/newsfirstlive-kannada/media/media_files/2025/11/03/mysore-suicide-ramu-2025-11-03-16-02-10.jpg)
ಸುಳ್ಳು ಆರೋಪದಿಂದ ಮನನೊಂದು ಆತ್ಮಹತ್ಯೆಗೆ ಶರಣಾದ ರಾಮು
ಶಾಲೆಯ ದೈಹಿಕ ಶಿಕ್ಷಕನಿಗೆ ವಿದ್ಯಾರ್ಥಿನಿ ಜೊತೆ ದೈಹಿಕ ಸಂಬಂಧದಿಂದ ಆಕೆಯ ಗರ್ಭಿಣಿಯಾಗಿದ್ದಾಳೆ. ಅಪ್ರಾಪ್ತೆ ಗರ್ಭಿಣಿ ಆಗಿದ್ದಕ್ಕೆ ಯುವಕನ ಮೇಲೆ ಸುಳ್ಳು ಆರೋಪವನ್ನು ಹೊರಿಸಲಾಗಿದೆ. ಇದರಿಂದ ಮನನೊಂದ ಪಿರಿಯಾಪಟ್ಟಣ ತಾಲ್ಲೂಕಿನ ಕುಡಕೂರು ನಿವಾಸಿ ರಾಮು ಎಂಬ 27 ವರ್ಷದ ಯುವಕ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಹುಡುಗಿಯನ್ನು ಮಾತನಾಡಿಸಿದಕ್ಕೆ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಇದಕ್ಕೆಲ್ಲಾ ಶಾಲೆಯ ಪಿ.ಟಿ. ಟೀಚರ್ ಕಾರಣ. ಅವರು ಹೀಗೆ ಮಾಡಿದ್ದಕ್ಕೆ ನನ್ನ ಮೇಲೆ ಹೇಳುತ್ತಾ ಇದ್ದಾರೆ. ಹೀಗಾಗಿ ನಾನು ಸೂಸೈಡ್ ಮಾಡಿಕೊಳ್ಳುತ್ತೇನೆ ಎಂದು ವಾಯ್ಸ್ ನೋಟ್ ಹಾಕಿರುವ ಯುವಕ ರಾಮು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ನನಗೂ ಆಕೆಗೂ ಯಾವುದೇ ಸಂಬಂಧ ಇಲ್ಲ. ನನ್ನ ಮೇಲೆ ಸುಳ್ಳು ಆರೋಪ ಮಾಡಲಾಗಿದೆ. ನನಗೆ ತಲೆ ಎತ್ತಿ ನಡೆಯಲು ಸಾಧ್ಯವಾಗುತ್ತಿಲ್ಲ. ಘಟನೆಯಿಂದ ತುಂಬ ನೋವಾಗಿದೆ. ಡಾಕ್ಟರ್ ಬಂದು ಸ್ಟೂಡೆಂಟ್ ದೈಹಿಕ ಪರೀಕ್ಷೆ ನಡೆಸಿದಾಗ, ಆಕೆ ಪ್ರಗ್ನೆಂಟ್ ಅಂತ ಗೊತ್ತಾಗಿದೆ. ಹುಡುಗಿಯನ್ನು ಮಾತನಾಡಿಸಿದ್ದಕ್ಕೆ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಅಕ್ಟೋಬರ್ 31 ರಂದು ವಾಯ್ಸ್ ನೋಟ್ ಮೇಸೇಜ್ ಕಳಿಸಿದ ರಾಮು, ನಾಲೆಗೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ನಾಲೆಯೊಂದರ ಬಳಿ ರಾಮು ಬೈಕ್, ಚಪ್ಪಲಿ, ಮೊಬೈಲ್, ಜರ್ಕಿನ್ ಪತ್ತೆಯಾಗಿತ್ತು. ಈಗ ಶವ ಕೂಡ ಪತ್ತೆಯಾಗಿದೆ. ಬೆಟ್ಟದಪುರ ಪೊಲೀಸ್ ಠಾಣೆಯಲ್ಲಿ ರಾಮು ನಾಪತ್ತೆ ಕೇಸ್ ದಾಖಲಾಗಿತ್ತು.
ಕಳೆದ ಕೆಲ ದಿನಗಳಿಂದ ರಾಮು ನಾಪತ್ತೆಯಾಗಿದ್ದ. ಇಂದು ಬೆಟ್ಟದ ತುಂಗಾ ನಾಲೆಯೊಂದರಲ್ಲಿ ರಾಮು ಶವ ಪತ್ತೆಯಾಗಿದೆ. ಇನ್ನೂ ರಾಮು ಶವ ಹಾಗೂ ಆತನ ವಾಯ್ಸ್ ನೋಟ್ ಸಿಕ್ಕ ಬಳಿಕ ರಾಮು ಸಂಬಂಧಿಕರು ಹಾಗೂ ಗ್ರಾಮಸ್ಥರು ವಿದ್ಯಾರ್ಥಿನಿಯ ಹೊಟ್ಟೆಯಲ್ಲಿರುವ ಶಿಶು ಜನಿಸಿದ ಬಳಿಕ ಡಿಎನ್‌ಎ ಟೆಸ್ಟ್ ಮಾಡಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದರಿಂದ ಹುಡುಗಿ ಗರ್ಭೀಣಿಯಾಗಲು ಯಾರು ಕಾರಣ ಅನ್ನೋದು ಗೊತ್ತಾಗುತ್ತೆ. ಡಿಎನ್‌ಎ ಟೆಸ್ಟ್ ಮೂಲಕವೇ ತಪ್ಪಿತಸ್ಥರನ್ನು ಪತ್ತೆ ಹಚ್ಚಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
ವಿದ್ಯಾರ್ಥಿನಿಯ ಮೇಲೆ ಶಾಲೆಯ ದೈಹಿಕ ಶಿಕ್ಷಕನೇ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ. ಆದರೇ, ಶಾಲೆಗೆ ಕಳಂಕ ಬರುತ್ತೆ ಎಂಬ ಕಾರಣದಿಂದ ವಿದ್ಯಾರ್ಥಿನಿಯು ಗರ್ಭೀಣಿಯಾಗಲು ರಾಮು ಎಂಬ ಯುವಕ ಕಾರಣ ಎಂದು ಸುಳ್ಳು ಆರೋಪ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us