/newsfirstlive-kannada/media/media_files/2025/11/01/karnataka_ratna-2025-11-01-08-10-26.jpg)
ಬೆಂಗಳೂರು: ಇಂದು ರಾಜ್ಯದಲ್ಲಿ ಕನ್ನಡ ರಾಜ್ಯೋತ್ಸವದ ಸಂಭ್ರಮ. ಎಲ್ಲೆಲ್ಲೂ ಕನ್ನಡ ಡಿಂಡಿಮವ ಮೇಳೈಸುತ್ತಿದೆ. ಈ ವರ್ಷ 70ನೇ ಕನ್ನಡ ರಾಜ್ಯೋತ್ಸವನ್ನ ಆಚರಿಸುತ್ತಿದ್ದು, ವಿಶೇಷ ಅಂದರೆ ಸರ್ಕಾರ ಈಗಾಗಲೇ ಡಾ. ವಿಷ್ಣುವರ್ಧನ್ ಹಾಗೂ ಬಿ ಸರೋಜಾದೇವಿ ಅವರಿಗೆ ‘ಕರ್ನಾಟಕ ರತ್ನ’ (ಮರಣೋತ್ತರ) ಪ್ರಶಸ್ತಿ ಘೋಷಣೆ ಮಾಡಿದೆ. ಸದ್ಯ ಪ್ರಶಸ್ತಿ ಯಾವಾಗ, ಎಲ್ಲಿ ಪ್ರದಾನ ಮಾಡಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ಧರಿಸಬೇಕಿದೆ.
/filters:format(webp)/newsfirstlive-kannada/media/media_files/2025/10/03/puneeth_rajkumar-2025-10-03-22-23-56.jpg)
‘ಕರ್ನಾಟಕ ರತ್ನ’ ಪ್ರಶಸ್ತಿಯು ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ ಆಗಿದೆ. ಕರ್ನಾಟಕ ರತ್ನ ಪ್ರಶಸ್ತಿಯ ಪದಕ ಪೂರ್ಣ ಬೆಳ್ಳಿಯಲ್ಲಿ ಇರುತ್ತದೆ. 50 ಗ್ರಾಂ ಚಿನ್ನದ ಪದಕ ಕೂಡ ಇರಲಿದೆ. ಈ ನೆನಪಿನ ಕಾಣಿಕೆಯ ಜೊತೆಗೆ ಶಾಲನ್ನು ಹೊದಿಸಿ ಗೌರವಿಸಲಾಗುತ್ತದೆ. ಇಲ್ಲಿಯವರೆಗೆ ‘ಕರ್ನಾಟಕ ರತ್ನ' ಪ್ರಶಸ್ತಿಯನ್ನ ಹತ್ತು ಸಾಧಕರಿಗೆ ನೀಡಿ ಗೌರವಿಸಲಾಗಿದೆ.
1991ರಲ್ಲಿ ಮೊದಲ ಬಾರಿಗೆ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಲು ನಿರ್ಧರಿಸಲಾಯಿತು. ಈ ಪ್ರಶಸ್ತಿಯನ್ನು ಯಾವುದೇ ಕ್ಷೇತ್ರದಲ್ಲಿ ಅಸಾಧಾರಣ ಕೊಡುಗೆ ನೀಡಿದ ಗಣ್ಯರಿಗೆ ನೀಡಲಾಗುತ್ತದೆ. ಕರ್ನಾಟಕ ರತ್ನ ಪ್ರಶಸ್ತಿಯನ್ನು 1992ರಲ್ಲಿ ಮೊದಲ ಬಾರಿಗೆ ಸಾಹಿತ್ಯ ಕ್ಷೇತ್ರದಲ್ಲಿ ಕೊಡುಗೆ ನೀಡಿದ್ದ ಮಹಾಕವಿ ಕುವೆಂಪು ಹಾಗೂ ಸಿನಿಮಾ ಕ್ಷೇತ್ರದಲ್ಲಿ ಕೊಡುಗೆ ನೀಡಿದ್ದ ವರನಟ ಡಾ.ರಾಜು ಕುಮಾರ್​ಗೆ ಅವರಿಗೆ ನೀಡಲಾಗಿತ್ತು.
1999ರಲ್ಲಿ ರಾಜಕೀಯ ಕ್ಷೇತ್ರದಿಂದ ಎಸ್ ನಿಜಲಿಂಗಪ್ಪ ಅವರಿಗೆ ನೀಡಿದ್ರೆ, 2000 ಸಾಲಿನಲ್ಲಿ ವಿಜ್ಞಾನ ಕ್ಷೇತ್ರದಲ್ಲಿ ಅಪಾರ ಸಾಧನೆ ಮಾಡಿದ ಸಿ.ಎನ್.ಆರ್.ರಾವ್​ಗೆ ಕೊಡಲಾಯಿತು. ಅದೇ ರೀತಿ 2001ರಲ್ಲಿ ವೈದ್ಯಕೀಯ ಕ್ಷೇತ್ರಕ್ಕೆ ಸೇವೆ ಸಲ್ಲಿಸಿರುವ ದೇವಿಪ್ರಸಾದ್ ಶೆಟ್ಟಿಗೆ ನೀಡಿದ್ರೆ, ಸಂಗೀತ ಕ್ಷೇತ್ರದಲ್ಲಿ ಸಾಧನೆ ಮಾಡಿದ ಪಂಡಿತ್ ಭೀಮಸೇನ ಜೋಷಿ ಅವರಿಗೆ 2005ರಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಹಾಗೇ 2007ರಲ್ಲಿ ಶ್ರೀ ಶಿವಕುಮಾರಸ್ವಾಮಿಗಳಿಗೆ, 2008ರಲ್ಲಿ ಸಾಹಿತ್ಯ ಕ್ಷೇತ್ರದ ಸೇವೆ ಸಲ್ಲಿಸಿದ ದೇ. ಜವರೇಗೌಡರಿಗೆ, 2009ರಲ್ಲಿ ಡಿ. ವೀರೇಂದ್ರ ಹೆಗ್ಗಡೆ ಅವರಿಗೆ ಸಾಮಾಜಿಕ ಸೇವೆಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಕೊನೆಯದಾಗಿ ಸಿನಿಮಾ ಹಾಗೂ ಸಾಮಾಜಿಕ ಸೇವೆಗಳಲ್ಲಿ ಕೊಡುಗೆ ನೀಡಿರುವ ಹಿನ್ನೆಲೆಯಲ್ಲಿ ಪುನೀತ್ ರಾಜ್​ಕುಮಾರ್ ಅವರಿಗೆ ನೀಡಲಾಗಿದೆ.
ಇದನ್ನೂ ಓದಿ:ಕನ್ನಡದ ಶುಭ ಸುದ್ದಿ.. ನವೆಂಬರ್​ ತಿಂಗಳ ಪೂರ್ತಿ ಪುಸ್ತಕಗಳ ಮೇಲೆ ಶೇ 50 ರಷ್ಟು ರಿಯಾಯತಿ.. ಎಲ್ಲಿ?
/filters:format(webp)/newsfirstlive-kannada/media/media_files/2025/11/01/vishnuvardhan-2025-11-01-08-11-52.jpg)
11ನೇಯವರಾಗಿ ಸಾಹಸ ಸಿಂಹ ವಿಷ್ಣುವರ್ಧನ್ ಅವರಿಗೆ ಹಾಗೂ 12ನೇಯವರಾಗಿ ದಿವಂಗತ ನಟಿ ಬಿ ಸರೋಜಾದೇವಿ ಈ ಇಬ್ಬರಿಗೂ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ಘೋಷಣೆ ಮಾಡಲಾಗಿದೆ. ಪ್ರಶಸ್ತಿಯನ್ನು ಯಾವಾಗ, ಎಲ್ಲಿ ಪ್ರದಾನ ಮಾಡಬೇಕು ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ಧರಿಸಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us