/newsfirstlive-kannada/media/media_files/2026/01/01/mandya-bjp-workers-letter-to-kerala-cm-2026-01-01-15-36-03.jpg)
ಮಂಡ್ಯ ಬಿಜೆಪಿ ಕಾರ್ಯಕರ್ತರಿಂದ ಕೇರಳ ಸಿಎಂಗೆ ಪತ್ರ
ಕೇರಳ ಸಿಎಂ ಮುಂದೆ ಮಂಡ್ಯ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ವಿಚಿತ್ರ ಬೇಡಿಕೆಯನ್ನಿಟ್ಟಿದ್ದಾರೆ.
ನಮಗೂ ಒಂದು ಟ್ವೀಟ್ ಮಾಡಿ ಕೊಡಿ ಅಂತ ಕೇರಳ ಸಿಎಂ ಪಿನರಾಯಿ ವಿಜಯನ್ ಗೆ ಪತ್ರ ಬರೆದಿದ್ದಾರೆ. ಮಂಡ್ಯ ಬಿಜೆಪಿ ಕಾರ್ಯಕರ್ತರು ಈ ಮೂಲಕ ವಿನೂತನ ಪ್ರತಿಭಟನೆ ನಡೆಸುತ್ತಿದ್ದಾರೆ. ನಮ್ಮ ಸಮಸ್ಯೆಗಳ ಪರವಾಗಿ ಟ್ವೀಟ್ ಮಾಡಿ ಎಂದು ಪತ್ರ ಬರೆದು ಕೇರಳ ಸಿಎಂ ಪಿನರಾಯಿ ವಿಜಯನ್ ಅವರಿಗೆ ಬಿಜೆಪಿ ಕಾರ್ಯಕರ್ತರು ಪೋಸ್ಟ್ ಮಾಡಿದ್ದಾರೆ.
ನೀವು ಟ್ವೀಟ್ ಮಾಡಿದ್ರೆ ರಾಜ್ಯದ ಸಿಎಂ ಮನೆ ಕೊಡುತ್ತಾರೆ. ಅದಕ್ಕಾಗಿ ಮತ್ತೊಂದು ಟ್ವೀಟ್​ ಮಾಡಿ ಎಂದು ಕೇರಳ ಸಿಎಂಗೆ ಪತ್ರ ಬರೆದಿದ್ದಾರೆ. ನಮ್ಮ ಜಿಲ್ಲೆಯಲ್ಲಿ & ರಾಜ್ಯದಲ್ಲಿ ಸಾಕಷ್ಟು ಬಡವರಿದ್ದಾರೆ. ಆ ಬಡವರಿಗೆ ಸೂರಿಲ್ಲ, ಈ ವಿಚಾರ ಟ್ವೀಟ್ ಮಾಡಿಕೊಡಿ. ನೀವು ಟ್ವೀಟ್ ಮಾಡಿದ್ರೆ ನಮ್ಮ ರಾಜ್ಯದ ಸಿಎಂ ಮನೆ ಕೊಡುತ್ತಾರೆ. ಇದಕ್ಕಾಗಿ ನಮ್ಮ ಮೇಲೆ ಕಾಳಜಿ ಇಟ್ಟುಕೊಂಡು ಟ್ವೀಟ್ ಮಾಡಿ. ನೀವು ಟ್ವೀಟ್ ಮಾಡಿದ ತಕ್ಷಣ ನಮ್ಮ ಸರ್ಕಾರ ಅಲರ್ಟ್ ಆಗಿದೆ . ಕೋಗಿಲು ಲೇಔಟ್​ನಲ್ಲಿ ಅಕ್ರಮ ನಿವಾಸಿಗಳಿಗೆ ಫ್ಲ್ಯಾಟ್​ ಸಿಕ್ಕಿದೆ. ಇದೇ ರೀತಿ ಮತ್ತೊಂದು ಟ್ವೀಟ್ ಮಾಡಿಕೊಡಿ ಎಂದು BJP ಕಾರ್ಯಕರ್ತರು ಪತ್ರ ಬರೆದಿದ್ದಾರೆ.
ಕೋಗಿಲು ಲೇಔಟ್ ನಲ್ಲಿ ಆಕ್ರಮ ವಲಸಿಗರಿಗೆ ರಾಜ್ಯ ಸರ್ಕಾರ ಬೆಂಗಳೂರಿನ ಬೈಯ್ಯಪ್ಪನಹಳ್ಳಿಯಲ್ಲಿ ವಸತಿ ಇಲಾಖೆ ನಿರ್ಮಿಸಿರುವ ಪ್ಲ್ಯಾಟ್ ಗಳನ್ನು ನೀಡುತ್ತಿದೆ. ಹೀಗಾಗಿ ರಾಜ್ಯದಲ್ಲಿರುವ ಎಲ್ಲ ನಿರ್ವಸತಿ ಜನರ ಪರವಾಗಿ ಟ್ವೀಟ್ ಮಾಡಿ ಎಂದು ಕೇರಳ ಸಿಎಂ ಪಿನರಾಯಿ ವಿಜಯನ್ ಗೆ ಮಂಡ್ಯ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಪತ್ರ ಬರೆದು ಅಂಚೆ ಇಲಾಖೆಯ ಮೂಲಕ ಪತ್ರಗಳನ್ನು ಕೇರಳ ಸಿಎಂ ಪಿನರಾಯಿ ವಿಜಯನ್ ಗೆ ಕಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us