/newsfirstlive-kannada/media/media_files/2025/08/23/mask_man_new-2025-08-23-11-40-49.jpg)
ಕೋರ್ಟ್ ನಲ್ಲಿ ಮಾಸ್ಕ್ ತೆಗೆದ ಚಿನ್ನಯ್ಯ
ಕಳೆದ 20-25 ದಿನಗಳ ಹಿಂದೆ ಮಾಸ್ಕ್ ಮ್ಯಾನ್ ಗೆ ಪೊಲೀಸರು ಭಾರಿ ಭದ್ರತೆ ನೀಡಿದ್ದರು. ಸಾಕ್ಷಿ ಸಂರಕ್ಷಣಾ ಕಾಯಿದೆಯಡಿ ಭಾರಿ ಭದ್ರತೆ ನೀಡಿದ್ದರು. ಆದರೇ, ರಾತ್ರಿ ಕಳೆದು ಬೆಳಗಾಗುವುದರೊಳಗೆ ಮಾಸ್ಕ್ ಮ್ಯಾನ್ ಚಿನ್ನಯ್ಯ ಅಲಿಯಾಸ್ ಚೆನ್ನ ಸಾಕ್ಷಿಯ ಬದಲು ಆರೋಪಿಯಾಗಿದ್ದಾನೆ. ಇಂದು ಎಸ್‌ಐಟಿ ಪೊಲೀಸರು, ಮಾಸ್ಕ್ ಮ್ಯಾನ್ ಚಿನ್ನಯ್ಯ ಅಲಿಯಾಸ್ ಚೆನ್ನನನ್ನು ಬಂಧಿಸಿದ ಬಳಿಕ ಸೀದಾ ಬೆಳ್ತಂಗಡಿ ಕೋರ್ಟ್ ಗೆ ಕರೆದೊಯ್ದಿದ್ದಾರೆ. ಕೋರ್ಟ್ ನಲ್ಲಿ ಮಾಸ್ಕ್ ತೆಗೆದು ಜಡ್ಜ್ ಬಳಿ ಚಿನ್ನಯ್ಯ ಹೋಗಿದ್ದಾನೆ. ಕೋರ್ಟ್ ನಲ್ಲಿ ಹಾಜರಿದ್ದ ವಕೀಲರು, ಜನರು, ಮಾಧ್ಯಮ ಪ್ರತಿನಿಧಿಗಳು ಚಿನ್ನಯ್ಯನ ಮುಖವನ್ನು ನೋಡಿದ್ದಾರೆ. ಚಿನ್ನಯ್ಯ ಪೂರ್ತಿ ಗಡ್ಡ ಬಿಟ್ಟಿರೋದು ಕೋರ್ಟ್ ಹಾಲ್ ನಲ್ಲಿ ಹಾಜರಿದ್ದ ಮಾಧ್ಯಮ ಪ್ರತಿನಿಧಿಗಳ ಗಮನಕ್ಕೆ ಬಂದಿದೆ.
ಕೋರ್ಟ್ ನಲ್ಲಿ ನ್ಯಾಯಾಧೀಶರ ಬಳಿ ಚಿನ್ನಯ್ಯನ ಹೇಳಿಕೆಯನ್ನು ವಿಡಿಯೋ ರೆಕಾರ್ಡ್ ಮಾಡಲಾಗಿದೆ. ಚಿನ್ನಯ್ಯ ಅಲಿಯಾಸ್ ಚೆನ್ನನ ಹೇಳಿಕೆಯನ್ನು ಸಂಪೂರ್ಣವಾಗಿ ವಿಡಿಯೋ ರೆಕಾರ್ಡ್ ಅನ್ನು ಎಸ್ಐಟಿ ಹಾಗೂ ಕೋರ್ಟ್ ಅಧಿಕಾರಿಗಳು ಮಾಡಿದ್ದಾರೆ.
ಎಸ್‌ಐಟಿ ಅಧಿಕಾರಿಗಳು ಹೆಚ್ಚಿನ ವಿಚಾರಣೆಗಾಗಿ ಚಿನ್ನಯ್ಯ ಅಲಿಯಾಸ್ ಚೆನ್ನನನ್ನು ತಮ್ಮ ವಶಕ್ಕೆ ನೀಡಬೇಕೆಂದು ಕೋರ್ಟ್ ಗೆ ಮನವಿ ಮಾಡುವ ಸಾಧ್ಯತೆ ಇದೆ. ಚಿನ್ನಯ್ಯನನ್ನು ವಶಕ್ಕೆ ಪಡೆದು, ಸುಳ್ಳು ದೂರಿನ ಹಿಂದಿನ ಷಡ್ಯಂತ್ರ, ಪಿತೂರಿದಾರರು ಯಾಱರು, ಅವರ ಉದ್ದೇಶ ಏನು? ಹಣಕಾಸಿನ ನೆರವು ನೀಡಿದ್ಯಾರು ಎಂಬ ಬಗ್ಗೆ ಎಲ್ಲ ಚಿನ್ನಯ್ಯನನ್ನು ಎಸ್‌ಐಟಿ ಅಧಿಕಾರಿಗಳು ತೀವ್ರವಾಗಿ ವಿಚಾರಣೆಯನ್ನು ನಡೆಸುವರು. ಹೀಗಾಗಿ ಚಿನ್ನಯ್ಯನನ್ನು ಎಸ್‌ಐಟಿ ವಶಕ್ಕೆ ನೀಡುವಂತೆ ಕೇಳುವ ಸಾಧ್ಯತೆ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.