/newsfirstlive-kannada/media/media_files/2025/12/28/mysore-robbary-2025-12-28-15-31-06.jpg)
ಹುಣಸೂರು ಬಸ್​​ ನಿಲ್ದಾಣದ ಹಿಂದಿರುವ ‘ಸ್ಕೈ ಗೋಲ್ಡ್ ಅಂಡ್ ಡೈಮಂಡ್ ಮಳಿಗೆ’ಯಲ್ಲಿದ್ದ ಸುಮಾರು 4 ರಿಂದ 5 ಕೋಟಿ ರೂಪಾಯಿ ಮೌಲ್ಯದ ಚಿನ್ನ ಹಾಗೂ ವಜ್ರಾಭರಣ ದರೋಡೆ ಮಾಡಲಾಗಿದೆ. ಬೈಕಲ್ಲಿ ಬಂದ ಐವರು ಮುಸುಕುದಾರಿಗಳು ಅಂಗಡಿ ಮ್ಯಾನೇಜರ್ ಅಜ್ಗರ್ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿದ್ದಾರೆ. ಇದರಿಂದ ಮಳಿಗೆಯಲ್ಲಿದ್ದ ಇತರ ಸಿಬ್ಬಂದಿ ಗಾಬರಿಯಾಗಿದ್ದಾರೆ.
/filters:format(webp)/newsfirstlive-kannada/media/media_files/2025/12/28/mysore-robbary-1-2025-12-28-15-35-42.jpg)
ನಂತರ ಅಲ್ಲಿದ್ದ ಚಿನ್ನಾಭರಣ, ವಜ್ರಾಭರಣ ಜೊತೆಗೆ ಮೌಲ್ಯಯುತ ವಸ್ತುಗಳನ್ನು ದೋಚಿಕೊಂಡು ಹೋಗಿದ್ದಾರೆ. ಐವರಲ್ಲಿ ಓರ್ವ ದರೋಡೆಕೋರ ಅಲ್ಲಿಂದ ಪರಾರಿ ಆಗುವ ವೇಳೆ ಹೆಲ್ಮೆಟ್ ಬಿಟ್ಟು ಹೋಗಿದ್ದಾನೆ.
ಗುಂಡಿನ ದಾಳಿಯಲ್ಲಿ ಮ್ಯಾನೇಜರ್​ ಅಸ್ಗರ್​​ಗೆ ಗಾಯವಾಗಿದೆ. ಸದ್ಯ ಅವರನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಸ್ಥಳಕ್ಕೆ ಹುಣಸೂರು ಪೊಲೀಸರು ದೌಡಾಯಿಸಿ ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ:‘ಟಾಕ್ಸಿಕ್’ ಹುಮಾ ಖುರೇಷಿ ಫಸ್ಟ್​ ಲುಕ್ ಔಟ್! ಹೆಂಗಿದೆ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us