/newsfirstlive-kannada/media/media_files/2025/11/17/housing-board-auction-sites-2025-11-17-14-28-49.jpg)
ಗೃಹ ಮಂಡಳಿಯಿಂದ ಸೈಟ್ ಗಳ ಹರಾಜು
ಕರ್ನಾಟಕ ಗೃಹ ಮಂಡಳಿಯಿಂದ ಸೈಟ್​ ಗಳ ಹರಾಜು ಹಾಕಲಾಗುತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಅಭಿವೃದ್ಧಿಪಡಿಸಿದ ಸೈಟ್​ ಗಳ ಹರಾಜು ಹಾಕಲಾಗುತ್ತಿದೆ.
ವಿವಿಧ ಬಡಾವಣೆಗಳಲ್ಲಿ ಲಭ್ಯವಿರುವ ನಿವೇಶನಗಳ ಇ-ಹರಾಜು ಮೂಲಕ ಮಾರಾಟ ಮಾಡುತ್ತಿದೆ. ಮನೆ, ಮೂಲೆ ಮತ್ತು ಮಧ್ಯಂತರ ನಿವೇಶನಗಳ ಹರಾಜು ಮೂಲಕ ಮಾರಾಟ ಮಾಡಲಾಗುತ್ತಿದೆ. ವಾಸಯೋಗ್ಯ ಮತ್ತು ವಾಣಿಜ್ಯ ಸೈಟ್​ಗಳನ್ನು ಕೂಡ ಹರಾಜು ಮಾಡಲಾಗುತ್ತಿದೆ. ಇಂದು ಬೆಳಿಗ್ಗೆ 11 ಗಂಟೆಯಿಂದ ಇ-ಹರಾಜು ನೊಂದಣಿ ಆರಂಭವಾಗಿದೆ.
ಇಂದಿನಿಂದ ನವೆಂಬರ್​​ 29ರ ಮಧ್ಯಾಹ್ನ 12ರವೆಗೆ ನೋಂದಣಿಗೆ ಅವಕಾಶ ಇದೆ.
ಇ-ಹರಾಜಿನಲ್ಲಿ ಭಾಗವಹಿಸಲು http://kppp.karnataka.gov.in ನಲ್ಲಿ ಲಾಗಿನ್​​ ಆಗ ನೋಂದಣಿ ಮಾಡಲು ಅವಕಾಶ ಇದೆ.
/filters:format(webp)/newsfirstlive-kannada/media/media_files/2025/11/17/housing-board-auction-sites02-2025-11-17-14-31-05.jpg)
ಬೆಂಗಳೂರು ನಗರದ ಸೂರ್ಯ ನಗರದ 3ನೇ ಹಂತದ ಮೂಲೆ ನಿವೇಶನಗಳನ್ನು ಕೂಡ ಹರಾಜು ಹಾಕಲಾಗುತ್ತಿದೆ. ತುಮಕೂರು ನಗರದ ಗೂಳೂರು ಬಡಾವಣೆಯ ನಿವೇಶನಗಳನ್ನು ಹರಾಜು ಹಾಕಲಾಗುತ್ತಿದೆ. ತುಮಕೂರಿನ ಪಾವಗಡ ಬಡಾವಣೆಯ ಮೂಲೆ ನಿವೇಶನಗಳನ್ನು ಹರಾಜು ಹಾಕಲಾಗುತ್ತಿದೆ. ಮಂಗಳೂರಿನ ಅಮ್ಟಾಡಿ ಬಟ್ವಾಳ ಬಡಾವಣೆಯ ಮೂಲೆ ನಿವೇಶನಗಳನ್ನು ಹರಾಜು ಹಾಕಲಾಗುತ್ತಿದೆ. ಕೊಪ್ಪಳ ಡಿ.ಸಿ.ಆಫೀಸ್ ಹಿಂಭಾಗದ ಬಡಾವಣೆಯ ಮೂಲೆ ನಿವೇಶನಗಳು, ಕಲ್ಬುರ್ಗಿ ಜಿಲ್ಲೆಯ ಕಾಳಗನೂರು ಕುಸನೂರು ಬಡಾವಣೆಯ ನಿವೇಶನಗಳು, ಧಾರವಾಡ ಜಿಲ್ಲೆಯ ಅಮರಗೊಳು 2ನೇ ಹಂತದ ನಿವೇಶನಗಳು, ಧಾರವಾಡ ಜಿಲ್ಲೆಯ ಕುಂದವಾಡ ಬಡಾವಣೆಯ ಮೂಲೆ ನಿವೇಶನಗಳು, ದಾವಣಗೆರೆ ಜಿಲ್ಲೆಯ ಹರಿಹರ- ಅಮರಾವತಿ ಬಡಾವಣೆ ಮೂಲೆ ನಿವೇಶನಗಳು, ಚಿತ್ರದುರ್ಗ ಜಿಲ್ಲೆಯ ಕೆಳಗೋಟೆ ಬಡಾವಣೆಯ ಮೂಲೆ ನಿವೇಶನ, ಮಧ್ಯಂತರ ನಿವೇಶನಗಳು, ಚಿತ್ರದುರ್ಗ ಜಿಲ್ಲೆಯ ಹಿರಿಯೂರು- ಯರದಕಟ್ಟೆ ಬಡಾವಣೆ ಮೂಲೆ ನಿವೇಶನಗಳು, ಚಿತ್ರದುರ್ಗ ಜಿಲ್ಲೆಯ ಮದಕರಿಪುರ ಬಡಾವಣೆಯ ಮೂಲೆ ನಿವೇಶನ, ಬೀದರ್ ಜಿಲ್ಲೆಯ ಚಿಟ್ಟಾ ಬಡಾವಣೆಯ ಮೂಲೆ ನಿವೇಶನಗಳು, ಬಳ್ಳಾರಿ ಜಿಲ್ಲೆಯ ಅಂದ್ರಾಳು ಬಡಾವಣೆಯ ಮೂಲೆ ನಿವೇಶನಗಳು, ಬಾಗಲಕೋಟೆ ಜಿಲ್ಲೆಯ ಸಿಕ್ಕೇರಿ ಬಡಾವಣೆಯ ಮೂಲೆ ನಿವೇಶನಗಳನ್ನು ಹರಾಜು ಹಾಕಲಾಗುತ್ತಿದೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us