ಆತ್ಮೀಯರಿಂದ ಮನಸ್ತಾಪ, ಅನಗತ್ಯ ಖರ್ಚಿನಿಂದ ಬೇಸರ; ಇಲ್ಲಿದೆ ಇಂದಿನ ಭವಿಷ್ಯ

ಬೆಳಗ್ಗೆ ಎದ್ದ ತಕ್ಷಣ ಇವತ್ತು ಏನು ಮಾಡಬೇಕು? ಏನು ಮಾಡಬಾರದು ಅಂತಾ ಲೆಕ್ಕಾ ಹಾಕ್ತೀವಿ. ಈ ದಿನ ನಿಮಗೆ ಅದೃಷ್ಟ ತಂದುಕೊಡಬಹುದು, ಕೆಲವ್ರಿಗೆ ಒಳ್ಳೆಯದ ದಿನ ಆಲ್ಲದಿರಬಹುದು. ನೀವು ಜ್ಯೋತಿಷಿ ಶಾಸ್ತ್ರ ನಂಬೋರು ಆಗಿದ್ರೆ ಅಂಗೈ ಅಗಲದ ಮೊಬೈಲ್​​ನಲ್ಲೇ ತಿಳಿದುಕೊಳ್ಳಬಹುದು.

author-image
Veenashree Gangani
RASHI_BHAVISHA
Advertisment

ಉಜ್ವಲ ಬದುಕಿಗೆ ಒಂದು ಕನಸು.. ಆ ಸುಂದರ ಕನಸಿಗೆ ಉತ್ತಮ ಭವಿಷ್ಯ ಇರಬೇಕು. ರಾಶಿ ಯಾವುದಾಗಿದ್ದರೇನು? ಕನಸು ನನಸು ಮಾಡಿಕೊಂಡು ಬದುಕಿನ ಸಾರ್ಥಕತೆಯ ಫಲ ಅನುಭವಿಸಬೇಕು ಅಂದರೆ ಅದಕ್ಕೆ ಪರಿಶ್ರಮ ಬೇಕೇಬೇಕು. ಈ ಪರಿಶ್ರಮಕ್ಕೆ ಒಂದಷ್ಟು ಒಳ್ಳೆಯ ಕೆಲಸಗಳ ಅನಿವಾರ್ಯತೆ ಬೆಸೆದುಕೊಂಡು ಬರುತ್ತವೆ. ವ್ಯಾಪಾರ, ಉದ್ಯೋಗ, ಹಣ, ಮದುವೆ, ಸಮಾರಂಭ, ಪ್ರವಾಸ, ಪ್ರೀತಿ, ಪ್ರೇಮ ಸೇರಿದಂತೆ ಸುಂದರ ಕನಸಿನ ಸಾಕಾರಕ್ಕಾಗಿ ಅದೆಷ್ಟೋ ಮಂದಿ ರಾಶಿ ಭವಿಷ್ಯ ನೋಡುವ ವಾಡಿಕೆ ಇದೆ. ಆ ನಿಮ್ಮ ಭವಿಷ್ಯದ ರಾಶಿಫಲ ಇಲ್ಲಿದೆ. ಖ್ಯಾತ ತಾಳೇಗರಿ ತಜ್ಞರು ಹಾಗೂ ಜ್ಯೋತಿಷಿಯಾಗಿರುವ ಡಾ.ಬೆಳವಾಡಿ ಹರೀಶ ಭಟ್ಟರು ನೀಡಿರುವ ನಿಮ್ಮ ರಾಶಿ ಭವಿಷ್ಯ ಈ ಕೆಳಗಿನಂತಿದೆ.

ಶ್ರೀ ವಿಶ್ವಾವಸುನಾಮ ಸಂವತ್ಸರ, ದಕ್ಷಿಣಾಯಣ, ವರುಷ ಋತು, ಶ್ರಾವಣ ಮಾಸ, ಶುಕ್ಲಪಕ್ಷ, ಅಷ್ಟಮಿ ತಿಥಿ, ಸ್ವಾತಿ ನಕ್ಷತ್ರ, ರಾಹುಕಾಲ ಶನಿವಾರ  ಬೆಳಗ್ಗೆ  9.00 ರಿಂದ 10.30 ರವರೆಗೆ ಇರಲಿದೆ.

ಮೇಷ ರಾಶಿ

RASHI_BHAVISHA_MESHA

  • ಆತ್ಮೀಯರೊಂದಿಗೆ ಮನಸ್ತಾಪ, ಬೇಸರ ಆಗಬಹುದು
  • ದೈನಂದಿನ ಕಾರ್ಯಗಳಿಗೆ ತೊಂದರೆಯಾಗದಂತೆ ಸ್ನೇಹಿತರ ಸಹಾಯ ಸಿಗಲಿದೆ
  • ಇಂದು ಮೌನಕ್ಕೆ ಶರಣು ಹೋಗಿ 
  • ಹೆಚ್ಚಿನ ಖರ್ಚಿಗೆ ಕಡಿವಾಣ ಹಾಕಿ 
  • ನಿಮ್ಮ ಆರೋಗ್ಯದ ಬಗ್ಗೆ ಕಾಳಜಿ ಇರಲಿ 
  • ಅನಗತ್ಯ ಕೆಲಸಗಳು ನಿಮಗೆ ಮಾರಕವಾಗಬಹುದು 
  • ಬಾಲಗಣಪತಿಯನ್ನು ಆರಾಧಿಸಿ 

ವೃಷಭ

RASHI_BHAVISHA_VRSHABA

  • ತಂದೆಯವರಿಗೆ ಹೃದಯಕ್ಕೆ ಸಂಬಂಧಿಸಿದ ತೊಂದರೆ ಕಾಣಬಹುದು 
  • ನಿಮ್ಮ ದೇಹದಲ್ಲಿ ಕಾಂತಿ ಹೆಚ್ಚಾಗಬಹುದು 
  • ಸ್ನೇಹಿತರ ಮನೆಯಿಂದ ಅಶುಭ ವಾರ್ತೆ 
  • ನಿಮ್ಮ ಮುಗ್ಧ ಮನಸ್ಸು ಬೇರೆಯವರಿಗೆ ಸಹಾಯವಾಗಬಹುದು 
  • ಕುಟುಂಬದವರ ಹೊಗಳಿಕೆಯಿಂದ ನಿಮಗೆ ಸ್ಫೂರ್ತಿ
  • ಸೂರ್ಯನಾರಾಯಣನನ್ನು ಪ್ರಾರ್ಥಿಸಿ 

ಮಿಥುನ

RASHI_BHAVISHA_MITHUNA

  • ನಿಮ್ಮ ಸ್ನೇಹಿತರ ವೈಯಕ್ತಿಕ ಸಮಸ್ಯೆ ನಿಮಗೆ ತೊಂದರೆ ಆಗಬಹುದು 
  • ಸಂಜೆಗೆ ಹೆಚ್ಚು ಹಣ ಖರ್ಚಾಗುವುದರಿಂದ ಆತಂಕ ತರಬಹುದು 
  • ಮನೆಯವರನ್ನು ಸಮಾಧಾನ ಮಾಡುವುದರಲ್ಲಿ ದಿನ ಕಳೆಯುತ್ತದೆ
  • ಕಾರ್ಯಕ್ಷೇತ್ರದಲ್ಲಿ ಉತ್ತಮ ಸ್ಪಂದನೆ ಸಿಗಲಿದೆ
  • ಮನೆಯವರಿಗೆ ಕೊಟ್ಟ ಮಾತು ಉಳಿಸಿಕೊಳ್ಳಲಾಗದೆ ಜಗಳ 
  • ಈ ದಿನದ ಆರಂಭ ಸಂತೋಷವಾಗಿರುತ್ತದೆ
  • ಆಂಜನೇಯ ಸ್ವಾಮಿಯ ಆರಾಧನೆ ಮಾಡಿ

ಕಟಕ

RASHI_BHAVISHA_KATAKA

  • ಅನಗತ್ಯ ಖರ್ಚಿನಿಂದ ಬೇಸರ ಆಗಲಿದೆ
  • ಮಹಿಳೆಯರಿಗೆ ಹೊಟ್ಟೆ ನೋವಿನ ಸಮಸ್ಯೆ ಉಂಟಾಗಬಹುದು
  • ಹಿರಿಯರಿಗೆ ಶಾರೀರಿಕ ಸಮಸ್ಯೆ ಉಂಟಾಗಬಹುದು
  • ಆಸ್ತಿ ವಿಚಾರಕ್ಕೆ ವಾದ-ವಿವಾದ ಆಗಬಹುದು
  • ಆಧುನಿಕ ಪ್ರಪಂಚಕ್ಕೆ ಅವಲಂಬಿತವಾಗಿರುವವರಿಗೆ ಸಮಸ್ಯೆಯಾಗಬಹುದು
  • ನಿಮ್ಮ ವ್ಯಕ್ತಿತ್ವದ ಬಗ್ಗೆ ಜನಾಕ್ರೋಶ 
  • ಭೂವರಾಹ ಸ್ವಾಮಿಯನ್ನು ಪ್ರಾರ್ಥಿಸಿ  

ಸಿಂಹ 

RASHI_BHAVISHA_SIMHA

  • ನಕಾರಾತ್ಮಕ, ಅಶುಭ ಸುದ್ದಿಯಿಂದ ಬೇಸರ ಆಗಲಿದೆ
  • ಹಣದ ವಿಚಾರದಲ್ಲಿ ಕಿರಿಕಿರಿಯಾಗಬಹುದು
  • ಪತಿ-ಪತ್ನಿಯರಲ್ಲಿ ಅನ್ಯೋನ್ಯತೆ ಇದೆ
  • ಈ ದಿನ ಸಂಬಂಧಿಕರು ಆತಂಕದಲ್ಲಿರಬಹುದು 
  • ನೀವು ತುಂಬಾ ತಾಳ್ಮೆಯಿಂದ ಇರಬೇಕಾದ ದಿನ 
  • ಪ್ರಯತ್ನಪೂರ್ವಕ ಕೆಲಸಗಳು ಆಗಲಿದೆ
  • ಚೌಡೇಶ್ವರಿಯನ್ನು ಪೂಜಿಸಿ 

ಕನ್ಯಾ

RASHI_BHAVISHA_KANYA

  • ಮನೆಗೆ ಅತಿಥಿಗಳ ಆಗಮನದಿಂದ ಸಂತೋಷ 
  • ಇಂದು ವ್ಯಾವಹಾರಿಕ ಪ್ರಗತಿ ಹೊಂದುತ್ತೀರಿ
  • ಖಾಸಗಿ ಉದ್ಯೋಗಿಗಳಲ್ಲಿ ಆದಾಯ ಹೆಚ್ಚಾಗಲಿದೆ
  • ಆತ್ಮವಿಶ್ವಾಸ ಹೆಚ್ಚಾಗಬಹುದಾದ ದಿನ 
  • ಕುಟುಂಬದವರೊಂದಿಗೆ ವಿಹಾರ ಮಾಡುತ್ತೀರಿ
  • ಮಾರ್ಕೆಟಿಂಗ್ ಕೆಲಸದಲ್ಲಿ ಶುಭ ಲಾಭವಿದೆ
  • ಮಹಾಲಕ್ಷ್ಮೀಯನ್ನು ಪ್ರಾರ್ಥಿಸಿ 

ತುಲಾ

RASHI_BHAVISHA_TULA

  • ಕುಟುಂಬದಲ್ಲಿ ಸಂತೋಷದ ವಾತಾವರಣ
  • ಪ್ರೀತಿ - ಪ್ರೇಮಗಳಲ್ಲಿ ತಪ್ಪು ತಿಳುವಳಿಕೆ ಬೇಡ
  • ಧನಾತ್ಮಕ ಶಕ್ತಿ ನಿಮ್ಮದಾಗುವ ದಿನ 
  • ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅಸಮಾಧಾನ 
  • ಕಾರ್ಯಕ್ಷೇತ್ರದಲ್ಲಿ ಅತೀವ ಶ್ರಮ ಪಡುತ್ತೀರಿ
  • ಆರ್ಥಿಕ ಅಭಿವೃದ್ದಿ ಸಮಾಧಾನ ಸಿಗಲಿದೆ
  • ಮಂಗಳ ಗ್ರಹವನ್ನು ಆರಾಧನೆ ಮಾಡಿ

ವೃಶ್ಚಿಕ

RASHI_BHAVISHA_VRUSHCHIKA

  • ಅಣ್ಣ , ತಮ್ಮಂದಿರೊಂದಿಗೆ ಕಲಹ ಉಂಟಾಗಬಹುದು
  • ಇಂದು ಪ್ರೇಮಿಗಳಿಗೆ ಶುಭದಿನ 
  • ಜವಾಬ್ದಾರಿಯಿಂದ ವರ್ತಿಸದಿದ್ದರೆ ನಷ್ಟ ಆಗಲಿದೆ
  • ಹಳೆಯ ಸಂಬಂಧಗಳು ಪುನಃ ಒಂದಾಗಬಹುದು 
  • ಈ ದಿನ ಸಂದರ್ಶನಗಳಲ್ಲಿ ಯಶಸ್ಸಿದೆ
  • ಹೊಸ ಗುರಿಗಳಿಗೆ ಅದ್ಧುತವಾದ ದಿನ 
  • ಇಷ್ಟದೇವತಾನುಗ್ರಹ ಪಡೆಯಿರಿ 

ಧನುಸ್ಸು

RASHI_BHAVISHA_DHANASU

  • ನಿಮ್ಮಷ್ಟಕ್ಕೆ ನೀವು ಸಂತೋಷವಾಗಿರಲು ಆಗದ ದಿನ 
  • ಈ ದಿನ ಹೆಚ್ಚು ಹಣ ಹೂಡಿಕೆ ಬೇಡ 
  • ಹೆಂಡತಿಯ ಮನೆ ಕಡೆಯವರಿಂದ ಕಲಹ ಉಂಟಾಗಬಹುದು
  • ನಿಮ್ಮ ಸ್ವಭಾವದಿಂದ ಸ್ನೇಹಿತರಿಗೆ ಬೇಸರ ಆಗಬಹುದು
  • ದುರಾಸೆ ಇಲ್ಲದ ಕೆಲಸಗಳಿಂದ ಸಂತೋಷ 
  • ಹಿಂದೆ ಹೂಡಿಕೆ ಮಾಡಿದ್ದ ಆಸ್ತಿಯ ವಿಚಾರದಲ್ಲಿ ಗೊಂದಲ 
  • ಸುಬ್ರಹ್ಮಣ್ಯ ಸ್ವಾಮಿಯನ್ನು ಪ್ರಾರ್ಥಿಸಿ 

ಮಕರ

RASHI_BHAVISHA_MAKARA

  • ವಿದೇಶದಲ್ಲಿರುವವರಿಗೆ ಶುಭ ಸುದ್ದಿ, ಆತಂಕವೂ ಇರಲಿದೆ
  • ಕುಟುಂಬದಲ್ಲಿ ಸಂತಸದ ವಾತಾವರಣ
  • ಬೆಲೆ ಬಾಳುವ ವಸ್ತು ಖರೀದಿಯಲ್ಲಿ ಮೋಸ 
  • ಅನಗತ್ಯ ಖರ್ಚಿನಿಂದ ಕೋಪ, ಅನಾನುಕೂಲ ವಾತಾವರಣ 
  • ಅನುಭವಿಗಳ ಮಾತು ವ್ಯರ್ಥ ಆಗಬಹುದು
  • ಇಂದು ಹೊಸ ಆಸ್ತಿ ಖರೀದಿಸಬಹುದು 
  • ತಾಪಸ ಮನ್ಯುವನ್ನು ಆರಾಧಿಸಿ 

ಕುಂಭ

RASHI_BHAVISHA_KUMBHA

  • ಮೇಲಾಧಿಕಾರಿಗಳಿಂದ ಅನುಕೂಲ ಆಗಲಿದೆ
  • ವಿದೇಶ ಪ್ರಯಾಣಕ್ಕೆ ಹೋಗುವ ಅವಕಾಶಗಳಿವೆ
  • ಬೇರೆಯವರನ್ನು ಪೂರ್ಣ ಆವಲಂಬಿಸಬೇಡಿ
  • ಅಂದುಕೊಂಡ ಕೆಲಸಗಳು ಪೂರ್ಣ ಆಗಲಿದೆ
  • ಉದ್ಯೋಗ ಸ್ಥಳದಲ್ಲಿ ವೈಮನಸ್ಯ ಆಗಬಹುದು
  • ನಿರೀಕ್ಷಿತ ಕೆಲಸಗಳಾಗುವ ಸಾಧ್ಯತೆ 
  • ಧನ್ವಂತರಿಯನ್ನು ಪ್ರಾರ್ಥಿಸಿ 

ಮೀನ

RASHI_BHAVISHA_MEENA

  • ಮನಸ್ಸಿನಲ್ಲಿ ಋಣಾತ್ಮಕ ಯೋಚನೆ ಬೇಡ 
  • ತಾಯಿಯವರಿಗೆ ದಿಢೀರ್ ಅನಾರೋಗ್ಯ ಕಾಡಬಹುದು
  • ಸರ್ಕಾರಿ ಕೆಲಸಗಳಲ್ಲಿ ನಿಧಾನಗತಿ, ಬೇಸರ ಉಂಟಾಗಬಹುದು
  • ಸಣ್ಣ ವಿಚಾರಗಳಿಗೆ ಕೋಪ ಮಾಡಿಕೊಳ್ಳಬೇಡಿ
  • ಕಾಲು ನೋವಿನ ಸಮಸ್ಯೆಯಾಗಬಹುದು
  • ಗೋಮಾತೆಯನ್ನು ಪೂಜಿಸಿ    

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Rashi Bhavishya
Advertisment