/newsfirstlive-kannada/media/media_files/2025/09/19/mysore-deepika-2025-09-19-12-58-58.jpg)
ದೀಪಿಕಾ ವಿದ್ಯಾರ್ಥಿನಿ Photograph: (ದೀಪಿಕಾ ವಿದ್ಯಾರ್ಥಿನಿ)
ಮೈಸೂರು: ಯುವತಿ ಲಕ್ಷ್ಮಣ ತೀರ್ಥ ನದಿಗೆ ಹಾರಿ ಆ*ಹತ್ಯೆ ಮಾಡಿಕೊಂಡಿದ್ದಾಳೆ. ಮೈಸೂರಿನ (Mysore) ಹರವೆ ಗ್ರಾಮದ ನಿವಾಸಿ ನಂಜುಂಡಸ್ವಾಮಿ ಮತ್ತು ಅಂಬುಜ ದಂಪತಿ ಪುತ್ರಿ ದೀಪಿಕಾ (Deepika) ಡೆ*​ನೋಟ್ ಬರೆದು ತೂಗುಸೇತುವೆ ಮೇಲಿಂದ ಹಾರಿ ಜೀವ ಬಿಟ್ಟಿದ್ದಾಳೆ.
ದೀಪಿಕಾ ಎಂಬಾಕೆ ದ್ವಿತೀಯ ಪಿಯುಸಿ ವಿದ್ಯಾರ್ಥಿನಿಯಾಗಿದ್ದು, ಮೈಸೂರಿನ ಜಯಲಕ್ಷ್ಮಿಪುರಂನಲ್ಲಿರುವ ವಿಶ್ವಕವಿ ಕುವೆಂಪು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದಳು. ಇದೀಗ ಇದಕ್ಕಿದ್ದಂತೆ ನನ್ನ ಸಾವಿಗೆ ನಾನೇ ಕಾರಣ ಎಂದು ನೋಟ್ ಬರೆದಿಟ್ಟು ದುಡುಕಿನ ನಿರ್ಧಾರ ತೆಗೆದುಕೊಂಡಿದ್ದಾಳೆ.
/filters:format(webp)/newsfirstlive-kannada/media/media_files/2025/09/19/deepika-new-2025-09-19-13-08-23.jpg)
ವಿದ್ಯಾರ್ಥಿನಿಯ ಈ ನಿರ್ಧಾರ ಹಲವು ಅನುಮಾಗಳಿಗೆ ಕಾರಣವಾಗಿದೆ. ಮಗಳನ್ನು ಕಳೆದುಕೊಂಡ ಪೋಷಕರು ಶೋಕದಲ್ಲಿ ಮುಳುಗಿದ್ದಾರೆ. ಹುಣಸೂರು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us