ಖಗ್ರಾಸ ಚಂದ್ರಗ್ರಹಣ ಹಿನ್ನೆಲೆಯಲ್ಲಿ ನಿನ್ನೆ ರಾಜ್ಯದ ಹಲವಾರು ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಿ ಬಂದ್ ಮಾಡಲಾಗಿತ್ತು. ಆದರೆ ಈಗ ಪೂರ್ಣ ಚಂದ್ರಗ್ರಹಣ ಸಂಪನ್ನವಾಗಿದಿದ್ದರಿಂದ ದೇವಾಲಯಗಳನ್ನು ಮತ್ತೆ ತೆರೆಯಲಾಗುತ್ತಿದೆ. ಬೆಳಗ್ಗೆಯಿಂದಲೇ ಹಲವು ದೇವಾಲಯಗಳಲ್ಲಿ ಶುದ್ಧಿಕಾರ್ಯ ಆರಂಭಿಸಲಾಗಿತ್ತು. ಬೆಂಗಳೂರಿನ ಕಾಡು ಮಲ್ಲೇಶ್ವರ ದೇವಸ್ಥಾನ, ಗವಿಗಂಗಾಧರೇಶ್ವರ ದೇಗುಲ ಸೇರಿದಂತೆ ಎಲ್ಲ ದೇವಾಲಯಗಳನ್ನ ತೆರೆಯಲಾಗಿದೆ.
ಗವಿಗಂಗಾಧರೇಶ್ವರ ದೇವಾಲಯದಲ್ಲಿ ಭಕ್ತರಿಗೆ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುತ್ತಿದೆ. ಇಂದು ಬೆಳಗ್ಗೆ 5 ಗಂಟೆಯಿಂದಲೇ ದೇವಾಲಯ ಓಪನ್ ಮಾಡಿ ಶುದ್ಧಿಕಾರ್ಯಗಳನ್ನು ಮಾಡಲಾಗಿದೆ. ನಿನ್ನೆ ಧರ್ಬ ಬಂಧನ ಮಾಡಿದ್ದೇವೆ. ಹೀಗಾಗಿ ಬೆಳಗ್ಗೆ ಸ್ವಾಮಿಗೆ ದ್ವಾರ ಪ್ರಾರ್ಥನೆ ಮಾಡಿ, ಗಣಪತಿ ಪೂಜೆಯೊಂದಿಗೆ ಶುದ್ಧಿ ಪುಣ್ಯ ಮಾಡಿದೇವು. ರುದ್ರಾಭಿಷೇಕ, ಕ್ಷೀರಾಭಿಷೇಕ, ಬಿಲ್ವಾಭಿಷೇಕ, ಪುಷ್ಪಾಲಂಕರ ಮಾಡಿ ಗೋಕ್ಷಿ ನೈವೇದ್ಯ ಮಾಡೋ ಪದ್ಧತಿ ಇದೆ. ಮೊಸರನ್ನ ನೈವೇದ್ಯ ಮಾಡಿ ಭಕ್ತರಿಗೆ ವಿನಿಯೋಗ ಮಾಡುವ ಕಾರ್ಯ ಮಾಡಲಾಗಿದೆ ಎಂದು ಗವಿಗಂಗಾಧರೇಶ್ವರ ದೇವಸ್ಥಾನದ ಅರ್ಚಕರು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ