/newsfirstlive-kannada/media/media_files/2026/01/06/koppal-gavi-siddeshwara-jaatre-8-2026-01-06-10-56-21.jpg)
/newsfirstlive-kannada/media/media_files/2026/01/06/koppal-gavi-siddeshwara-jaatre-16-2026-01-06-10-57-14.jpg)
ಲಕ್ಷಾಂತರ ಭಕ್ತರು
ಕೊಪ್ಪಳದ ಆರಾಧ್ಯದೈವ.. ಗವಿಸಿದ್ದೇಶ್ವರ ಮಠದ ಜಾತ್ರೆಯ ಮಹಾರಥೋತ್ಸಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ. ಜಾತಿ-ಭೇದ ಭಾವವಿಲ್ಲದೇ ಲಕ್ಷಾಂತರ ಭಕ್ತರು ಗವಿಸಿದ್ದೇಶ್ವರ ಸ್ವಾಮಿ ಜಾತ್ರೆಯಲ್ಲಿ ಭಾಗಿಯಾಗಿ ಕೃತಾರ್ತರಾದ್ರು.
/newsfirstlive-kannada/media/media_files/2026/01/06/koppal-gavi-siddeshwara-jaatre-15-2026-01-06-10-58-26.jpg)
ಪರಿವರ್ತನೆ ತಂದ ಯಾತ್ರೆ
ಇದು ಬರೀ ಜಾತ್ರೆಯಲ್ಲ ಜಾಗೃತಿ ಜಾಥಾಗಳ ಮೂಲಕ ಜನರ ಬದುಕಿನಲ್ಲಿ ಪರಿವರ್ತನೆ ತಂದ ಯಾತ್ರೆ ಅನ್ನೋದೇ ಇದರ ವಿಶೇಷ.
/newsfirstlive-kannada/media/media_files/2026/01/06/koppal-gavi-siddeshwara-jaatre-14-2026-01-06-10-58-57.jpg)
ದಕ್ಷಿಣ ಭಾರತದ ಮಹಾಕುಂಭಮೇಳ
ಎಲ್ಲಿ ನೋಡಿದ್ರೂ ಜನವೋ ಜನ.. ಸೂಜಿಮನೆಯಷ್ಟು ಜಾಗವಿಲ್ಲದಷ್ಟು ಕಿಕ್ಕಿರಿದು ಸೇರಿರುವ ಭಕ್ತರು.. ಭಕ್ತಿ ಭಾವದಿಂದ ಜರುಗಿದ ಮಹಾರಥೋತ್ಸವ.. ಇದು ದಕ್ಷಿಣ ಭಾರತದ ಮಹಾಕುಂಭಮೇಳವೆಂದೇ ಪ್ರಸಿದ್ಧಿ ಪಡೆದಿರುವ ಗವಿಸಿದ್ದೇಶ್ವರ ಅಜ್ಜನ ಜಾತ್ರಾ ಮಹೋತ್ಸವ.
/newsfirstlive-kannada/media/media_files/2026/01/06/koppal-gavi-siddeshwara-jaatre-13-2026-01-06-10-59-21.jpg)
ಮೇಘಾಲಯ ರಾಜ್ಯಪಾಲರಿಂದ ಚಾಲನೆ
ಗವಿಮಠ.. ಕಲ್ಯಾಣ ಕರ್ನಾಟಕದ ಬೆಳಕಿನ ಕಿರಣ.. ಧರ್ಮರಕ್ಷಣೆ ಜೊತೆ ಶಿಕ್ಷಣ, ಅನ್ನದಾಸೋಹವನ್ನ ನೀಡ್ತಿರೋ ಕಲ್ಯಾಣ ಮಠ.. ಇಂತಹ ಶತಮಾನಗಳ ಇತಿಹಾಸ ಹೊಂದಿರೋ ಕೊಪ್ಪಳದ ಗವಿಸಿದ್ದೇಶ್ವರ ಅಜ್ಜನ ಜಾತ್ರಾ ಮಹೋತ್ಸವಕ್ಕೆ ಅದ್ಧೂರಿ ಚಾಲನೆ ಸಿಕ್ಕಿದೆ.
/newsfirstlive-kannada/media/media_files/2026/01/06/koppal-gavi-siddeshwara-jaatre-12-2026-01-06-10-59-43.jpg)
ರಥೋತ್ಸವಕ್ಕೆ ಚಾಲನೆ
ಮೇಘಾಲಯ ರಾಜ್ಯದ ಹಾಲಿ ರಾಜ್ಯಪಾಲ ಕರ್ನಾಟಕದವರೇ ಆಗಿರೋ ಸಿ.ಹೆಚ್.ವಿಜಯ್ ಶಂಕರ್, ವಿಶೇಷ ಅತಿಥಿಗಳಾಗಿ ಬಂದು ರಥೋತ್ಸವಕ್ಕೆ ಚಾಲನೆ ಕೊಟ್ಟಿದ್ದಾರೆ. ಮಹಾರಥೋತ್ಸವನ್ನು ಭಕ್ತರು ಎಳೆಯೋ ಮೂಲಕ ಜಾತ್ರಾ ಮಹೋತ್ಸವ ಆರಂಭಗೊಂಡಿದೆ.
/newsfirstlive-kannada/media/media_files/2026/01/06/koppal-gavi-siddeshwara-jaatre-10-2026-01-06-11-00-30.jpg)
ವಿಕಲಚೇತನರ ಸಕಲಚೇತನರನ್ನಾಗಿಸುವ ಕಾರ್ಯಕ್ರಮ
ಇನ್ನು ಮನುಕುಲದ ಉದ್ಧಾರಕ್ಕೆ ಪೂರಕವಾಗುವ ಯೋಜನೆಗಳನ್ನ ಅನುಷ್ಠಾನಕ್ಕೆ ತರೋ ಯಾತ್ರೆಯೇ ಈ ಜಾತ್ರೆ.. ಈ ವರ್ಷವೂ ಜಾಗೃತಿಯ ಅಭಿಯಾನ ಹಮ್ಮಿಕೊಂಡಿದ್ದು ವಿಕಲಚೇತನರನ್ನು ಸಕಲಚೇತನರನ್ನಾಗಿಸುವ ಕಾರ್ಯಕ್ರಮವೇ ಶ್ರೀಮಠದ ಸಂಕಲ್ಪವಾಗಿದೆ.
/newsfirstlive-kannada/media/media_files/2026/01/06/koppal-gavi-siddeshwara-jaatre-5-2026-01-06-11-01-04.jpg)
200 ಬಾಣಸಿಗರು ತಯಾರಿ
ಜಾತ್ರೆಗೆ ಲಕ್ಷಾಂತರ ಭಕ್ತರು ಆಗಮಿಸಿದ್ರು. ಭಕ್ತರಿಗಾಗಿ ಮಹಾಪ್ರಸಾದವೇ ಸಿದ್ಧವಾಗ್ತಿದೆ.. ರೊಟ್ಟಿ, ಹೋಳಿಗೆ, ಚಟ್ನಿ, 20 ಲಕ್ಷಕ್ಕೂ ಹೆಚ್ಚು ಸಜ್ಜೆ, 50 ಕ್ವಿಂಟಲ್ ಶೇಂಗಾ ಹೋಳಿಗೆಯನ್ನ ಈಗಾಗಲೇ ಭಕ್ತರು ಮಠಕ್ಕೆ ಸಲ್ಲಿಸಿದ್ದಾರೆ. 16 ಲಕ್ಷ ಜಿಲೇಬಿಯನ್ನ 200 ಬಾಣಸಿಗರು ತಯಾರಿ ಕೂಡ ಮಾಡ್ತಿದ್ದಾರೆ.
/newsfirstlive-kannada/media/media_files/2026/01/06/koppal-gavi-siddeshwara-jaatre-4-2026-01-06-11-01-29.jpg)
ಮಲ್ಲಗಂಬ ಪ್ರದರ್ಶನ
ಒಂದ್ಕಡೆ ಭಕ್ತರು ಗದ್ದುಗೆ ದರ್ಶನ ಪಡೆದು ಕೈಲಾದ ಕಾಣಿಕೆ ಅರ್ಪಿಸಿದ್ರು.. ಮತ್ತೊಂದೆಡೆ ಅಂಧ ವಿದ್ಯಾರ್ಥಿನಿಯರು ಅದ್ಭುತವಾಗಿ ಮಲ್ಲಗಂಬ ಪ್ರದರ್ಶಿಸಿದ್ರು.
/newsfirstlive-kannada/media/media_files/2026/01/06/koppal-gavi-siddeshwara-jaatre-6-2026-01-06-11-01-56.jpg)
ಒಟ್ನಲ್ಲಿ ಗವಿಮಠ, ದಾಸೋಹದ ಜೊತೆಗೆ ವೈಚಾರಿಕ ಅರಿವು, ಸಮಾಜ ಸುಧಾರಣೆಯ ಕೆಲಸವನ್ನು ಮಾಡುತ್ತಾ, ಧಾರ್ಮಿಕ ಸುಧಾರಕರಾಗಿ ಕೆಲಸ ಮಾಡುತ್ತಿರುವದು ಶ್ಲಾಘನೀಯವಾಗಿದೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us