Advertisment

ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಮೇಜರ್​ ಟ್ವಿಸ್ಟ್​.. 6ನೇ ಪಾಯಿಂಟ್​​ನಲ್ಲಿ ಅಸ್ಥಿಪಂಜರ ಪತ್ತೆ..!

ಧರ್ಮಸ್ಥಳದ ಬುರುಡೆ ಪ್ರಕರಣದ ತನಿಖೆಗೆ ಮೇಜರ್​ ಟ್ವಿಸ್ಟ್​ ಸಿಕ್ಕಿದೆ. ಎಸ್​ಐಟಿ ಅಧಿಕಾರಿಗಳ ಶೋಧಕಾರ್ಯದಲ್ಲಿ ಕಳೇಬರ ಪತ್ತೆಯಾಗಿದೆ. ಆದಷ್ಟು ಬೇಗ ಅದನ್ನು ಫಾರೆನ್ಸಿಕ್​​​ ವರದಿಗೆ ಕಳುಹಿಸಿಕೊಡಲಿದ್ದಾರೆ.

author-image
Bhimappa
DHARMASTHAL
Advertisment

ಧರ್ಮಸ್ಥಳ ಪ್ರಕರಣಕ್ಕೆ (Dharmastala case) ಇವತ್ತು ಮೇಜರ್​ ಟ್ವಿಸ್ಟ್ ಸಿಕ್ಕಿದೆ. ಬುರುಡೆಗಳ ರಹಸ್ಯ ಬೆನ್ನತ್ತಿ ಹೋಗಿದ್ದ ಎಸ್​ಐಟಿ (SIT) ಅಧಿಕಾರಿಗಳು ಕೆಲವು ಕಳೇಬರ ಪತ್ತೆ ಮಾಡೋದ್ರಲ್ಲಿ ಯಶಸ್ವಿಯಾಗಿದ್ದಾರೆ. SIT ಮೂಲಗಳು ತಿಳಿಸಿರುವ ಪ್ರಕಾರ, ಅನಾಮಿಕ ಸೂಚಿರುವ ಆರನೇ ಸ್ಥಳದಲ್ಲಿ ಕೆಲವು ಮೂಳೆಗಳು (Skeleton remain) ಪತ್ತೆಯಾಗಿವೆ. 

Advertisment

ಧರ್ಮಸ್ಥಳದ ನೇತ್ರಾವತಿ ಘಾಟ್ (Netravati Ghat) ಬಳಿಯ ಕಾಡು ಪ್ರದೇಶದಲ್ಲಿ 1998 ರಿಂದ 2014ರವರೆಗೆ ನೂರಾರು ಮಹಿಳೆಯರು ಮತ್ತು ಮಕ್ಕಳನ್ನ ಹೂತಿಟ್ಟಿದ್ದೇನೆ ಎಂದು ಈ ಹಿಂದೆ ಕೆಲಸ ಮಾಡ್ತಿದ್ದ ಸ್ವಚ್ಛತಾ ಕಾರ್ಮಿಕ ಎನ್ನಲಾಗುತ್ತಿರುವ ಅನಾಮಿ ವ್ಯಕ್ತಿ ಆರೋಪಿಸಿದ್ದ. ಈ ಶವಗಳು ಅತ್ಯಾ*ಚಾರ ಮತ್ತು ಕೊ*ಲೆಗೆ ಸಂಬಂಧಿಸಿದವು ಎಂದು ದೂರುದಾರ ಆರೋಪಿಸಿದ್ದಾನೆ. ಈ ವಿಚಾರ ರಾಜ್ಯಾದ್ಯಂತ ಭಾರೀ ಚರ್ಚೆಗೆ ಕಾರಣವಾಗಿತ್ತು. ರಾಜ್ಯ ಸರ್ಕಾರವು ಜುಲೈ 19, 2025 ರಂದು ಆಂತರಿಕ ಭದ್ರತಾ ವಿಭಾಗದ ಡಿಜಿಪಿ ಡಾ. ಪ್ರಣವ್ ಮೊಹಂತಿ (Dr. Pranav Mohanti) ನೇತೃತ್ವದಲ್ಲಿ ಎಸ್‌ಐಟಿ ರಚಿಸಿದೆ. ಇದೀಗ ಕಳೆದ ಒಂದು ವಾರದಿಂದ ಎಸ್​ಐಟಿ ಧರ್ಮಸ್ಥಳದಲ್ಲಿ ಬೀಡು ಬಿಟ್ಟು ತನಿಖೆ ನಡೆಸ್ತಿದೆ. 

ಅಂತೆಯೇ ಎಸ್​ಐಟಿ ಅಧಿಕಾರಿಗಳು ಕಳೇಬರ ಪತ್ತೆಗೆ ಮುಂದಾಗಿದ್ದಾರೆ. ಕಳೆದ ಮೂರು ದಿನಗಳಿಂದ ಅನಾಮಿಕ ತಾನು ಎಲ್ಲೆಲ್ಲಿ ಮೃತದೇಹಗಳನ್ನು ಹೂತಿಟ್ಟಿದ್ದೇನೆ ಅನ್ನೋದನ್ನು ತಿಳಿಸಿದ್ದ. ಒಟ್ಟು 13 ಸ್ಥಳಗಳಲ್ಲಿ ಮಾರ್ಕ್ ಮಾಡಲಾಗಿದ್ದು, ಇದೀಗ 6 ಪಾಯಿಂಟ್​​ಗಳಲ್ಲಿ ಶೋಧಕಾರ್ಯ ನಡೆದಿದೆ. ಮೂರನೇ ದಿನವಾದ ಇಂದು 6ನೇ ಪಾಯಿಂಟ್​ನಲ್ಲಿ ಶೋಧಕಾರ್ಯ ನಡೆದಿತ್ತು. ಅಗೆಯುವ ವೇಳೆ ಅಸ್ಥಿಪಂಜರ ಸಿಕ್ಕಿದೆ. 

ಸದ್ಯ ಅಸ್ಥಿಪಂಜರಗಳನ್ನು ಸಂಗ್ರಹಿಸಿರುವ ಎಸ್​ಐಟಿ ಅಧಿಕಾರಿಗಳು, ಪ್ಲಾಸ್ಟಿಕ್ ಕವರ್​​ನಲ್ಲಿ ತುಂಬಿಕೊಂಡಿದ್ದಾರೆ. ಇವತ್ತೇ ವೈಜ್ಞಾನಿಕ ವಿಧಿ ವಿಜ್ಞಾನಗಳ ಪ್ರಯೋಗಾಲಯ ಫಾರೆನ್ಸಿಕ್​​ ಕಳುಹಿಸಿಕೊಡುವ ಸಾಧ್ಯತೆ ಇದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನೂ ಕೆಲವು ಸಾಕ್ಷ್ಯಗಳನ್ನು ಸಂಗ್ರಹಿಸಲು ಆರನೇ ಪಾಯಿಂಟ್​​​ನಲ್ಲಿ ಹುಡುಕಾಟ ನಡೆಸಿದ್ದಾರೆ. 

Advertisment

ಕಳೆದ ಮೂರು ದಿನಗಳಿಂದ ಕಳೇಬರ ಹುಡುಕುವ ಪ್ರಕ್ರಿಯೆ ನಡೆದಿತ್ತು. ಮಾರ್ಕ್ ಮಾಡಿದ್ದ ಐದು ಪಾಯಿಂಟ್​​ಗಳಲ್ಲಿ ಯಾವುದೇ ಅಸ್ತಿಪಂಜರಗಳು ಸಿಕ್ಕಿರಲಿಲ್ಲ. ಆದರೆ ಮೊದಲ ಪಾಯಿಂಟ್​​ನಲ್ಲಿ ಐಡಿ ಕಾರ್ಡ್​, ಪ್ಯಾನ್​​ ಕಾರ್ಡ್​ ಹಾಗೂ ಒಂದು ಕೆಂಪುಬಣ್ಣದ ಬ್ಲೌಸ್ ಪತ್ತೆಯಾಗಿದೆ ಎಂಬ ಮಾಹಿತಿ ಇದೆ. ಇಂದು ನಡೆದ ಶೋಧಕಾರ್ಯದಲ್ಲಿ ಅಸ್ಥಿಪಂಜರ ಸಿಕ್ಕಿರೋದು ಪ್ರಕರಣಕ್ಕೆ ಮೇಜರ್ ತಿರುವು ಕೊಟ್ಟರೂ ಅಚ್ಚರಿ ಇಲ್ಲ. 

ಧರ್ಮಸ್ಥಳ ಗ್ರಾಮದ ಪಾಯಿಂಟ್ 6ರಲ್ಲಿ ಮುಂದುವರೆದ ಬುರುಡೆಯ ಕೆಲ ಅವಶೇಷಗಳು ಪತ್ತೆ ಆಗಿದ್ದು ವಿಧಿ ವಿಜ್ಞಾನ ಪ್ರಕ್ರಿಯೆ ನಡೆದಿದೆ. ಕಾಲಿನ 2 ಮೂಳೆ ಸೇರಿದಂತೆ ಇತರ‌ ಸಣ್ಣ ಮೂಳೆಗಳು ಹಾಗೂ ಬುರುಡೆಯ 2 ತುಂಡುಗಳು ಪತ್ತೆಯಾಗಿವೆ. ಇನ್ನಷ್ಟು ಮೂಳೆಗಳು ಸಿಗುವ ಸಾಧ್ಯತೆ ಇದೆ. ಹಾಸುಪಾಸಿನ ಪರಿಶೋಧನೆ ನಡೆಸಲಾಗುತ್ತಿದೆ. ಮೂಳೆಗಳು ಸಿಕ್ಕಿರುವ ಜಾಗದಲ್ಲಿ ಟೆಂಟ್ ಹಾಕಲಾಗುತ್ತದೆ. ಅವಶೇಷಗಳನ್ನು ರಕ್ಷಿಸಲು ವಿಧಿ ವಿಜ್ಞಾನ ತಜ್ಞರ ಕ್ರಮ ತೆಗೆದುಕೊಳ್ಳುತ್ತಾರೆ. ಇನ್ನು ಸ್ಥಳದಲ್ಲಿ ಮಳೆಯ ನೀರು ತುಂಬದಂತೆ ಮುಂಜಾಗ್ರತೆ ವಹಿಸಲಾಗಿದೆ. 

ಅಸ್ಥಿಪಂಜರದ ಜೊತೆ ನಿಕ್ಕರಿನ ತುಡುಗಳು ಪತ್ತೆ (ರಬ್ಬರ್ ಎಲೆಸ್ಟಿಕ್) ಆಗಿವೆ. ಅಸ್ಥಿಪಂಜರದ ಒಟ್ಟು 12 ಮೂಳೆಗಳು ಪತ್ತೆ ಆಗಿವೆ. ಅಸ್ಥಿಪಂಜರ ಸಿಕ್ಕ ಜಾಗದಲ್ಲಿ ಭದ್ರೆತೆ ವಹಿಸಲಾಗಿದೆ. ಯಾವುದೇ ಸಾಕ್ಷ್ಯ ನಾಶವಗದಂತೆ ಎಸ್​ಐಟಿ ಕಟ್ಟೆಚ್ಚೆರ ತೆಗೆದುಕೊಳ್ಳಲಿದೆ. ಗುಂಡಿಯೊಳಗೆ ನೀರು ತುಂಬಿ ಸಾಕ್ಷಿ ನಾಶ ಆತಂಕ ವಿದೆ. ಅವಶೇಷಗಳು ದೊರೆತ ಸ್ಥಳದ ಮೇಲ್ಭಾಗ ಶೀಟ್ ಹಾಕಿ ಟೆಂಟ್ ವ್ಯವಸ್ಥೆ ಮಾಡಲಾಗುತ್ತದೆ. ಸ್ಥಳದ 4 ದಿಕ್ಕಿನಲ್ಲಿ ಅಧಿಕಾರಿಗಳು ಶೀಟ್ ಅಳವಡಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

dharmasthala
Advertisment
Advertisment
Advertisment