ಕುಟುಂಬದಲ್ಲಿ ಕಿರಿಕಿರಿ, ಇಂದು ಹಣ ಹೂಡಿಕೆಗೆ ಒಳ್ಳೆಯ ದಿನ; ಇಲ್ಲಿದೆ ಇಂದಿನ ಭವಿಷ್ಯ!

ಬೆಳಗ್ಗೆ ಎದ್ದ ತಕ್ಷಣ ಇವತ್ತು ಏನು ಮಾಡಬೇಕು? ಏನು ಮಾಡಬಾರದು ಅಂತಾ ಲೆಕ್ಕಾ ಹಾಕ್ತೀವಿ. ಈ ದಿನ ನಿಮಗೆ ಅದೃಷ್ಟ ತಂದುಕೊಡಬಹುದು, ಕೆಲವ್ರಿಗೆ ಒಳ್ಳೆಯದ ದಿನ ಆಲ್ಲದಿರಬಹುದು. ನೀವು ಜ್ಯೋತಿಷಿ ಶಾಸ್ತ್ರ ನಂಬೋರು ಆಗಿದ್ರೆ ಅಂಗೈ ಅಗಲದ ಮೊಬೈಲ್​​ನಲ್ಲೇ ತಿಳಿದುಕೊಳ್ಳಬಹುದು.

author-image
Veenashree Gangani
RASHI_BHAVISHA
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಶ್ರಾವಣ ಮಾಸ, ಶುಕ್ಲಪಕ್ಷ, ಅಷ್ಟಮಿ ತಿಥಿ, ಸ್ವಾತಿ ನಕ್ಷತ್ರ, ರಾಹುಕಾಲ ಗುರುವಾರ ಮಧ್ಯಾಹ್ನ  1.30 ರಿಂದ 3.00 ರವರೆಗೆ ಇರಲಿದೆ.

ಮೇಷ ರಾಶಿ

RASHI_BHAVISHA_MESHA

  • ತುಂಬಾ ದಿನಗಳ ನಂತರ  ಪುಣ್ಯಕ್ಷೇತ್ರಕ್ಕೆ ಹೋಗುವ ಆಲೋಚನೆ ಮಾಡುತ್ತೀರಿ
  • ಮನೆಯಲ್ಲಿ ಉತ್ತಮ ವಾತಾವರಣ ಸೃಷ್ಟಿ ಮಾಡಬೇಕಾಗುತ್ತದೆ
  • ಕೆಟ್ಟವರ ಜೊತೆಯಲ್ಲಿ ಅಂತರ ಕಾಯ್ದುಕೊಳ್ಳಿ
  • ವಿರೋಧಿಗಳ ಜೊತೆ ವಾಗ್ವಾದ ನಡೆಯುವ ಸಾಧ್ಯತೆ ಹೆಚ್ಚು
  • ಹಣದ ವಿಚಾರ ಬಂದಾಗ ನಿಮಗೆ ತೃಪ್ತಿ ಇರುವುದಿಲ್ಲ
  • ಆದಾಯದ ಮೂಲ ಚೆನ್ನಾಗಿರುವುದರಿಂದ ಮನಸ್ಸಿಗೆ ಸಂತೋಷವಿರಲಿದೆ
  • ಉಗ್ರ ನರಸಿಂಹನನ್ನು ಪ್ರಾರ್ಥಿಸಿ

ವೃಷಭ

RASHI_BHAVISHA_VRSHABA

  • ಪ್ರಯಾಣಕ್ಕೆ ಸಿದ್ಧತೆಗಳನ್ನು ಮಾಡಿಕೊಳ್ಳುವುದರಲ್ಲಿ ದಿನವನ್ನು ಕಳೆಯುತ್ತೀರಿ 
  • ದಿನಚರಿ ಸ್ವಲ್ಪ ಅಸ್ತವ್ಯಸ್ತವಾಗಬಹುದು ಸರಿಪಡಿಸಿಕೊಳ್ಳಿ
  • ಹಲವಾರು ಕೆಲಸಗಳು ನಿಮ್ಮ ಮುಂದಿರುತ್ತದೆ
  • ಮುಖ್ಯವಾದ ಕೆಲಸಕ್ಕೆ ಅಡ್ಡಿಯಾಗಬಹುದು
  • ವಿದೇಶ ಪ್ರಯಾಣ ಮಾಡುವವರಿಗೆ ಶುಭವಿದೆ
  • ವಿದೇಶದಿಂದ ಇಲ್ಲಿಗೆ ಬರುವವರಿಗೆ ಯೋಗ ಸಿಗುವಂತಹದ್ದು
  • ಬಂಧುಗಳಲ್ಲಿ ನಿಮ್ಮ ಬಗ್ಗೆ ಅಭಿಪ್ರಾಯ ಒಳ್ಳೆಯದಿರುತ್ತದೆ
  • ವಿಘ್ನೇಶ್ವರನನ್ನು ಪ್ರಾರ್ಥನೆ ಮಾಡಿ  

ಮಿಥುನ

RASHI_BHAVISHA_MITHUNA

  • ಇಂದು ಆರ್ಥಿಕವಾಗಿ ಸುಧಾರಣೆಯಾಗುವ ದಿನ 
  • ತಾಯಿಯ ಆರೋಗ್ಯದ ಬಗ್ಗೆ ಹೆಚ್ಚು ಗಮನಹರಿಸಿ
  • ವಿದೇಶದಿಂದ ಧನಲಾಭವಾಗುವ ಯೋಗವಿದೆ
  • ವಿರೋಧಿಗಳಿಗೆ ಉತ್ತರ ನೀಡಲು ಸಿದ್ಧರಾಗಿರುತ್ತೀರಿ
  • ಬೇಸರ ಅನುಭವಿಸುತ್ತಿರುತ್ತೀರಿ ಆದರೆ ಸಾಯಂಕಾಲದ ಹೊತ್ತಿಗೆ ಜಿಗುಪ್ಸೆ ಕಾಡಲಿದೆ
  • ಮನಸ್ಸಿಗೆ ಏನೋ ಸಮಾಧಾನ ಉಂಟಾಗಲಿದೆ
  • ಗಂಟಲಿನ ಸಮಸ್ಯೆ ಕಾಡಬಹುದು
  • ವಿಷ್ಣು ಸಹಸ್ರನಾಮ ಪಠಣೆ ಮಾಡಿ

ಕಟಕ

RASHI_BHAVISHA_KATAKA

  • ತರಕಾರಿ ವ್ಯಾಪಾರಿಗಳಿಗೆ ಸ್ವಲ್ಪ ಮಟ್ಟಿನ ಲಾಭ ಸಿಗುವ ದಿನ
  • ನಿಮ್ಮ ಕ್ಷೇತ್ರದಲ್ಲಿ ಸಾಧನೆ ಮಾಡಲು ಸದಾವಕಾಶ
  • ಇಂದು ಪ್ರೇಮಿಗಳಿಗೆ ಶುಭದಿನ
  • ಸ್ವಾರ್ಥಕ್ಕೋಸ್ಕರ ಬೇರೆಯವರ ಸಹಾಯ ಕೇಳಬಾರದು  
  • ನಿಮಗಿರುವ ಸಂಪರ್ಕವು ಉತ್ತಮ ಕಾರ್ಯಗಳಿಗೆ ವಿನಿಯೋಗವಾಗಲಿ 
  • ನಿಮ್ಮ ಮಾತಿನಿಂದ ಹಲವರು ನಿಮ್ಮ ಕಡೆಗೆ ಆಕರ್ಷಿತರಾಗುತ್ತಾರೆ
  • ಶಾಕಾಂಬರಿ ದೇವತೆಯನ್ನು ಆರಾಧನೆ ಮಾಡಿ

ಸಿಂಹ 

RASHI_BHAVISHA_SIMHA

  • ನಿಮ್ಮ ಪ್ರತಿಭೆ, ವರ್ತನೆ, ಸ್ವಭಾವ ಎಲ್ಲವೂ ಕೂಡ ಹಿರಿಯರಿಗೆ ಬಹಳ ಸಂತೋಷವನ್ನುಂಟು ಮಾಡುತ್ತದೆ
  • ಈ ದಿನ ಹಿರಿಯರ ಪ್ರೀತಿಗೆ ಪಾತ್ರರಾಗುತ್ತೀರಿ
  • ಸ್ನೇಹಿತರೊಂದಿಗೆ ಗಹನವಾದ ವಿಚಾರವನ್ನ ಚರ್ಚಿಸುತ್ತೀರಿ
  • ಸಣ್ಣ-ಪುಟ್ಟ ವಿಚಾರಗಳನ್ನು ತಾತ್ಸಾರ ಮಾಡಬೇಡಿ
  • ನಿಮ್ಮ ಕೆಲಸವೆ ನಿಮಗೆ ತೃಪ್ತಿ ಕೊಡುವುದಿಲ್ಲ
  • ಇಂದು ಆದಾಯದಷ್ಟೇ ಖರ್ಚಿರುತ್ತದೆ
  • ಹಳೆಯ ಸಾಲ ತೀರಿಸಲು ಮತ್ತೆ ಸಾಲ ಮಾಡಬಹುದು
  • ಕುಲದೇವತಾ ಆರಾಧನೆ ಮಾಡಿ

ಕನ್ಯಾ

RASHI_BHAVISHA_KANYA

  • ವ್ಯಾಪಾರಿಗಳಿಗೆ ವ್ಯಾಪಾರದಲ್ಲಿ  ಶುಭ ಲಾಭಗಳಿರುತ್ತದೆ
  • ನಕರಾತ್ಮಕವಾದ ಚಿಂತನೆಗಳು ಮನಸ್ಸಿನಲ್ಲಿ ಭಯವನ್ನು ಹುಟ್ಟಿಸುತ್ತದೆ
  • ಹಲವರಿಗೆ ನಿಮ್ಮ ಮೇಲೆ ಕೋಪವಿರುತ್ತದೆ
  • ವಿದ್ಯಾರ್ಥಿಗಳಿಗೆ ಭವಿಷ್ಯದ ಚಿಂತೆ ಕಾಡಬಹುದು
  • ಈ ದಿನ ಮಾನಸಿಕವಾಗಿ ಭಯ ಕಾಡಲಿದೆ
  • ಸ್ನೇಹಿತರು ಮತ್ತು  ಬಂಧುಗಳೊಂದಿಗೆ ವಿಶೇಷವಾದ ಬಾಂಧವ್ಯವನ್ನು ಉಳಿಸಿಕೊಳ್ಳುತ್ತೀರಿ
  • ಸರ್ಕಾರಿ ಕೆಲಸಕ್ಕೆ ಅಡಚಣೆ ಆಗಬಹುದು
  • ಕುಲದೇವತಾ ಆರಾಧನೆ ಮಾಡಿ

ತುಲಾ

RASHI_BHAVISHA_TULA

  • ವೈದ್ಯಕೀಯ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಬಹುದು
  • ಆಹಾರ ಮಿತವಾಗಿರಲಿ ಅಲರ್ಜಿ ಸಮಸ್ಯೆಯಾಗಬಹುದು
  • ಪ್ರೀತಿ ಪಾತ್ರರ ಮೇಲೆ ಅತಿಯಾದ ಅವಲಂಬನೆ ಬೇಡ
  • ಕಾರ್ಯಕ್ಷೇತ್ರದಲ್ಲಿ ನಿಮಗೆ ಒಳ್ಳೆಯ ಹೆಸರು ಬರುತ್ತದೆ
  • ಇಂದು ಸಿಟ್ಟಿನಿಂದ ಯಾರೊಂದಿಗೂ ಮಾತನಾಡಬಾರದು
  • ಹವ್ಯಾಸಿ ಕಲಾವಿದರು ವಸ್ತುವಿನ ಖರೀದಿಗೆ ಹೆಚ್ಚು ಹಣ ಖರ್ಚು ಮಾಡುತ್ತೀರಿ
  • ಧನ್ವಂತರಿಯನ್ನು ಪ್ರಾರ್ಥಿಸಿ

ವೃಶ್ಚಿಕ

RASHI_BHAVISHA_VRUSHCHIKA

  • ಇಂದು ಆರ್ಥಿಕ ಲಾಭವಿರುವ ದಿನ
  • ವಿನಾಕಾರಣ ಹಣವನ್ನು ವಸ್ತು ಖರೀದಿಗೋಸ್ಕರ ವ್ಯಯ ಮಾಡುತ್ತೀರಿ
  • ಸಣ್ಣ ಪುಟ್ಟ ತಪ್ಪಿಗೋಸ್ಕರ ಹಣ ವ್ಯಯವಾಗಬಹುದು
  • ಕುಟುಂಬದ ವಾತಾವರಣ ಚೆನ್ನಾಗಿರುವಂತೆ ಕಾಪಾಡುವ ಜವಾಬ್ದಾರಿ ನಿಮ್ಮದು
  • ಮನೆಯವರಿಗಾಗಿ ಸ್ವಲ್ಪ ಸಮಯ ಮೀಸಲಿಡಿ
  • ಎಲ್ಲಾ ಕೆಲಸಗಳು ಕೂಡ ತುಂಬಾ ಆತುರವಾಗಿ ನಡೆಯಲಿದೆ
  • ಸಂಪತ್ ಲಕ್ಷ್ಮೀಯನ್ನು ಪ್ರಾರ್ಥನೆ ಮಾಡಿ

ಧನುಸ್ಸು

RASHI_BHAVISHA_DHANASU

  • ನಿಮ್ಮ ಜೀವನದಲ್ಲಿ ಬದಲಾವಣೆ ಆಗುವ ಸಾಧ್ಯತೆ ಇದೆ
  • ಮಾತು ಮತ್ತು  ಅಭಿಪ್ರಾಯ ದ್ವೇಷಕ್ಕೆ ಕಾರಣವಾಗುತ್ತದೆ
  • ಆರೋಗ್ಯ ಸಮಸ್ಯೆ ಇದ್ದರೆ ಯಾವುದೇ ಕಾರಣಕ್ಕೂ ತಾತ್ಸಾರ ಮಾಡಬೇಡಿ 
  • ನಿರ್ಲಕ್ಷ್ಯದಿಂದ  ಮುಖ್ಯ ಕೆಲಸಗಳನ್ನು ಕೈ ಬಿಡುವ ಸಾಧ್ಯತೆ ಇದೆ 
  • ಶ್ರಮದಿಂದ ಕಾರ್ಯ ಮುಗಿಸಲು ಪ್ರಯತ್ನಿಸುತ್ತೀರಿ
  • ಹಣದ ಕೊರತೆ ನಿಮಗೆ ಕಾಡಬಹುದು 
  • ನಿಮ್ಮ ಸ್ವಭಾವ ಅನುಮಾನಾಸ್ಪದವಾಗಿ ಕಾಣುತ್ತದೆ
  • ಕುಲದೇವತೆಯನ್ನು ಪ್ರಾರ್ಥಿಸಿ

ಮಕರ

RASHI_BHAVISHA_MAKARA

  • ಯಾವುದೇ ಹೊಸ ಕೆಲಸಗಳನ್ನ ಪ್ರಾರಂಭಿಸಬೇಡಿ
  • ಮಕ್ಕಳಿಂದ ಚಿಂತೆ, ಹಣದ ಖರ್ಚು ನಿಮ್ಮ ಮುಂದೆ ಸವಾಲಾಗಿ ಕಾಣುವಂತಹದ್ದು
  • ಬೇರೆಯವರು ನಿಮಗೆ ತಿಳುವಳಿಕೆ ಹೇಳುವಂತೆ ಮಾಡಿಕೊಳ್ಳಬೇಡಿ
  • ಇಂದು ಹಣ ಹೂಡಿಕೆಗೆ ಒಳ್ಳೆಯ ದಿನ
  • ಆರೋಗ್ಯದ ವಿಚಾರಕ್ಕೆ ಒಮ್ಮೆ ಜಾತಕವನ್ನ ಪರಿಶೀಲಿಸಿಕೊಳ್ಳುವುದು ಒಳ್ಳೆಯದು
  • ಇಂದು ಹಳೆಯ ರೋಗ ಮತ್ತೆ ಕಾಡಬಹುದು
  • ವ್ಯಾವಹಾರಿಕವಾಗಿ ಸ್ವಲ್ಪ ದುರ್ಬಲರಾಗುತ್ತೀರಿ
  • ಧನ್ವಂತರಿ ಮಹಾವಿಷ್ಣುವನ್ನು ಪ್ರಾರ್ಥನೆ ಮಾಡಿ

ಕುಂಭ

RASHI_BHAVISHA_KUMBHA

  • ಸ್ತ್ರೀಯರಲ್ಲಿ ರಕ್ತದೊತ್ತಡ ಹೆಚ್ಚಾಗುವ ಸಾಧ್ಯತೆ ಇದೆ
  • ಒತ್ತಡಕ್ಕೆ ಮಣಿದು ಕೆಲವು ಕೆಲಸಗಳನ್ನು ಮಾಡಬೇಕಾಗತ್ತದೆ
  • ಈ ದಿನ ಕೆಲಸದಲ್ಲಿ ಆಸಕ್ತಿ ಕಡಿಮೆಯಾಗಬಹುದು
  • ನಿಮ್ಮ ಜವಾಬ್ದಾರಿ ಬಗ್ಗೆ ಹೆಚ್ಚು ಗಮನ ಕೊಡಬೇಕಾಗುತ್ತದೆ
  • ಸತ್ಸಂಗ, ಸಭೆಗಳಲ್ಲಿ ಭಾಗವಹಿಸುವ ಅವಕಾಶಗಳಿವೆ
  • ಆತ್ಮ ಸಾಕ್ಷಿಗೆ ಸರಿ ಅನಿಸಿದ ಕೆಲಸವನ್ನು ಮಾತ್ರ ಮಾಡಿ
  • ದೇವಿಯನ್ನು ಪ್ರಾರ್ಥನೆ ಮಾಡಿ

ಮೀನ

RASHI_BHAVISHA_MEENA

  • ಶೀತ ಸಂಬಂಧಿ ತೊಂದರೆ ನಿಮ್ಮನ್ನು ಕಾಡಬಹುದು
  • ಸಹೋದರರು ಜಗಳಕ್ಕೆ ಒಳಗಾಗುವಂತೆ ಅವಕಾಶ ಮಾಡಿಕೊಡುತ್ತೀರಿ
  • ಕುಟುಂಬದ ಕಿರಿಕಿರಿಗಳನ್ನು ದೂರಮಾಡಿಕೊಂಡು ಮನಸ್ಸನ್ನ ಪ್ರಶಾಂತವಾಗಿಟ್ಟುಕೊಳ್ಳಬೇಕು 
  • ಇಂದು ಕೈ ಹಾಕಿದ ಕೆಲಸದಲ್ಲಿ ಯಶಸ್ಸಿದೆ 
  • ಚಲನಚಿತ್ರ ಮತ್ತು ಮಾಧ್ಯಮಗಳಲ್ಲಿ ಕೆಲಸ ಮಾಡುವವರಿಗೆ ಅನುಕೂಲವಾದ ದಿನ
  • ಸಾಯಂಕಾಲದ ಸಮಯದಲ್ಲಿ 108 ಬಾರಿ ಚಂದ್ರಾಯ ನಮಃ ಅಂತ ಪಠಿಸಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya
Advertisment