/newsfirstlive-kannada/media/media_files/2025/10/29/mys_mother_son-2025-10-29-11-50-31.jpg)
ಮೈಸೂರು: ವಿದ್ಯುತ್ ತಂತಿ ತಗುಲಿ ತಾಯಿ ಹಾಗೂ ಮಗ ಇಬ್ಬರ ಜೀವ ಕಳೆದುಕೊಂಡಿರುವ ಘಟನೆ ಜಿಲ್ಲೆಯ ಹುಣಸೂರು ತಾಲೂಕಿನ ಎಮ್ಮೆಕೊಪ್ಪಲು ಗ್ರಾಮದಲ್ಲಿ ಇಂದು ನಡೆದಿದೆ.
ಎಮ್ಮೆಕೊಪ್ಪಲು ಗ್ರಾಮದ ನೀಲಮ್ಮ (39) ಹರೀಶ್ (19) ಮೃತ ದುರ್ದೈವಿಗಳು ಆಗಿದ್ದಾರೆ. ಎಂದಿನಂತೆ ನೀಲಮ್ಮ ಅವರು ಜಮೀನಿಗೆ ಕೆಲಸ ಮಾಡಲೆಂದು ಹೋಗಿದ್ದರು. ಈ ವೇಳೆ ಅವರಿಗೆ ವಿದ್ಯುತ್ ತಂತಿ ತಗುಲಿ ಕರೆಂಟ್​ ಶಾಕ್​ಗೆ ಒಳಗಾಗಿದ್ದರು. ಇದನ್ನು ನೋಡಿದ ಮಗ ಹರೀಶ್ ತಕ್ಷಣ ತಾಯಿನ ಕಾಪಾಡಲು ಹೋಗಿದ್ದಾರೆ.
ಆದರೆ ವಿದ್ಯುತ್​ ಇಬ್ಬರಿಗೂ ಪ್ರವಾಹಿಸಿದ್ದರಿಂದ ಸ್ಥಳದಲ್ಲೇ ಜೀವ ಕಳೆದುಕೊಂಡಿದ್ದಾರೆ. ಸೆಸ್ಕ್​ ನಿರ್ಲಕ್ಷ್ಯದಿಂದ ಸಾವು ಸಂಭವಿಸಿದೆ ಎಂದು ಕುಟುಂಬಸ್ಥರು, ಗ್ರಾಮಸ್ಥರು ಆರೋಪಿಸಿದ್ದಾರೆ. ಇನ್ನು ಮೃತರ ಕುಟುಂಬಸ್ಥರಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಇಲಾಖೆಯನ್ನು ಒತ್ತಾಯಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us