/newsfirstlive-kannada/media/media_files/2025/12/19/krishna-byregowda-and-r-ashoka-fight-2025-12-19-16-03-57.jpg)
ಕಂದಾಯ ಸಚಿವ ಕೃಷ್ಣ ಭೈರೇಗೌಡರಿಂದ ಆರೋಪಕ್ಕೆ ಉತ್ತರ
ರಾಜ್ಯದ ಕಂದಾಯ ಸಚಿವ ಕೃಷ್ಣಭೈರೇಗೌಡ ಹಾಗೂ ಕುಟುಂಬದವರು ಕೋಲಾರ ಜಿಲ್ಲೆಯ ನರಸಾಪುರ ಹೋಬಳಿಯ ಗರುಡಪಾಳ್ಯದಲ್ಲಿ ಕೆರೆಯ ಜಾಗವನ್ನು ಒತ್ತುವರಿ ಮಾಡಿದ್ದಾರೆ. ಗೋಮಾಳ ಜಾಗವನ್ನು ಆಕ್ರಮಿಸಿಕೊಂಡಿದ್ದಾರೆ ಎಂದು ಮೊನ್ನೆ ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಪರಿಷತ್‌ನ ಹೊರಗೆ ಆರೋಪ ಮಾಡಿದ್ದರು. ಈ ಆರೋಪದ ಬಗ್ಗೆ ಚರ್ಚೆಗೆ ಅವಕಾಶ ನೀಡುವಂತೆ ವಿಧಾನ ಪರಿಷತ್ ಹಾಗೂ ವಿಧಾನಸಭೆಯಲ್ಲಿ ಬಿಜೆಪಿ ಸದಸ್ಯರು ಒತ್ತಾಯಿಸಿದ್ದರು. ಈ ಆರೋಪದ ಬಗ್ಗೆ ಇಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಅವರೇ ವಿಧಾನಸಭೆಯಲ್ಲಿ ಉತ್ತರ ನೀಡಿದ್ದಾರೆ. ತಮ್ಮ ಕುಟುಂಬ ಯಾವುದೇ ಸರ್ಕಾರಿ ಜಮೀನು ಒತ್ತುವರಿ ಮಾಡಿಲ್ಲ, ಗೋಮಾಳ ಜಾಗ, ಸರ್ಕಾರಿ ಕೆರೆಯ ಜಾಗವನ್ನು ಆಕ್ರಮಿಸಿಕೊಂಡಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಸಾರ್ವಜನಿಕ ಜೀವನದಲ್ಲಿ ಈ ರೀತಿಯ ಆರೋಪಗಳು ಬರುತ್ತಿರುತ್ತೆ. ಇದನ್ನು ನಾವು ಮೆಟ್ಟಿ ನಿಲ್ಲಬೇಕು . ನನ್ನ ಹೆಸರು ಪ್ರಸ್ತಾಪ ಮಾಡಿ ಚರ್ಚೆ ಆಗಿದೆ. 1920 ರ ನಂತರ ಈ ಆಸ್ತಿ ರಾಜ ಮನೆತನಕ್ಕೆ ಸೇರಿದ್ದು . 1953 ನೇ ವರ್ಷದಲ್ಲಿ ನಮ್ಮ ತಾತ ಚೌಡಯ್ಯ ಗೌಡಗೆ ಲೀಸ್ ಗೆ ಕೊಟ್ರು, ಇದು ಶ್ರೀಕಂಠದತ್ತ ಒಡೆಯರ್ ಟ್ರಸ್ಟ್ ಗೆ ಸೇರಿರುತ್ತೆ. ಅಂದಿನಿಂದ ಇಂದಿನವರೆಗೂ ಈ ಜಮೀನು ನಾವು ಮಾಡುತ್ತಿದ್ದೇವೆ. 1959 ರಲ್ಲಿ ಅಭಿವುಲ್ಲಾ ಖಾನ್ ಗೆ ಮಾರಾಟ ಮಾಡಿದ್ದರು. ಚೌಡಯ್ಯಗೌಡ ಡಿ.ಸಿ. ಮುಂದೆ ದೂರು ದಾಖಲು ಮಾಡಿದರು.
ಚೌಡಯ್ಯಗೌಡರು ಮೈಸೂರು ಮೇಲ್ಮನವಿ ನ್ಯಾಯಧೀಕರಣದ ಮುಂದೆ ಅಪೀಲು ಸಲ್ಲಿಕೆ ಮಾಡಿದ್ದರು. ಜಿಲ್ಲಾಧಿಕಾರಿ ಆದೇಶದ ವಿರುದ್ಧದ ಅಪೀಲು ಮಾಡಿದ್ದರು. ನ್ಯಾಯಾಧೀಕರಣದ ಮುಂದೆ ಕೆಲ ದಿನಗಳ ಬಳಿಕ ಕಾಂಪ್ರೋಮೈಸ್ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ನ್ಯಾಯಾಲಯದ ಹೊರಗೆ ಮಾತುಕತೆ ಮೂಲಕ ಬಗೆಹರಿಸಿಕೊಂಡಿದ್ದೇವೆಂದು ಹೇಳುತ್ತಾರೆ. ಹೀಗಾಗಿ ಅರ್ಜಿಯನ್ನ ನ್ಯಾಯಾಧೀಕರಣ ವಜಾ ಮಾಡಿದೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ವಿಧಾನಸಭೆಯಲ್ಲಿ ಹೇಳಿದ್ದಾರೆ.
/filters:format(webp)/newsfirstlive-kannada/media/media_files/2025/10/25/krishna-byregowda-02-2025-10-25-18-04-52.jpg)
ಇನ್ನೂ ಪ್ರತಿಪಕ್ಷಗಳಿಗೆ ವಿಧಾನಸಭೆಯಲ್ಲಿ ಸಚಿವ ಕೃಷ್ಣ ಭೈರೇಗೌಡ ಸವಾಲು ಹಾಕಿದ್ದಾರೆ.
ಇದು ಮೈಸೂರು ಮಹಾರಾಜರು ಮಾರಿರುವ ಜಮೀನು . ಕೆರೆ ಜಾಗ ಒತ್ತುವರಿಯ ಬಗ್ಗೆ ಆರೋಪ ಮಾಡಿದ್ದಾರೆ. ನಮ್ಮ ಗ್ರಾಮದಲ್ಲಿ ಎರಡು ಕೆರೆಗಳು ಇವೆ. ಎರಡು ಕೆರೆಗಳು ಕೂಡ ಅಸ್ತಿತ್ವದಲ್ಲಿವೆ. ಯಾರು ಬೇಕಾದರೂ ಅಲ್ಲಿ ಹೋಗಿ ಅಳತೆ ಮಾಡಬಹುದು. ವಿರೋಧ ಪಕ್ಷವರು ಮೀಡಿಯಾ ಜೊತೆಗೆ ಭೇಟಿ ನೀಡಲಿ. ಕೆರೆಯನ್ನೇ ಒಂದೇ ಒಂದು ಇಂಚು ಕಡಿಮೆ ಆಗಿದೆಯಾ ಅಂತಾ ನೋಡಲಿ. 1953 ನೇ ಇಸುವಿಯಲ್ಲಿ ನಮ್ಮ ಫ್ಯಾಮಿಲಿಗೆ ಬಂದಿದೆ. ಈ ಜಮೀನಿನ ಬಗ್ಗೆ ನನಗೆ ಆಸಕ್ತಿನೇ ಇರಲಿಲ್ಲ . ಆದರೆ ಕೆಲವರು ನನ್ನ ಜಮೀನಿನ ಬಗ್ಗೆ ರೀಸರ್ಚ್ ಮಾಡಿದ್ದಾರೆ ಎಂದು ಕಂದಾಯ ಸಚಿವ ಕೃಷ್ಣ ಭೈರೇಗೌಡ ಹೇಳಿದ್ದಾರೆ.
ಇನ್ನೂ ಕಂದಾಯ ಸಚಿವ ಕೃಷ್ಣ ಭೈರೇಗೌಡ ಮಾತಿಗೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಿಧಾನಸಭೆಯಲ್ಲಿ ಪ್ರತಿಕ್ರಿಯಿಸಿದ್ದಾರೆ. ಕಂದಾಯ ಸಚಿವರಾಗಿ ತಪ್ಪೇನು ಮಾಡಿಲ್ಲ ಅಂದರೆ ತನಿಖೆ ಮಾಡಿಸಲಿ. ತನಿಖೆಯಲ್ಲಿ ಬೇಕಾದರೇ, ಕ್ಲೀನ್ ಚಿಟ್ ಸಿಗಲಿ. ತನಿಖೆಗೆ ಒಪ್ಪಿಸಲಿ. ಸತ್ಯಾ ಸತ್ಯತೆ ಹೊರಗೆ ಬರಲಿ, ನಾವು ಯಾಕೇ ಅಲ್ಲಿ ಹೋಗೋಣ. ನೀವು ಬರೋದು ಬೇಡ . ನಾವು ಹೋಗೋದು ಬೇಡ . ಈ ಬಗ್ಗೆ ತನಿಖೆಗೆ ಕೊಡಿ ಎಂದು ಆರ್. ಅಶೋಕ್ ಆಗ್ರಹಿಸಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us