/newsfirstlive-kannada/media/media_files/2025/11/06/kageri-contraversial-statement-on-national-anthem-2025-11-06-13-16-18.jpg)
ವಂದೇ ಮಾತರಂ ರಾಷ್ಟ್ರಗೀತೆ ಆಗಬೇಕಿತ್ತು ಎಂದ ಸಂಸದ ಕಾಗೇರಿ
ರಾಷ್ಟ್ರಗೀತೆ ಬಗ್ಗೆ ವಿವಾದಾತ್ಮಕ ಹೇಳಿಕೆಯನ್ನು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ನೀಡಿದ್ದಾರೆ.
ವಂದೇ ಮಾತರಂ ರಾಷ್ಟ್ರಗೀತೆ ಆಗಬೇಕಿತ್ತು ಎನ್ನುವ ಕೂಗಿತ್ತು. ಜನಗಣಮನಕ್ಕೆ ಸರಿಸಮಾನವಾದ ರಾಷ್ಟ್ರಗೀತೆ ವಂದೇ ಮಾತರಂ ಇದೆ. ಬ್ರಿಟಿಷ್ ಅಧಿಕಾರಿಯನ್ನ ಸ್ವಾಗತಿಸಲು ರಚನೆ ಮಾಡಿದ ಗೀತೆ ಜನಗಣಮನ. ವಂದೇ ಮಾತರಂ, ಜನ ಗಣಮನ ಎರಡನ್ನೂ ನಾವು ಒಪ್ಪಿಕೊಂಡು ಹೋಗುತ್ತಿದ್ದೇವೆ. ವಂದೇ ಮಾತರಂ ಕಂಠ ಕಂಠದಲ್ಲಿ ಪ್ರತಿಧ್ವನಿಸಬೇಕು ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೊನ್ನಾವರದಲ್ಲಿ ಹೇಳಿದ್ದಾರೆ.
ಜನಗಣಮನ ಬಗ್ಗೆ ಕಾಗೇರಿ ಹೇಳಿಕೆ ವಿಚಾರಕ್ಕೆ ವಿಧಾನಸೌಧದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ ಪ್ರತಿಕ್ರಿಯಿಸಿದ್ದಾರೆ. RSS ಅವರಿಗೆ ಅವರ ಇತಿಹಾಸ ಗೊತ್ತಿಲ್ಲ. ದಯವಿಟ್ಟು ಮನವಿ ಮಾಡಿಕೊಳ್ಳುತ್ತೇನೆ. ಎಲ್ಲ ಬಿಜೆಪಿ ನಾಯಕರು, ಸ್ವಯಂಸೇವಕರು RSS ನ ಆರ್ಗೈನೈಸರ್ ಮ್ಯಾಗಜೀನ್ ನ ಲೇಖನಗಳನ್ನ ಓದಿ. ಆಗ ನಿಮಗೆ ಗೊತ್ತಾಗುತ್ತೆ, ನೀವು ಎಷ್ಟು ದೊಡ್ಡ ದೇಶ ದ್ರೋಹಿಗಳು ಎಂಬುದು ನಿಮಗೆ ಗೊತ್ತಾಗುತ್ತೆ.
ನಿಮ್ಮ ಇತಿಹಾಸ ನಿಮಗೆ ಗೊತ್ತಾಗುತ್ತೆ . ನೀವು ಸಂವಿಧಾನಕ್ಕೂ ಗೌರವ ಕೊಟ್ಟಿಲ್ಲ . ನಮ್ಮ ರಾಷ್ಟ್ರ ಧ್ವಜ, ರಾಷ್ಟ್ರ ಗೀತೆಗೂ ಗೌರವ ಕೊಟ್ಟಿಲ್ಲ. ಇದು ಕಿಂಗ್ ಜಾರ್ಜ್ ಗೋಸ್ಕರ ಮಾಡಿದ್ದಾರೆ ಅಂತ ಹೇಳುತ್ತಿದ್ದರಲ್ಲ ಅದು ಅವರ ಇತಿಹಾಸ. ಅವರು ಸೃಷ್ಟಿಸಿದಂತ ಇತಿಹಾಸ . ರವೀಂದ್ರನಾಥ್ ಠಾಕೂರ್ ಅವರು 1937-39 ರಲ್ಲೇ ಇದರ ಬಗ್ಗೆ ಹೇಳಿದ್ದಾರೆ. ಇದು ನಮ್ಮ ದೇಶಕ್ಕಾಗಿ ಬರೆದಿರುವ ಗೀತೆ. Its not for king George 5,4 or any other George ಅಂತ ರವೀಂದ್ರನಾಥ ಠಾಕೂರ್ ಹೇಳಿದ್ದಾರೆ. ಇವರು ಓದಲ್ಲ ಮಾಡಲ್ಲ ಸುಮ್ಮನೇ ಸಾಮಾಜಿಕ ಜಾಲತಾಣದಲ್ಲಿ ಸುಳ್ಳಿನ ಕಾರ್ಖಾನೆ ನಡೆಸಿದ್ದಾರೆ . ಕೇಶವಕೃಪ ಹಾಗೂ ಶಾಖೆಗಳಲ್ಲಿ ನಡೆಸಿರುವ ಸುಳ್ಳು ಅನ್ನೇ ಇವರು ಇತಿಹಾಸ ಅಂದುಕೊಂಡಿದ್ದಾರೆ. ನಾವು ಇಲ್ಲಿಯವರೆಗೆ ಕೇಳಿರುವ ಪ್ರಶ್ನೆಗಳು ಅವರ ಮ್ಯಾಗಜೀನ್ ನಲ್ಲೇ ಬಂದಿದೆ . ಹಿರಿಯರ ಲೇಖನಗಳನ್ನ ಓದಿ ನಿಮಗೆ ಗೊತ್ತಾಗುತ್ತೆ . ನೀವು ಯಾವ ರೀತಿ ನಡೆದುಕೊಂಡಿದ್ದೀರಾ ಇತಿಹಾಸದಲ್ಲಿ ಅಂತ ನಿಮಗೆ ನಾಚಿಕೆ ಆಗುತ್ತೆ ಎಂದು ಗ್ರಾಮೀಣಾಭಿವೃದ್ದಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದಾರೆ.
/filters:format(webp)/newsfirstlive-kannada/media/media_files/2025/10/17/priyank-kharge-2025-10-17-07-54-48.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us