ಕೃಷಿ ಸಚಿವರಾದ ಎನ್ ಚಲುವರಾಯಸ್ವಾಮಿ ಅವರು ರಾಜ್ಯದ ಸಾಂಪ್ರದಾಯಿಕ ಅಲೆಮಾರಿ ಕುರಿಗಾಯಿಗಳ ವಿದೇಯಕವನ್ನು ಜಾರಿಗೆ ತಂದಿದ್ದಾರೆ. ಎಲ್ಲ ಕುರಿಗಾಯಿಗಳ ಪರವಾಗಿ ಕೃಷಿ ಸಚಿವರಿಗೆ ಅಭಿನಂದನೆಗಳು ಎಂದು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ಅವರು ವಿಧಾನಸಭೆ ಕಲಾಪದಲ್ಲಿ ಹೇಳಿದ್ದಾರೆ. ಕೇವಲ ಕುರುಬರು ಮಾತ್ರ ಕುರಿಗಗಳನ್ನು ಕಾಯುತ್ತಿಲ್ಲ, ಎಲ್ಲ ಬಡವರು, ರೈತರು, ಹಿಂದು, ಮುಸ್ಲಿಂ ಸೇರಿ ಎಲ್ಲರು ಜೀವನಕ್ಕಾಗಿ ಮಾಡುತ್ತಿದ್ದಾರೆ. ಅವರ ಹೊಟ್ಟೆ ಪಾಡಿಗಾಗಿ ಇದೊಂದು ಉದ್ಯೋಗ ಆಗಿದೆ ಎಂದು ಹೇಳಿದ್ದಾರೆ.
ಬಾಗಲಕೋಟೆಯಲ್ಲಿ ಕುರಿಗಳನ್ನ ಕದಿಯಲು ಬಂದು ಒಬ್ಬರ ಜೀವನ ತೆಗೆದರು. ಹೀಗಾಗಿ ಅವರಿಗೆ ಕಾನೂನಾತ್ಮಕವಾಗಿ ರಕ್ಷಣೆ ಕೊಡಬೇಕು. ಕುರಿ ಕಾಯೋರು ಹುಟ್ಟಿ ಬೆಳೆದಿದ್ದು ಎಲ್ಲೋ, ಆದರೆ ಜೀವ ಬಿಟ್ಟಿದ್ದೋ ಎಲ್ಲೋ. ಅದಕ್ಕೆ ಕುರಿ ಕಾಯೋರಿಗೆ ಗನ್ ಲೈಸೆನ್ಸ್ ಕೊಡಬೇಕು. ಕೂರ್ಗ್ನಲ್ಲಿ ಈಜಿಯಾಗಿ ಲೈಸೆನ್ಸ್ ಸಿಗುತ್ತೆ. ಹಾಗೇ ಸಾಂಪ್ರದಾಯಿಕ ಕುರಿಗಾಯಿ ಇರುತ್ತಾನೋ ಅವನು ಅರ್ಜಿ ಹಾಕಿದ ತಕ್ಷಣ ಗನ್ ಲೈಸೆನ್ಸ್ ಕೊಡಬೇಕು ಎಂದು ಭೈರತಿ ಸುರೇಶ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ