/newsfirstlive-kannada/media/media_files/2025/07/31/rashi_bhavisha-2025-07-31-22-55-03.jpg)
ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.
ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಶ್ರಾವಣ ಮಾಸ, ಶುಕ್ಲಪಕ್ಷ, ಅಷ್ಟಮಿ ತಿಥಿ, ಸ್ವಾತಿ ನಕ್ಷತ್ರ, ರಾಹುಕಾಲ ಶುಕ್ರವಾರ ಬೆಳಗ್ಗೆ 10.30 ರಿಂದ 12.00 ರವರೆಗೆ ಇರಲಿದೆ.
ಮೇಷ ರಾಶಿ
- ನಿಮಗೆ ಗೊತ್ತಿಲ್ಲದ ಭಯ ನಿಮ್ಮನ್ನು ಕಾಡಬಹುದು, ಹೆದರಿಕೆ ಬೇಡಿ
- ಇಂದು ನಿಮ್ಮ ದಿನಚರಿ ಸ್ವಲ್ಪ ಅಸ್ತವ್ಯಸ್ತವಾಗಬಹುದು
- ಈ ದಿನ ವ್ಯರ್ಥವಾಗಿ ಓಡಾಡುವುದನ್ನು ಕಡಿಮೆ ಮಾಡಿ
- ಸಮಯಕ್ಕೆ ಸರಿಯಾಗಿ ನಿಮ್ಮ ಕಾರ್ಯಕ್ಷೇತ್ರ ಅಥವಾ ಕೆಲಸಕ್ಕೆ ಹೋದರೆ ಗೌರವ ಸಿಗುತ್ತದೆ
- ಇಂದು ಯಾವುದೇ ರೀತಿಯ ವಾದ-ವಿವಾದಗಳು ಬೇಡ
- ಇಷ್ಟದೇವತಾರಾಧನೆ ಮಾಡಿ
ವೃಷಭ
- ಯಾವ ಕೆಲಸದಲ್ಲೂ ಆತುರದ ನಿರ್ಧಾರ ಬೇಡ
- ನಿಮ್ಮ ಮಾತಿನಿಂದ ವಿರೋಧ ವ್ಯಕ್ತವಾಗುವ ಸಾಧ್ಯತೆ
- ನಿಮ್ಮ ಯೋಜನೆಗಳ ಬಗ್ಗೆ ಸರಿಯಾಗಿ ಯೋಚಿಸಿ ತೀರ್ಮಾನ ತೆಗೆದುಕೊಳ್ಳಿ
- ವಿದೇಶ ಪ್ರಯಾಣಕ್ಕೆ ಹೊರಟವರಿಗೂ ಸ್ವಲ್ಪ ಅಡ್ಡಿಯಾಗಬಹುದು
- ವಿದೇಶದಿಂದ ಇಲ್ಲಿಗೆ ಬರುವಂತಹ ವ್ಯಕ್ತಿಗಳಿಗೂ ಇದು ಅನ್ವಯವಾಗುತ್ತದೆ
- ನಿಮ್ಮ ಮಕ್ಕಳಿಗೆ ಸರಿಯಾದ ರೀತಿಯಲ್ಲಿ ಸಮಾಧಾನ ಹೇಳಿ
- ಈಶ್ವರನ ಆರಾಧನೆ ಮಾಡಿ
ಮಿಥುನ
- ನಿಮ್ಮ ಸಹೋದ್ಯೋಗಿಗಳು, ಮಿತ್ರರು ನಿಮ್ಮ ಬಗ್ಗೆ ಸಂತೋಷ ವ್ಯಕ್ತಪಡಿಸುವ ಸಾಧ್ಯತೆ
- ನಿಮ್ಮ ಕಾರ್ಯಕ್ಷೇತ್ರದಲ್ಲಿ ಒತ್ತಡ, ಮಾನಸಿಕ ಕಿರಿಕಿರಿ ಸಾಧ್ಯತೆ
- ಕುಟುಂಬ ಸದಸ್ಯರ ಆರೋಗ್ಯದ ಬಗ್ಗೆ ಹೆಚ್ಚು ಗಮನವಿರಲಿ
- ವಾಹನ ಚಾಲನೆ ಜಾಗರೂಕವಾಗಿರಲಿ
- ಇಂದು ಕೆಲಸ ಹೆಚ್ಚಾಗಿ ಸುಸ್ತಾಗುವ ಸಾಧ್ಯತೆ
- ಹನುಮಂತನನ್ನು ಪ್ರಾರ್ಥಿಸಿ
ಕಟಕ
- ಕುಟುಂಬದಲ್ಲಿ ಅಥವಾ ಬಂಧುಗಳಿಗೆ ಆರೋಗ್ಯ ಸರಿ ಇರುವುದಿಲ್ಲ
- ಇಂದು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಸಿಗುವ ಸಾಧ್ಯತೆ
- ನೌಕರರಿಗೆ ಬಡ್ತಿ, ಕೆಲಸಗಾರರಿಗೆ ಸಂಬಳ ಹೆಚ್ಚಾಗುವ ಸಾಧ್ಯತೆ
- ಇಂದು ನಿಮ್ಮ ಮಾತಿನ ಮೇಲೆ ಜಾಗ್ರತೆ ಇರಲಿ
- ಈ ದಿನ ನಿಮ್ಮ ಆದಾಯಕ್ಕಿಂತ ಹೆಚ್ಚು ಖರ್ಚು ಸಾಧ್ಯತೆ
- ಇಂದ್ರಾಣಿ ದೇವಿಯನ್ನು ಪ್ರಾರ್ಥಿಸಿ
ಸಿಂಹ
- ಇಂದು ಕುಟುಂಬದ ಸಮಸ್ಯೆಗಳು ಬಗೆಹರಿಯಬಹುದು
- ಮನಸ್ಸಿಗೆ ಹಿತ ಸಿಗುವ ದಿನವಾಗಿದೆ
- ಗೌಪ್ಯತೆ ಕಾಪಾಡಿಕೊಂಡು ಮಾಡ್ತಿದ್ದ ಕೆಲಸವು ಇಂದು ಫಲ ನೀಡಬಹುದು
- ಧಾರಾಳವಾಗಿ ಹಣ ಖರ್ಚು ಮಾಡಬೇಕಾಗುವ ಸಂದರ್ಭ ಬರಬಹುದು
- ಆರೋಗ್ಯದ ಕಡೆ ನಿರ್ಲಕ್ಷ ಬೇಡ, ಗಮನಹರಿಸಿ
- ತಿರುಪತಿ ವೆಂಕಟೇಶ್ವರನನ್ನು ಪ್ರಾರ್ಥಿಸಿ
ಕನ್ಯಾ
- ಉದ್ಯೋಗ ಮತ್ತು ವಿದ್ಯಾಕ್ಷೇತ್ರದಲ್ಲಿ ಅನೇಕ ದುಷ್ಟರು ಎದುರಾಗಬಹುದು
- ಪ್ರೇಮಿಗಳ ಮಧ್ಯ ಘರ್ಷಣೆ ಉಂಟಾಗಬಹುದು ಗಮನಹರಿಸಿ
- ಇಂದು ಹಣದ ಖರ್ಚನ್ನು ಕಡಿಮೆ ಮಾಡಿ
- ಉಳಿತಾಯದ ಹಣವೇ ಈ ದಿನ ಆದಾಯವಾಗಿ ಪರಿಣಮಿಸುತ್ತದೆ
- ಸಮಾಜದಲ್ಲಿನ ಪ್ರಭಾವಿ ವ್ಯಕ್ತಿಗಳಿಗೆ ಹಿನ್ನಡೆ ಆಗುವ ಸಾಧ್ಯತೆ ಇದೆ
- ಈಶ್ವರ ಆರಾಧನೆ ಮಾಡಿ
ತುಲಾ
- ಇಂದು ಸಾಮಾಜಿಕ ಸ್ಥಾನಮಾನ ಹೆಚ್ಚಾಗುವ ದಿನ
- ನಿಮಗೆ ಜನಬಲ, ಧನಬಲ ಜೊತೆಯಲ್ಲಿದೆ ಅನ್ನೋ ಭಾವನೆ ಗಟ್ಟಿಯಾಗುವ ದಿನ
- ನಿಮ್ಮ ವಿರೋಧಿಗಳು,ಶತ್ರುಗಳು ಸಮಸ್ಯೆಗಳನ್ನು ಸೃಷ್ಟಿಸಿ ಗೊಂದಲಕ್ಕೆ ಸಿಲುಕಿಸಬಹುದು ಜಾಗ್ರತೆ
- ಈ ದಿನ ನಿಮಗೆ ಆತಂಕ ಕಾಡಲಿದೆ
- ವಿದ್ಯುತ್ ಉಪಕರಣದಿಂದ ಹಾನಿ ಉಂಟಾಗಬಹುದು ಎಚ್ಚರಿಕೆ
- ಮುನೇಶ್ವರನನ್ನು ಪ್ರಾರ್ಥಿಸಿ
ವೃಶ್ಚಿಕ
- ಇಂದು ಎಲ್ಲಾ ದೃಷ್ಟಿಯಿಂದ ಅನುಕೂಲಕರವಾದ ಶುಭ ದಿನ
- ನಿಮ್ಮ ಬುದ್ಧಿವಂತಿಕೆಯಿಂದ ಹಣವನ್ನು, ಜನರನ್ನು ಸಂಪಾದಿಸುವ ದಿನ
- ಸಹೋದರರನ್ನು, ಸಂಬಂಧಿಕರನ್ನು ಈ ದಿನ ಸಂತೋಷ ಪಡಿಸುತ್ತೀರಿ
- ಹಳೆಯ ಅನುಭವಗಳು ಇಂದು ಎಲ್ಲಾ ರೀತಿಯಿಂದಲೂ ಉಪಯೋಗಕ್ಕೆ ಬರಬಹುದು
- ಹೊಸ ಕೆಲಸಗಳ ಬಗ್ಗೆ ಆಲೋಚನೆಗಳು ಬರುವ ಸಾಧ್ಯತೆ
- ಬೇರೆಯವರ ಜೊತೆ ವ್ಯವಹರಿಸುವುದು, ಪಾಲುದಾರಿಕೆ ಈ ದಿನ ಬೇಡ
- ಮನಸ್ಸಿನಲ್ಲಿ ಕಳವಳ ಹೊಂದಿ ಕೆಲಸಗಳನ್ನು ಅರ್ಧಕ್ಕೆ ನಿಲ್ಲಿಸಬೇಡಿ
- ದುರ್ಗಾದೇವಿಯನ್ನು ಆರಾಧಿಸಿ
ಧನುಸ್ಸು
- ಇಂದು ಹೊಸತನ್ನು ಕಲಿಯುವ ಮನಸ್ಥಿತಿ ನಿಮ್ಮದಾಗಿರುತ್ತದೆ
- ಕೆಲಸದಲ್ಲಿ ಗೌರವ ಸಿಕ್ಕಿದ್ರೂ ಸಹೋದ್ಯೋಗಿಗಳ ವರ್ತನೆ ನಿಮಗೆ ಬೇಸರ ತರಬಹುದು
- ನಿಮ್ಮ ಗುರಿಯ ಬಗ್ಗೆ ಹೆಚ್ಚಿನ ಗಮನ ಕೊಡಿ
- ನೀವು ಅಂದುಕೊಂಡ ಕೆಲಸವನ್ನು ಸಾಧಿಸಲು ಒಳ್ಳೆಯದಿನ
- ನೀವೂ ಕೂಡ ವೈದ್ಯರ ಸಲಹೆ ಪಡೆಯಬೇಕಾಗಬಹುದು
- ಕುಟುಂಬ ಸದಸ್ಯರ ಆರೋಗ್ಯ ವ್ಯತ್ಯಯವಾಗಬಹುದು ಗಮನವಿರಲಿ
- ವಿದ್ಯಾರ್ಥಿಗಳಿಗೆ ತುಂಬಾ ಉತ್ತಮವಾದ ದಿನ
- ನಿಮ್ಮ ಪ್ರತಿಭೆಗೆ ತಕ್ಕ ಪುರಸ್ಕಾರ, ಮಾನ್ಯತೆ ದೊರೆಯುವ ದಿನವಾಗಿದೆ
- ಉಮಾಮಹೇಶ್ವರರನ್ನು ಪ್ರಾರ್ಥಿಸಿ
ಮಕರ
- ಬೇರೆಯವರ ವಿಷಯಕ್ಕೆ ತಲೆಕೆಡಿಸಿಕೊಳ್ಳದೆ ದೂರವಿದ್ದರೆ ಒಳ್ಳೆಯದು
- ಇಂದು ಸ್ತ್ರೀಯರಿಗೆ ಕಾಲಿನ ಚರ್ಮವ್ಯಾಧಿ ಕಾಡಬಹುದು ಜಾಗ್ರತೆವಹಿಸಿ
- ವಿವಾದಾತ್ಮಕ ವಿಚಾರಗಳಲ್ಲಿ ತೊಡಗಿಸಿಕೊಳ್ಳಬೇಡಿ ಎಚ್ಚರವಿರಲಿ
- ಪತಿ-ಪತ್ನಿಯರ ಸಂಬಂಧ ಪ್ರಭಾವ ಬೀರುವಂತದ್ದು
- ಪ್ರೇಮಿಗಳು ಹಿಂದಿನ ದ್ವೇಷ ಬಿಟ್ಟು ಅನ್ಯೋನ್ಯತೆ ಕಾಪಾಡಿಕೊಂಡರೆ ಒಳಿತು
- ಸೂರ್ಯನಾರಾಯಣನನ್ನು ಪ್ರಾರ್ಥಿಸಿ
ಕುಂಭ
- ಈ ದಿನ ಕೆಲಸದಲ್ಲಿ ವಿಶೇಷವಾಗಿ ಆದಾಯ ಹೆಚ್ಚಾಗುವ ಸಾಧ್ಯತೆ ಇದೆ
- ಇಂದು ಸರ್ಕಾರಿ ಕೆಲಸ ತುಂಬಾ ವಿಳಂಬವಾಗುವ ಸಾಧ್ಯತೆ ಇದೆ ಯೋಚಿಸಿ
- ಜನರು ನಿಮಗೆ ಯಾವ ಕೆಲಸವನ್ನು ಮಾಡಿಕೊಡಬಾರದು ಅನ್ನೋ ಮನಸ್ಥಿತಿಗೆ ತಲಪುತ್ತಾರೆ
- ನಿಮ್ಮ ಕೆಲಸವನ್ನು ಜಾಗರೂಕತೆಯಿಂದ ಮಾಡಿ
- ಇಂದು ಒಳ್ಳೆಯ ಆಹಾರ ಸ್ವೀಕರಿಸುತ್ತೀರಿ
- ಮನಸ್ಸಿಗೆ ಸಂತೋಷ ಸಿಗುವಂತಹ ದಿನವಾಗಿರುತ್ತದೆ
- ಕೆಲವೊಂದು ಕೆಲಸ ವಿಳಂಬವಾಗಿ ಮನೆಯವರಿಗೆಲ್ಲಾ ಆತಂಕ ಉಂಟಾಗುವ ದಿನ
- ವಿನಾಕಾರಣ ಹಣವನ್ನು ದುಂದುವೆಚ್ಚ ಮಾಡಬೇಡಿ
- ಇಂದು ಹಣವನ್ನು ಎಷ್ಟು ಉಳಿಸಿದರೂ ಅಷ್ಟು ಒಳ್ಳೆಯದು
- ಶಿವಮಂತ್ರ ಪಠನೆ ಮಾಡಿ
ಮೀನ
- ಹಣಕಾಸಿನ ವ್ಯವಸ್ಥೆ ಬಹಳ ಅನುಕೂಲಕರವಾಗಿರುವ ದಿನವಾಗಿದೆ
- ಹಣವನ್ನು ಅವಲಂಬಿಸಿ ಮಾಡುವ ಯೋಜನೆಗಳು ಇಂದು ಒಳಿತಾಗುತ್ತದೆ
- ವ್ಯಾಪಾರ- ವ್ಯವಹಾರದ ದೃಷ್ಟಿಯಿಂದ ಪ್ರಯಾಣ ಮಾಡಲು ಶುಭದಿನ
- ಸಾಂಸಾರಿಕ ಅನುಕೂಲಗಳು ಹೆಚ್ಚಾಗುವ ದಿನ
- ಇಂದು ನಿಮಗೆ ಸಂಪೂರ್ಣವಾಗಿ ಶುಭದಿನ
- ಬಾಕಿ ಬರಬೇಕಾದ ಹಣವು ನಿಮ್ಮ ಕೈಸೇರುವ ಸಾಧ್ಯತೆ ಇದೆ
- ಕುಲದೇವತಾ ಆರಾಧನೆ ಮಾಡಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ