/newsfirstlive-kannada/media/media_files/2025/11/18/elephant-rescue-1-2025-11-18-11-15-23.jpg)
/newsfirstlive-kannada/media/media_files/2025/11/18/elephant-rescue-5-2025-11-18-11-15-37.jpg)
ಆನೆ ಆಪರೇಷನ್
ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲೂಕಿನ ಶಿವವಸಮುದ್ರ ಬಳಿಯಿರುವ ನಾಲೆಯಲ್ಲಿ ಮರಿಯಾನೆಯೊಂದು ಸಿಲುಕಿಕೊಂಡಿದೆ. ಕಳೆದ ನಾಲ್ಕು ದಿನಗಳಿಂದ ನಾಲೆಯಲ್ಲಿದ್ದು, ಅದರ ರಕ್ಷಣಾ ಕಾರ್ಯ ಇವತ್ತೂ ಮುಂದುವರಿದಿದೆ.
/newsfirstlive-kannada/media/media_files/2025/11/18/elephant-rescue-4-2025-11-18-11-16-25.jpg)
ನಾಲೆಯಲ್ಲಿ ನೀರು
ಖಾಸಗಿ ವಿದ್ಯುತ್ ಉತ್ಪಾದನಾ ಘಟಕದ ಬಳಿ ನೀರು ಕುಡಿಯಲು ಬಂದು ನಾಲೆಯಲ್ಲಿ ಸಿಲುಕಿಕೊಂಡಿದೆ. ನಿನ್ನೆ ಕೂಡ ಅರಣ್ಯ ಇಲಾಖೆ ಆನೆಯನ್ನ ಮೇಲೆತ್ತಲು ಪ್ರಯತ್ನ ಮಾಡಿತ್ತು. ಆದರೆ ಯಾವುದೇ ಪ್ರಯೋಜ ಆಗಿರಲಿಲ್ಲ. ನಾಲೆಯಲ್ಲಿ ನೀರು ಹೆಚ್ಚಾಗಿದ್ದ ಕಾರಣ ಕಾರ್ಯಾಚರಣೆಗೆ ತೊಡಕಾಗಿತ್ತು. ಇಂದು ನಾಲೆಯ ನೀರನ್ನು ತಗ್ಗಿಸಿ ಕಾರ್ಯಾಚರಣೆ ಆರಂಭಿಸಲಾಗಿದೆ.
/newsfirstlive-kannada/media/media_files/2025/11/18/elephant-rescue-3-2025-11-18-11-16-53.jpg)
ಹೈಡ್ರಾಲಿಕ್ ಕ್ರೇನ್ ಸಹಾಯದಿಂದ ರಕ್ಷಣೆ
ಆನೆ ರಕ್ಷಣೆಗೆ ಬೆಂಗಳೂರಿನಿಂದ ಹೈಡ್ರಾಲಿಕ್ ಕ್ರೇನ್ಗಳನ್ನು ತರಲಾಗಿದೆ. ಇನ್ನು ಮೈಸೂರಿನಿಂದ ಅರವಳಿಕೆ ತಜ್ಞರು, ಅರಣ್ಯ ಸಿಬ್ಬಂದಿ ಬಂದಿದ್ದಾರೆ. ಮಂಡ್ಯ ಡಿಎಫ್ಓ, ಮಳವಳ್ಳಿ ತಹಸಿಲ್ದಾರ್ ನೇತೃತ್ವದಲ್ಲಿ ಆನೆ ಕಾರ್ಯಾಚರಣೆ ನಡೆಯುತ್ತಿದೆ.
/newsfirstlive-kannada/media/media_files/2025/11/18/elephant-2025-11-18-11-17-20.jpg)
ಆನೆ ಆರೋಗ್ಯದ ಬಗ್ಗೆ ಕಳವಳ
ಆನೆ ಸೊಂಡಿಲಲ್ಲಿ ಫಂಗಸ್ ಆಗಿರುವ ಸಾಧ್ಯತೆ ಹೆಚ್ಚಿದೆ. ಕಳೆದ ಎರಡು ದಿನಗಳಿಂದ ನೀರಿನಲ್ಲೇ ನಿಂತಿದೆ. ಹೀಗಾಗಿ ಸೊಂಡಿಲಿನ ಒಂದು ಭಾಗ ಬಿಳಿ ಬಣ್ಣಕ್ಕೆ ತಿರುಗಿದೆ. ಸೊಂಡಿಲ ತುದಿ ಭಾಗದಲ್ಲಿ ಇನ್ಫೆಂಕ್ಷನ್ ಆಗಿರುವ ಸಾಧ್ಯತೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us