/newsfirstlive-kannada/media/media_files/2025/10/08/bjp-venkatesh-2025-10-08-08-13-03.jpg)
ಕೊಪ್ಪಳ: ಸಿನಿಮೀಯ ರೀತಿಯಲ್ಲಿ ಗಂಗಾವತಿಯ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷನನ್ನು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊ* ಮಾಡಿರುವ ಘಟನೆ ಕೊಪ್ಪಳದ ಗಂಗಾವತಿ ನಗರದಲ್ಲಿ ನಡೆದಿದೆ.
ಯುವ ಮೋರ್ಚಾ ಅಧ್ಯಕ್ಷನಾದ ವೆಂಕಟೇಶ್​ ಕುರುಬರನ್ನು (31) ಲಾಂಗು, ಮಚ್ಚಿನಿಂದ ಕೊಚ್ಚಿ ಕೊಂ*ದ್ದಾರೆ. ಬೈಕ್​ನಲ್ಲಿ ಹೊಗ್ತಿದ್ದ ವೆಂಕಟೇಶ್​ನನ್ನು ರಾತ್ರಿ 2 ಗಂಟೆಗೆ ಕಾರಿನಲ್ಲಿ ಫಾಲೋ ಮಾಡಿಕೊಂಡು ಬಂದು ಬೈಕ್​ಗೆ ಗುದ್ದಿ ಅಡ್ಡಗಟ್ಟಿ ಕೃತ್ಯ ನಡೆಸಿದ್ದಾರೆ. ದೇವಿಕ್ಯಾಂಪ್​ನಿಂದ ಗಂಗಾವತಿಗೆ ವೆಂಕಟೇಶ್ ಬರುತ್ತಿದ್ದರು.
ಊಟ ಮಾಡಿ ಸ್ನೇಹಿತರ ಜೊತೆ ಗಂಗಾವತಿಗೆ ವೆಂಕಟೇಶ್ ತೆರಳುತ್ತಿದ್ದ ಎಂದು ತಿಳಿದುಬಂದಿದೆ. ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿರುವ ವೆಂಕಟೇಶ್ ಸ್ನೇಹಿತ ರಾಮು, ಸ್ನೇಹಿತರೆಲ್ಲರೂ ಊಟಕ್ಕೆ ಹೋಗಿದ್ದೇವು. ವಾಪಸ್ ಬರುವಾಗ 7-8 ಜನ ಬಂದು ಕಾರಿನಿಂದ ಡಿಕ್ಕಿ ಹೊಡೆದ್ರು. ಬಳಿಕ ಮಾರಾಕಾಸ್ತ್ರಗಳ ಹಿಡಿದು ಬಂದು ಹಲ್ಲೆ ಮಾಡಿದರು. ನಮ್ಮನ್ನು ಅಲ್ಲಿಂದ ಬೆದರಿಸಿ ಬಳಿಕ ವೆಂಕಟೇಶನ ಕೊಲೆ ಮಾಡಿದರು. ಕಾರಿನಲ್ಲಿದ್ದವರು ಲಿಂಗರಾಜ್ ಕ್ಯಾಂಪ್ ರವಿ ಹಾಗೂ ಭೀಮ ಅನಿಸುತ್ತೆ ಎಂದಿದ್ದಾರೆ. ಕೊ*ಯಾದ ಸ್ಥಳದಲ್ಲಿ ವೆಂಕಟೇಶ್​​ ಕುಟುಂಬಸ್ಥರ ಆಕ್ರಂದನ ಮುಗಿಲುಮುಟ್ಟಿದೆ. ಸ್ಥಳಕ್ಕೆ DYSP ಸಿದ್ದನಗೌಡ ಪಾಟೀಲ್ ಭೇಟಿ, ಪರೀಶಿಲನೆ ನಡೆಸಿದ್ದಾರೆ.
ಇದನ್ನೂ ಓದಿ: ICUನಲ್ಲಿ ಮುಂದುವರಿದ ಚಿಕಿತ್ಸೆ.. ದೇವೇಗೌಡರ ಆರೋಗ್ಯ ಹೇಗಿದೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ