/newsfirstlive-kannada/media/media_files/2025/10/10/mysore-case-2025-10-10-09-52-15.jpg)
ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಮೈಸೂರಿನ ಬಾಲಕಿ ಅತ್ಯಾಚಾರ ಕೊಲೆ ಪ್ರಕರಣ ಆರೋಪಿಯ ಕಾಲಿಗೆ ಗುಂಡೇಟು ಬಿದ್ದಿದೆ. ದಸರಾಕ್ಕೆ ವ್ಯಾಪಾರಕ್ಕಾಗಿ ಬಂದಿದ್ದ ಬಾಲಕಿ ಮೇಲೆ ಅಮಾನುಷ ಕೃತ್ಯ ಎಸಗಿದ್ದ ಕೀಚಕನಿಗೆ ಪೊಲೀಸರು ಕಾಲಿಗೆ ಗುಂಡು ಹೊಡೆದು ಬಂಧಿಸಿದ್ದಾರೆ.
ನಿನ್ನೆ ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ಅಮಾನುಷ ಘಟನೆಯೊಂದು ನಡೆದಿದೆ. ದಸರಾಕ್ಕೆ ವ್ಯಾಪಾರಕ್ಕಾಗಿ ಬಂದಿದ್ದ ಬಾಲಕಿಯ ಶವ, ವಸ್ತು ಪ್ರದರ್ಶನ ಆವರಣ ಸಮೀಪ ಪತ್ತೆಯಾಗಿತ್ತು. ಹೊಟ್ಟೆ ಪಾಡಿಗಾಗಿ ಕಲಬುರಗಿಯಿಂದ ಮೈಸೂರಿಗೆ ಬಂದು ಬಲೂನ್ ಮಾರಾಟ ಮಾಡ್ತಿದ್ದ ಬಾಲಕಿ ಮೇಲೆ ಕಾಮುಕ ರಾಕ್ಷಸ ಕೃತ್ಯ ಮೆರೆದಿದ್ದ. ಈ ಕಾಮಕ್ರಿಮಿಯ ಅಟ್ಟಹಾಸಕ್ಕೆ ಬಾಲಕಿ ಉಸಿರೇ ನಿಂತೋಗಿದೆ.
ಕಾಮುಕ ಕಾರ್ತಿಕ್ ಕಾಲಿಗೆ ಗುಂಡು ಹೊಡೆದ ಪೊಲೀಸರು
ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ಪೊಲೀಸರು ಕೃತ್ಯ ಎಸಗಿದ್ದ ಆರೋಪಿ ಪತ್ತೆಗೆ ಮುಂದಾದ್ರು. ಕೃತ್ಯ ನಡೆದ ಸ್ಥಳದ ಸುತ್ತಲೂ ಸೇರಿದಂತೆ ಕೊಲೆ ಆರೋಪಿ ಓಡಾಡಿರೋ ದೃಶ್ಯಗಳ ಸಿಸಿಟಿವಿ ಪುಟೇಜ್​ಗಳನ್ನ ಕಲೆ ಹಾಕಿದ್ರು. ಸಿಸಿಟಿವಿ ದೃಶ್ಯ ಆಧರಿಸಿ ಆರೋಪಿ ಕಾರ್ತಿಕ್​ನನ್ನ ಕೊಳ್ಳೆಗಾಲದಲ್ಲಿ ಪತ್ತೆ ಹಚ್ಚಿದ್ರು. ಆತನನ್ನ ಬಂಧಿಸಿ ಮೈಸೂರಿಗೆ ವಾಪಸ್​ ಕರೆತರುವಾಗ ಕಾಮುಕ ಕಾರ್ತಿಕ್​​ ಕಿರಿಕ್​​​ ಮಾಡಿದ್ದ. ಪೊಲೀಸರಿಗೆ ಹಲ್ಲೆ ಮಾಡಿ ಎಸ್ಕೇಪ್​ ಆಗಲು ಮುಂದಾಗಿದ್ದಾನೆ. ಈ ವೇಳೆ ಪೊಲೀಸರ ಬುಲೆಟ್​ ಆರೋಪಿಯ ಕಾಲು ಸೀಳಿದೆ.
ಒಟ್ಟಾರೆ, ದೇಶದಲ್ಲಿ ಇಂಥಹ ಕಾಮಕ್ರಿಮಿಗಳ ಅಟ್ಟಹಾಸದಿಂದ ಸಮಾಜದಲ್ಲಿ ಮಹಿಳೆಯರಿಗೆ ಪುಟ್ಟ ಮಕ್ಕಳಿಗೆ ರಕ್ಷಣೆಯೇ ಇಲ್ಲದಂತಾಗಿದೆ. ನೀಚ ಕೃತ್ಯ ಎಸಗಿದ ಕೀಚಕನಿಗೆ ತಕ್ಕ ಶಿಕ್ಷೆ ವಿಧಿಸಬೇಕಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಅತಿ ದೊಡ್ಡ ಭೂ ಹಗರಣ.. 500 ಕೋಟಿ ರೂಪಾಯಿ ಬೆಲೆ ಬಾಳುವ ಜಾಗ ಗುಳುಂ..?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ