ವೃತ್ತಿ, ನೌಕರಿ, ವಿದ್ಯಾರ್ಥಿಗಳಿಗೆ ಶುಭ, ಅಪರಿಚಿತರ ನಂಬಬೇಡಿ; ಇಲ್ಲಿದೆ ಇಂದಿನ ಭವಿಷ್ಯ

ಬೆಳಗ್ಗೆ ಎದ್ದ ತಕ್ಷಣ ಇವತ್ತು ಏನು ಮಾಡಬೇಕು? ಏನು ಮಾಡಬಾರದು ಅಂತಾ ಲೆಕ್ಕಾ ಹಾಕ್ತೀವಿ. ಈ ದಿನ ನಿಮಗೆ ಅದೃಷ್ಟ ತಂದುಕೊಡಬಹುದು, ಕೆಲವ್ರಿಗೆ ಒಳ್ಳೆಯದ ದಿನ ಆಲ್ಲದಿರಬಹುದು. ನೀವು ಜ್ಯೋತಿಷಿ ಶಾಸ್ತ್ರ ನಂಬೋರು ಆಗಿದ್ರೆ ಅಂಗೈ ಅಗಲದ ಮೊಬೈಲ್​​ನಲ್ಲೇ ತಿಳಿದುಕೊಳ್ಳಬಹುದು.

author-image
Veenashree Gangani
ಪ್ರೇಮಿಗಳಿಗೆ ಶುಭದಿನ; ಯಾವುದೇ ಕಾರಣಕ್ಕೂ ಆತುರದ ನಿರ್ಧಾರ ಬೇಡ; ಇಲ್ಲಿದೆ ಇಂದಿನ ಭವಿಷ್ಯ
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಶ್ರಾವಣ ಮಾಸ, ಶುಕ್ಲಪಕ್ಷ, ಅಷ್ಟಮಿ ತಿಥಿ, ಸ್ವಾತಿ ನಕ್ಷತ್ರ, ರಾಹುಕಾಲ ಮಂಗಳವಾರ ಮಧ್ಯಾಹ್ನ  3.00 ರಿಂದ 4.30 ರವರೆಗೆ ಇರಲಿದೆ.

ಮೇಷ ರಾಶಿ

RASHI_BHAVISHA_MESHA

  • ಸರ್ಕಾರಿ ಉದ್ಯೋಗಕ್ಕೆ ಪ್ರಯತ್ನಿಸುತ್ತಿರುವವರಿಗೆ ಅನುಕೂಲವಾಗಲಿದೆ
  • ತಂದೆಯವರ ಸಲಹೆಯಂತೆ ನಡೆದುಕೊಳ್ಳಿ ಒಳ್ಳೆಯದು
  • ಪರೀಕ್ಷೆಗಳಲ್ಲಿ ಯಶಸ್ಸು ಕಾಣುವಂತ ದಿನ
  • ಒಳ್ಳೆಯ ಕೆಲಸಗಳನ್ನು ಮುಂದೂಡದೆ ಸರಿಯಾದ ಸಮಯಕ್ಕೆ ಮಾಡಿ
  • ಅಧಿಕಾರಿಗಳೊಂದಿಗೆ ಮಾತುಕತೆ ಮಾಡಬೇಕಾದರೆ ಎಚ್ಚರವಿರಲಿ
  • ಬೇರೆಯವರ ವಸ್ತುಗಳ ಬಗ್ಗೆ ಆಸಕ್ತಿ ತೋರಿಸಬಾರದು
  • ಧನಾತ್ಮಕವಾಗಿ ಚಿಂತನೆಯಲ್ಲಿರಬೇಕು ಅನ್ನೋ ಯೋಚನೆ ನಿಮ್ಮ ಮನಸ್ಸಲ್ಲಿ ಬರಬೇಕು 
  • ಹಿರಿಯರ ಆಶೀರ್ವಾದ ಪಡೆಯಿರಿ   

ವೃಷಭ

RASHI_BHAVISHA_VRSHABA

  • ಇಂಜಿನಿಯರಿಂಗ್ ವಿದ್ಯಾರ್ಥಿಗಳು ಆಲಸ್ಯ ಮಾಡಬಾರದು
  • ನಿಮ್ಮ ಶಿಸ್ತು ಅಥವಾ ಸ್ವಭಾವ ಹೊಸಬರಿಗೆ ಮಾದರಿಯಾಗಬಹುದು
  • ಈ ದಿನ ಮಕ್ಕಳ ಪ್ರಗತಿಯ ಬಗ್ಗೆ ಚಿಂತನೆ ನಡೆಸಿ
  • ವಿವಾಹಿತರು ಜಗಳ ಮಾಡಿಕೊಳ್ಳುವ ಸಾಧ್ಯತೆ ಇದೆ
  • ಇಂದು ಹಿರಿಯರ ಬೆಂಬಲ ದೊರಕುತ್ತದೆ
  • ಪ್ರೇಮಿಗಳಿಗೆ ಅವಮಾನ ಆಗುವುದು, ಬೇರೆಯವರಿಂದ ಬೆದರಿಕೆ ಬರಬಹುದು
  • ಸ್ವಯಂವರ ಪಾರ್ವತಿಯನ್ನು ಪ್ರಾರ್ಥಿಸಿ

ಮಿಥುನ

RASHI_BHAVISHA_MITHUNA

  • ಕೆಟ್ಟ ಕನಸುಗಳು ಈ ದಿನ ನಿಮ್ಮನ್ನು ಕಾಡಬಹುದು
  • ಕುಟುಂಬದ ವಾತಾವರಣ ಶಾಂತಿಯುತವಾಗಿರುತ್ತದೆ
  • ಆಯ್ಕೆಗಳು ಹೆಚ್ಚಾಗಿದ್ದರೆ ಗೊಂದಲ ಉಂಟಾಗಬಹುದು
  • ಆದಾಯವನ್ನ ಗಮನಿಸದೆ ಖರ್ಚಿಗೆ ಮುಂದಾಗಬಾರದು 
  • ಸಾಯಂಕಾಲದ ಹೊತ್ತಿಗೆ ಸಮಾಧಾನದ ಸೂಚನೆ ಇದೆ
  • ಹೆಚ್ಚು ಹಣ ಖರ್ಚಾಗುವ ದಿನ
  • ಕುಬೇರ ಲಕ್ಷ್ಮಿಯನ್ನು ಆರಾಧಿಸಿ

ಕಟಕ

RASHI_BHAVISHA_KATAKA

  • ರಿಯಲ್ ಎಸ್ಟೇಟ್ ಉದ್ಯಮಿಗಳಿಗೆ ಶುಭ ಮತ್ತು ಅದಾಯವಿರುವ ದಿನ
  • ಕುಟುಂಬದಲ್ಲಿ ಗೌರವ ಹೆಚ್ಚಾಗಲಿದೆ
  • ನೀರಿನ ಭಯ ಅಥವಾ ಜಲಕಂಟಕ ಕಾಡಬಹುದು ಗಮನಹರಿಸಿ
  • ಸಣ್ಣ ಪುಟ್ಟ ವಿಚಾರಗಳಿಗೆ ನೀವು ಗೊಂದಲವನ್ನು ಉಂಟು ಮಾಡಿಕೊಳ್ಳುತ್ತೀರಿ 
  • ಸಮಸ್ಯೆಗೆ ಪರಿಹಾರ ದೊರಕುವುದು ತಡವಾಗಬಹುದು
  • ವಾದ-ವಿವಾದವನ್ನ ಮಾಡುತ್ತೀರಿ, ಸಂತೋಷದ ಸಮಯ ಹಾಳಾಗಬಹುದು
  • ನವದಂಪತಿಗಳಿಗೆ ಪ್ರವಾಸದ ಯೋಗವಿರುವ ದಿನ
  • ವರುಣ ದೇವರನ್ನು ಪ್ರಾರ್ಥಿಸಿ

ಸಿಂಹ 

RASHI_BHAVISHA_SIMHA

  • ನೌಕರರು ತಮ್ಮ ಮೇಲಾಧಿಕಾರಿಗಳಿಂದ ಹೊಗಳಿಕೆಯನ್ನ ನಿರೀಕ್ಷಿಸಬಹುದು
  • ಸಂತೋಷವನ್ನು ಸರಿಯಾಗಿ ಅನುಭವಿಸಲು ಆಲಸ್ಯವನ್ನು ದೂರ ಮಾಡಿ
  • ಇಂದಿನ ಕೆಲಸ ಇಂದೇ ಮಾಡಿದರೆ ಒಳ್ಳೆಯದು
  • ತುಂಬಾ ಸೋಮಾರಿತನ, ಆಲಸ್ಯ ಕಾಡಬಹುದು
  • ಅಂದುಕೊಂಡ ಕೆಲಸವನ್ನು ಸಾಧಿಸುವ ದಿನ
  • ವಿದ್ಯಾರ್ಥಿಗಳ ಪರಿಶ್ರಮಕ್ಕೆ ತಕ್ಕ ಪ್ರತಿಫಲ ಸಿಗುವ ಸಾಧ್ಯತೆ 
  • ಮಾರುತಿಯನ್ನು ಆರಾಧನೆ ಮಾಡಿ

ಕನ್ಯಾ

RASHI_BHAVISHA_KANYA

  • ಆಧ್ಯಾತ್ಮಿಕ ಚಿಂತನೆಗಳಿಂದ ಮನಸ್ಸಿಗೆ ಸಮಾಧಾನ ಸಿಗಲಿದೆ
  • ವ್ಯಾಪಾರ ನಿಮಿತ್ತ ಪ್ರವಾಸವನ್ನು ಮಾಡಬಹುದು
  • ಒಡ ಹುಟ್ಟಿದವರೊಡನೆ ಅನ್ಯೋನ್ಯತೆ ಹೆಚ್ಚಾಗುವ ದಿನ
  • ನಾಯಕತ್ವದ ಗುಣ ನಿಮಗೆ  ಗೌರವವನ್ನು ಹೆಚ್ಚಿಸುತ್ತದೆ
  • ವೃತ್ತಿ, ನೌಕರಿ, ವಿದ್ಯಾರ್ಥಿಯರಿಗೆ ವಿದ್ಯಾಕ್ಷೇತ್ರದಲ್ಲಿ  ಶ್ಲಾಘನೆ ಸಿಗಲಿದೆ
  • ಪ್ರತಿಭೆಗೆ ತಕ್ಕ ಪ್ರತಿಫಲ ಸಿಗುವುದರಿಂದ ಸಂತೋಷವಾಗಿ ಈ ದಿನ ಕಳೆಯುತ್ತೀರಿ
  • ಗಣಪತಿಗೆ ಬಿಳಿ ಎಕ್ಕದ ಹೂ ಸಮರ್ಪಣೆ ಮಾಡಿ

ತುಲಾ

RASHI_BHAVISHA_TULA

  • ನಾಟಕ, ಚಲನಚಿತ್ರ ರಂಗದಲ್ಲಿ ಸಾಧನೆ ಮಾಡಿದವರಿಗೆ ಗೌರವ ಸಿಗುವಂತ ದಿನ
  • ಮಾನಸಿಕವಾಗಿ ಹೆಚ್ಚು ಒತ್ತಡವಿರುವ ದಿನ
  • ಮನೆಯ ಅಲಂಕಾರ ಅಥವಾ ನವೀಕರಣಕ್ಕೆ ಹೆಚ್ಚು ಹಣ ಖರ್ಚು ಮಾಡುವ ದಿನವಾಗಿದೆ
  • ಅಗತ್ಯವಾಗಿ ಬೇರೆಯವರ ಕೆಲಸಗಳನ್ನು ನೀವು ಮಾಡಬೇಕಾಗಬಹುದು
  • ಇಂದು ವೃತ್ತಿಯಲ್ಲಿ ಬಡ್ತಿ ಸಿಗಲಿದೆ
  • ಕಲಾ ರಸಿಕರಿಗೆ, ಕಲಾವಿದರಿಗೆ ಉತ್ತಮವಾದ ಸಮಯ
  • ಗಂಭೀರ ಸಮಸ್ಯೆಗಳನ್ನು ಪರಿಹಾರ ಮಾಡಿಕೊಳ್ಳಲು ಹೆಚ್ಚು ಗಮನ ಕೊಡಿ
  • ಚಂಡಿಕೇಶ್ವರನ ಪ್ರಾರ್ಥನೆ ಮಾಡಿ

ವೃಶ್ಚಿಕ

RASHI_BHAVISHA_VRUSHCHIKA

  • ವಿದ್ಯಾರ್ಥಿಗಳಿಗೆ ಬಹಳ ಕಠಿಣ ಪರಿಶ್ರಮದ ದಿನ 
  • ಬೆನ್ನು ನೋವು ಸಮಸ್ಯೆ ಕಾಡಬಹುದು
  • ಇಂದು ದೂರದ ಪ್ರಯಾಣ ಮುಂದೂಡಿದರೆ ಒಳ್ಳೆಯದು 
  • ನಿಮ್ಮ ಹವ್ಯಾಸಕ್ಕೆ ಹೆಚ್ಚು ಆದ್ಯತೆ ನೀಡಬಹುದು
  • ಅಜೀರ್ಣ ಸಮಸ್ಯೆ ತೊಂದರೆಯಾಗಿ ಪರಿಣಮಿಸಬಹುದು
  • ಪ್ರೇಯಸಿ, ಪ್ರಿಯಕರನ ಬಗ್ಗೆ ನಂಬಿಕೆ ಇಡಬೇಕಾದ ದಿನ 
  • ನಿಮ್ಮ ವರ್ತನೆಯಲ್ಲಿ ಬದಲಾವಣೆಯಾಗುವ ಸಾಧ್ಯತೆ
  • ಶಿವಾರಾಧನೆ ಮಾಡಿ

ಧನುಸ್ಸು

RASHI_BHAVISHA_DHANASU

  • ಹಿರಿಯರ ಅಥವಾ ಮೇಲಾಧಿಕಾರಿಗಳ ಕೋಪಕ್ಕೆ ಗುರಿಯಾಗುವ ಸಾಧ್ಯತೆ
  • ಬೇರೆಯವರ ಸಹಾಯವನ್ನು ಇಂದು ನಿರೀಕ್ಷೆ ಮಾಡಬೇಡಿ
  • ಮಾನಸಿಕವಾದ ಭಯ ಕಾಡುವ ಸಾಧ್ಯತೆಯಿದೆ
  • ಸಮಯದ ದುರುಪಯೋಗವಾಗುವ ಸಾಧ್ಯತೆಯಿದೆ ಎಚ್ಚರ
  • ಅಪೂರ್ಣವಾದ ಕಾರ್ಯಗಳ ಬಗ್ಗೆ ಚಿಂತನೆ ಮಾಡಿ ಶುಭವಾಗಬಹುದು
  • ಇಂದು ಹೊಟ್ಟೆಯ ನೋವು, ಉರಿ ಕಾಣಬಹುದು 
  • ಕಮೀಷನ್ ಏಜೆಂಟ್​ಗಳಿಗೆ ಲಾಭದ ದಿನ
  • ಲಕ್ಷ್ಮೀನರಸಿಂಹ ಸ್ವಾಮಿಯನ್ನು ಉಪಾಸನೆ ಮಾಡಿ

ಮಕರ

RASHI_BHAVISHA_MAKARA

  • ಹಲವು ವಿಚಾರಗಳಿಗೆ ಕುಟುಂಬದವರ ಬೆಂಬಲ ಸಿಗುತ್ತದೆ
  • ಹಳೆಯ ಸಮಸ್ಯೆ ಬಗೆಹರಿಯುವ ದಿನ
  • ಹೆಣ್ಣು ಮಕ್ಕಳು ತಮ್ಮ ಆಭರಣಗಳ ಬಗ್ಗೆ ಹೆಚ್ಚು ಗಮನಹರಿಸಿ
  • ಉದ್ಯೋಗ ಬದಲಾವಣೆಗೆ ಅವಕಾಶವಿದೆ
  • ಮಡದಿ-ಮಕ್ಕಳೊಂದಿಗೆ ಸಮಯ ಕಳೆಯಬಹುದು
  • ಸ್ನೇಹಿತರ ಆಕಸ್ಮಿಕ ಭೇಟಿ ಆಶ್ಚರ್ಯ ತರಬಹುದು
  • ಕಾರ್ತವೀಱರ್ಜುನನ್ನು ಸ್ಮರಣೆ ಮಾಡಿ

ಕುಂಭ

RASHI_BHAVISHA_KUMBHA

  • ಈ ದಿನ  ನಿಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡಬೇಡಿ
  • ಇಂದು ಬಿಳಿ ಬಟ್ಟೆ ಧರಿಸಿ ಮನಸ್ಸಿಗೆ ಸಂತೋಷ ಸಿಗುತ್ತದೆ
  • ನಿಮ್ಮ ಮನಸ್ಸಿನ ವ್ಯಾಕುಲತೆ ನಿಯಂತ್ರಣದಲ್ಲಿರಲಿ
  • ಈ ದಿನ ನಿಮ್ಮ ಕಿರಿಯರನ್ನು ಗೌರವಿಸಿ
  • ಇಂದು ನಿಮ್ಮ ಆತ್ಮೀಯರಿಂದ ಬೇಸರವಾಗಬಹುದು
  • ವೈವಾಹಿಕ ವಿಚಾರ ಅಥವಾ ದಾಂಪತ್ಯದಲ್ಲಿ ಭಿನ್ನಾಬಿಪ್ರಾಯ, ಕಲಹ ಸಾಧ್ಯತೆ
  • ಲಕ್ಷ್ಮೀನಾರಾಯಣರ ಪ್ರಾರ್ಥನೆ ಮಾಡಿ

ಮೀನ

RASHI_BHAVISHA_MEENA

  • ಅಪರಿಚಿತರನ್ನು ನಂಬಿದರೆ ದ್ರೋಹವಾಗುವ ಸಾಧ್ಯತೆಯಿದೆ ಎಚ್ಚರಿಕೆ
  • ಇಂದು ವಿಚಾರ ಮಾಡದೇ ಯಾರ ಜೊತೆಗೂ ಸ್ನೇಹ ಮಾಡಬೇಡಿ
  • ಬಂಧುಗಳ ಮಾತಿನಿಂದ ಬೇಸರವಾಗಬಹುದು
  • ಹಣ ಕಳೆದುಕೊಳ್ಳುವ ಅಥವಾ ಕಳ್ಳತನದ ಸೂಚನೆಯಿದೆ ಹೆಚ್ಚು ಗಮನವಿರಲಿ
  • ವಿದೇಶ ಪ್ರವಾಸದಲ್ಲಿ ತೊಂದರೆ ಸಾಧ್ಯತೆ 
  • ಕಾನೂನಿನ ವಿಚಾರಗಳು ಬಹಳ ಜಟಿಲವಾಗಬಹುದು
  • ಆಂಜನೇಯ ಸ್ವಾಮಿಯ ಉಪಾಸನೆ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya
Advertisment