/newsfirstlive-kannada/media/media_files/2026/01/23/new-born-babies-2026-01-23-07-18-36.jpg)
ಸಾಂಧರ್ಬಿಕ ಫೋಟೋ Photograph: (AI)
ಮೈಸೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಪರೂಪದ ಘಟನೆಯೊಂದು ನಡೆದಿದ್ದು, ಮಹಿಳೆಯೊಬ್ಬರು ತ್ರಿವಳಿ ಮಕ್ಕಳಿಗೆ ಜನ್ಮ ನೀಡಿದ್ದಾರೆ. ಮೈಸೂರಿನ ಎನ್.ಆರ್.ಮೊಹಲ್ಲಾದಲ್ಲಿರುವ 'ಶಂಕರ್ ನರ್ಸಿಂಗ್ ಹೋಮ್'ನಲ್ಲಿ ಈ ವಿಶೇಷ ಹೆರಿಗೆ ನಡೆದಿದೆ.
ಮಂಡ್ಯ ಜಿಲ್ಲೆಯ ಮಹಿಳೆ
ಮಂಡ್ಯ ಜಿಲ್ಲೆಯ ಕೆ.ಆರ್. ಪೇಟೆ ತಾಲೂಕಿನ ಅಕ್ಕಿಹೆಬ್ಬಾಳು ಗ್ರಾಮದ ಮಹಿಳೆಯೊಬ್ಬರು ಹೆರಿಗೆಗಾಗಿ ಶಂಕರ್ ನರ್ಸಿಂಗ್ ಹೋಮ್‌ಗೆ ದಾಖಲಾಗಿದ್ದರು. ಇದೀಗ ಅವರು ಒಂದು ಹೆಣ್ಣು ಮತ್ತು ಎರಡು ಗಂಡು ಮಕ್ಕಳಿಗೆ ಜನ್ಮ ನೀಡುವ ಮೂಲಕ ಒಟ್ಟು ಮೂರು ಮಕ್ಕಳ ತಾಯಿಯಾಗಿದ್ದಾರೆ. ಮೂರು ಮಕ್ಕಳು ಆರೋಗ್ಯವಾಗಿವೆ. ಹೆಣ್ಣು ಮಗು 1.5 ಕೆಜಿ ತೂಕ ಇದ್ದರೆ, ಗಂಡು ಮಗು 1.8 ಕೆಜಿ ಇದೆ. ಹಾಗಯೇ ಇನ್ನೊಂದು ಗಂಡು ಮಗು 2.5 ಕೆಜಿ ತೂಕ ಇದೆ.
ತಾಯಿ-ಮಕ್ಕಳು ಕ್ಷೇಮ:
ಸಾಮಾನ್ಯವಾಗಿ ತ್ರಿವಳಿ ಮಕ್ಕಳ ಜನನದ ಸಂದರ್ಭದಲ್ಲಿ ಆರೋಗ್ಯದ ಏರುಪೇರಾಗುವ ಸಾಧ್ಯತೆ ಇರುತ್ತದೆ. ಆದರೆ, ಈ ಪ್ರಕರಣದಲ್ಲಿ ತಾಯಿ ಮತ್ತು ಮೂರೂ ಮಕ್ಕಳು ಸಂಪೂರ್ಣವಾಗಿ ಆರೋಗ್ಯವಾಗಿದ್ದಾರೆ ಎಂದು ನರ್ಸಿಂಗ್ ಹೋಮ್ ಮಾಲೀಕರಾದ ಡಾ. ಭಾರತಿ ಶಂಕರ್ ಅವರು ಮಾಹಿತಿ ನೀಡಿದ್ದಾರೆ. ಒಂದೇ ಬಾರಿಗೆ ಮೂರು ಮಕ್ಕಳು ಜನಿಸಿರುವುದು ಕುಟುಂಬಸ್ಥರಲ್ಲಿ ಹಾಗೂ ಆಸ್ಪತ್ರೆಯ ಸಿಬ್ಬಂದಿಯಲ್ಲಿ ಸಂತಸ ಮೂಡಿಸಿದೆ.
ಇದನ್ನೂ ಓದಿ:ಶಿರಸಿ ಮೂಲದ ಉಗ್ರನಿಗೆ 10 ವರ್ಷ ಕಠಿಣ ಜೈಲು ಶಿಕ್ಷೆ..!
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us