/newsfirstlive-kannada/media/media_files/2025/12/26/mysore-palace-blast-case-death-rise-to-two-2025-12-26-17-51-34.jpg)
ಮೈಸೂರು ಸ್ಪೋಟ ಕೇಸ್ ನಲ್ಲಿ ಸಾವನ್ನಪ್ಪಿದವರ ಸಂಖ್ಯೆ ಎರಡಕ್ಕೆ ಏರಿಕೆ
ಮೈಸೂರು ಅರಮನೆಯ ಬಳಿ ಗ್ಯಾಸ್ ಬ್ಲಾಸ್ಟ್ ದುರಂತ ಪ್ರಕರಣದಲ್ಲಿ ಮತ್ತೊಬ್ಬ ವ್ಯಕ್ತಿ ಸಾವನ್ನಪ್ಪಿದ್ದಾರೆ. ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಂಜುಳಾ ಎಂಬುವವರು ಸಾವನ್ನಪ್ಪಿದ್ದಾರೆ. ಇದರಿಂದಾಗಿ ಹೀಲಿಯಂ ಸ್ಪೋಟ ಕೇಸ್ ನಲ್ಲಿ ಸಾವನ್ನಪ್ಪಿದವರ ಸಂಖ್ಯೆ ಎರಡಕ್ಕೇರಿದೆ.
ಮೈಸೂರಿನ ಕೆ.ಆರ್. ಆಸ್ಪತ್ರೆಯಲ್ಲಿ ಮಂಜುಳಾ ಚಿಕಿತ್ಸೆ ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಇಂದು ಸಾವನ್ನಪ್ಪಿದ್ದಾರೆ. ತಡ ರಾತ್ರಿ ಮೈಸೂರಿನ ಕೆ. ಆರ್. ಆಸ್ಪತ್ರೆಗೆ ಗಾಯಾಳು ಮಂಜುಳಾರನ್ನು ದಾಖಲಿಸಲಾಗಿತ್ತು. ಮಂಜುಳಾ ನಂಜನಗೂಡಿನವರು. ಗ್ಯಾಸ್ ಬ್ಲಾಸ್ಟ್ ದುರಂತಕ್ಕೆ ಒಟ್ಟು ಇಬ್ಬರು ಸಾವನ್ನಪ್ಪಿದ್ದಾರೆ.
ಅರಮನೆ ಮುಂಭಾಗ ಹೀಲಿಯಂ ಸಿಲಿಂಡರ್ ಬ್ಲಾಸ್ಟ್ ಸ್ಥಳಕ್ಕೆ ಇಂದು ಎಫ್ಎಸ್ಎಲ್ ತಂಡ ಭೇಟಿ ನೀಡಿ ಸ್ಯಾಂಪಲ್ ಸಂಗ್ರಹಿಸಿದೆ. ಘಟನೆ ನಡೆದ ಜಯಮಾರ್ತಾಂಡ ಗೇಟ್ ಬಳಿ ಸ್ಯಾಂಪಲ್ ಕಲೆಕ್ಟ್ ಮಾಡಿರುವ ಎಫ್ಎಸ್‌ಎಲ್ ತಂಡ, ಸ್ಪೋಟದ ಸಂಪೂರ್ಣ ಮಾಹಿತಿಯನ್ನು ಕಲೆ ಹಾಕಿದೆ. ಸ್ಪೋಟದ ಜಾಗದಲ್ಲಿ ರಕ್ತದ ಸ್ಯಾಂಪಲ್ ಗಳ ಜೊತೆಗೆ ಒಂದಷ್ಟು ವಸ್ತುಗಳ ಸ್ಯಾಂಪಲ್ ಗಳನ್ನು ಎಫ್‌ಎಸ್ಎಲ್ ತಂಡ ಸಂಗ್ರಹಿಸಿದೆ.
/filters:format(webp)/newsfirstlive-kannada/media/media_files/2025/12/26/mysore-aramane-blast-2025-12-26-08-57-01.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us