ನಂದಿನಿ ತುಪ್ಪದ ರೇಟ್‌ ಪ್ರತಿ ಕೆ.ಜಿ.ಗೆ 90 ರೂಪಾಯಿ ಏರಿಕೆ : ಬೆಲೆ ಏರಿಕೆ ಶಾಕ್ ನೀಡಿದ ಕೆಎಂಎಫ್‌

ರಾಜ್ಯದಲ್ಲಿ ಕೆಎಂಎಫ್, ನಂದಿನಿ ತುಪ್ಪದ ಬೆಲೆಯನ್ನು ಏರಿಕೆ ಮಾಡಿದೆ. ಪ್ರತಿ ಕೆ.ಜಿ. ತುಪ್ಪದ ದರವನ್ನು 90 ರೂಪಾಯಿ ಏರಿಕೆ ಮಾಡಿದೆ. ಪ್ರತಿ ಕೆ.ಜಿ.ಗೆ 610 ರೂಪಾಯಿ ಇದ್ದ ರೇಟ್ ಈಗ 700 ರೂಪಾಯಿಗೆ ಏರಿಕೆಯಾಗಿದೆ. ರೇಟ್‌ ಕಡಿಮೆ ಇದ್ದ ಕಾರಣದಿಂದ ಏರಿಕೆ ಮಾಡಲಾಗಿದೆ ಎಂದು ಡಿ.ಕೆ.ಸುರೇಶ್ ಹೇಳಿದ್ದಾರೆ.

author-image
Chandramohan
KMF NANDINI GHEE RATE HIKE

ಕೆಎಂಎಫ್ ನಿಂದ ನಂದಿನಿ ತುಪ್ಪದ ಬೆಲೆ ಏರಿಕೆ

Advertisment
  • ಕೆಎಂಎಫ್ ನಿಂದ ನಂದಿನಿ ತುಪ್ಪದ ಬೆಲೆ ಏರಿಕೆ
  • ಪ್ರತಿ ಕೆ.ಜಿ. ತುಪ್ಪದ ಬೆಲೆ 90 ರೂಪಾಯಿ ಏರಿಕೆ
  • ಪ್ರತಿ ಕೆ.ಜಿ. ತುಪ್ಪದ ಬೆಲೆ 610 ರೂಪಾಯಿಯಿಂದ 700 ರೂ.ಗೆ ಏರಿಕೆ!

ಜಿಎಸ್‌.ಟಿ.  ದರ ಇಳಿಕೆ ಸಂಭ್ರದಲ್ಲಿದ್ದ ಜನತೆಗೆ ಕೆಎಂಎಫ್ ಶಾಕ್ ನೀಡಿದೆ. ತುಪ್ಪದ ದರವನ್ನು ಕೆಎಂಎಫ್ ಏರಿಕೆ ಮಾಡಿದೆ. ನಂದಿನಿ ತುಪ್ಪದ ದರವನ್ನು  ಪ್ರತಿ ಕೆ.ಜಿ.ಗೆ 90 ರೂಪಾಯಿ ಏರಿಕೆ ಮಾಡಿದೆ.  ಎಲ್ಲ ಮಾದರಿಯ ತುಪ್ಪದ ದರವನ್ನು ಪ್ರತಿ ಕೆ.ಜಿ.ಗೆ. 90 ರೂಪಾಯಿ ಏರಿಕೆ ಮಾಡಿದೆ.  ಇಂದಿನಿಂದಲೇ ನೂತನ ದರ ಜಾರಿಗೆ ಬರಲಿದೆ ಎಂದು ಕೆಎಂಎಫ್ ಹೇಳಿದೆ.   ಈ ಹಿಂದೆ ಒಂದು ಕೆ.ಜಿ.  ತುಪ್ಪಕ್ಕೆ 610 ರೂ ಇತ್ತು. ಇಂದಿನಿಂದ 700 ರೂ ಗೆ ಏರಿಕೆ ಆಗಿದೆ.  ತುಪ್ಪ ಹೊರತು ಪಡಿಸಿ ಉಳಿದ ಇತರೆ ನಂದಿನಿ ಉತ್ಪನ್ನದ ರೇಟ್ ನಲ್ಲಿ   ಯಾವುದೇ ಬದಲಾವಣೆ ಇಲ್ಲ.

 ಇನ್ನೂ ನಂದಿನಿ ತುಪ್ಪದ ಬೆಲೆ ಏರಿಕೆಗೆ ಸಂಬಂಧಿಸಿದಂತೆ ಬಮೂಲ್ ಅಧ್ಯಕ್ಷ  ಡಿಕೆ ಸುರೇಶ್‌ ಪ್ರತಿಕ್ರಿಯಿಸಿದ್ದಾರೆ. ನಂದಿನಿ ಹಾಲು ೯೫ ಲಕ್ಷದಿಂದ ೧ ಕೋಟಿ ಲೀ.ವರೆಗೆ ಉತ್ಪತ್ತಿ ಆಗುತ್ತಿದೆ. ಕೇವಲ ೫೦ ಲಕ್ಷ ಲೀ. ಹಾಲು‌ ಮಾರಾಟ ಆಗ್ತಿದೆ . ೪ ರೂ. ರೈತರಿಗೆ ಹಣ ಕೊಡಲು ಮುಂದಾಗಿದ್ದೇವೆ. ಹಾಲಿನ ಉತ್ಪನ್ನಗಳಿಂದ ನಷ್ಟವಾಗುತ್ತಿದೆ.  ಬೆಣ್ಣೆಗೆ ಅಭಾವ ಇದೆ. ತುಪ್ಪ, ಬೆಣ್ಣೆಗೆ ಬೇಡಿಕೆ ಜಾಸ್ತಿ ಇದೆ. ಮಾರ್ಕೆಟ್ ಗಳಲ್ಲಿ ಬೇರೆ ಬ್ರ್ಯಾಂಡ್ ನಲ್ಲಿ ವಿನ್ಯಾಸದಲ್ಲಿ ಮಾಡ್ತಿದ್ದಾರೆ. ನಮ್ಮದು ಗುಣಮಟ್ಟ ಚೆನ್ನಾಗಿದೆ. ಹಸುಗಳ ಹಾಲಿನಿಂದ ತಯಾರಿಸಿದ ತುಪ್ಪ ಸರಬರಾಜು ಮಾಡ್ತಿದ್ದೇವೆ. ನಷ್ಟ ಭರಿಸಲು ಬೆಲೆ‌ ಏರಿಕೆ ಮಾಡಬೇಕು.ಹೀಗಾಗಿ ತುಪ್ಪದ ದರ ಏರಿಕೆ ಮಾಡಿದ್ದೇವೆ ಎಂದು ಬಮೂಲ್ ಹಾಲಿ ಅಧ್ಯಕ್ಷ, ಮಾಜಿ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ. 

KMF NANDINI GHEE RATE HIKE2



ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

KMF NANDINI GHEE PRICE HIKED
Advertisment