ಪ್ರೇಮಿಗಳಿಗೆ ಅಡ್ಡಿಯಾಗುವ ದಿನ, ಪ್ರಯಾಣದ ಪ್ರಯಾಣದಿಂದ ದೂರವಿರಿ; ಇಲ್ಲಿದೆ ಇಂದಿನ ಭವಿಷ್ಯ!

ಬೆಳಗ್ಗೆ ಎದ್ದ ತಕ್ಷಣ ಇವತ್ತು ಏನು ಮಾಡಬೇಕು? ಏನು ಮಾಡಬಾರದು ಅಂತಾ ಲೆಕ್ಕಾ ಹಾಕ್ತೀವಿ. ಈ ದಿನ ನಿಮಗೆ ಅದೃಷ್ಟ ತಂದುಕೊಡಬಹುದು, ಕೆಲವ್ರಿಗೆ ಒಳ್ಳೆಯದ ದಿನ ಆಲ್ಲದಿರಬಹುದು. ನೀವು ಜ್ಯೋತಿಷಿ ಶಾಸ್ತ್ರ ನಂಬೋರು ಆಗಿದ್ರೆ ಅಂಗೈ ಅಗಲದ ಮೊಬೈಲ್​​ನಲ್ಲೇ ತಿಳಿದುಕೊಳ್ಳಬಹುದು.

author-image
Veenashree Gangani
RASHI_BHAVISHA
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಶ್ರಾವಣ ಮಾಸ, ಶುಕ್ಲಪಕ್ಷ, ಅಷ್ಟಮಿ ತಿಥಿ, ಸ್ವಾತಿ ನಕ್ಷತ್ರ, ರಾಹುಕಾಲ ಶನಿವಾರ ಬೆಳಗ್ಗೆ  9.00 ರಿಂದ 10.30 ರವರೆಗೆ ಇರಲಿದೆ.

ಮೇಷ ರಾಶಿ

RASHI_BHAVISHA_MESHA

  • ಸಣ್ಣ ಸಣ್ಣ ವಿಷಯಗಳಿಗೆ ಮಿತಿ ಮೀರಿ ಮಾತಾಡಬಾರದು
  • ಕೆಲವು ಕಾನೂನು ತೊಡಕುಗಳು ನಿಮ್ಮ ನೌಕರಿಯಲ್ಲಿ ಎದುರಾಗಬಹುದು
  • ನಿಮ್ಮ ಆರೋಗ್ಯದ ಬಗ್ಗೆ ಗಮನವಿರಲಿ
  • ಬೆನ್ನಿನ ಮೂಳೆಗೆ ತೊಂದರೆ ಆಗಬಹುದು ವೈದ್ಯರ ಸಲಹೆ ಪಡೆಯಿರಿ
  • ಸಹೋದ್ಯೋಗಿಗಳು, ಮಿತ್ರರು, ಬಂಧುಗಳು ನಿಮ್ಮ ವರ್ತನೆಯಲ್ಲಿ ತಪ್ಪು ಹುಡುಕುತ್ತಾರೆ
  • ಮನಸ್ಸಿನ ತೊಳಲಾಟ ಧೈರ್ಯಗೆಡಿಸುತ್ತದೆ
  • ಈ ದಿನ ಕೆಲವು ಕೆಲಸಗಳು ಬೇಸರದಿಂದ ಮುಕ್ತಾಯವಾಗಬಹುದು
  • ಅಮೃತಮೃತ್ಯುಂಜಯನನ್ನು ಪ್ರಾರ್ಥನೆ ಮಾಡಿ

ವೃಷಭ

RASHI_BHAVISHA_VRSHABA

  • ಪ್ರಯಾಣ, ಪ್ರವಾಸಗಳು ರದ್ದಾಗಬಹುದು ಇದರಿಂದ ಮಾನಸಿಕ ಬೇಸರ ಕಾಡಬಹುದು
  • ದೈನಂದಿನ ಶಿಸ್ತು ಅಸ್ತವ್ಯಸ್ತವಾಗುತ್ತದೆ ಮನಸ್ಸಿನಲ್ಲಿ ಗಾಬರಿ ಉಂಟಾಗಬಹುದು
  • ಇತರರನ್ನು ಅವಲಂಭಿಸಿ ಕೆಲಸಗಳನ್ನು ಮಾಡಬೇಕಾದ ಸಂದರ್ಭಗಳು ಹೆಚ್ಚಾಗಿ ಕಾಣುತ್ತದೆ
  • ನಿಮ್ಮ ಆಸೆಗಳಿಗೆ ಹಿನ್ನಡೆ ಆಗಬಹುದು
  • ನಿರೀಕ್ಷಿತ ಕೆಲಸದ ವಿರುದ್ಧವಾಗಿ ಅಸಮಾಧಾನವಾಗುತ್ತದೆ
  • ಉತ್ತಮ ಅಧಿಕಾರಿಗಳು ನಿಮ್ಮ ಮೇಲೆ ಸಿಡಿದೇಳಬಹುದು
  • ಅಯ್ಯಪ್ಪ ಸ್ವಾಮಿಯನ್ನು ಪ್ರಾರ್ಥಿಸಿ

ಮಿಥುನ

RASHI_BHAVISHA_MITHUNA

  • ಮನೆಯಲ್ಲಿ ಎಲ್ಲವೂ ಶುಭ ಆದರೂ ಮಾನಸಿಕವಾಗಿ ಸಮಾಧಾನವಿರುವುದಿಲ್ಲ
  • ಆಸ್ತಿ ಖರೀದಿಸಲು ಸಹಾಯಕವಾದ ಹಣ ಕೈ ಸೇರುತ್ತದೆ
  • ಮನಸ್ಸು ದಿನಪೂರ್ತಿ ಅಧೈರ್ಯದಿಂದ ಕೆಲಸ ಮಾಡುವ ಸಾಧ್ಯತೆಯಿದೆ
  • ಕುಟುಂಬದಲ್ಲಿ ಸಂತಸದ ವಾತಾವರಣ ಇದ್ದರೂ ಸಮಾಧಾನವಿರುವುದಿಲ್ಲ
  • ವಿದೇಶದಲ್ಲಿರುವವರಿಂದ ಮನೆಗೆ ಶುಭವಾರ್ತೆ ಬರಬಹುದು
  • ಬೆಲೆ ಬಾಳುವ ವಸ್ತುಗಳ ಖರೀದಿ ಮಾಡುತ್ತೀರಿ
  • ಅನುಭವಿಗಳ ಉಚಿತವಾದ ಸಲಹೆ ಧೈರ್ಯವನ್ನು ತರಬಹುದು
  • ಮಹಾಲಕ್ಷ್ಮೀಯನ್ನು ತಾವರೆ ಹೂವಿನಿಂದ ಅರ್ಚನೆ ಮಾಡಿ

ಕಟಕ

RASHI_BHAVISHA_KATAKA

  • ವಸ್ತುಗಳ ವಿತಕರಿಗೆ ತುಂಬಾ ಲಾಭದ ದಿನ
  • ಮನೆಗೆ ಬಂದ ಅತಿಥಿಗಳಿಂದ ನಿಮ್ಮ ವೈಯಕ್ತಿಕ ಕೆಲಸಗಳಿಗೆ ಅಡ್ಡಿಯಾಗುವ ಸಾಧ್ಯತೆಯಿದೆ
  • ವ್ಯವಹಾರದಲ್ಲಿ ಒಪ್ಪಂದಗಳು ಅಥವಾ ಮಾತುಕತೆಗಳು ನಡೆಯಬಹುದು
  • ಸಂಪಾದನೆ ದೃಷ್ಟಿಯಲ್ಲಿ ತುಂಬಾ ಆತ್ಮಸ್ಥೆರ್ಯ ಇದ್ದರೂ ಖರ್ಚನ್ನು ನೋಡಿ ಧೈರ್ಯಗೆಡಬಾರದು
  • ಖಾಸಗಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಆದಾಯದಲ್ಲಿ ಹೆಚ್ಚಳ ಸಾಧ್ಯತೆ
  • ಮಹಾವಿಷ್ಣುವಿನ ಆರಾಧನೆ ಮಾಡಿ

ಸಿಂಹ 

RASHI_BHAVISHA_SIMHA

  • ಪ್ರೇಮಿಗಳಿಗೆ ಅಡ್ಡಿಯಾಗುವ ದಿನ, ಸವಾಲುಗಳನ್ನು ಎದುರಿಸಬೇಕಾಗುತ್ತದೆ
  • ಕಾರ್ಯಕ್ಷೇತ್ರದಲ್ಲಿ ಸಿಹಿ ಸುದ್ದಿ ಇರುತ್ತದೆ, ಅನುಭವಿಸಲು ಯೋಗವಿಲ್ಲ
  • ಸಾಯಂಕಾಲಕ್ಕೆ ಅದೃಷ್ಟ ವಿರುದ್ಧ ಅನಿಸುತ್ತದೆ
  • ಧನಾತ್ಮಕವಾದ ಚಿಂತನೆಗಳು ನಿಮ್ಮ ಮನಸಿಗೆ ಬರುವುದಿಲ್ಲ  
  • ಆರ್ಥಿಕವಾದ ಸ್ಥಿತಿ ಅಥವಾ ಬಂಧುಗಳ ವಿಶ್ವಾಸ ನಿಮಗೆ ಸಮಾಧಾನ ಕೊಡುವ ದಿನ
  • ಕುಟುಂಬದ ಎಲ್ಲಾ ಸದಸ್ಯರು ಕೂಡ ಸಂತೋಷವಾಗಿರುವ ದಿನ 
  • ಕುಬೇರನನ್ನು ಪ್ರಾರ್ಥಿಸಿ

ಕನ್ಯಾ

RASHI_BHAVISHA_KANYA

  • ಹಣದ ವಿಚಾರದಲ್ಲಿ ಭಿನ್ನಾಭಿಪ್ರಾಯ ಬರಬಹುದು
  • ಹಳೆಯ ಲೆಕ್ಕದಿಂದ ಬೇಸರ ಉಂಟಾಗಲಿದೆ
  • ನಿಮ್ಮ ನಿರ್ದಿಷ್ಟ ಗುರಿಗಳನ್ನು ತಲುಪಲು ಹಲವು ರೀತಿಯಲ್ಲಿ ಪ್ರಯತ್ನಿಸಿ ವಿಫಲರಾಗುತ್ತೀರಿ
  • ದಾಂಪತ್ಯದಲ್ಲಿ ವೈಮನಸ್ಯ ಬರದಂತೆ ನೋಡಿಕೊಳ್ಳಬೇಕು
  • ಸಂಬಂಧಿಕರು  ಮತ್ತು ಸ್ನೇಹಿತರು ದೊಡ್ಡ ಆತಂಕಕ್ಕೆ ಒಳಗಾಗಬಹುದು
  • ಇಡೀ ದಿನವನ್ನು ತುಂಬಾ ತಾಳ್ಮೆಯಿಂದ ಕಳೆಯಬೇಕಾಗುತ್ತದೆ
  • ಈ ದಿನ  ಬರೀ ನಕಾರಾತ್ಮಕ ಚಿಂತನೆಗಳು, ವಿಷಯಗಳು ನಿಮ್ಮ ಮುಂದೆ ಬರುವಂತಹದ್ದು
  • ಅಷ್ಟಲಕ್ಷ್ಮೀಯನ್ನು ಆರಾಧಿಸಿ

ತುಲಾ

RASHI_BHAVISHA_TULA

  • ನಿಮ್ಮ ಸಹಾಯಕ್ಕೆ ಯಾರು ಆಗುವುದಿಲ್ಲ ಎಂಬ ಮನೋಭಾವನೆ ಕಾಡುತ್ತದೆ
  • ಕಷ್ಟ ಪಟ್ಟು ಮಾಡಿದ ಕೆಲಸ, ಹಿಂದೆ ಮಾಡಿದ ಉದ್ಯೋಗ ನೆನಪಾಗಿ
  • ನೋವನ್ನು ಅನುಭವಿಸುತ್ತೀರಿ
  • ಇಂದು ಕುಟುಂಬದಲ್ಲಿ ನಂಬಿಕೆ ಕಡಿಮೆಯಾಗಬಹುದು
  • ಅಲ್ಪ ಸ್ವಲ್ಪ ಕೂಡಿಟ್ಟ ಹಣ ಔಷಧಿಗಳಿಗೆ ಖರ್ಚಾಗಬಹುದು
  • ಹಣದ ಖರ್ಚು, ಅನಾರೋಗ್ಯದಿಂದ ಮನಸ್ಸಿನ ಮೇಲೆ ತುಂಬಾ ಪಡಿಣಾಮ ಬೀರುತ್ತದೆ
  • ಮಹಿಳೆಯರಿಗೆ ಆರೋಗ್ಯದ ಆತಂಕ ಕಾಡುತ್ತೆ ಎಚ್ಚರಿಕೆ
  • ನಿಮ್ಮ ಕುಲದೇವತೆಯನ್ನು ಆರಾಧಿಸಿ

ವೃಶ್ಚಿಕ

RASHI_BHAVISHA_VRUSHCHIKA

  • ಪ್ರೇಮಿಗಳಿಗೆ ತುಂಬಾ ಅಪಾಯಕರವಾದ ದಿನ
  • ಮುರಿದು ಬಿದ್ದ ಸಂಬಂಧಗಳನ್ನು ಸರಿಪಡಿಸಲು ಉತ್ತಮವಾದ ದಿನ
  • ಹೊಸ ಹೊಸ ಕೆಲಸವನ್ನು ಆರಂಭ ಮಾಡುವುದಕ್ಕೆ ಅದ್ಭುತವಾದ ದಿನ
  • ಕೆಲಸ ನಿಮಿತ್ತ  ಅಥವಾ ಹೆಚ್ಚಿನ ವಿದ್ಯಾಭ್ಯಾಸದ ನಿಮಿತ್ತ ಸಂದರ್ಶನಕ್ಕೆ
  • ಭಾಗಿಯಾದರೆ ಯಶಸ್ಸು ನಿಮ್ಮದಾಗಿರುತ್ತೆ
  • ಕೆಲಸವನ್ನು  ಅಲ್ಪ ಎಂದು ಭಾವಿಸದೆ ಶ್ರದ್ಧೆ ಇರಲಿ ತಾತ್ಸಾರ ಬೇಡ
  • ನೀವು ಯೋಚಿಸಿದ ಎಲ್ಲಾ  ಕೆಲಸಗಳೂ ಪೂರ್ಣಗೊಳ್ಳುತ್ತದೆ
  • ಪಾರ್ವತಿ ಪರಮೇಶ್ವರರನ್ನು ಆರಾಧನೆ ಮಾಡಿ

ಧನುಸ್ಸು

RASHI_BHAVISHA_DHANASU

  • ದಾಂಪತ್ಯದಲ್ಲಿ ಕೆಲಸ , ಅಸಮಾಧಾನ ಉಂಟಾಗಬಹುದು
  • ಕುಟುಂಬದಲ್ಲಿ ಹೆಂಗಸರ ಆರೋಗ್ಯ ಹದಗೆಡಬಹುದು ಎಚ್ಚರಿಕೆ
  • ಆತುರದಿಂದ ಯಾವುದೇ ನಿರ್ಧಾರವನ್ನು ಮಾಡಬಾರದು
  • ಹತ್ತಿರದ ಸ್ನೇಹಿತರು ಅಥವಾ ಸಂಬಂಧಿಕರಿಂದ ದ್ರೋಹ ಮಾಡುವ ಸೂಚನೆ ಇದೆ
  • ಅನಗತ್ಯ ವಿಚಾರಗಳಿಗೆ ಜಗಳವಾಗು ವ ಸಂಭವವೂ ಹೆಚ್ಚಾಗಿರುತ್ತದೆ
  • ವಿದ್ಯಾರ್ಥಿಗಳು  ಮತ್ತು ಸರ್ಕಾರಿ ನೌಕರರು ಸವಾಲುಗಳನ್ನು ಎದುರಿಸಬೇಕಾದ ದಿನ
  • ಈಶ್ವರನನ್ನು ಆರಾಧಿಸಿ

ಮಕರ

RASHI_BHAVISHA_MAKARA

  • ಉದ್ಯೋಗಿಗಳಿಗೆ ವ್ಯಾವಹಾರಿಕವಾಗಿ ಲಾಭವಿದೆ ಆದರೆ ಪ್ರಾಮಾಣಿಕವಾಗಿರಬೇಕು
  • ಪ್ರಭಾವಿ ವ್ಯಕ್ತಿಗಳ ಭೇಟಿ ,ಪರಿಚಯ, ಸಂತೋಷವನ್ನುಂಟು ಮಾಡುತ್ತದೆ
  • ಸ್ನೇಹಿತರ ಭೇಟಿ ಮೋಜು,ಮಸ್ತಿ ವ್ಯರ್ಥವಾಗಿ ಹಣ ಖರ್ಚು ಮಾಡುತ್ತೀರಿ
  • ಮಕ್ಕಳಿಗೆ  ಮತ್ತು ವಿದ್ಯಾರ್ಥಿಗಳಿಗೆ ಅಗತ್ಯತೆಯನ್ನ  ಪೂರೈಸುವ ದಿನ
  • ಪ್ರೇಮಿಗಳಿಗೆ ಶುಭದಿನ, ಸದುಪಯೋಗವಾಗಲಿ
  • ಗುರುವಾರ ತಮ್ಮ ಕರ್ತವ್ಯವನ್ನು ಬಹಳ ನಿಷ್ಠೆಯಿಂದ ಮಾಡುವಂತದ್ದು
  • ಆರ್ಥಿಕವಾಗಿ ಅನುಕೂಲವಾಗುವ ದಿನ
  • ಮಹಾವಿಷ್ಣುವನ್ನು ಆರಾಧಿಸಿ

ಕುಂಭ

RASHI_BHAVISHA_KUMBHA

  • ಹಳೆಯ ವಾಹನದಲ್ಲಿ ಪ್ರಯಾಣಿಸುವಾಗ ತುಂಬಾ ಎಚ್ಚರವಹಿಸಿ
  • ಈ ದಿನ ಮನಸ್ಸನ್ನು ನಿಯಂತ್ರಣದಲ್ಲಿಟ್ಟುಕೊಳ್ಳಿ
  • ಹಣಗಳಿಸಬೇಕೆಂಬ ಭರದಲ್ಲಿ ತಪ್ಪು ದಾರಿ ಹಿಡಿಯಬಾರದು
  • ಕೆಲಸಗಳಲ್ಲಿ ಸಣ್ಣ ಪುಟ್ಟ ಕಿರಿಕಿರಿ ಕಾಡಬಹುದು
  • ಈ ದಿನ ಉತ್ತಮವಾಗಿದೆ ಆಂತ ಭಾವಿಸಿ ಕಾರ್ಯಪ್ರವುತ್ತರಾಗಿ ಕೆಲಸದಲ್ಲಿ ಯಶಸ್ಸು ಸಿಗಲಿದೆ
  • ಅಸಂಬದ್ಧ ಚಟುವಟಿಕೆಗಳತ್ತ ಮನಸ್ಸು ಹೋಗಬಹುದು
  • ನಿಮ್ಮ ಇಚ್ಛೆಯಂತೆ ಕೆಲಸ ಮಾಡಿ ಯಶಸ್ಸನ್ನು ಹೊಂದಬಹುದು
  • ನಿಮ್ಮ ಮನಸ್ಸು ಹತೋಟಿಯಲ್ಲಿರಬೇಕು
  • ಸುಬ್ರಹ್ಮಣ್ಯ ದೇವರನ್ನು ಆರಾಧಿಸಿ

ಮೀನ

RASHI_BHAVISHA_MEENA

  • ಆಕಸ್ಮಿಕವಾಗಿ ವಾಹನಕ್ಕೆ ಹಾನಿಯಾಗುವ ಸಾಧ್ಯತೆಗಳಿವೆ ಎಚ್ಚರವಿರಲಿ
  • ಅಂದುಕೊಂಡ ಕಾರ್ಯವನ್ನು ಮೇಲ್ದರ್ಜೆಗೆ ಏರಿಸಿ ಅದಕ್ಕೆ ಆದ್ಯತೆ ಕೊಡುತ್ತೀರಿ
  • ಸ್ನೇಹಿತರ ಮನೆಯಲ್ಲಿ ಮಂಗಳ ಕಾರ್ಯದಲ್ಲಿ ಭಾಗವಹಿಸುವ ಸಾಧ್ಯತೆಗಳಿವೆ
  • ಇಂದು ಮತ್ತು ಮುಂದಿನ ಯೋಚನೆಗಳ ಫಲ ಸಿಗಲಿದೆ
  • ನಿಮಗೆ ಯಶಸ್ಸಿನ ಗುಟ್ಟು ತಿಳಿಯುವಂತ ದಿನ
  • ಆತ್ಮವಿಶ್ವಾಸ ಹೆಚ್ಚಿಸುವ ದಿನವಾಗಿರುತ್ತದೆ
  • ಮನೆಯಲ್ಲಿ ಸಂತೃಪ್ತಿಯ ವಾತಾವರಣವಿರುತ್ತದೆ
  • ಗಣಪತಿಯ ಆರಾಧನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya
Advertisment