/newsfirstlive-kannada/media/media_files/2025/12/31/mg-road-new-year-celebrations-2025-12-31-12-14-15.jpg)
ಕರ್ನಾಟಕ ಹಾಗೂ ಬೆಂಗಳೂರಿನಲ್ಲಿ ಯಾವುದೇ ಅಹಿತಕರ ಘಟನೆಗೆ ಅವಕಾಶ ನೀಡದಂತೆ ಹೊಸ ವರ್ಷಾಚರಣೆಯನ್ನ ಪೊಲೀಸರು ನಿರ್ವಹಿಸಿದ್ದಾರೆ. ಬೆಂಗಳೂರಿನಲ್ಲಿ ಹಾಗೂ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಹೊಸ ವರ್ಷಾಚರಣೆಯನ್ನು ಮಾಡಲಾಗಿದೆ. ರಾತ್ರಿ 1 ಗಂಟೆಯವರೆಗೂ ಬೆಂಗಳೂರು ಹಾಗೂ ವಿವಿಧ ಜಿಲ್ಲೆಗಳಲ್ಲಿ ಜನರು ಪಾರ್ಟಿಗಳನ್ನ ಆಚರಿಸಿದ್ದಾರೆ.
ಕಳೆದ ವರ್ಷಕ್ಕೆ ಹೋಲಿಸಿದರೇ, ಈ ವರ್ಷ ಬೆಂಗಳೂರಿನ ಎಂ.ಜಿ.ರಸ್ತೆ ಹಾಗೂ ಚರ್ಚ್ ಸ್ಟ್ರೀಟ್ ನಲ್ಲಿ ಜನಸಂದಣಿ ಕಡಿಮೆ ಇತ್ತು. ಆರ್‌ಸಿಬಿ ಐಪಿಎಲ್ ಟೂರ್ನಿಮೆಂಟ್ ಗೆದ್ದ ಬಳಿಕ ನಡೆದ ವಿಜಯೋತ್ಸವದ ಕಾಲ್ತುಳಿತದ ಕಾರಣದಿಂದ ಜನರು ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್ ರಸ್ತೆಯ ಕಡೆಗೆ ಹೆಚ್ಚಿನ ಸಂಖ್ಯೆಯಲ್ಲಿ ಬಂದಿರಲಿಲ್ಲ. ಇನ್ನೂ ಸಾಕಷ್ಟು ಜನರು ಬೆಂಗಳೂರಿನ ಹೊರಗೆ ಪಾರ್ಟಿ ಮಾಡಲು ಹೋಗಿದ್ದರು. ಬೆಂಗಳೂರು ಸುತ್ತಮುತ್ತ ಫಾರ್ಮ್ ಹೌಸ್, ರೆಸಾರ್ಟ್ ಗಳಲ್ಲಿ ಹೆಚ್ಚಿನ ಸಂಖ್ಯೆಯ ಪಾರ್ಟಿಗಳು ನಡೆದವು.
ದೊಡ್ಡಬಳ್ಳಾಪುರ ಬಳಿ ಫಾರ್ಮ್ ಹೌಸ್ ನಲ್ಲಿ ಪೊಲೀಸರ ಅನುಮತಿ ಪಡೆಯದೇ ಪಾರ್ಟಿ ನಡೆಸುತ್ತಿದ್ದ ಸ್ಥಳದ ಮೇಲೆ ಪೊಲೀಸರು ದಾಳಿ ನಡೆಸಿ ಕೇಸ್ ದಾಖಲಿಸಿದ್ದಾರೆ.
ಅಲ್ಲಲ್ಲಿ ಕೆಲವೊಂದು ಸಣ್ಣಪುಟ್ಟ ಹೊಡೆದಾಟಗಳು ಮಾತ್ರ ಜನರ ಮಧ್ಯೆಯೇ ನಡೆದಿವೆ. ಇದನ್ನು ಹೊರತುಪಡಿಸಿ ಯಾವುದೇ ದೊಡ್ಡ ಅಹಿತಕರ ಘಟನೆ, ಸಾವು, ನೋವು, ಕಾಲ್ತುಳಿತ, ಮಹಿಳೆಯರಿಗೆ ಹಿಂಸೆಯಂಥ ಘಟನೆಗಳು ನಡೆದಿಲ್ಲ.
ಡಿಸೆಂಬರ್ 31ರ ರಾತ್ರಿ ಅನೇಕ ಸಂಚುಗಳು ನಡೆದಿದ್ದರೂ, ನಮ್ಮ ಪೊಲೀಸರು ಜನರಲ್ಲಿ ಜಾಗೃತಿ ಮೂಢಿಸಿ ಶಾಂತಿಯಿಂದ 2025 ಅನ್ನು ಬೀಳ್ಕೊಟ್ಟರು. ಹೊಸ ವರ್ಷ 2026 ಶುಭ ಲಗ್ನದಲ್ಲಿ ಆರಂಭವಾಗಿದೆ. 2025 ರಲ್ಲಿ ಉತ್ತಮ ಆಡಳಿತ ಕೊಟ್ಟಿದ್ದೇವೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ನಾನು ಕೂಡ ಉಸ್ತುವಾರಿ ಸಚಿವನಾಗಿ ಮಧ್ಯರಾತ್ರಿವರೆಗೂ ವಾಚ್ ಮಾಡುತ್ತಿದ್ದೆ.
ಹೊಸ ವರ್ಷದ ಆಚರಣೆ ಈ ಭಾರಿ ಇಡೀ ರಾಜ್ಯದಲ್ಲಿ ಆಚರಣೆ ಮಾಡಿದ್ದಾರೆ. ಬೆಂಗಳೂರಿನಲ್ಲಿ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇತ್ತು. ಒಂದು ಲೆಕ್ಕದ ಪ್ರಕಾರ ಏಳೆಂಟು ಲಕ್ಷ ಜನ ಭಾಗವಹಿಸಿದ್ರು. ನಾನೂ ಕೂಡಾ ಕಮ್ಯಾಂಡ್ ಸೆಂಟರ್ ನಲ್ಲಿ ಹೋಗಿ ಕೂತಿದ್ದೆ. ಈ ಬಾರಿ ಜವಾಬ್ದಾರಿಯಿಂದ ಹೊಸ ವರ್ಷ ಆಚರಿಸಿ ಅಂತ ಕರೆ ಕೊಟ್ಟಿದ್ದೇವು. ಜವಾಬ್ದಾರಿಯಿಂದ ಜನ ಹೊಸ ವರ್ಷ ಆಚರಿಸಿದ್ದಾರೆ. 20 ಸಾವಿರ ಸಿಬ್ಬಂದಿ ನಿಯೋಜನೆ ಮಾಡಲಾಗಿತ್ತು. ಎಲ್ಲೂ ಅಹಿತಕರ ಘಟನೆ ಆಗಲಿಲ್ಲ, ಟ್ರಾಫಿಕ್ ಜಾಮ್ ಆಗಲ್ಲಿಲ್ಲ. ಯಾರೂ ಅಪಘಾತ ಮಾಡಿಕೊಂಡು ಪ್ರಾಣ ಹಾನಿ ಮಾಡಿಕೊಳ್ಳಲಿಲ್ಲ ಎಂದು ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ.
/filters:format(webp)/newsfirstlive-kannada/media/post_attachments/wp-content/uploads/2025/05/Tumkur-DC-Parameshwar.jpg)
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us