/newsfirstlive-kannada/media/media_files/2026/01/19/rfo-kantharaj-chauhan-death-2026-01-19-16-07-26.jpg)
RFO ಕಾಂತರಾಜ್ ಚೌಹಾಣ್ ಅನುಮಾನಾಸ್ಪದವಾಗಿ ಸಾವು
ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ RFO ಶವವಾಗಿ ಪತ್ತೆಯಾಗಿದ್ದಾರೆ. ಟಿ. ನರಸೀಪುರ ತಾಲ್ಲೂಕಿನ RFO ಕಾಂತರಾಜ್ ಚೌಹಾಣ್ ಶವವಾಗಿ ಪತ್ತೆಯಾದ RFO ಆಗಿದ್ದಾರೆ. ಮೈಸೂರಿನ ಕೇಂದ್ರ ಬಸ್ ನಿಲ್ದಾಣದ ಯುವರಾಜ್ ಗ್ಯಾಲಕ್ಸಿಯಲ್ಲಿ ಕಾಂತರಾಜ್ ಚೌಹಾಣ್ ರೂಮು ಬುಕ್ ಮಾಡಿದ್ದರು. ನಿನ್ನೆ ಮಧ್ಯಾಹ್ನ ಸ್ನೇಹಿತ ಮಲ್ಲನಗೌಡ ಪಾಟೀಲ್ ಜೊತೆ ಕಾಂತರಾಜ್ ಔಹಾಣ್. ರೂಂ ಬುಕ್ ಮಾಡಿದ್ದರು
ಕಳೆದ ಹದಿನೈದು ದಿನಗಳ ಹಿಂದಷ್ಟೇ ನರಸೀಪುರಕ್ಕೆ ವರ್ಗವಾಗಿ ಕಾಂತರಾಜ್ ಚೌಹಾಣ್ ಬಂದಿದ್ದರು.
ಯುವರಾಜ್ ಗೆಲಾಕ್ಸಿ ಹೋಟೆಲ್ ನಿಂದ ಕುಮಾರನ್ ಜುವೆಲ್ಸರ್ಸ್ ಹಿಂಭಾಗದ ಕಾರಿಡಾರ್ ನಲ್ಲಿ ಕಾಂತರಾಜ್ ಚೌಹಾಣ್ ಶವ ಬಿದ್ದಿತ್ತು. ಜೊತೆಗಿದ್ದ ಗಂಗಾವತಿ ಮೂಲದ ಮಲ್ಲನಗೌಡ ಪಾಟೀಲ್ ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ. ಸ್ನೇಹಿತ ಮಲ್ಲನಗೌಡ ಪಾಟೀಲ್ ವರ್ತನೆ ಈಗ ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಮೈಸೂರಿನ ಲಷ್ಕರ್ ಪೊಲೀಸ್ ಠಾಣೆಯಲ್ಲಿ ಅಸಹಜ ಸಾವಿನ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us