/newsfirstlive-kannada/media/media_files/2025/11/07/upa-lokayukuta-warrant-order-2025-11-07-12-04-39.jpg)
ಪಾಂಡವಪುರ ಎಸಿ ಶ್ರೀನಿವಾಸ್ ಮತ್ತು ವಾರಂಟ್ ಪ್ರತಿ
ಉಪ ಲೋಕಾಯುಕ್ತರ ನಿರ್ದೇಶನ ಪಾಲನೆ ಮಾಡದ ಹಿನ್ನೆಲೆಯಲ್ಲಿ ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್ ಗೆ ವಾರೆಂಟ್ ಜಾರಿಯಾಗಿದೆ. ಉಪಲೋಕಾಯುಕ್ತ ಬಿ.ವೀರಪ್ಪರಿಂದ ವಾರೆಂಟ್ ಜಾರಿ ಮಾಡಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ಬಂಗಾರದೊಡ್ಡಿ ಬಳಿ ಅಕ್ರಮ ರೆಸಾರ್ಟ್ ತೆರವು ಸಂಬಂಧ ವರದಿ ನೀಡದ ಹಿನ್ನೆಲೆಯಲ್ಲಿ ವಾರಂಟ್ ಜಾರಿ ಮಾಡಿದ್ದಾರೆ.
ಕಳೆದ ಒಂದು ತಿಂಗಳ ಹಿಂದೆ ಕೋರ್ಟ್ ಆದೇಶದ ಮೇರೆಗೆ ಅಕ್ರಮ ರೆಸಾರ್ಟ್ ಒತ್ತುವರಿ ತೆರವು ಕಾರ್ಯಚರಣೆ ಮಾಡಲಾಗಿತ್ತು. ಇದಾದ ಬಳಿಕ ಕಾವೇರಿ ನದಿ ದಡದಲ್ಲಿ ಇನ್ನೆಷ್ಟು ಅಕ್ರಮ ರೆಸಾರ್ಟ್ ಇದೆ. ನದಿ ಖರಾಬು ಅನ್ನು ಎಷ್ಟು ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಖುದ್ದು ವರದಿ ನೀಡುವಂತೆ ಉಪಲೋಕಾಯುಕ್ತರು ಸೂಚನೆ ನೀಡಿದ್ದರು. ಆದರೆ ಈ ಬಗ್ಗೆ ಇದುವರೆಗೂ ಉಪವಿಭಾಗಧಿಕಾರಿ ಯಾವುದೇ ವರದಿ ನೀಡಿರಲಿಲ್ಲ. ಅಗೌರವದಿಂದ ನಡೆದುಕೊಂಡಿದ್ದಾರೆ ಎಂದು ಉಪಲೋಕಾಯುಕ್ತರಿಂದ ವಾರೆಂಟ್ ಜಾರಿಯಾಗಿದೆ. ಅಷ್ಟೆೇ ಅಲ್ಲದೆ ನವೆಂಬರ್ 27 ರಂದು ಅನುಪಾಲನಾ ವರದಿಯೊಂದಿಗೆ ವಿಚಾರಣೆಗೆ ಹಾಜರಾಜಬೇಕು. ವರದಿ ಜೊತೆಗೆ ವಿಚಾರಣೆಗೆ ಹಾಜರಾಗದಿದ್ದರೆ ಶಿಸ್ತು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us