/newsfirstlive-kannada/media/media_files/2025/12/08/couple-died-in-road-accident-2025-12-08-13-11-34.jpg)
ಮದುವೆ ಹೊಸ್ತಿಲಲ್ಲಿ ಇದ್ದ ಜೋಡಿ ರಸ್ತೆ ಅಪಘಾತದಲ್ಲಿ ದಾರುಣ ಸಾವು!
ಮದುವೆ ಹೊಸ್ತಿಲಲ್ಲಿ ಇದ್ದ ವಧು-ವರ ಅಪಘಾತದಲ್ಲಿ ದುರಂತ ಸಾವನ್ನಪ್ಪಿದ್ದಾರೆ. ನೂರಾರು ಕನಸು ಕಂಡಿದ್ದ ಜೋಡಿಗೆ ಯಮನಂತೆ ಬಂದು ಲಾರಿ ಪ್ರಾಣತೆಗೆದಿದೆ. ಕೊಪ್ಪಳ ಜಿಲ್ಲೆಯ ಗಂಗಾವತಿಯ ದಾಸನಾಳ ಸಮೀಪದ ನಡೆದ ಅಪಘಾತದಲ್ಲಿ ವಧು- ವರ ಜೋಡಿ ಸಾವನ್ನಪ್ಪಿದ್ದಾರೆ. ದಾಸನಾಳ ಸಮೀಪ ಬಂಡ್ರಾಳ - ವೆಂಕಟಗಿರಿ ಕ್ರಾಸ್ ಬಳಿ ಜೋಡಿ ಸಾವನ್ನಪ್ಪಿದ್ದಾರೆ. ಬೈಕ್ ನಲ್ಲಿ ಹೋಗುತ್ತಿದ್ದವರಿಗೆ ಲಾರಿ ಡಿಕ್ಕಿ ಹೊಡೆದು ವಧು- ವರ ಸಾವನ್ನಪ್ಪಿದ್ದಾರೆ.
ಕಲ್ಲು ಹೊತ್ತು ಸಾಗುತ್ತಿದ್ದ ಲಾರಿ ಡಿಕ್ಕಿ ಹೊಡೆದು ಸ್ಥಳದಲ್ಲಿಯೇ ಜೋಡಿ ಸಾವನ್ನಪ್ಪಿದ್ದಾರೆ. ಇರಕಲ್ ಗಡದ ಕರಿಯಪ್ಪ (26), ಕವಿತಾ ಪವಾಡೆಪ್ಪ ಮಡಿವಾಳ(19) ಮೃತ ಜೋಡಿ. ಕವಿತಾ, ಕಾರಟಗಿ ತಾಲೂಕಿನ ಮುಷ್ಠೂರು ಗ್ರಾಮದ ನಿವಾಸಿಯಾಗಿದ್ದರು. ಮುಷ್ಠೂರು ಗ್ರಾಮಕ್ಕೆ ಕವಿತಾಳನ್ನು ಬಿಟ್ಟು ಬರಲು ಕರಿಯಪ್ಪ ಬೈಕ್ ನಲ್ಲಿ ಹೋಗುತ್ತಿದ್ದರು. ಮದುವೆ ಹೊಸ್ತಿಲಲ್ಲಿ ಇದ್ದ ವಧು- ವರ ಸಾವನ್ನಪ್ಪಿದ್ದರಿಂದ ಎರಡು ಗ್ರಾಮಗಳಲ್ಲಿ ಶೋಕ ಮಡುಗಟ್ಟಿದೆ. ಎರಡು ಕುಟುಂಬ ಹಾಗೂ ಇಡೀ ಗ್ರಾಮದಲ್ಲಿ ನೀರವಮೌನ ಆವರಿಸಿದೆ. ಡಿಸೆಂಬರ್ 20-21 ರಂದು ಮದುವೆ ನಿಶ್ಚಯವಾಗಿತ್ತು . ಮದುವೆಯ ಮುನ್ನವೇ ಯುವ ಜೋಡಿ ಸಾವನ್ನಪ್ಪಿದ್ದಾರೆ. ಕೊಪ್ಪಳ ಜಿಲ್ಲೆಯ ಮುನಿರಾಬಾದ್ ನ ಪಂಪಾವನದಲ್ಲಿ ಪ್ರೀ ವೆಡ್ಡಿಂಗ್ ಶೂಟಿಂಗ್ ಮುಗಿಸಿದ್ದ ಜೋಡಿ ವಾಪಸ್ ಬರುವಾಗ ಅಪಘಾತ ಸಂಭವಿಸಿದೆ. ಗಂಗಾವತಿ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us