/newsfirstlive-kannada/media/media_files/2025/12/18/koppal-accident-2025-12-18-08-42-46.jpg)
ಕೊಪ್ಪಳ: ಭೀಕರ ರಸ್ತೆ ಅಪಘಾತದಲ್ಲಿ ಮೂವರು ಯುವಕರು ಪ್ರಾಣ ಕಳೆದುಕೊಂಡಿದ್ದಾರೆ. ಕೊಪ್ಪಳ ತಾಲೂಕಿನ ಇಂದರಗಿ ಬಳಿ ಬೈಕ್​​ಗೆ ಬುಲೆರೋ ಡಿಕ್ಕಿಯಾಗಿ ದಾರುಣ ಅಂತ್ಯಕಂಡಿದ್ದಾರೆ.
ವಾಜೀದ್, ರಾಜಹುಸೇನ್, ಆಸೀಫ್ ಮೃತ ದುರ್ದೈವಿಗಳು. ವಾಜೀದ್, ರಾಜಹುಸೇನ್ ಕೊಪ್ಪಳ ತಾಲೂಕಿನ ಹೊಸಹಳ್ಳಿ ನಿವಾಸಿಗಳು. ಆಸೀಫ್ ಗಂಗಾವತಿ ತಾಲೂಕಿನ ಶ್ರೀರಾಮನಗರ ನಿವಾಸಿ ಎಂದು ತಿಳಿದುಬಂದಿದೆ.
ಶ್ರೀರಾಮನಗರಿಂದ ಹೊಸಹಳ್ಳಿಗೆ ಬರೋವಾಗ ಅಪಘಾತವಾಗಿದೆ. ಡಿಕ್ಕಿ ಬಳಿಕ ಬುಲೆರೋ ಚಾಲಕ ಪರಾರಿಯಾಗಿದ್ದಾನೆ. ಮಕ್ಕಳನ್ನ ಕಳೆದುಕೊಂಡ ಪೋಷಕರು ದುಃಖದಲ್ಲಿದ್ದಾರೆ. ಅಲ್ಲದೇ ಅಪಘಾತ ಮಾಡಿದ ಚಾಲಕನ ಮೇಲೆ ಶಿಕ್ಷೆ ಆಗಬೇಕು ಎಂದು ಆಗ್ರಹಿಸಿದ್ದಾರೆ.
ಇದನ್ನೂ ಓದಿ: ನಿಮ್ಮ ಬಳಿ ಸ್ಯಾಲರಿ ಅಕೌಂಟ್ ಇದ್ಯಾ..? ಅಬ್ಬಾ! ಎಷ್ಟೊಂದು ಲಾಭ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us