ಹಣದ ಸಮಸ್ಯೆ, ಈ ರಾಶಿಗೆ ಆರ್ಥಿಕವಾದ ನಷ್ಟ ಸಾಧ್ಯತೆ; ಇಲ್ಲಿದೆ ಇಂದಿನ ಭವಿಷ್ಯ

ಬೆಳಗ್ಗೆ ಎದ್ದ ತಕ್ಷಣ ಇವತ್ತು ಏನು ಮಾಡಬೇಕು? ಏನು ಮಾಡಬಾರದು ಅಂತಾ ಲೆಕ್ಕಾ ಹಾಕ್ತೀವಿ. ಈ ದಿನ ನಿಮಗೆ ಅದೃಷ್ಟ ತಂದುಕೊಡಬಹುದು, ಕೆಲವ್ರಿಗೆ ಒಳ್ಳೆಯದ ದಿನ ಆಲ್ಲದಿರಬಹುದು. ನೀವು ಜ್ಯೋತಿಷಿ ಶಾಸ್ತ್ರ ನಂಬೋರು ಆಗಿದ್ರೆ ಅಂಗೈ ಅಗಲದ ಮೊಬೈಲ್​​ನಲ್ಲೇ ತಿಳಿದುಕೊಳ್ಳಬಹುದು.

author-image
Veenashree Gangani
RASHI_BHAVISHA
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಶ್ರಾವಣ ಮಾಸ, ಶುಕ್ಲಪಕ್ಷ, ಅಷ್ಟಮಿ ತಿಥಿ, ಸ್ವಾತಿ ನಕ್ಷತ್ರ, ರಾಹುಕಾಲ ಬುಧವಾರ ಮಧ್ಯಾಹ್ನ  12.00 ರಿಂದ 1.30 ರವರೆಗೆ ಇರಲಿದೆ.

ಮೇಷ ರಾಶಿ

RASHI_BHAVISHA_MESHA

  • ಲೇಖಕರಿಗೆ, ಪುಸ್ತಕ ವ್ಯಾಪಾರಿಗಳಿಗೆ ಈ ದಿನ ಒಳ್ಳೆಯದಿನ
  • ಆರೋಗ್ಯದ ಕಡೆ ಗಮನವಿರಲಿ ತಾತ್ಸಾರ ಬೇಡ
  • ಹಳೆಯ ಬಾಕಿ ನಿರೀಕ್ಷೆಯಲ್ಲಿದ್ದವರಿಗೆ ಆ ವಿಚಾರ ಮುನ್ನಲೆಗೆ ಬರಬಹುದು
  • ಇಂದು ಹಳೆಯ ನೆನಪುಗಳು ನಿಮ್ಮನ್ನು ಕಾಡಬಹುದು  
  • ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಈ ದಿನ ಶುಭ ಸುದ್ದಿ
  • ಶಾಂತವಾಗಿರಬೇಕು ಅಥವಾ ಮೌನವಾಗಿದ್ದರೆ ಒಳ್ಳೆಯದು
  • ಚೌಡೇಶ್ವರಿಯನ್ನು ಕೆಂಪು ಹೂಗಳಿಂದ ಆರ್ಚಿಸಿ

ವೃಷಭ

RASHI_BHAVISHA_VRSHABA

  • ಹಣದ ಸಮಸ್ಯೆ ಇಲ್ಲದಿದ್ದರೂ ವಿನಾಕಾರಣ ವೆಚ್ಚ ಮಾಡಬೇಕಾಗುತ್ತದೆ
  • ಕುಟುಂಬದಲ್ಲಿ ಮಾತುಕತೆ ತುಂಬಾ ಪರಿಣಾಮಕಾರಿಯಾಗಿರುತ್ತದೆ
  • ಸಮಾಜದಲ್ಲಿ ಅವಮಾನ, ಅಪಕೀರ್ತಿ ಆಗುತ್ತದೆ
  • ಮನೆಯಲ್ಲಿ ಆಗಬೇಕಾದ ಮಂಗಳ ಕಾರ್ಯ ನಿಂತು ಹೋಗುವ ಭಯ ನಿಮ್ಮನ್ನು ಕಾಡುತ್ತದೆ
  • ಬಂಧುಗಳಲ್ಲಿ ಪರಸ್ಪರ ವಿರೋಧ ಇರಲಿದೆ
  • ಮಾನಸಿಕವಾಗಿ ತುಂಬಾ ಕುಗ್ಗಿ ಹೋಗುತ್ತೀರಿ ಮಾನಸಿಕ ವೈರಾಗ್ಯ ಕಾಡಲಿದೆ
  • ವೆಂಕಟರಮಣನನ್ನು ಪ್ರಾರ್ಥನೆ ಮಾಡಿ

ಮಿಥುನ

RASHI_BHAVISHA_MITHUNA

  • ಸಾಯಂಕಾಲದ ಹೊತ್ತಿಗೆ  ಸ್ವಲ್ಪ ನೆಮ್ಮದಿಯ ನಿಟ್ಟುಸಿರು ಬಿಡುವಂತಹದ್ದು
  • ಪದಾರ್ಥಗಳ ಬೆಲೆಯಲ್ಲಿ ವ್ಯತ್ಯಯವಾಗಲಿದೆ
  • ಆದಾಯದ ಜಾಡು ಹಿಡಿದು ಹೋಗುವುದರಲ್ಲಿ ಯಶಸ್ಸನ್ನು ಕಾಣುತ್ತೀರಿ
  • ಜನರನ್ನು ಮತ್ತು ಗ್ರಾಹಕರನ್ನು ಮೆಚ್ಚಿಸುವುದಕ್ಕೆ ಸಾಹಸ ಪಡಬೇಕಾಗುವ ದಿನ
  • ಈ ದಿನ ವ್ಯಾಪಾರದಲ್ಲಿ ಹಿನ್ನಡೆಯಾಗಲಿದೆ 
  • ಸ್ಥಳ ಬದಲಾವಣೆಯ ಯೋಗ ಇರುವುದರಿಂದ ಅನುಕೂಲವಾಗಲಿದೆ
  • ಇಂದು ಮಾನಸಿಕ ಸಮಾಧಾನವಿರುವುದಿಲ್ಲ
  • ಐಶ್ಚರ್ಯ ಲಕ್ಷ್ಮೀಯನ್ನು ಪ್ರಾರ್ಥನೆ ಮಾಡಿ

ಕಟಕ

RASHI_BHAVISHA_KATAKA

  • ಅನಾವಶ್ಯಕ ವಿಚಾರಗಳಿಂದ ಮನಸ್ತಾಪ ಏರ್ಪಡುವುದು
  • ಹಣಕ್ಕಾಗಿ ಹೋರಾಟ ಮಾಡುವಂತಹ ಪರಿಸ್ಥಿತಿ ಬರಲಿದೆ
  • ಶತ್ರುಗಳ ವಿರುದ್ಧ ಹೋರಾಟ ಮಾಡಬೇಡಿ ಶಾಂತವಾಗಿರಿ
  • ಹಲ್ಲಿಗೆ ಸಂಬಂಧಿಸಿದ ತೊಂದರೆ ಉಂಟಾಗಬಹುದು ದಂತ ವೈದ್ಯರನ್ನ ಭೇಟಿ ಮಾಡಿ
  • ರಾಜಕೀಯ ವ್ಯಕ್ತಿಗಳು ಸಂಪರ್ಕಕ್ಕೆ ಬಂದು ಸಹಾಯ ಮಾಡುವ ಯೋಗವಿದೆ
  • ವಿದ್ಯಾರ್ಥಿಗಳಿಗೆ ಸ್ವಲ್ಪ ಸಮಸ್ಯೆಗಳು ಕಾಣಲಿದೆ
  • ಸಹೋದ್ಯೋಗಿಗಳ ಸ್ವಭಾವ ಅಥವಾ ವರ್ತನೆ ಮನಸ್ಸಿಗೆ ಬೇಸರ ಉಂಟುಮಾಡುತ್ತದೆ
  • ತಾಪಸಮನ್ಯುವನ್ನು ಪ್ರಾರ್ಥಿಸಿ

ಸಿಂಹ 

RASHI_BHAVISHA_SIMHA

  • ನಿರ್ಮಾಣದ ಹಂತದಲ್ಲಿರುವ ಕಟ್ಟಡದ ಖರೀದಿಯ ಬಗ್ಗೆ ಮಾತುಕತೆ ಆಡುತ್ತೀರಿ 
  • ಹೊಸ ಜವಾಬ್ದಾರಿಗಳು ನಿಮ್ಮ ಹೆಗಲೇರಬಹುದು
  • ಪೋಷಕರಿಗೆ ದುಃಖದಾಯಕರಾಗುತ್ತೀರಿ
  • ಇಂದು ಆಭರಣಗಳ ಬಗ್ಗೆ ಕಾಳಜಿವಹಿಸಿ
  • ಪುಣ್ಯಕ್ಷೇತ್ರಗಳಿಗೆ ದರ್ಶನಕ್ಕಾಗಿ ಹೋಗುವ ಯೋಗವಿದೆ
  • ಈಶ್ವರನ ದೇವಸ್ಥಾನಕ್ಕೆ ಹೋದರೆ ಶುಭವಾಗಲಿದೆ ಕಷ್ಟಗಳೆಲ್ಲವೂ ದೂರವಾಗುವುದು
  • ಹಣವನ್ನು ಸಂಗ್ರಹಿಸಲು ಒದ್ದಾಡಬೇಕಾಗುತ್ತದೆ
  • ಸಾಮಾಜಿಕ ಕೆಲಸಗಳಲ್ಲಿ ಆಸಕ್ತಿ ಇರುವುದಿಲ್ಲ
  • ಧನಲಕ್ಷ್ಮಿಯನ್ನು ಮತ್ತು ಭೂವರಾಹಸ್ವಾಮಿಯನ್ನು ಪ್ರಾರ್ಥಿಸಿ 

ಕನ್ಯಾ

RASHI_BHAVISHA_KANYA

  • ಲೆಕ್ಕ ಪರಿಶೋಧಕರಿಗೆ ಲಾಭದ ದಿನ
  • ಸಾಲದ ವಿಚಾರದಲ್ಲಿ ತೊಂದರೆಯಾಗಬಹುದು
  • ಹವಾಮಾನ ವೈಪರೀತ್ಯದಿಂದ ಆರೋಗ್ಯದಲ್ಲಿ ವ್ಯತ್ಯಯ ಆಗಬಹುದು
  • ಮನೆಯವರಲ್ಲಿ ಪರಸ್ಪರ ಹೊಂದಾಣಿಕೆಯಿರುವುದಿಲ್ಲ
  • ವ್ಯಾವಹಾರಿಕ ಬದಲಾವಣೆಯಾಗಬಹುದು
  • ಮನೆಯಲ್ಲಿ ಶುಭಕಾರ್ಯಗಳು ಸ್ಥಗಿತವಾಗುವ ಭಯ ಕಾಡುತ್ತದೆ
  • ಇಂದ್ರಾಕ್ಷಿಯನ್ನು ಪ್ರಾರ್ಥಿಸಿ

ತುಲಾ

RASHI_BHAVISHA_TULA

  • ಮಕ್ಕಳಿಗೆ  ಸಮಸ್ಯೆ ಕಾಡಬಹುದು ಜಾಗ್ರತೆಯಿಂದಿರಿ
  • ಒಳ್ಳೆಯ ಧನಾಗಮನ ಸೂಚನೆ ಇದೆ ಆದರೂ ಕೂಡ ನಿಮಗೆ ಹಿನ್ನಡೆಯುಂಟಾಗಬಹುದು
  • ಆತ್ಮೀಯರ ಭೇಟಿ ಮತ್ತು ಭೋಜನದಿಂದ ಸಂತೋಷ ಸಿಗುವ ದಿನ
  • ಶೈಕ್ಷಣಿಕವಾಗಿ ಗುಣಮಟ್ಟವನ್ನು ಕಾಪಾಡಿಕೊಳ್ಳಬೇಕಾಗುತ್ತದೆ
  • ದೊಡ್ಡ ಉದ್ಯೋಗಸ್ಥರಿಗೆ ರಾಷ್ಟ್ರಮಟ್ಟದಲ್ಲಿ ಹಿನ್ನಡೆ ಉಂಟಾಗಬಹುದು
  • ಹಣ್ಣಿನ ವ್ಯಾಪಾರಿಗಳಿಗೆ ಸ್ವಲ್ಪ ಪ್ರಮಾಣ ಲಾಭ ಸಿಗಲಿದೆ
  • ಅಮೃತ ಮೃತ್ಯುಂಜಯನನ್ನು ಪ್ರಾರ್ಥಿಸಿ

ವೃಶ್ಚಿಕ

RASHI_BHAVISHA_VRUSHCHIKA

  • ಮನೆಯ ಅಲಂಕಾರ, ಸಣ್ಣ ಪುಟ್ಟ ಬದಲಾವಣೆಗಳಿಗೆ ಹಣ ಖರ್ಚು ಮಾಡುವ ದಿನವಾಗಿರುತ್ತದೆ
  • ಆರೋಗ್ಯದ ಬಗ್ಗೆ ಕಾಳಜಿವಹಿಸಿ
  • ಅಲ್ಪ ತೃಪ್ತಿಯ ಕೆಲಸವನ್ನು ಮಾಡಬೇಡಿ
  • ಮನೆ ಮತ್ತು ಉದ್ಯೋಗ ಎರಡೂ ಕಡೆಗಳಲ್ಲಿ ಸಮಸ್ಯೆ ಕಾಡುತ್ತದೆ
  • ಹೊಟ್ಟೆ ಕಿಚ್ಚಿನ ಜನ ನಿಮ್ಮನ್ನು ದೂಷಿಸಬಹುದು
  • ಸಾಮಾಜಿಕವಾಗಿ ನಿಮ್ಮ ಹೆಸರು ಪರಿಗಣಿಸಲ್ಪಡುತ್ತದೆ
  • ಕುಲದೇವತಾ ಆರಾಧನೆ ಮಾಡಿ

ಧನುಸ್ಸು

RASHI_BHAVISHA_DHANASU

  • ಸರ್ಕಾರಿ ನೌಕರರಿಗೆ ಬಡ್ತಿ ಸಿಗುವ ಯೋಗವಿದೆ
  • ಖಾಸಗಿ ಉದ್ಯೋಗಿಗಳು ಕಾರ್ಯಕ್ಷೇತ್ರದಲ್ಲಿ ಬದಲಾವಣೆ ತರೋದಕ್ಕೆ ಅವಕಾಶವಿದೆ
  • ಮನೆಯಲ್ಲಿ ಸಂತೋಷದ ವಾತಾವರಣವಿರುತ್ತದೆ
  • ವ್ಯವಹಾರದಲ್ಲಿ ದೊಡ್ಡ ಸಾಧನೆಗೆ ಅವಕಾಶ
  • ಮನೆಗೆ ಗಣ್ಯ ವ್ಯಕ್ತಿಗಳ ಆಗಮನ ಆಗಬಹುದು
  • ಗೋಮಾತೆಯನ್ನು ಪ್ರಾರ್ಥಿಸಿ

ಮಕರ

RASHI_BHAVISHA_MAKARA

  • ಹಳೆಯ ವಿಚಾರಗಳು ನಿಮಗೆ ಒತ್ತಡವನ್ನ ತರಬಹುದು
  • ಮಕ್ಕಳ ಬಗ್ಗೆ ವಿಶೇಷ ಕಾಳಜಿವಹಿಸಿ
  • ಮನೆಯವರಿಗೆ ಬಹಳ ಆತಂಕದ ದಿನ ಸಾಯಂಕಾಲಕ್ಕೆ ಸರಿಯಾಗುವ ಸಾಧ್ಯತೆ ಇದೆ 
  • ಮಧುಮೇಹಿಗಳಿಗೆ ತುಂಬಾ ತೊಂದರೆಯಾಗಬಹುದು
  • ಇಂದು ಯಾರನ್ನು ಅತಿಯಾಗಿ ನಂಬಬಾರದು
  • ಸಹೋದ್ಯೋಗಿಗಳ ಸಹಕಾರವಿರುವುದಿಲ್ಲ ಇದರಿಂದ ಮಾನಸಿಕ ಬೇಸರ
  • ವಿಷ್ಣುತ್ರಯೀ ಮಂತ್ರ ಜಪಿಸಿ

ಕುಂಭ

RASHI_BHAVISHA_KUMBHA

  • ಹೊಸ ಕೆಲಸಕ್ಕೆ ಉತ್ತಮವಾದ ದಿನವಲ್ಲ
  • ಈ ದಿನ ಉದ್ಯೋಗವು ನಷ್ಟವನ್ನುಂಟು ಮಾಡುತ್ತದೆ
  • ಧಾರ್ಮಿಕ ಚಟುವಟಿಕೆ ಆತ್ಮಸ್ಥೈರ್ಯ ತುಂಬಬಹುದು
  • ಆರ್ಥಿಕವಾದ ನಷ್ಟ ಸ್ವಲ್ಪದರಲ್ಲಿ ತಪ್ಪುತ್ತದೆ
  • ವ್ಯವಹಾರದಲ್ಲಿ ದೊಡ್ಡ ಅಪಾಯವಾಗಬಹುದು
  • ನಿಮ್ಮ ಸ್ವಭಾವವು ಜನರಿಗೆ ಸ್ಫೂರ್ತಿದಾಯಕವಾಗಿರುತ್ತದೆ
  • ಉಮಾ ಮಹೇಶ್ವರರ ಆರಾಧನೆ ಮಾಡಿ

ಮೀನ

RASHI_BHAVISHA_MEENA

  • ಹಣದ ವಿಚಾರದಲ್ಲಿ ಕೋಪ ಬರಬಹುದು
  • ಗುತ್ತಿಗೆದಾರರಿಗೆ ಹಿನ್ನಡೆ ಉಂಟಾಗಲಿದೆ 
  • ಸ್ನೇಹಿತರ ಸಹಾಯದಿಂದ ಹಿಂದೆ ಸರಿಯಬಾರದು
  • ಅನುಭವಿಗಳ ಮಾತು ವಿರುದ್ಧವಾಗಿ ಪರಿಣಮಿಸಬಹುದು
  • ಚಿತ್ರರಂಗದವರಿಗೆ ಉತ್ತಮವಾದ ದಿವಸ
  • ನಿಂತು ಹೋಗಿದ್ದ ಕೆಲಸಗಳು ಪುನರಾರಂಭವಾಗಲಿದೆ
  • ದತ್ತಾತ್ರೇಯರನ್ನು ಪೂಜಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya
Advertisment