ಯಾವುದೇ ಸೋಷಿಯಲ್ ಮೀಡಿಯಾದ ಪೇಜ್ ನೋಡಿದರೆ ಎಲ್ಲರಿಗಿಂತಲೂ ದೊಡ್ಡ ಸೆಲೆಬ್ರೇಟಿ ಎಂದರೆ ದಸರಾ ಆನೆಗಳು. ಇದು ಒಂದು ರೀತಿಯಲ್ಲಿ ಒಳ್ಳೆಯ ಸಂದೇಶ ಸಾರುತ್ತದೆ. ನಮ್ಮ ಅರಣ್ಯ, ಕಾಡು ಪ್ರದೇಶಗಳ ಬಗ್ಗೆ ಹಾಗೂ ವನ್ಯ ಜೀವಿಗಳ ಕುರಿತು ಒಳ್ಳೆ ಅಭಿಪ್ರಾಯ ಜನರಲ್ಲಿ ಮೂಡುತ್ತದೆ. ಆಡಿ, ಬುಡಕಟ್ಟು ಜನರ ಬಗ್ಗೆ ಅರಿವು ಮೂಡುತ್ತದೆ. ದಸರಾದಲ್ಲಿ ದೊಡ್ಡ ಸೆಲೆಬ್ರೀಟಿಗಳು ಎಂದರೆ ಆನೆಗಳು ಎಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಹೇಳಿದ್ದಾರೆ.
ಕತ್ತಿವರಸೆ, ಕುದುರೆ ಸವಾರಿ ಅಂತಹದ್ದೇನು ನನಗೆ ಗೊತ್ತಿಲ್ಲ. ನಾನು ಕಲಿತಿಲ್ಲ. ಸಣ್ಣ ವಯಸ್ಸಲ್ಲಿ ಸ್ವಲ್ಪ ಕುದುರೆ ಬಗ್ಗೆ ಆಸಕ್ತಿ ಇತ್ತು. ದೊಡ್ಡವನು ಆಗುತ್ತ ಅದು ಹೋಯಿತು, ಈಗ ಇಲ್ಲ. ಮಹಾರಾಜರು ಯಾವತ್ತೂ ಕತ್ತಿ ಹಾಕುವ ಅವಶ್ಯಕತೆ ಇಲ್ಲ. ಬೇರೆಯವರು ಹಾಕಿಕೊಳ್ಳುತ್ತಿದ್ದರು. ಆದರೆ ಪಟ್ಟದ ಕತ್ತಿ ನನ್ನ ಜೊತೆ ಇರುತ್ತದೆ ಎಂದು ಸಂಸದ ಯದುವೀರ್ ಒಡೆಯರ್ ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us