/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಶ್ರಾವಣ ಮಾಸ, ಶುಕ್ಲಪಕ್ಷ, ಅಷ್ಟಮಿ ತಿಥಿ, ಸ್ವಾತಿ ನಕ್ಷತ್ರ, ರಾಹುಕಾಲ ಸೋಮವಾರ ಬೆಳಗ್ಗೆ 7.30 ರಿಂದ 9.00 ರವರೆಗೆ ಇರಲಿದೆ.
ಮೇಷ ರಾಶಿ
- ಸರ್ಕಾರದ ಹಣ ನಿಮಗೆ ಸಂದಾಯವಾಗುವ ಯೋಗವಿದೆ
- ಸಂಬಂಧ ಪಡದವರ ವಿಷಯಕ್ಕೆ, ಸಂಬಂಧ ಪಡದ ವಿಚಾರಕ್ಕೆ ಹೋಗಬೇಡಿ
- ಬೇರೆಯವರ ಹಿತಕ್ಕೆ ಸಮಾಜದ ಅಭಿವೃದ್ದಿಗೆ ಅನುಗುಣವಾಗಿ ನಡೆದುಕೊಳ್ಳಬೇಕು
- ಸಾಯಂಕಾಲದ ಹೊತ್ತಿಗೆ ಯಾವುದೋ ಆತಂಕ, ಒಂಟಿಯಾಗಿ ಎದುರಿಸಬೇಕಾಗುತ್ತದೆ
- ವಿಷಯ ಅರ್ಥವಾಗದಿದ್ದವರ ಮುಂದೆ ತತ್ವ ಬೋಧನೆ ವ್ಯರ್ಥವಾಗುತ್ತದೆ
- ಈ ರಾಶಿಯವರಿಗೆ ತಮ್ಮ ಬುದ್ದಿವಂತಿಕೆಯಿಂದಲೇ ಹಿನ್ನಡೆಯಾಗುವ ದಿನ
- ಮೂಲ ದೇವರನ್ನು ಆರಾಧಿಸಿ
ವೃಷಭ
- ತುಂಬಾ ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದರೆ ಸ್ವಲ್ಪ ಎಚ್ಚರಿಕೆವಹಿಸಿ
- ನೀವು ಯಾವುದೇ ತಪ್ಪು ಮಾಡಿಲ್ಲದಿದ್ದರೂ ಒಂಟಿತನ, ಭವಿಷ್ಯದ ಭಯ ನಿಮ್ಮನ್ನು ಕಾಡಬಹುದು
- ಇಂದು ಮನಸ್ಸಿನಲ್ಲಿ ಭಯ ಕಾಡುವಂತಹದ್ದು
- ಅತಿಯಾದ ಕೋಪ ಸಹೋದರರೊಂದಿಗೆ ಕಲಹವಾಗಬಹುದು
- ನಿಮ್ಮ ಕೆಲವು ದಿಟ್ಟ ನಿರ್ಧಾರಗಳು, ರಾಜಕೀಯ ಹೇಳಿಕೆಗಳು ಹಿನ್ನಡೆ ಉಂಟು ಮಾಡಬಹುದು
- ನಿಮ್ಮ ಪಿತ್ರಾರ್ಜಿತ ಆಸ್ತಿಯನ್ನು ಅನುಭವಿಸುವ ಯೋಗ ನಿಮಗಿರುವುದಿಲ್ಲ
- ನೀವು ಸಂಪಾದನೆ ಮಾಡಿರುವ ಆಸ್ತಿ, ಪಿತ್ರಾರ್ಜಿತ ಆಸ್ತಿ ಎಲ್ಲವೂ ಸಿಗಲಿದೆ
- ಅಮೃತ ಮೃತ್ಯುಂಜಯನನ್ನು ಸ್ಮರಣೆ ಮಾಡಿ
ಮಿಥುನ
- ಸ್ವಂತಿಕೆ ಇರಲಿ ಬೇರೆಯವರನ್ನು ಅವಲಂಬಿಸಬೇಡಿ
- ಹಣ ಮುಖ್ಯವೆಂದು ಬೇರೆ ಯಾವುದನ್ನೂ ನೀವು ಗಮನಿಸುವುದಿಲ್ಲ
- ರಾಜಕೀಯ ಭಯ, ರಾಜಕಾರಣಿಗಳ ಭಯ ನಿಮ್ಮನ್ನು ಕಾಡಬಹುದು ಜಾಗೂರಕರಾಗಿರಿ
- ಇಂದು ಅವಮಾನ ಆಗುವ ಸಾಧ್ಯತೆ ಇದೆ
- ನೀವು ಗೌರವಯುತವಾಗಿ ಕೊಟ್ಟಿದ್ದ ಹಣ ನಿಮಗೆ ಹಿಂದಿರುಗಿ ಬರುವ ಸಾಧ್ಯತೆ ಇದೆ
- ಅನುಚಿತವಾದ ಕೆಲಸವನ್ನು ಪ್ರಾರಂಭಿಸಲು ನಿಮ್ಮ ಮನಸ್ಸು ಮುಂದಾಗುತ್ತದೆ
- ಭಗವತಿ ದೇವಿಯನ್ನು ಆರಾಧಿಸಿ
ಕಟಕ
- ಮನಸ್ಸಿನಲ್ಲಿ ಅತೃಪ್ತಿಯ ಭಾವನೆ ಕಾಡಬಹುದು
- ನಿಮಗೆ ತೊಂದರೆ ಮಾಡಿದವರಿಗೆ ನೀವು ಸಹಾಯ ಮಾಡಲು ಮುಂದಾಗುತ್ತೀರಿ
- ಯಾವುದನ್ನು ಧೈರ್ಯವಾಗಿ ಎದುರಿಸುವ ಸಾಮರ್ಥ್ಯ ಇರುವುದಿಲ್ಲ
- ವಿದ್ಯಾರ್ಥಿಗಳಿಗೆ ಸ್ಥಳ ಬದಲಾವಣೆಯಾಗಬಹುದು ಆದರೆ ಇದು ಪ್ರಯೋಜನವಾಗುವುದಿಲ್ಲ
- ಉದ್ಯೋಗದ ಬದಲಾವಣೆಯ ಸೂಚನೆ ಇದೆ
- ಎಲ್ಲಾ ಇದ್ದರೂ ಕೂಡ ನಿಮ್ಮ ಆಲೋಚನೆ ಬೇರೆ ಇರುತ್ತದೆ
- ಮಾರುತಿಯನ್ನು ಆರಾಧಿಸಿ
ಸಿಂಹ
- ರಸ್ತೆ ಬದಿಯ ಸಣ್ಣ ವ್ಯಾಪಾರಿಗಳಿಗೆ ಸ್ವಲ್ಪ ನಷ್ಟವಾಗಬಹುದು
- ಹಿರಿಯರ ಸಲಹೆ ನಿಮಗೆ ಪ್ರಯೋಜನಕಾರಿ ಆದರೆ ನೀವು ಸ್ವೀಕರಿಸುವುದಿಲ್ಲ
- ಆಹಾರ ಮಿತವಾಗಿರಲಿ ಇಲ್ಲದಿದ್ದರೆ ಸ್ವಲ್ಪ ಕಷ್ಟವಿದೆ
- ಇಂದು ತುಂಬಾ ಶ್ರಮದಾಯಕವಾದ ದಿವಸ
- ನಿಮಗೆ ಸಂಬಂಧ ಇಲ್ಲದ ಕೆಲಸಗಳಲ್ಲಿ ಭಾಗಿಯಾಗಿ ಅವಮಾನ ಎದುರಿಸುತ್ತೀರಿ
- ಸಂಘ-ಸಂಸ್ಥೆಗಳು, ರಾಜಕೀಯ ವಿಚಾರವಾಗಿ ಹೇಳಿಕೆ ನೀಡಿ ಸಂಕಷ್ಟಕ್ಕೆ ಒಳಗಾಗುತ್ತೀರಿ
- ಆಂಜನೇಯ ಸ್ವಾಮಿಯನ್ನು ಪ್ರಾರ್ಥಿಸಿ
ಕನ್ಯಾ
- ಸ್ತ್ರೀ ಶಾಪ ನಿಮ್ಮನ್ನು ಕಾಡಬಹುದು
- ಬೇರೆಯವರಿಗೆ ಹಿಂಸೆ ಮಾಡಿ ತಮ್ಮ ಕೆಲಸ ಮಾಡಿಸಿಕೊಳ್ಳಬೇಡಿ
- ಸಂತಾನಾಪೇಕ್ಷಿಗಳಿಗೆ ಅಶುಭವಾದ ದಿನ
- ಸರ್ಕಾರಿ ಉದ್ಯೋಗದಲ್ಲಿ ಲಾಭವಾಗುವ ದಿನ
- ಈ ದಿನ ಹೊಸ ವಸ್ತು, ವಸ್ತ್ರವನ್ನು ಖರೀದಿ ಮಾಡುತ್ತೀರಿ
- ಇಂದು ತುಂಬಾ ಉನ್ನತವಾದ, ಉಪಯುಕ್ತವಾದ ದಿನ
- ಶನಿವಾರ ಸ್ವಾತಿ ನಕ್ಷತ್ರದವರು ಹುಟ್ಟಿದವರಾಗಿದ್ರೆ ತೊಂದರೆಯಿದೆ ಜಾಗ್ರತೆ
- ಸಂತಾನ ಗೋಪಾಲಕೃಷ್ಣನನ್ನು ಪ್ರಾರ್ಥಿಸಿ
ತುಲಾ
- ಯಾರಿಗೂ ಆಶ್ವಾಸನೆಯಾಗಲಿ ಭರವಸೆಯಾಗಲಿ ಕೊಡಬೇಡಿ
- ಸಮಾಜಕ್ಕೆ, ವ್ಯಕ್ತಿಗೆ ಗೌರವ ಬೆಲೆಯನ್ನು ಕೊಡಿ
- ಶ್ವಾಸಕೋಶಕ್ಕೆ ಸಂಬಂಧಪಟ್ಟ ತೊಂದರೆ ಕಾಡಬಹುದು ಎಚ್ಚರಿಕೆವಹಿಸಿ
- ಯಾವುದೇ ವಿಷಯಕ್ಕೆ ಆಸಕ್ತಿ ಇರುವುದಿಲ್ಲ
- ಮನೆಯಲ್ಲಿ ಅತಿಥಿಗಳಿಗೆ ಕಾಯ್ದು ಬೇಸರವಾಗಬಹುದು
- ಸ್ವಾರ್ಥಕ್ಕಾಗಿ ಕೆಲಸ ಮಾಡುತ್ತೀರೆಂಬ ಅಪವಾದ ನಿಮ್ಮ ಮೇಲೆ ಬರಲಿದೆ
- ಶೀತ ಸಂಬಂಧವಾದ ತೊಂದರೆಯಿಂದ ಅಡಚಣೆಯಾಗಬಹುದು
- ಕುಲದೇವತೆಯನ್ನು ಆರಾಧಿಸಿ
ವೃಶ್ಚಿಕ
- ಕಬ್ಬಿಣ ವ್ಯಾಪಾರಿಗಳಿಗೆ ಲಾಭವಿದೆ ಆದರೆ ಕಬ್ಬಿಣದಿಂದಲೇ ತೊಂದರೆನೂ ಇದೆ ಜಾಗ್ರತೆ
- ಕುಟುಂಬದಲ್ಲಿ ನಿತ್ಯದ ಸಮಸ್ಯೆಗಳಿಂದ ಬೇಸರವಾಗುತ್ತದೆ
- ಅಧಿಕಾರಿ ವರ್ಗದವರಿಗೆ ಯಾವುದೇ ರೀತಿ ಸಹಕಾರ ದೊರೆಯದೆ ತೊಂದರೆಯಾಗುತ್ತದೆ
- ಹೊಸ ವ್ಯವಹಾರಕ್ಕೆ ಶುಭ ದಿನವಲ್ಲ
- ಸಮೂಹದಿಂದ ಮಾಡುವ ಕೆಲಸಗಳಿಗೆ ಜಯವಿರುತ್ತದೆ
- ಆತ್ಮ ವಿಶ್ವಾಸವೇ ನಿಮ್ಮ ಪ್ರಗತಿಗೆ ದಾರಿದೀಪವಾಗಿರುತ್ತದೆ
- ಧನ್ವಂತರಿ ದೇವತೆಯನ್ನು ಪ್ರಾರ್ಥಿಸಿ
ಧನುಸ್ಸು
- ವಾಹನ ಖರೀದಿಗೆ ಈ ದಿನ ಚೆನ್ನಾಗಿಲ್ಲ
- ಕಟ್ಟಡ ಸಾಮಾಗ್ರಿಗಳನ್ನು ಮಾರಾಟ ಮಾಡುವವರಿಗೆ ತೊಂದರೆಯಿದೆ ಜಾಗ್ರತೆ
- ಕೆಲಸದಲ್ಲಿ ಮತ್ತು ವಿದ್ಯಾಭ್ಯಾಸದ ಗುಣಮಟ್ಟವನ್ನು ಕಡಿಮೆ ಮಾಡಿಕೊಳ್ಳುವ ದಿನ
- ವೃದ್ದರಿಗೆ,ಕಾಲು ಊನ ಇರುವವರಿಗೆ ಸಹಾಯ ಮಾಡಿ
- ಇಂದು ನೀಲಿ ಬಣ್ಣದ ಬಟ್ಟೆ ಧರಿಸಿ
- ಬಿಡುವಿಲ್ಲದ ಕೆಲಸ ಆದರೆ ಪ್ರಯೋಜನ ಮಾತ್ರ ಇಲ್ಲ
- ಶನೇಶ್ವರನನ್ನು ಪ್ರಾರ್ಥಿಸಿ
ಮಕರ
- ಮಾನಸಿಕವಾಗಿ ಧೈರ್ಯ ತಂದುಕೊಳ್ಳಿ
- ಸಾಯಂಕಾಲದ ಹೊತ್ತಿಗೆ ಅಶುಭ ಸೂಚನೆಯಿದೆ
- ಹಲವು ದಿನಗಳಿಂದ ಇತ್ಯರ್ಥ ಆಗದೆ ಇರುವ ವಿವಾದಗಳು ಈ ದಿನ ಇತ್ಯರ್ಥವಾಗಿ ಶುಭಫಲ ಕೊಡುತ್ತದೆ
- ಇಂದು ಸ್ವಾಭಾವಿಕವಾಗಿರಿ ಶುಭವಿದೆ
- ಕುಟುಂಬದಲ್ಲಿ ಮನಸ್ಸಿಗೆ ಸಮಾಧಾನವಾಗುವ ವಾತಾವರಣ
- ಧಾರ್ಮಿಕ ಕಾರ್ಮಾಚರಣೆಗೆ ಮನಸ್ಸು ಮಾಡುತ್ತೀರಿ
- ದೂರದ ಬಂಧುಗಳು ಕಿರಿಕಿರಿ ಮಾಡಬಹುದು
- ಶ್ರೀರಾಮ ಪರಿವಾರ ದೇವತೆಗಳನ್ನು ಆರಾಧನೆ ಮಾಡಿ
ಕುಂಭ
- ಆಲಸ್ಯ ಬೇಡ, ಇದರಿಂದ ಹಿನ್ನಡೆಯಾಗುವ ಸಾಧ್ಯತೆ
- ವೈದ್ಯಕೀಯ ವಿದ್ಯಾರ್ಥಿಗಳಿಗೆ ಸ್ವಲ್ಪ ಅನುಕೂಲವಾಗುವ ದಿನ
- ಸ್ನೇಹಿತರು ಮತ್ತು ಸಂಬಂಧಿಕರು ನಿಮ್ಮನ್ನು ಅಭಿನಂದಿಸುವ ದಿನ
- ಹಣದ ಲಾಭ ಮತ್ತು ಗೌರವ ಎರಡೂ ನಿಮಗೆ ಏಕಕಾಲದಲ್ಲಿ ಸಿಗಲಿದೆ
- ನೌಕರಿಯಲ್ಲಿ ಅಥವಾ ವೃತ್ತಿಯಲ್ಲಿ ಎಲ್ಲರಿಂದಲೂ ಸಹಕಾರ ಅಥವಾ ಬೆಂಬಲ ಸಿಗಲಿದೆ
- ಲಕ್ಷ್ಮೀ ನರಸಿಂಹ ಸ್ವಾಮಿಯನ್ನು ಆರಾಧಿಸಿ
ಮೀನ
- ರಾಜಕೀಯ ವಿಚಾರದಲ್ಲಿ ಆಸಕ್ತಿಯಿರುವವರಿಗೆ ಸಂತೋಷದ ಸುದ್ದಿ
- ಚಿಕ್ಕ ಮಕ್ಕಳಿಗೆ ಕಣ್ಣಿನ ತೊಂದರೆಯಾಗಬಹುದು ಎಚ್ಚರಿಕೆವಹಿಸಿ
- ಬುದ್ದಿವಂತಿಕೆ ಇರುವವರು ಇಲ್ಲಿ ಕೆಲಸ ಮಾಡಿ ಜಯಿಸಬಹುದು
- ವ್ಯವಹಾರದಲ್ಲಿ ತಪ್ಪು ನಿರ್ಧಾರದಿಂದ ಹಿನ್ನಡೆ ಅನುಭವಿಸುತ್ತೀರಿ
- ನಿಮ್ಮನ್ನು ನೀವು ಸಂಪೂರ್ಣವಾಗಿ ಕೆಲಸಕ್ಕೆ ತೊಡಗಿಸಿಕೊಳ್ಳುತ್ತೀರಿ
- ಕಾನೂನಿನ ವಿಷಯದಲ್ಲಿ ಜಯ ಸಿಗುವ ಸೂಚನೆ
- ಸೂರ್ಯನಾರಾಯಣನನ್ನು ಪ್ರಾರ್ಥಿಸಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ