/newsfirstlive-kannada/media/media_files/2026/01/02/koppal-beerappa-andagi-teacher-13-2026-01-02-15-24-16.jpg)
/newsfirstlive-kannada/media/media_files/2026/01/02/koppal-beerappa-andagi-teacher-6-2026-01-02-15-24-32.jpg)
ಶಾಲೆಗೆ ಬೀಗ ಜಡಿದು ಪ್ರತಿಭಟನೆ
ಮೊನ್ನೆ ಮೊನ್ನೆಯಷ್ಟೇ ಕೊಪ್ಪಳ ಜಿಲ್ಲೆಯ ಬಹದ್ದೂರ್ ಬಂಡಿ ಗ್ರಾಮದ ಶಾಲೆ ರಾಜ್ಯಾದ್ಯಂತ ಸುದ್ದಿಯಾಗಿತ್ತು. ಅದಕ್ಕೆ ಕಾರಣ ಅಲ್ಲಿನ ಮುಖ್ಯ ಶಿಕ್ಷಕ ಬೀರಪ್ಪ ಅಂಡಗಿ! ಇವರು ತಮ್ಮ ಶಾಲಾ ಮಕ್ಕಳಿಗೆ ಪ್ರವಾಸದ ಹೆಸರಲ್ಲಿ ವಿಮಾನಯಾನದ ಭಾಗ್ಯ ಕರುಣಿಸಿ ವಿದ್ಯಾರ್ಥಿಗಳ ಕನಸನ್ನು ನನಸು ಮಾಡಿದ್ದರು. ಇಂದು ಅದೇ ವಿದ್ಯಾರ್ಥಿಗಳು ಶಾಲೆಗೆ ಬೀಗ ಜಡಿದು ಪ್ರತಿಭಟನೆಯ ಹಾದಿ ತುಳಿದಿದ್ದಾರೆ!
/newsfirstlive-kannada/media/media_files/2026/01/02/koppal-beerappa-andagi-teacher-2026-01-02-15-25-04.jpg)
ಯಾಕೆ..?
ವಿದ್ಯಾರ್ಥಿಗಳ ಪ್ರತಿಭಟನೆಗೆ ಕಾರಣ ತಮ್ಮ ನೆಚ್ಚಿನ ಶಿಕ್ಷಕ ಬೀರಪ್ಪ ಅಂಡಗಿ ಅವರ ವರ್ಗಾವಣೆ. ಶಿಕ್ಷಣ ಇಲಾಖೆ ಬೀರಪ್ಪ ಅಂಡಗಿ ಅವರನ್ನು ದಿಢೀರ್ ವರ್ಗಾವಣೆ ಮಾಡಿರೋದು ವಿದ್ಯಾರ್ಥಿಗಳ ಅಳುವಿಗೆ ಕಾರಣವಾಗಿದೆ. ನಮಗೆ ನಮ್ಮ ನೆಚ್ಚಿನ ಶಿಕ್ಷಕರು ಬೇಕು. ಇಲ್ಲದಿದ್ದರೆ ನಮಗೆ ಶಾಲೆ ಬೇಡ ಎಂದು ಕಣ್ಣೀರು ಇಟ್ಟಿದ್ದಾರೆ.
/newsfirstlive-kannada/media/media_files/2026/01/02/koppal-beerappa-andagi-teacher-7-2026-01-02-15-25-23.jpg)
ಬಿಸಿಯೂಟ ತ್ಯಜಿಸಿದ ಮಕ್ಕಳು
ಅಷ್ಟೇ ಅಲ್ಲದೇ.. ಇವತ್ತು ಶಾಲೆಗೆ ಬ್ಯಾಗ್ ತರದೇ, ಬೀಗ ಜಡಿದು ಪ್ರತಿಭಟನೆ ಮಾಡಿದ್ದಾರೆ. ಅಷ್ಟಕ್ಕೂ ಸುಮ್ಮನಾಗದ ವಿದ್ಯಾರ್ಥಿಗಳು ಇವತ್ತು ಅಡುಗೆ ಸಿಬ್ಬಂದಿ ತಯಾರಿಸಿದ ಬಿಸಿಯೂಟವನ್ನೂ ಮಾಡಲಿಲ್ಲ. ಶಿಕ್ಷಣ ಅಧಿಕಾರಿಗಳು ನಮಗೆ ನ್ಯಾಯ ಕೊಡಿಸಬೇಕು ಎಂದು ಆಗ್ರಹಿಸಿದ್ದಾರೆ.
/newsfirstlive-kannada/media/media_files/2026/01/02/koppal-beerappa-andagi-teacher-5-2026-01-02-15-25-45.jpg)
ಅಧಿಕಾರಿಗಳ ಮಾತಿಗೂ ಬಗ್ಗದ ಮಕ್ಕಳು
ವಿಷಯ ತಿಳಿದು ಕ್ಷೇತ್ರ ಶಿಕ್ಷಣ ಅಧಿಕಾರಿ, ತಾಲೂಕು ಪಂಚಾಯಿತಿ ಇಓ ಸ್ಥಳಕ್ಕೆ ದೌಡಾಯಿಸಿದ್ದರು. ಶಾಲೆಯ ಬೀಗ ತೆಗೆದು ಒಳಗಡೆ ಹೋಗಲು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿಕೊಂಡರು. ಜೊತೆಗೆ ಶಿಕ್ಷಕ್ಷರು, ಎಸ್ ಡಿಎಂಸಿ ಅಧ್ಯಕ್ಷರು, ಶಿಕ್ಷಣ ಇಲಾಖಾಧಿಕಾರಿಗಳು ವಿದ್ಯಾರ್ಥಿಗಳ ಮನವೊಲಿಸಲು ಪ್ರಯತ್ನಿಸಿದರೂ, ಮಕ್ಕಳು ತಮಗೆ ಬೀರಪ್ಪ ಸರ್ ಬೇಕೇಬೇಕು ಎಂದು ರಚ್ಚೆ ಹಿಡಿದಿದ್ದಾರೆ.
/newsfirstlive-kannada/media/media_files/2026/01/02/koppal-beerappa-andagi-teacher-8-2026-01-02-15-26-07.jpg)
ಬೀರಪ್ಪ ಅಂಡಗಿ ಅಂದರೆ..
ಶಿಕ್ಷಕ ಬೀರಪ್ಪ ಅಂಡಗಿ ಅಂದರೆ ಮಕ್ಕಳಿಗೆ ಎಲ್ಲಿಲ್ಲದ ಪ್ರೀತಿ. ಅವರಿಗೂ ಕೂಡ ಮಕ್ಕಳ ಮೇಲೆ ಅಪಾರವಾದ ಪ್ರೀತಿ ಮತ್ತು ವಿದ್ಯಾರ್ಥಿಗಳ ವಿದ್ಯಾಭ್ಯಾಸದ ಎಲ್ಲಿದ್ದ ಕಾಳಜಿ ಹೊಂದಿರೋರು. ಇತ್ತೀಚೆಗೆ ವಿದ್ಯಾರ್ಥಿಗಳಿಗೆ ವಿಮಾನಯಾನ ಮಾಡಿಸಿದ್ದರು. ತಮ್ಮ ಸ್ವಂತ ಖರ್ಚಿನಲ್ಲಿ ವಿಮಾನಯಾನ ಮಾಡಿಸಿದ್ದರು.
/newsfirstlive-kannada/media/media_files/2026/01/02/koppal-beerappa-andagi-teacher-11-2026-01-02-15-27-00.jpg)
ಅಷ್ಟೇ ಅಲ್ಲ..
ಪ್ರತಿ ತಿಂಗಳು ನಡೆಸುವ ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ನೀಡುತ್ತಿದ್ದರು. ದಾನಿಗಳಿಂದ ಉದ್ಯಮಗಳಿಂದ ಹಣ ಸಂಗ್ರಹ ಮಾಡಿ ಶಾಲೆಯ ಕಂಪೌಂಡ್ ಎತ್ತರಿಸಿದ್ದರು. ಇದೀಗ ಬೇರೆ ಶಾಲೆಗೆ ದಿಢೀರ್ ನಿಯೋಜನೆಗೊಂಡಿರೋದೇ ವಿದ್ಯಾರ್ಥಿಗಳ ಅಳಲು.
/newsfirstlive-kannada/media/media_files/2026/01/02/koppal-beerappa-andagi-teacher-3-2026-01-02-15-27-22.jpg)
ಕರಗದ ವಿದ್ಯಾರ್ಥಿಗಳ ಮನಸ್ಸು..
ಮಕ್ಕಳು ಮೈದಾನದಲ್ಲಿ ಕೂತು ಪ್ರತಿಭಟನೆ ಮಾಡುವಾಗ, ಸ್ವತಃ ಬೀರಪ್ಪ ಅಂಗಡಿ ಅವರೇ ಬಂದು ವಿದ್ಯಾರ್ಥಿಗಳನ್ನು ಸಮಾಧಾನ ಮಾಡುವ ಪ್ರಯತ್ನ ಮಾಡಿದ್ದಾರೆ. ಆದರೆ ಮಕ್ಕಳ ಮನಸು ಕರಗಿಲ್ಲ. ನಮಗೆ ಬೇರೆ ಶಿಕ್ಷಕರು ಬೇಡ. ನೀವೇ ಬೇಕು ಎಂದು ಹಠ ಮಾಡಿದ್ದಾರೆ.
/newsfirstlive-kannada/media/media_files/2026/01/02/koppal-beerappa-andagi-teacher-9-2026-01-02-15-27-45.jpg)
ಬೀರಪ್ಪ ಸರ್ ಏನು ಹೇಳ್ತಾರೆ..?
ನಾನು ಹದಿಮೂರು ತಿಂಗಳವರೆಗೆ ಬಹದ್ದೂರ ಬಂಡಿ ಶಾಲೆಗೆ ನಿಯೋಜನೆಗೊಂಡಿದ್ದೆ. ಅದರಂತೆ ಈಗ ಅವಧಿ ಮುಗಿದಿದೆ, ಇದೀಗ ನಾನಿದ್ದ ಸಿಪಿಎಸ್ ಶಾಲೆ ಮರಳಿ ವರ್ಗಾವಣೆ ಮಾಡಿದ್ದಾರೆ. ಹಾಗಾಗಿ ನಾನು ಹೋಗೋದು ಅನಿವಾರ್ಯ. ವಿದ್ಯಾರ್ಥಿಗಳ ಪ್ರೀತಿ, ಒಡನಾಟ ನೋಡಿ ನಾನೂ ಕೂಡ ಭಾವುಕನಾಗಿದ್ದೇನೆ. ಮಕ್ಕಳು ಭಾವನೆಗೆ ಒಳಗಾಗಿದ್ದಾರೆ ಎಂದು ಬೀರಪ್ಪ ಸರ್ ಹೇಳಿದ್ದಾರೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us