ವಿರೋಧದ ಮಧ್ಯೆ ಮಗಳನ್ನು ಮದುವೆಯಾದ ಅಳಿಯನ ಮನೆಗೆ ಬೆಂಕಿ ಹಚ್ಚಿದ ಮಾವ- ತಪ್ಪಿದ ಪ್ರಾಣ ಹಾನಿ

ಮಂಡ್ಯ ಜಿಲ್ಲೆಯಲ್ಲಿ ತಂದೆಯ ವಿರೋಧದ ಮಧ್ಯೆ ಯುವತಿಯೊಬ್ಬಳು ತಾನು ಪ್ರೀತಿಸಿದ ನೆರೆ ಮನೆಯ ವಿನೋದ್ ಎಂಬಾತನನ್ನು ಮದುವೆಯಾಗಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಯುವತಿ ಕಾವ್ಯ ತಂದೆ ಚನ್ನೇಗೌಡ, ಹೊಸ ಅಳಿಯ ವಿನೋದ್ ಮನೆಗೆ ಬೆಂಕಿ ಹಚ್ಚಿದ್ದಾರೆ. ಚನ್ನೇಗೌಡರಿಗೆ ಗಾಯಗಳಾಗಿವೆ. ಮನೆಯಲ್ಲಿ ಯಾರೂ ಇಲ್ಲದ್ದರಿಂದ ಪ್ರಾಣ ಹಾನಿಯಾಗಿಲ್ಲ.

author-image
Chandramohan
MADDURU SON IN LAW HOUSE SET ON FIRE (1)
Advertisment

ಯುವತಿಯ ತಂದೆಯ ವಿರೋಧದ ಮಧ್ಯೆ ತಾನು ಪ್ರೀತಿಸಿದ ಹುಡುಗನನ್ನು ಯುವತಿ ಮದುವೆಯಾಗಿದ್ದಕ್ಕೆ ಸಿಟ್ಟಿಗೆದ್ದ ಯುವತಿಯ ತಂದೆ, ಹುಡುಗನ ಮನೆಗೆ ಬೆಂಕಿ ಹಚ್ಚಿದ್ದಾರೆ. ತನ್ನ ಮಗಳನ್ನು ವಿರೋಧದ ಮಧ್ಯೆ ಮದುವೆಯಾಗಿದ್ದಕ್ಕೆ ಸಿಟ್ಟಿಗೆದ್ದ ಮಾವ ಚನ್ನೇಗೌಡ, ತನ್ನ ಹೊಸ ಅಳಿಯ ವಿನೋದ್ ಮನೆಗೆ ಬೆಂಕಿ ಹಚ್ಚಿದ್ದಾರೆ. 
ಮಂಡ್ಯ ಜಿಲ್ಲೆಯ ಮದ್ದೂರು ತಾಲ್ಲೂಕಿನ ಚುಂಚಗಹಳ್ಳಿ ಗ್ರಾಮದ ಕಾವ್ಯ ಅನೇಕ ವರ್ಷಗಳಿಂದ ತನ್ನ ಪಕ್ಕದ ಮನೆಯ ವಿನೋದ್ ನನ್ನು ಪ್ರೀತಿಸುತ್ತಿದ್ದಳು. ಈ ಪ್ರೀತಿಗೆ ಕಾವ್ಯ ತಂದೆ ಚನ್ನೇಗೌಡ ಅವರ ವಿರೋಧ ಇತ್ತು. ಈ ವಿರೋಧದ ಮಧ್ಯೆಯೂ ಕಳೆದ ಗುರುವಾರ ಕಾವ್ಯ- ವಿನೋದ್ ವಿವಾಹ ಆಗಿದ್ದಾರೆ. ತಮ್ಮ ವಿರೋಧದ ನಡುವೆ ಮಗಳು , ತಾನು ಪ್ರೀತಿಸಿದ ನೆರೆ ಮನೆಯ ವಿನೋದ್ ನನ್ನು ಮದುವೆಯಾಗಿದ್ದು, ಚನ್ನೇಗೌಡರಿಗೆ ಭಾರಿ ಕೋಪ ತರಿಸಿದೆ. 
ಕೋಪದಲ್ಲೇ ಹೊಸ ಅಳಿಯ ವಿನೋದ್‌ನ ಮನೆಗೆ ಬೆಂಕಿ ಹಚ್ಚಿದ್ದಾರೆ. ಇಂದು ವಿನೋದ್ ಮನೆಯಲ್ಲಿ ಯಾರೂ ಇರಲಿಲ್ಲ. ಈ ವೇಳೆ ಮನೆಗೆ ಚನ್ನೇಗೌಡ ಬೆಂಕಿ ಹಚ್ಚಿದ್ದಾರೆ.  ವಿನೋದ್  ಮನೆಯಲ್ಲಿ  ಇಂದು ಯಾರೂ ಇರಲಿಲ್ಲ. ಇದರಿಂದ ಯಾವುದೇ ಜೀವ ಹಾನಿಯಾಗಿಲ್ಲ. ಆದರೇ, ವಿನೋದ್ ಮನೆಯಲ್ಲಿದ್ದ ಎಲೆಕ್ಟ್ರಾನಿಕ್ ವಸ್ತುಗಳು, ಬಟ್ಟೆ, ಅಡುಗೆ ಸಾಮಗ್ರಿಗಳು ಸುಟ್ಟು ಕರಕಲಾಗಿವೆ. ಗ್ರಾಮಸ್ಥರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಬಂದು ವಿನೋದ್ ಮನೆಗೆ ಹೊತ್ತಿದ್ದ ಬೆಂಕಿಯನ್ನು ನೀರು ಹಾಕಿ ನಂದಿಸಿದ್ದಾರೆ. 

MADDURU SON IN LAW HOUSE SET ON FIRE


ಇನ್ನೂ ಹೊಸ ಅಳಿಯ ವಿನೋದ್ ಮನೆಗೆ ಬೆಂಕಿ ಇಟ್ಟ ಮಾವ ಚನ್ನೇಗೌಡರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ಚನ್ನೇಗೌಡರನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.  ಮದ್ದೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

SON IN LAW HOUSE SET ON FIRE LOVE MARRIAGE
Advertisment