಿಗುತ್ತದೆ
- ಮಹಿಳೆಯರಿಗೆ ತುಂಬಾ ಯಶಸ್ಸು ಸಿಗುವ ದಿನ
- ನಿಮ್ಮ ಆತ್ಮೀಯರೇ ನಿಮಗೆ ಪ್ರತ್ಯಕ್ಷ ದೇವರ ರೂಪದಲ್ಲಿ ಕಾಣುವ ಸಾಧ್ಯತೆ
- ಸಾಯಂಕಾಲದಲ್ಲಿ ಸಿಗುವ ಸುಖ, ಸಂತೋಷ ಎಲ್ಲವನ್ನೂ ಮರೆಸುತ್ತದೆ( EE LINE BEDA)
- ಬೆಳಗ್ಗೆ ನಿಮ್ಮ ಜೇಬಿಗೆ ಕತ್ತರಿ ಬೀಳುವ ಸಾಧ್ಯತೆಯಿದೆ
- ಬೇರೆಯವರೊಂದಿಗಿನ ಮಾತು ನಿಮ್ಮ ಸಮಸ್ಯೆಗೆ ಪರಿಹಾರವಾಗಬಹುದು
- ಪದ್ಮಾವತಿ, ವೆಂಕಟರಮಣರನ್ನು ಪ್ರಾರ್ಥನೆ ಮಾಡಿ
ಮೀನ
- ಸಾಲಗಾರರಿಂದ ಅವಮಾನ, ತುಂಬಾ ಬೇಸರ ಸಾಧ್ಯತೆ
- ಮನೆಯವರ ಸಂದೇಶ, ಮಾತು ನಿಮ್ಮ ಆತ್ಮವಿಶ್ವಾಸ ಹೆಚ್ಚಿಸಬಹುದು
- ಹೊರ ಹೋಗುವಾಗ ಕೋಪಿಸಿಕೊಂಡರೆ ಅನಾಹುತವಾಗುವ ಸಾಧ್ಯತೆಯಿದೆ
- ಎಲ್ಲರ ಮೇಲೂ ಪ್ರೀತಿ, ವಿಶ್ವಾಸ ಇಟ್ಟುಕೊಳ್ಳಬೇಕು
- ಆಹಾರ ಸೇವನೆ ಬಗ್ಗೆ ಕಾಳಜಿವಹಿಸಿ
- ಇಂದು ನಿಮಗೆ ಉತ್ತಮವಾದ ದಿನ
- ಅಜೀರ್ಣ ಅಥವಾ ಶಾರೀರಿಕ ಬಾಧೆಗೆ ಒಳಗಾಗುವ ಸಾಧ್ಯತೆಯಿದೆ
- ಋಣಮೋಚನ ಮಂಗಳ ಸ್ತೋತ್ರ ಪಠಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ