/newsfirstlive-kannada/media/media_files/2025/08/26/dharmasthala-chennayya-2025-08-26-15-39-12.jpg)
ಆರೋಪಿ ಚಿನ್ನಯ್ಯ ಅಲಿಯಾಸ್ ಚೆನ್ನ
ಹಣದ ಆಮಿಷ ಬಾಯ್ಬಿಟ್ಟ ಚಿನ್ನಯ್ಯ!
ಬುರುಡೆ ರಹಸ್ಯಕ್ಕೆ ಟ್ವೀಸ್ಟ್. ತಿಮರೋಡಿ ಮನೆಯಿಂದ ತಂದಿದ್ದ ಬುರುಡೆ?
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿದ್ದೇನೆ. ಸಾಕಷ್ಟು ಮಹಿಳೆಯರು, ಯುವತಿಯರ ಮೇಲೆ ರೇಪ್ ಆಗಿದೆ. ಆದಾದ ಬಳಿಕ ದೊಡ್ಡವರ ಸೂಚನೆಯಂತೆ ನಾನು ಶವಗಳನ್ನು ತೆಗೆದುಕೊಂಡು ಹೋಗಿ ಹೂಳುತ್ತಿದ್ದೆ ಎಂದು ಮಾಸ್ಕ್ ಮ್ಯಾನ್ ಚಿನ್ನಯ್ಯ ಪೊಲೀಸರಿಗೆ ದೂರು ನೀಡಿದ್ದ. ಬಳಿಕ ಕೋರ್ಟ್ ಮುಂದೆಯೂ ಅದೇ ಹೇಳಿಕೆ ನೀಡಿದ್ದ. ಜೊತೆಗೆ ಒಂದು ತಲೆ ಬುರುಡೆಯನ್ನು ಮೊದಲಿಗೆ ತಂದಿದ್ದ. ಆ ತಲೆ ಬುರುಡೆಯನ್ನು ಎಲ್ಲಿಂದ ತಂದಿದ್ದೆ ಎಂದು ಎಸ್‌ಐಟಿ ಅಧಿಕಾರಿಗಳು ತೀವ್ರವಾಗಿ ವಿಚಾರಣೆ ನಡೆಸಿದ್ದರು. ಈಗ ಈ ಚಿನ್ನಯ್ಯ ತಂದಿದ್ದ ಮೊದಲ ತಲೆ ಬುರುಡೆಯ ಮೂಲ ಯಾವುದು ಎಂಬುದು ಎಸ್‌ಐಟಿ ಅಧಿಕಾರಿಗಳಿಗೆ ಗೊತ್ತಾಗಿದೆ.
ಈ ಮೊದಲ ತಲೆ ಬುರುಡೆಯನ್ನು ಸಾಮಾಜಿಕ ಕಾರ್ಯಕರ್ತ ಮಹೇಶ್ ಶೆಟ್ಟಿ ತಿಮ್ಮರೋಡಿ ಮನೆಯಿಂದಲೇ ತಂದಿದ್ದಾನೆ. ಈ ತಲೆ ಬುರುಡೆಯನ್ನು ಭೂಮಿಯಿಂದ ಅಗೆದು ತಂದಿರುವ ವಿಡಿಯೋವನ್ನು ಕೂಡ ಮಾಡಲಾಗಿತ್ತು. ಆ ವಿಡಿಯೋವನ್ನು ಮಹೇಶ್ ಶೆಟ್ಟಿ ತಿಮ್ಮರೋಡಿಯ ತೋಟದಲ್ಲೇ ಮಾಡಲಾಗಿದೆ ಎಂಬ ವಿಷಯ ಕೂಡ ಈಗ ಬೆಳಕಿಗೆ ಬಂದಿದೆ. ರಬ್ಬರ್ ತೋಟದ ಜಾಗ ತೋರಿಸಿ, ಇದೇ ಜಾಗದಿಂದ ತಲೆ ಬುರುಡೆ ತಂದಿದ್ದಾಗಿ ಚಿನ್ನಯ್ಯ ವಿಡಿಯೋದಲ್ಲಿ ಹೇಳಿದ್ದ. ವಿಡಿಯೋದಲ್ಲಿ ತೋರಿಸಿದ್ದ ಆ ಜಾಗ ಬೇರಾವುದು ಅಲ್ಲ. ಅದು ಮಹೇಶ್ ಶೆಟ್ಟಿ ತಿಮ್ಮರೋಡಿಯ ರಬ್ಬರ್ ತೋಟದ ಜಾಗ.
ಹೀಗಾಗಿ ಈಗ ಎಸ್‌ಐಟಿ ಪೊಲೀಸರು ಮಹೇಶ್ ಶೆಟ್ಟಿ ತಿಮ್ಮರೋಡಿ ರಬ್ಬರ್ ತೋಟದ ಮಣ್ಣಿನ ಸ್ಯಾಂಪಲ್ ಅನ್ನು ಸಂಗ್ರಹಿಸುತ್ತಿದ್ದಾರೆ. ದೂರುದಾರ ಚಿನ್ನಯ್ಯ ತಂದಿದ್ದ ತಲೆ ಬುರುಡೆಯ ಮಣ್ಣಿನ ಸ್ಯಾಂಪಲ್ ಗೂ ಮಹೇಶ್ ಶೆಟ್ಟಿ ತಿಮ್ಮರೋಡಿ ತೋಟದ ಮಣ್ಣಿನ ಸ್ಯಾಂಪಲ್ ಗೂ ಹೊಂದಾಣಿಕೆಯಾಗುತ್ತಾ, ಸಾಮ್ಯತೆ ಇದೆಯಾ ಎಂದು ಎಫ್ಎಸ್‌ಎಲ್ ಲ್ಯಾಬ್ ನಲ್ಲಿ ಪರೀಕ್ಷೆ ನಡೆಸುವರು. ಈಗಾಗಲೇ ಮಹೇಶ್ ಶೆಟ್ಟಿ ತಿಮ್ಮರೋಡಿ ತೋಟದ ಮಣ್ಣಿನ ಸ್ಯಾಂಪಲ್ ಸಂಗ್ರಹಿಸಿ ಎಫ್‌ಎಸ್ಎಲ್ ಲ್ಯಾಬ್ ಗೆ ಕಳಿಸಿದ್ದಾರೆ. ಮಹೇಶ್ ಶೆಟ್ಟಿ ತಿಮ್ಮರೋಡಿ ತೋಟದ ಮಣ್ಣಿನ ಸ್ಯಾಂಪಲ್ ಗೂ ಚಿನ್ನಯ್ಯ ತಂದಿದ್ದ ತಲೆ ಬುರುಡೆಯ ಮಣ್ಣಿನ ಸ್ಯಾಂಪಲ್ ಗೂ ಹೊಂದಾಣಿಕೆಯಾದರೇ, ತಲೆ ಬುರುಡೆಯನ್ನು ಮಹೇಶ್ ಶೆಟ್ಟಿ ತಿಮ್ಮರೋಡಿ ತೋಟದಿಂದಲೇ ತಂದಿದ್ದು ಎಂಬುದು ಸಾಬೀತಾಗುತ್ತೆ. ಈ ಮೂಲಕ ಧರ್ಮಸ್ಥಳದ ವಿರುದ್ಧ ಷಡ್ಯಂತ್ರ ನಡೆಸಿದ್ದಕ್ಕೆ ಮತ್ತೊಂದು ಸಾಕ್ಷ್ಯ, ಆಧಾರ ಸಿಕ್ಕಂತೆ ಆಗುತ್ತೆ.
ಇನ್ನೂ ಮೃತಪಟ್ಟ ಸೌಜನ್ಯ ಶವ ತೆಗೆದುಕೊಂಡು ಹೋಗಿದ್ದನ್ನು ನಾನು ನೋಡಿದ್ದೇನೆ ಎಂದು ಯೂಟ್ಯೂಬ್ ಸಂದರ್ಶನದಲ್ಲಿ ಮಾಸ್ಕ್ ಮ್ಯಾನ್ ಚಿನ್ನಯ್ಯ ಹೇಳಿದ್ದ. ಹೀಗಾಗಿ ಈ ವಿಷಯದ ಬಗ್ಗೆ ಚಿನ್ನಯ್ಯನನ್ನು ವಿಚಾರಣೆ ನಡೆಸುವಂತೆ ಸೌಜನ್ಯ ತಾಯಿ ಕುಸುಮಾವತಿ ಬೆಳ್ತಂಗಡಿಯ ಎಸ್‌ಐಟಿಗೆ ದೂರು ನೀಡಿದ್ದಾರೆ. ಮಗಳ ಸಾವಿಗೆ ನ್ಯಾಯ ಕೊಡಿಸಿ ಎಂದು ದೂರಿನಲ್ಲಿ ಉಲ್ಲೇಖ ಮಾಡಿದ್ದಾರೆ. ಚಿನ್ನಯ್ಯನನ್ನು ನಾರ್ಕೋ ಪರೀಕ್ಷೆಗೊಳಪಡಿಸಲು ಸೌಜನ್ಯ ತಾಯಿ ಕುಸುಮಾವತಿ ಆಗ್ರಹಿಸಿದ್ದಾರೆ.
ದಿನಕ್ಕೊಂದು ತಿರುವು ಪಡೆದುಕೊಳ್ತಿದೆ ಧರ್ಮಸ್ಥಳ ಪ್ರಕರಣ!
ಎಸ್ಐಟಿ ಮುಂದೆ ಸ್ಫೋಟಕ ಸತ್ಯ ಬಾಯ್ಬಿಟ್ಟ ಮಾಸ್ಕ್ಮ್ಯಾನ್
ನನಗೆ ಕೆಲವರು ಬೆದರಿಕೆ ಒಡ್ಡಿ, ಹಂತ ಹಂತವಾಗಿ ಹಣ ನೀಡಿದ್ರು. ಇದೇ ರೀತಿ ಹೇಳಿಕೆ ನೀಡುವಂತೆ ಬೆದರಿಕೆ ಹಾಕಿದ್ದರು ಎಂದು ಎಸ್ಐಟಿ ಮುಂದೆ ಸ್ಫೋಟಕ ವಿಚಾರವನ್ನು ಮಾಸ್ಕ್ ಮ್ಯಾನ್ ಚಿನ್ನಯ್ಯ ಬಾಯ್ಬಿಟ್ಟಿದ್ದಾನೆ. ಚಿನ್ನಯ್ಯ ಅಲಿಯಾಸ್ ಚೆನ್ನಗೆ ಯಾರೆಲ್ಲಾ ಬೆದರಿಕೆ ಹಾಕಿದ್ದಾರೆ ಎಂಬ ಬಗ್ಗೆ SIT ತನಿಖೆ ನಡೆಸುತ್ತಿದೆ.
ಚಿನ್ನಯ್ಯ ಹೇಳಿದ್ದೇನು?
ಅವರು ಹೇಳಿಕೊಟ್ಟಂತೆ ಹೇಳಿಕೆ ನೀಡಲು ನನ್ನ ಸಂಪರ್ಕ ಮಾಡಿದ್ರು. ಐದು, ಹತ್ತು, ₹15 ಸಾವಿರದಂತೆ ಹಂತ ಹಂತವಾಗಿ ಹಣ ನೀಡಿದ್ದಾರೆ. ಸುಮಾರು ಮೂರುವರೆಯಿಂದ ನಾಲ್ಕು ಲಕ್ಷದವರೆಗೆ ಹಣ ಕೊಟ್ಟಿದ್ದಾರೆ. ಕೊನೆಯ ಹಂತದಲ್ಲಿ ನಾನು ಅವರಿಂದ ದೂರವಾಗಲು ತೀರ್ಮಾನಿಸಿದ್ದೆ. ಹೇಳಿದ ಹಾಗೆ ಕೇಳಿಲ್ಲ ಅಂದ್ರೆ ನಿನ್ನ ವಿರುದ್ಧ ಕೇಸ್ ಹಾಕಿಸ್ತೀವಿ ಅಂದ್ರು . ಜೀವಾವಧಿ ಶಿಕ್ಷೆ ಆಗುವ ಹಾಗೆ ಮಾಡುತ್ತೇವೆ ಅಂತ ಬೆದರಿಕೆ ಹಾಕಿದ್ರು. ಇಲ್ಲವಾದ್ರೆ ಜನರೇ ನಿನ್ನ ಬಿಡಲ್ಲ, ಹೊಡೆದು ಮುಗಿಸ್ತಾರೆ ಅಂತ ಹೆದರಿಸಿದ್ರು ಎಂದು ಚಿನ್ನಯ್ಯ ಎಸ್‌ಐಟಿ ಅಧಿಕಾರಿಗಳ ಮುಂದೆ ಹೇಳಿದ್ದಾನೆ.
ದೂರುದಾರ ಚಿನ್ನಯ್ಯನ ಮೊಬೈಲ್ ರಿಟ್ರೀವ್ಗೆ ಮುಂದಾದ SIT
ಮಾಸ್ಕ್ಮ್ಯಾನ್ ಮೊಬೈಲ್ ಎಫ್ಎಸ್ಎಲ್ಗೆ ರವಾನಿಸಿದ SIT
ಇನ್ನೂ ಮಾಸ್ಕ್ ಮ್ಯಾನ್ ಚಿನ್ನಯ್ಯನ ಮೊಬೈಲ್ ಅನ್ನು ಎಸ್ಐಟಿ ಈಗಾಗಲೇ ವಶಕ್ಕೆ ಪಡೆದಿದೆ. ಫೋರೆನ್ಸಿಕ್ ತಜ್ಞರ ತಂಡದಿಂದ ಮೊಬೈಲ್ ಡಾಟಾವನ್ನು ರೀಟ್ರೀವ್ ಮಾಡಲಾಗುತ್ತಿದೆ. Mobile Forensic Extraction Tools ಬಳಸಿ ಡೇಟಾ ಪಡೆಯಲಾಗುತ್ತಿದೆ.
ಫೋನ್ನಲ್ಲಿದ್ದ ನಂಬರ್, ಫೈಲ್ಸ್, ಮೆಸೇಜ್, ಚಾಟ್ಸ್ ಡೀಟೈಲ್ಸ್ ಅನ್ನು ಪಡೆಯಲಾಗುತ್ತಿದೆ. ಡಿವೈಸ್ ಮೆಮೊರಿ, ಡಿಲೀಟ್ ಆದ ಫೈಲ್‌ಗಳವರೆಗೂ ಎಲ್ಲ ರಿಟ್ರೀವ್ ಆಗಲಿದೆ. ಚೆನ್ನನ ಫೋನಿನ ಗೂಗಲ್ ಡ್ರೈವ್, ಜಿ - ಮೇಲ್ ಡೇಟಾ ರಿಟ್ರೀವ್ ಮಾಡಲಾಗುತ್ತಿದೆ. ಫೋನ್ ರಿಟ್ರೀವ್ ಮಾಡಿದಾಗ ಸ್ಫೋಟಕ ಸಾಕ್ಷ್ಯಗಳು ಸಿಗುತ್ತಾವೆಯೇ ಎಂದು ಎಸ್‌ಐಟಿ ತನಿಖೆಯನ್ನು ಚುರುಕುಗೊಳಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.