ಲೋಕಾಯುಕ್ತ ರೇಡ್‌ : ಟಾಯ್ಲೆಟ್ ಕಮೋಡ್‌ಗೆ 50 ಸಾವಿರ ಹಾಕಿದ ಕೃಷಿ ಅಧಿಕಾರಿ! ಎಲ್ಲೆಲ್ಲಿ ರೇಡ್‌?

ಲೋಕಾಯುಕ್ತ ಅಧಿಕಾರಿಗಳು ಇಂದು ರಾಜ್ಯದ ವಿವಿಧೆಡೆ ನಾಲ್ವರು ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ ಮೇಲೆ ದಾಳಿ ನಡೆಸಿದ್ದಾರೆ. ಆದಾಯ ಮೀರಿದ ಆಸ್ತಿಪಾಸ್ತಿ ಸಂಪಾದನೆ ಬಗ್ಗೆ ದಾಖಲೆಗಳನ್ನು ಸಂಗ್ರಹಿಸುತ್ತಿದ್ದಾರೆ. ಅಧಿಕಾರಿಯೊಬ್ಬ 50 ಸಾವಿರ ರೂ ಹಣವನ್ನು ಟಾಯ್ಲೆಟ್ ಕಮೋಡ್‌ಗೆ ಹಾಕಿ ಪ್ಲಶ್ ಮಾಡಿದ್ದಾರೆ!

author-image
Chandramohan
Karnataka lokayukuta

ಲೋಕಾಯುಕ್ತ ಅಧಿಕಾರಿಗಳಿಂದ ನಾಲ್ವರ ಮೇಲೆ ರೇಡ್‌

Advertisment
  • ಲೋಕಾಯುಕ್ತ ಅಧಿಕಾರಿಗಳಿಂದ ನಾಲ್ವರ ಮೇಲೆ ರೇಡ್‌
  • ಆದಾಯ ಮೀರಿದ ಆಸ್ತಿ ಗಳಿಕೆ ಬಗ್ಗೆ ದಾಖಲೆ ಪತ್ರ ಸಂಗ್ರಹ
  • ಧಾರವಾಡ, ಶಿವಮೊಗ್ಗ, ಮಂಡ್ಯ, ವಿಜಯನಗರ ಜಿಲ್ಲೆಯಲ್ಲಿ ಲೋಕಾಯುಕ್ತ ರೇಡ್


ರಾಜ್ಯದಲ್ಲಿ ಲೋಕಾಯುಕ್ತ ಅಧಿಕಾರಿಗಳು  ವಿವಿಧ  ಜಿಲ್ಲೆಗಳಲ್ಲಿ ಸರ್ಕಾರಿ ಅಧಿಕಾರಿಗಳ ಮೇಲೆ ದಾಳಿ ನಡೆಸಿದ್ದಾರೆ. ಬೆಳಗಾವಿಯಿಂದ ಹಿಡಿದು ಚಿತ್ರದುರ್ಗ ಜಿಲ್ಲೆಯವರೆಗೂ ವಿವಿಧ ಜಿಲ್ಲೆಗಳ ಸರ್ಕಾರಿ ಅಧಿಕಾರಿಗಳ ಮನೆ, ಕಚೇರಿ ಮೇಲೆ ದಾಳಿ ನಡೆಸಿ ಆಕ್ರಮ ಆಸ್ತಿಪಾಸ್ತಿ ಪತ್ತೆ ಹಚ್ಚುತ್ತಿದ್ದಾರೆ.

 ಬೆಳಗಾವಿ ಕೃಷಿ ವಿಜೆಲೆನ್ಸ್ ಉಪ ನಿರ್ದೇಶಕ ರಾಜಶೇಖರ ಮನೆ ಮೇಲೆ ಲೋಕಾಯುಕ್ತ ಅಧಿಕಾರಿಗಳು  ದಾಳಿ ನಡೆಸಿದ್ದಾರೆ. . ಸದ್ಯ ಬೆಳಗಾವಿ ಕೃಷಿ ಮೂಲ ವಿಜೆಲೆನ್ಸಿಗೆ ಉಪ ನಿರ್ದೇಶಕ ಆಗಿರುವ ರಾಜಶೇಖರ್ ಅವರ ಬಿಜಾಪೂರ, ಬೆಳಗಾವಿ, ಧಾರವಾಡ, ಹಾವೇರಿ ಮತ್ತು ಚಿತ್ರದುರ್ಗದ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.  ಈ ಹಿಂದೆ ಧಾರವಾಡ ಕೃಷಿ ಇಲಾಖೆ ಉಪನಿರ್ದೇಶಕ ಆಗಿದ್ದ ರಾಜಶೇಖರ ಅವರ ಮನೆಗಳ ಮೇಲೆ ಲೋಕಾಯುಕ್ತ ಎಸ್ ಪಿ ಸಿದ್ಲಿಂಗಪ್ಪ ಡಿಎಸ್ ಪಿ ಕುರಬಗಟ್ಟಿ, ಹಾಗೂ ವೆಂಕನಗೌಡ ಪಾಟೀಲ ನೇತೃತ್ವದಲ್ಲಿ ದಾಳಿ ನಡೆದಿದೆ. ಧಾರವಾಡದ ಎರಡು ಮನೆ ಸೇರಿದಂತೆ ಬೆಳಗಾವಿ,ಹಾವೇರಿ, ಚಿತ್ರದುರ್ಗ ಮನೆ ಮೇಲೆ ದಾಳಿ ನಡೆಸಲಾಗಿದೆ.  ಲೋಕಾಯುಕ್ತ ಸಿಪಿಐ ಬುದ್ನಿ ಸೇರಿದಂತೆ ಅಧಿಕಾರಿಗಳಿಂದ ದಾಖಲೆ ಪರಿಶೀಲನೆ ನಡೆಯುತ್ತಿದೆ. 
ದಾಳಿ ವೇಳೆ ತಬ್ಬಿಬ್ಬಾದ ರಾಜಶೇಖರ,  ಹಣವನ್ನು ಟಾಯ್ಲೆಟ್‌ನ  ಕಮೋಡ್‌ಗೆ ಹಾಕಿ ಫ್ಲೆಶ್ ಮಾಡಿದ್ದಾರೆ.  ಸುಮಾರು 50 ಸಾವಿರ  ರೂಪಾಯಿ ಹಣವನ್ನು ಟಾಯ್ಲೆಟ್‌ ಗೆ ಹಾಕಿ ಫ್ಲೆಶ್ ಮಾಡಿದ್ದಾರೆ. 
 ಇನ್ನೂ  ರಾಜಶೇಖರ ಅರ್ಧ ಗಂಟೆ ಕಾಲ ಲೋಕಾಯುಕ್ತ ಪೊಲೀಸರನ್ನು ಮನೆಯ ಬಾಗಿಲು ತೆಗೆಯದೇ  ಹೊರಗೆ ಕಾಯಿಸಿದ್ದಾರೆ. ಬಳಿಕ ಮನೆ ಬಾಗಿಲು ತೆಗೆದಿದ್ದಾರೆ. 
ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ದೂರು ಹಿನ್ನೆಲೆಯಲ್ಲಿ ವಿಜಯನಗರ ಜಿಲ್ಲೆಯ ಡಿಎಚ್ಓ ಡಾ.ಶಂಕರ್ ನಾಯ್ಕ್  ಕಚೇರಿ, ಮನೆ, ಖಾಸಗಿ ಆಸ್ಪತ್ರೆ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಬೆಳ್ಳಂ‌ ಬೆಳಿಗ್ಗೆ ಮನೆ ಬಾಗಿಲು ತಟ್ಟಿ ಡಿಎಚ್ಓ ಶಂಕರ್ ನಾಯ್ಕ್ ರನ್ನು  ಎಬ್ಬಿಸಿ ಲೋಕಾಯುಕ್ತ ಅಧಿಕಾರಿಗಳು ರೇಡ್  ಮಾಡಿದ್ದಾರೆ.  ಹೊಸಪೇಟೆ ನಗರದ ಜಂಬುನಾಥ ರಸ್ತೆಯಲ್ಲಿರೋ ಡಿಎಚ್ಓ ಮನೆ, ಖಾಸಗಿ ಆಸ್ಪತ್ರೆ ಮೇಲೆ ದಾಳಿ ನಡೆಸಲಾಗಿದೆ.  ಬೆಳಿಗ್ಗೆಯಿಂದ ಮನೆಯಲ್ಲಿ ಪರಿಶೀಲನೆಯನ್ನು ನಡೆಸಲಾಗುತ್ತಿದೆ.  ಇನ್ನೊಂದೆಡೆ ಡಿಎಚ್ಓ ಕಚೇರಿಯಲ್ಲಿಯೂ ದಾಖಲಾತಿಗಳ ಪರಿಶೀಲನೆ ಕೂಡ ನಡೆಯುತ್ತಿದೆ. ಡಿಎಚ್ಓ ಮನೆಗೆ ಹತ್ತಿರದಲ್ಲೇ ಸಮರ್ಥ ಖಾಸಗಿ ಆಸ್ಪತ್ರೆಯನ್ನು ಶಂಕರ್ ನಾಯ್ಕ್ ನಡೆಸುತ್ತಿದ್ದಾರೆ. ಶಂಕರ್ ನಾಯ್ಕ್ ಪತ್ನಿ ಆಸ್ಪತ್ರೆಯ ಉಸ್ತುವಾರಿ ಹೊತ್ತಿದ್ದಾರೆ. 

ಆದಾಯಕ್ಕಿಂತ ಹೆಚ್ಚಿನ ಸಂಪತ್ತು ಗಳಿಕೆ ಆರೋಪದ ಹಿನ್ನಲೆಯಲ್ಲಿ ಶಿವಮೊಗ್ಗ ಜಿಲ್ಲೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ ರೂಪ್ಲಾ ನಾಯ್ಕ ಮನೆ ಮತ್ತು ಕಚೇರಿಯ ಮೇಲೆ ಲೋಕಾಯುಕ್ತ ಅಧಿಕಾರಿಗಳು  ದಾಳಿ ನಡೆಸಿದ್ದಾರೆ. ಗ್ರಾಮೀಣ ನೀರು ಸರಬರಾಜು ಮತ್ತು ನೈರ್ಮಲ್ಯ ಇಲಾಖೆಯ ಎಕ್ಸಿಕ್ಯೂಟಿವ್ ಇಂಜಿನಿಯರ್ ರೂಪ್ಲಾ ನಾಯ್ಕ ಅವರ  ಮನೆ, ಕಚೇರಿ ಸೇರಿದಂತೆ ಮತ್ತಿತರ ಕಡೆ ದಾಳಿ ನಡೆಸಿದ್ದಾರೆ.
ಶಿವಮೊಗ್ಗ, ಚಿಕ್ಕಮಗಳೂರು ಮತ್ತು ಬೆಂಗಳೂರಿನಲ್ಲಿ ಏಕ ಕಾಲಕ್ಕೆ ದಾಳಿ ನಡೆಸಲಾಗಿದೆ. ಶಿವಮೊಗ್ಗದ ಬಸವನಗುಡಿಯ ಮನೆ,  ಶಿವಮೊಗ್ಗದ ಕಚೇರಿ, ಬೆಂಗಳೂರಿನ ಕೆಂಗೇರಿ ಮನೆ ಮತ್ತು ಚಿಕ್ಕಮಗಳೂರು ಜಿಲ್ಲೆ ಸಖರಾಯಪಟ್ಟಣದ ಎಸ್ ಹಟ್ಟಿ ನಿವಾಸದ ಮೇಲೆ ಏಕಕಾಲಕ್ಕೆ ದಾಳಿ ನಡೆಸಲಾಗಿದೆ. ಬೆಂಗಳೂರಿನ ಕುಂಬಳಗೋಡು ಬಳಿಯ ಆರ್ ಆರ್ ಡೆಂಟಲ್ ಕಾಲೇಜ್ ಹಾಗೂ ಕೆಂಗೇರಿ ಸ್ಯಾಟಲೈಟ್ ನಿಲ್ದಾಣದ ಬಳಿ ಮನೆಯನ್ನು ರುಪ್ಲಾ ನಾಯ್ಕ್ ಹೊಂದಿದ್ದಾರೆ. ಶಿವಮೊಗ್ಗ ಲೋಕಾಯುಕ್ತ ಎಸ್ಪಿ ಮಂಜುನಾಥ್ ಚೌಧರಿ ನೇತೃತ್ವದಲ್ಲಿ ನಡೆದ ದಾಳಿ ನಡೆಸಲಾಗಿದೆ.  ಪ್ರತ್ಯೇಕ ತಂಡಗಳಲ್ಲಿ ದಾಳಿ ನಡೆಸಿರುವ ಲೋಕಾಯುಕ್ತ ಅಧಿಕಾರಿಗಳು, ದಾಳಿಯ ವೇಳೆ ಆದಾಯಕ್ಕಿಂತಲೂ ಹೆಚ್ಚಿನ ಆಸ್ತಿ ಹೊಂದಿರುವ ದಾಖಲೆ ಪತ್ತೆ ಹಚ್ಚಿದ್ದಾರೆ. 


ಮಂಡ್ಯದ ಪಿಆರ್‌ಇಡಿ ಸೂಪರಿಂಟೆಂಡೆಂಟ್‌ ಭೈರೇಶ್  ಮನೆ ಮೇಲೆ ಲೋಕಾಯುಕ್ತ  ಅಧಿಕಾರಿಗಳು ದಾಳಿ ನಡೆಸಿದ್ದಾರೆ.  ಪಿಆರ್‌ಇಡಿ ಸೂಪರಿಂಟೆಂಡೆಂಟ್‌  ಭೈರೇಶ್   ಅವರ ಮಂಡ್ಯದ ಮನೆ, ಮದ್ದೂರಿನ ಅತ್ತೆ ಮನೆ ಹಾಗೂ ಕಚೇರಿ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.  ಭೈರೇಶ್ ಮೇಲೆ ಸಾರ್ವಜನಿಕರಿಂದ ಅನೇಕ ದೂರುಗಳು ಬಂದಿದ್ದವು. ಸಾರ್ವಜನಿಕರ ದೂರು ಆಧರಿಸಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. 


ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

LOKAYUKUTA RAID
Advertisment