Advertisment

ಹೆತ್ತ ತಾಯಿಯೇ ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣು : ಅಂಥದ್ದು ಏನಾಗಿತ್ತು?

ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರ ಗ್ರಾಮದಲ್ಲಿ ಹೆತ್ತ ತಾಯಿಯೇ ತನ್ನ ಇಬ್ಬರು ಮಕ್ಕಳನ್ನು ಕೊಂದು ಆತ್ಮಹತ್ಯೆಗೆ ಶರಣಾಗಿದ್ದಾರೆ. ಮೊದಲನೇ ಮಗು ವಿಶೇಷ ಚೇತನ ಮಗುವಾದರೇ, 2ನೇ ಮಗು ಹೆಣ್ಣಿ ಮಗು ಆಗಿತ್ತು. ಇದರಿಂದ ಪತಿ- ಪತ್ನಿ ನಡುವೆ ಜಗಳವಾಗಿತ್ತು. ನೊಂದು ತಾಯಿ ಆತ್ಮಹತ್ಯೆಗೆ ಶರಣಾಗಿದ್ದಾಳೆ.

author-image
Chandramohan
MYSORE MOTHER KILLS BABIES02

ಬೆಟ್ಟದಪುರದ ಗ್ರಾಮದಲ್ಲಿ ಮಕ್ಕಳನ್ನು ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ತಾಯಿ

Advertisment
  • ಬೆಟ್ಟದಪುರದ ಗ್ರಾಮದಲ್ಲಿ ಮಕ್ಕಳನ್ನು ಹತ್ಯೆಗೈದು ಆತ್ಮಹತ್ಯೆಗೆ ಶರಣಾದ ತಾಯಿ
  • ಮೊದಲ ಮಗು ವಿಶೇಷ ಚೇತನ ಮಗು, 2ನೇ ಮಗು ಹೆಣ್ಣು ಮಗು
  • ಇದರಿಂದ ಗಂಡ-ಹೆಂಡತಿ ನಡುವೆ ಜಗಳ, ನೊಂದು ಆತ್ಮಹತ್ಯೆ

ತಾಯಿಗಿಂತ ದೇವರಿಲ್ಲ ಅಂತಾರೆ ಆದ್ರೆ ಇಲ್ಲೊಬ್ಬ ತಾಯಿ ತನ್ನ ಎರಡು ಹೆಣ್ಣು ಮಕ್ಕಳನ್ನೂ ಕ್ರೂರವಾಗಿ ಕೊಂದು.. ಬಳಿಕ ಆಕೆಯೂ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸಂಸ್ಕೃತಿಕ ನಗರಿ ಮೈಸೂರಿನ ನಡೆದಿರುವ ದಾರುಣ ಘಟನೆ ಬೆಚ್ಚಿಬೀಳಿಸಿದೆ.
ತಾಯಿಯನ್ನು ಕರುಣಾಮಯಿ ಅಂತೇವೆ.. ತನಗೆ ಎಷ್ಟೇ ಕಷ್ಟ ಬಂದ್ರೂ ಪರವಾಗಿಲ್ಲ ಮಕ್ಕಳಿಗೆ ಏನೂ ಆಗ್ಬಾರ್ದೆಂದು ಎದೆಯಲ್ಲಿ ಬಚ್ಚಿಟ್ಟುಕೊಂಡು ಸಾಕ್ತಾಳೆ.. ಆದ್ರೆ ಅರಮನೆ ನಗರಿಯಲ್ಲಿ ತಾಯಿಯೊಬ್ಬಳಿ ಕರುಣಾಮಯಿ ಅನ್ನೋ ಪದಕ್ಕೆ ವಿರುದ್ಧವಾಗಿದ್ದಾಳೆ.. ಒಂಬತ್ತು ತಿಂಗಳು ಹೊಟ್ಟೆಯಲ್ಲಿಟ್ಟುಕೊಂಡು ಎತ್ತು.. ಹೊತ್ತ ಪುಟ್ಟ ಮಕ್ಕಳನ್ನ ಅದರಲ್ಲೂ 10 ದಿನದ ಹೆಣ್ಣು ಮಗುವನ್ನು ತಾಯಿ ಕ್ರೂರವಾಗಿ ಕತ್ತು ಕೊಯ್ದು ಕೊಲೆ ಮಾಡಿ, ಆತ್ಮಹತ್ಯೆ ಶರಣಾಗಿದ್ದಾಳೆ.

Advertisment


ಕೌಟುಂಬಿಕ ಕಲಹ, ಹೆಣ್ಣು ಮಕ್ಕಳೆಂಬ ಕಾರಣಕ್ಕೆ ಹತ್ಯೆ
 10 ದಿನ ಮಗು ಸೇರಿ ಇಬ್ಬರು ಮಕ್ಕಳನ್ನು ಕೊಂದು, ಆತ್ಮಹತ್ಯೆ
 ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಗ್ರಾಮದ ಮುಸ್ಲಿಂ ಬ್ಲಾಕ್​​ನಲ್ಲಿ ಹೃದಯವಿದ್ರಾವಕ ಘಟನೆ ನಡೆದಿದೆ. 2ನೇ ಮಗುವಿನ ಬಾಣಿತನಕ್ಕಾಗಿ ತಂದೆ ಮನೆಗೆ ಬಂದವಳು, ಯಾರೂ ಊಹಿಸಿದ ಕೃತ್ಯವೆಸಗಿ, ತಾನೂ ಕೂಡ ಕಣ್ಮುಚ್ಚಿದ್ದಾಳೆ.

ಬೆಟ್ಟದಪುರದ ರಬಿಯಾ ಭಾನು, ಮಕ್ಕಳನ್ನ ಕೊಂದು ಆತ್ಮಹತ್ಯೆಗೆ ಶರಣು
3 ವರ್ಷಗಳ ಹಿಂದೆ ಸೈಯದ್​ ಮುಸಾವೀರ್​ ಜೊತೆ ರಬಿಯಾ ಭಾನು ಮದುವೆ
ಇಬ್ಬರ ದಾಂಪತ್ಯ ಜೀವನಕ್ಕೆ ಎರಡು ವರ್ಷದ ಒಂದು ಹೆಣ್ಣು ಮಗು ಇದೆ
ಮೊದಲ ಹೆಣ್ಣು ಮಗು ಅನಮ್ ಫಾತಿಯ ವಿಶೇಷ ಚೇತನಳಾಗಿದ್ದಾಳೆ
ಇದೇ ಕಾರಣಕ್ಕೆ ಪತಿ ಪತ್ನಿಯ ನಡುವೆ ಕೌಟುಂಬಿಕ ಕಲಹದ ಮಾಹಿತಿ
ಕಳೆದ 10 ದಿನದ ಹಿಂದೆ ಮತ್ತೊಂದು ಮಗುವಿಗೆ ಜನ್ಮ ನೀಡಿದ್ದ ರಬಿಯಾ
2ನೇಯದ್ದು ಕೂಡ ಹೆಣ್ಣು ಮಗುವಾಗಿದ್ದಕ್ಕೆ ಮನನೊಂದಿದ್ದ ರಬಿಯಾ ಭಾನು
ಮಕ್ಕಳನ್ನ ಕೊಂದು ಆತ್ಮಹತ್ಯೆಗೆ ಶರಣಾದ ರಬಿಯಾ ಭಾನು ಬೆಟ್ಟದಪುರದ ಗ್ರಾಮದವಳು.. 3 ವರ್ಷಗಳ ಹಿಂದೆ ಸೈಯದ್​ ಮುಸಾವೀರ್​ ಜೊತೆ ರಬಿಯಾ ಭಾನು ಮದುವೆ ಆಗಿತ್ತು. ಇಬ್ಬರ ದಾಂಪತ್ಯ ಜೀವನಕ್ಕೆ ಎರಡು ವರ್ಷದ ಒಂದು ಹೆಣ್ಣು ಮಗು ಇದೆ. ಮೊದಲ ಹೆಣ್ಣು ಮಗು ಅನಮ್ ಫಾತಿಯ ವಿಶೇಷ ಚೇತನಳಾಗಿದ್ದು, ಇದೇ ಕಾರಣಕ್ಕೆ ಪತಿ ಪತ್ನಿಯ ನಡುವೆ ಕೌಟುಂಬಿಕ ಕಲಹ ಇತ್ತಂತೆ.. ಇನ್ನು ಕಳೆದ 10 ದಿನದ ಹಿಂದೆ ಮತ್ತೊಂದು ಮಗುವಿಗೆ ಜನ್ಮ ನೀಡಿದ್ದಳು. ಆದ್ರೆ 2ನೇಯದ್ದು ಕೂಡ ಹೆಣ್ಣು ಮಗುವಾಗಿದ್ದಕ್ಕೆ ರಭಿಯಾ ಭಾನು ಮನನೊಂದಿದ್ದಳಂತೆ.
ಬೇಜಾರಿನಲ್ಲೇ ತಂದೆಯ ಮನೆಗೆ ಬಾಣಂತನಕ್ಕೆ ಬಂದಿದ್ದ ರಭಿಯಾ ಭಾನು ಇಂದು ಬೆಳಗ್ಗೆ ಘೋರ ಕೃತ್ಯವೆಸಗಿದ್ದಾಳೆ. ಮಲಗಿದ್ದ ಇಬ್ಬರ ಮಕ್ಕಳ ಕತ್ತು ಕುಯ್ದು.. ಬಳಿಕ ತಾನು ಕೂಡ ಕತ್ತು ಕೊಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಇತ್ತ ತಿಂಡಿಗೆ ಕರೆಯಲು ಕುಟುಂಬಸ್ಥರು ರೂಮಿನ ಬಳಿ ಹೋದಾಗ ಘಟನೆ ಬೆಳಕಿಗೆ ಬಂದಿದ್ದು, ಮಂಚದ ಮೇಲಿದ್ದ ಮಕ್ಕಳ ದೇಹ.. ನೆಲದ ಮೇಲೆ ಬಿದ್ದ ಮಗಳನ್ನು ನೋಡಿ ಕುಟುಂಬಸ್ಥರಿಗೆ ಸಿಡಿಲು ಬಡಿದಂತಾಗಿದೆ. ಇನ್ನು ಈ ಸುದ್ದಿ ತಿಳಿದು ಸ್ಥಳಕ್ಕೆ ಬೆಟ್ಟದಪುರ ಪೊಲೀಸರು ಭೇಟಿ ನೀಡಿ, ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.
ಒಟ್ಟಾರೆ.. ಮಕ್ಕಳಿಲ್ಲದ ಎಷ್ಟೋ ಜನರು ಮಕ್ಕಳಾದ್ರೆ ಸಾಕು ಅಂತಿದ್ರೆ. ಮೊದಲ ಮಗು ಅಂಗವಿಕಲೆ ಎರಡನೇ ಮಗು ಹೆಣ್ಣು ಎಂಬ ಕಾರಣದಿಂದ ತಾಯಿಯೇ ಮಕ್ಕಳ ಪಾಲಿಗೆ ಯಮನಾಗಿದ್ದಾಳೆ. ಅದರಲ್ಲೂ ರಕ್ತ ಮಡುವಿನಲ್ಲಿ ಬಿದ್ದಿದ್ದ 10 ದಿನದ ಪುಟ್ಟ ಮಗುವನ್ನು ನೋಡ್ತಿದ್ರೆ.. ಕಣ್ಣಾಲಿಯಲ್ಲಿ ನೀರು ಜಿನುಗುತ್ತೆ..

ರವಿಪಾಂಡವಪುರ, ನ್ಯೂಸ್ ಫಸ್ಟ್, ಮೈಸೂರು

MYSORE MOTHER KILLS BABIES

MOther kills two babies and suicide
Advertisment
Advertisment
Advertisment