/newsfirstlive-kannada/media/media_files/2026/01/28/muda-case-b-report-accepted-2026-01-28-18-02-34.jpg)
ಮುಡಾ ಕೇಸ್ ನಲ್ಲಿ ಸಿಎಂ, ಪತ್ನಿಗೆ ರಿಲೀಫ್
ಮುಡಾ ಕೇಸ್​ನಲ್ಲಿ ಸಿಎಂ ಸಿದ್ದರಾಮಯ್ಯಗೆ ಬಿಗ್ ರಿಲೀಫ್ ಸಿಕ್ಕಿದೆ . ಲೋಕಾಯುಕ್ತ ಪೊಲೀಸರು ಸಲ್ಲಿಸಿರುವ ಬಿ ರಿಪೋರ್ಟ್ ಅನ್ನು ಬೆಂಗಳೂರಿನ ಜನಪ್ರತಿನಿಧಿಗಳ ಕೋರ್ಟ್ ಅಂಗೀಕರಿಸಿದೆ. ಮುಡಾ ನಿವೇಶನ ಹಂಚಿಕೆ ಕೇಸ್‌ನ ಬಿ ರಿಪೋರ್ಟ್ ಅನ್ನು ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಕೋರ್ಟ್ ಗೆ ಸಲ್ಲಿಕೆ ಮಾಡಿದ್ದರು. ಜನಪ್ರತಿನಿಧಿಗಳ ಕೋಟ್೯ ಗೆ ಬಿ ರಿಪೋರ್ಟ್ ಅನ್ನು ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಸಲ್ಲಿಸಿದ್ದರು. ಬಿ ರಿಪೋರ್ಟ್ ಪುರಸ್ಕೃತವಾಗಿದ್ದು ಸಿಎಂ & ಕುಟುಂಬಕ್ಕೆ ಬಿಗ್ ರಿಲೀಫ್ ಸಿಕ್ಕಿದೆ.
ಇದರಿಂದಾಗಿ ಮುಡಾ ಕೇಸ್​ನಲ್ಲಿ ಸಿಎಂ ಸಿದ್ದರಾಮಯ್ಯ ಕಳಂಕ ಮುಕ್ತರಾಗಿದ್ದಾರೆ. ನ್ಯಾಯಮೂರ್ತಿ ಸಂತೋಷ್ ಗಜಾನನ್​ ಭಟ್​​ ಅವರು ಬಿ ರಿಪೋರ್ಟ್ ಅಂಗೀಕಾರ ಮಾಡಿದ್ದಾರೆ. ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ ಸಿದ್ದರಾಮಯ್ಯ, ಬಾಮೈದ ಮಲ್ಲಿಕಾರ್ಜುನಸ್ವಾಮಿ, A4 ದೇವರಾಜುಗೆ ಬಿಗ್​ ರಿಲೀಫ್ ಸಿಕ್ಕಿದೆ. ಇನ್ನೂಳಿದ ಆರೋಪಿಗಳ ವಿರುದ್ಧದ ತನಿಖೆ ಮುಂದುವರಿಯಲಿದೆ. ಮೂಡಾ ಆಯುಕ್ತರು, ಅಧಿಕಾರಿಗಳು ಸೇರಿದಂತೆ ಉಳಿದ ಆರೋಪಿಗಳ ವಿರುದ್ಧ ತನಿಖೆ ಮುಂದುವರಿಯಲಿದೆ.
ಬಿ ರಿಪೋರ್ಟ್ ಅಂದರೇ, ಕೇಸ್ ತನಿಖೆಯನ್ನು ಮುಂದುರಿಸಿ, ಚಾರ್ಜ್ ಷೀಟ್ ಸಲ್ಲಿಸಲು ಪೂರಕವಾದ ಸಾಕ್ಷ್ಯಾಧಾರಗಳು ಇಲ್ಲ. ಹೀಗಾಗಿ ಪ್ರಕರಣವನ್ನು ಮುಕ್ತಾಯಗೊಳಿಸಬೇಕೆಂದು ತನಿಖಾಧಿಕಾರಿಗಳು ಕೋರ್ಟ್ ಗೆ ಸಲ್ಲಿಸುವ ವರದಿಯನ್ನು ಬಿ ರಿಪೋರ್ಟ್ ಎಂದು ಕರೆಯಲಾಗುತ್ತೆ. ಸಿಎಂ ಸಿದ್ದರಾಮಯ್ಯ, ಪತ್ನಿ ಪಾರ್ವತಿ ವಿರುದ್ಧ ಪ್ರಕರಣವನ್ನು ತನಿಖಾಧಿಕಾರಿಗಳು ಮುಕ್ತಾಯಗೊಳಿಸಿದ್ದು, ಇನ್ನೂ ಮುಂದೆ ಯಾವುದೇ ತನಿಖೆ, ವಿಚಾರಣೆ ಸಿಎಂ, ಪತ್ನಿ ಪಾರ್ವತಿ ವಿರುದ್ದ ನಡೆಯಲ್ಲ.
ಇದೇ ಕೇಸ್ ಗೆ ಸಂಬಂಧಿಸಿದಂತೆ ಇ.ಡಿ. ದಾಖಲಿಸಿಕೊಂಡಿದ್ದ ಕೇಸ್ ಅನ್ನು ಈಗಾಗಲೇ ಹೈಕೋರ್ಟ್ ಮತ್ತು ಸುಪ್ರೀಂಕೋರ್ಟ್ ರದ್ದುಗೊಳಿಸಿವೆ. ಸಿಎಂ ಪತ್ನಿ ಪಾರ್ವತಿ ಹಾಗೂ ನಗರಾಭಿವೃದ್ದಿ ಖಾತೆ ಸಚಿವ ಭೈರತಿ ಸುರೇಶ್ ಅವರಿಗೆ ಇ.ಡಿ. ನೀಡಿದ್ದ ಸಮನ್ಸ್ ಅನ್ನು ಹೈಕೋರ್ಟ್ ರದ್ದುಪಡಿಸಿದೆ. ಹೈಕೋರ್ಟ್ ಆದೇಶದಲ್ಲಿ ಮಧ್ಯಪ್ರವೇಶ ಮಾಡಲ್ಲ ಎಂದು ಸುಪ್ರೀಂಕೋರ್ಟ್ ಕೂಡ ಹೇಳಿದೆ. ಹೈಕೋರ್ಟ್ ಆದೇಶದ ವಿರುದ್ಧ ಇ.ಡಿ. ಸುಪ್ರೀಂಕೋರ್ಟ್ ಗೆ ಮೇಲ್ಮನವಿ ಸಲ್ಲಿಸಿತ್ತು. ಆದರೇ, ಆ ಮೇಲ್ಮನವಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ಹೀಗಾಗಿ ಮುಡಾ ಕೇಸ್ ನಲ್ಲಿ ಸಿಎಂ, ಪತ್ನಿ ಪಾರ್ವತಿ ಹಾಗೂ ನಗರಾಭಿವೃದ್ದಿ ಖಾತೆ ಸಚಿವ ಭೈರತಿ ಸುರೇಶ್ ವಿರುದ್ಧ ಇ.ಡಿ. ಕೇಸ್ ಕೂಡ ರದ್ದುಗೊಂಡಿದೆ.
ಈಗ ಸಿಎಂ ಹಾಗೂ ಪತ್ನಿ ಪಾರ್ವತಿ ಅವರಿಗೆ ಲೋಕಾಯುಕ್ತ ಕೇಸ್ ನಿಂದಲೂ ಸಂಪೂರ್ಣ ಮುಕ್ತಿ ಸಿಕ್ಕಿದೆ. ಹೀಗಾಗಿ ಮುಡಾ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಬೇರೆ ಇನ್ನಾವುದೇ ತನಿಖಾ ಸಂಸ್ಥೆಗಳು ಕೂಡ ಸಿಎಂ, ಪತ್ನಿ ಪಾರ್ವತಿ ವಿರುದ್ಧ ಈಗ ತನಿಖೆ ನಡೆಸುತ್ತಿಲ್ಲ. ಹೀಗಾಗಿ ಇದು ಸಿಎಂ ಹಾಗೂ ಪತ್ನಿ ಪಾರ್ವತಿ ಅವರಿಗೆ ಸಿಕ್ಕ ಬಿಗ್ ರಿಲೀಫ್ ಆಗಿದೆ.
/filters:format(webp)/newsfirstlive-kannada/media/media_files/2026/01/28/muda-case-b-report-accepted-1-2026-01-28-18-03-45.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us